Gold rate:ಬಂಗಾರಪ್ರಿಯರೆ ಗಮನಿಸಿ, ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ

Suvarna News   | Asianet News
Published : Nov 25, 2021, 01:01 PM ISTUpdated : Nov 25, 2021, 01:04 PM IST
Gold rate:ಬಂಗಾರಪ್ರಿಯರೆ ಗಮನಿಸಿ, ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ

ಸಾರಾಂಶ

ಕಳೆದ ಕೆಲವು ದಿನಗಳಿಂದ ಚಿನ್ನದ (Gold) ಬೆಲೆ (Price) ಇಳಿಕೆಯತ್ತ ಮುಖ ಮಾಡಿದೆ. ಹಾಗಾದ್ರೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಎಷ್ಟಿದೆ? ನಿನ್ನೆಗಿಂತ ಇಂದು ಎಷ್ಟು ಇಳಿಕೆಯಾಗಿದೆ? ಇಲ್ಲಿದೆ ಮಾಹಿತಿ.

ಭಾರತೀಯರು ಬಂಗಾರ ಪ್ರಿಯರು.ಭಾರತೀಯರ (Indians) ಪಾಲಿಗೆ ಚಿನ್ನ (gold)ಅಮೂಲ್ಯ ವಸ್ತು ಮಾತ್ರವಲ್ಲ,ಬಾಂಧವ್ಯಗಳನ್ನು ಬೆಸೆಯೋ ಕೊಂಡಿಯೂ ಹೌದು. ತಲೆಮಾರುಗಳ ಸಂಪ್ರದಾಯಗಳನ್ನು ನೆನಪಿಸೋ ಜೊತೆ ಪ್ರೀತಿಪಾತ್ರರ ನೆನಪುಗಳನ್ನು ಅಡಗಿಸಿಕೊಂಡಿರೋ ಆಭರಣಗಳು ಮಹಿಳೆಯರಿಗೆ ಮಾತ್ರವಲ್ಲ,ಪುರುಷರಿಗೂ ಪ್ರಿಯ. ಸಂಗಾತಿಗೆ ಉಡುಗೊರೆ (Gift) ನೀಡಿ ಆಕೆ ಮುಖದಲ್ಲಿ ಮಂದಹಾಸ ಮೂಡಿಸಲು ಪುರುಷರಿಗೆ ಬಂಗಾರದ ಒಡವೆಗಿಂತ ಉತ್ತಮ ಆಯ್ಕೆ ಬೇರಿಲ್ಲ. ಮದುವೆ, ನಾಮಕರಣ ಸೇರಿದಂತೆ ಶುಭ ಸಮಾರಂಭಗಳಿಗೆ ಕಳೆಕಟ್ಟೋದೇ ನಾನಾ ವಿನ್ಯಾಸದ ಬಂಗಾರ ಒಡವೆಗಳನ್ನು ತೊಟ್ಟು ನಲಿಯೋ ನಾರಿಯರು.ಒಟ್ಟಾರೆ ಭಾರತದಲ್ಲಿ ಚಿನ್ನಕ್ಕೆ ಸದಾ ಮನ್ನಣೆ ಇದ್ದೇಇದೆ. ಇತ್ತೀಚೆಗಂತೂ ಬಹುತೇಕರು ಹೂಡಿಕೆಗೂ (Investment) ಚಿನ್ನವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಚಿನ್ನ(Gold), ಬೆಳ್ಳಿ (Silver)ದರದಲ್ಲಿ ಇಳಿಕೆಯಾಗುತ್ತಿರೋದು ಬಂಗಾರದ ಪ್ರಿಯರಿಗೆ ಖುಷಿ ತಂದಿದೆ. ಎಷ್ಟೋ ದಿನಗಳಿಂದ ಚಿನ್ನ, ಬೆಳ್ಳಿ ಖರೀದಿಸಬೇಕೆಂದು ಹಣ ಕೂಡಿಟ್ಟವರು ದರದಲ್ಲಿ ಇಳಿಕೆಯಾಗಲಿ ಎಂದು ಕಾಯುತ್ತಿರುತ್ತಾರೆ. ಅಂಥವರು ಇಂದು ಚಿನ್ನ,ಬೆಳ್ಳಿ ಬೆಲೆ ಎಷ್ಟಿದೆ ಎಂದು ತಿಳಿಯೋದು ಅಗತ್ಯ ಅಲ್ಲವೆ? ಹಾಗಾದ್ರೆ ದೇಶದ ವಿವಿಧ ನಗರಗಳಲ್ಲಿ ಚಿನ್ನ ಹಾಗೂ  ಬೆಳ್ಳಿ ಬೆಲೆ (Rate)ಎಷ್ಟಿದೆ? ಇಲ್ಲಿದೆ ನೋಡಿ ಮಾಹಿತಿ.

ಬೆಂಗಳೂರಿನಲ್ಲಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ (Bangalore) ಇಂದು 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 44,700ರೂ. ಇದೆ. ನಿನ್ನೆ ಕೂಡ ಇಷ್ಟೇ ದರವಿದ್ದು, ಯಾವುದೇ ಬದಲಾವಣೆಯಾಗಿಲ್ಲ. 24 ಕ್ಯಾರಟ್ನ 10 ಗ್ರಾಂ ಚಿನ್ನಕ್ಕೆ ನಿನ್ನೆ 48, 760 ರೂ. ಇದ್ದು,ಇಂದು ಕೂಡ ಇದೇ ದರವಿದೆ. ಇನ್ನು ಬೆಳ್ಳಿ ದರದಲ್ಲಿ ನಿನ್ನೆಗಿಂತ ಸ್ವಲ್ಪ ಏರಿಕೆಯಾಗಿದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 62,700 ರೂ. ಇತ್ತು. ಆದ್ರೆ ಇಂದು 62,900ರೂ. ಆಗಿದೆ. ಅಂದ್ರೆ ನಿನ್ನೆಗಿಂತ ಇಂದು 200 ರೂ. ಏರಿಕೆಯಾಗಿದೆ. 

ಶಿವಮೊಗ್ಗ ಕೃಷಿ ಇಲಾಖೆ ಅಧಿಕಾರಿ ಮನೆಯಲ್ಲ, ಚಿನ್ನದ ಖಜಾನೆ, ಅಧಿಕಾರಿಗಳು ತಬ್ಬಿಬ್ಬು!

ದೆಹಲಿಯಲ್ಲಿ ಹೇಗಿದೆ?
ದೆಹಲಿಯಲ್ಲಿ (Delhi) 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು 46,840ರೂ. ಇದೆ. ನಿನ್ನೆ 46,850 ರೂ. ಇತ್ತು. ಆದ್ರೆ ಚಿನ್ನದ ದರದಲ್ಲಿ ನಿನ್ನೆಗಿಂತ ಇಂದು 10ರೂ. ಇಳಿಕೆಯಾಗಿದೆ. 24 ಕ್ಯಾರಟ್ನ 10 ಗ್ರಾಂ ಚಿನ್ನದ ದರದಲ್ಲಿ ಕೂಡ ನಿನ್ನೆಗಿಂತ ಇಂದು 10ರೂ. ಇಳಿಕೆಯಾಗಿದೆ. ನಿನ್ನೆ 51,100 ರೂ. ಇತ್ತು,ಇಂದು 51,090 ರೂ. ಆಗಿದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 62,700 ರೂ. ಇತ್ತು. ಆದ್ರೆ ಇಂದು 62,900ರೂ. ಆಗಿದೆ. ಅಂದ್ರೆ ನಿನ್ನೆಗಿಂತ ಇಂದು 200 ರೂ. ಏರಿಕೆಯಾಗಿದೆ.

ಮುಂಬೈನಲ್ಲಿ ಎಷ್ಟಿದೆ ದರ?
ಮುಂಬೈನಲ್ಲಿ (Mumbai) 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು 46,620ರೂ. ಇದೆ. ನಿನ್ನೆ 46,630ರೂ. ಇದ್ದು,10ರೂ. ಇಳಿಕೆಯಾಗಿದೆ. 24 ಕ್ಯಾರಟ್ನ 10 ಗ್ರಾಂ ಚಿನ್ನದ ದರದಲ್ಲಿ ಕೂಡ ನಿನ್ನೆಗಿಂತ ಇಂದು 10ರೂ. ಇಳಿಕೆಯಾಗಿದೆ. ನಿನ್ನೆ 47,630 ರೂ. ಇತ್ತು,ಇಂದು 47,620 ರೂ. ಆಗಿದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 62,700 ರೂ. ಇತ್ತು. ಆದ್ರೆ ಇಂದು 62,900ರೂ. ಆಗಿದೆ. ಅಂದ್ರೆ ನಿನ್ನೆಗಿಂತ ಇಂದು 200 ರೂ. ಏರಿಕೆಯಾಗಿದೆ.

ಪ್ರವಾಸಿಗರ ಆಭರಣ ಮರಳಿಸಲು 70 ಕಿ.ಮೀ. ಪ್ರಯಾಣಿಸಿದ Pony keepers!

ಚೆನ್ನೈಯಲ್ಲಿ ದರ ಹೀಗಿದೆ
ಚೆನ್ನೈಯಲ್ಲಿ(Chennai)  22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು 44, 960ರೂ. ಇದೆ. ನಿನ್ನೆ 45,000ರೂ. ಇತ್ತು. ಅಂದ್ರೆ ನಿನ್ನೆಗಿಂತ ಇಂದು 40ರೂ. ಇಳಿಕೆಯಾಗಿದೆ. 24 ಕ್ಯಾರಟ್ನ 10 ಗ್ರಾಂ ಚಿನ್ನದ ದರದಲ್ಲಿ ಕೂಡ ನಿನ್ನೆಗಿಂತ ಇಂದು 40ರೂ. ಇಳಿಕೆಯಾಗಿದೆ. ನಿನ್ನೆ 49,090 ರೂ. ಇತ್ತು,ಇಂದು 49,050 ರೂ. ಆಗಿದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 67,600 ರೂ. ಇತ್ತು. ಆದ್ರೆ ಇಂದು 67,800ರೂ. ಆಗಿದೆ.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!