Doorstep Banking: ಮನೆ ಬಾಗಿಲಿಗೇ ಬ್ಯಾಂಕಿಂಗ್ ಸೇವೆ ಪಡೆಯಲು ಏನ್ಮಾಡ್ಬೇಕು? ಯಾವೆಲ್ಲ ಬ್ಯಾಂಕುಗಳಲ್ಲಿದೆ ಈ ಸೌಲಭ್ಯ?

By Suvarna NewsFirst Published Jan 5, 2022, 8:19 AM IST
Highlights

ಕೋವಿಡ್ -19 ಮೂರನೇ ಅಲೆಯ ಭೀತಿ ಹೆಚ್ಚುತ್ತಿದೆ. ಇಂಥ ಸಮಯದಲ್ಲಿ ಹಿರಿಯ ನಾಗರಿಕರು, ಅಶಕ್ತರು ಬ್ಯಾಂಕ್ ಕೆಲಸಕಾರ್ಯಗಳಿಗಾಗಿ ಶಾಖೆಗಳಿಗೆ ಭೇಟಿ ನೀಡೋದು ಅಪಾಯಕಾರಿ. ಹೀಗಾಗಿ ಡೋರ್ ಸ್ಟೆಪ್ ಬ್ಯಾಂಕಿಂಗ್ ಸೇವೆಗಳನ್ನು ಬಳಸಿಕೊಳ್ಳೋದು ಉತ್ತಮ.

Business Desk: ಬ್ಯಾಂಕ್ (Bank) ಶಾಖೆಯೇ (Branch) ನಿಮ್ಮ ಮನೆಬಾಗಿಲಿಗೆ ಬರೋವಾಗ ನೀವೇಕೆ ಬ್ಯಾಂಕಿಗೆ ಭೇಟಿ ನೀಡಬೇಕು? ನೀವು ಎಚ್ ಡಿಎಫ್ ಸಿ (HDFC) ಬ್ಯಾಂಕಿನ ಹಿರಿಯ ನಾಗರಿಕ (Senior Citizen) ಗ್ರಾಹಕರಾಗಿದ್ರೆ ನಿಮ್ಮ ಮೊಬೈಲ್ ಗೆ ಈ ವಾರ ಇಂಥದೊಂದು ಸಂದೇಶ ಬಂದಿರುತ್ತದೆ. ಎಚ್ ಡಿಎಫ್ ಸಿ ಮಾತ್ರವಲ್ಲ, ಅನೇಕ ಬ್ಯಾಂಕುಗಳು ಇತ್ತೀಚೆಗೆ ಗ್ರಾಹಕರಿಗೆ (Customers) ಅದ್ರಲ್ಲೂ ಹಿರಿಯ ನಾಗರಿಕರಿಗೆ (senior citizen) ಹಾಗೂ ಅಶಕ್ತ ಗ್ರಾಹಕರಿಗೆ ಮನೆಬಾಗಿಲಿಗೇ ( doorstep)ಬ್ಯಾಂಕಿಂಗ್ ಸೇವೆಗಳನ್ನು (banking services) ಒದಗಿಸೋ ಸೌಲಭ್ಯವನ್ನು ಪ್ರಾರಂಭಿಸಿವೆ. 

ಕೊರೋನಾ ಮೂರನೇ ಅಲೆ ಭೀತಿ ಹೆಚ್ಚುತ್ತಿರೋ ಈ ಸಮಯದಲ್ಲಿ ವಯಸ್ಸಾದವರು, ಅನಾರೋಗ್ಯಪೀಡಿತರು ಹೆಚ್ಚಿನ ಎಚ್ಚರ ವಹಿಸೋದು ಅಗತ್ಯ. ಬ್ಯಾಂಕಿಂಗ್ ಕೆಲಸಗಳಿಗಾಗಿ ಶಾಖೆಗೆ ಭೇಟಿ ನೀಡೋದು ಕೂಡ ಅಪಾಯಕಾರಿಯೇ. ಇಂಥ ಸಮಯದಲ್ಲಿ ಡೋರ್ ಸ್ಟೆಪ್ (doorstep) ಬ್ಯಾಂಕಿಂಗ್ ಸೇವೆಗಳನ್ನು ಬಳಸಿಕೊಳ್ಳೋದು ಉತ್ತಮ. ನೀವು ಖಾತೆ ಹೊಂದಿರೋ ಬ್ಯಾಂಕಿನಲ್ಲಿ ಡೋರ್ ಸ್ಟೆಪ್ (doorstep)ಸೇವೆ ಇದೆಯೋ ಇಲ್ಲವೋ ಎಂಬುದನ್ನು ಬ್ಯಾಂಕ್ ವೆಬ್ ಸೈಟ್ ನಲ್ಲಿ ಚೆಕ್ ಮಾಡಿ ಅಥವಾ ಕಸ್ಟಮರ್ ಕೇರ್ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿ.  ಏಕೆಂದ್ರೆ ಕೆಲವು ಬ್ಯಾಂಕುಗಳು ಕೋವಿಡ್ -19  ನಿರ್ಬಂಧದ ಹಿನ್ನೆಲೆಯಲ್ಲಿ ಡೋರ್ ಸ್ಟೆಪ್ (doorstep) ಬ್ಯಾಂಕಿಂಗ್ ಸೇವೆಯನ್ನು ಸ್ಥಗಿತಗೊಳಿಸಿವೆ. ಉದಾಹರಣೆಗೆ ಐಸಿಐಸಿಐ ಬ್ಯಾಂಕ್ (ICICI bank) ಕೋವಿಡ್ -19 ಕಾರಣಕ್ಕೆ ಡೋರ್ ಸ್ಟೆಪ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರೋದಾಗಿ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.  

Set Back For Future Group: ಮಧ್ಯಸ್ಥಿಕೆ ಸಮಿತಿ ನೀಡಿದ್ದ ತೀರ್ಪು ವಜಾ ಮಾಡಲು ದೆಹಲಿ ಹೈ ಕೋರ್ಟ್ ನಕಾರ!

ಡೋರ್ ಸ್ಟೆಪ್ ಸೇವೆ ಪಡೆಯಲು ಏನ್ ಮಾಡ್ಬೇಕು?
ಎಚ್ ಡಿಎಫ್ ಸಿ ಬ್ಯಾಂಕ್ 
ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಎಚ್ ಡಿಎಫ್ ಸಿ (HDFC)ಫೋನ್ ಬ್ಯಾಂಕಿಂಗ್ ಸೇವೆಗೆ ಕರೆ ಮಾಡೋ ಮೂಲಕ ಡೋರ್ ಸ್ಟೆಪ್ (doorstep)ಸೇವೆ ಪಡೆಯಬಹುದು. ಪ್ರತಿ ವಿತ್ ಡ್ರಾಗೆ (Withraw) ಗರಿಷ್ಠ ನಗದು ಡೆಲಿವರಿ (delivery) ಮಿತಿ 25,000ರೂ. ಕನಿಷ್ಠ ಮಿತಿ 5000ರೂ. ಇನ್ನು ಗ್ರಾಹಕರಿಂದ ಖಾತೆಗೆ ಡೆಫಾಸಿಟ್ ಮಾಡಲು ಅಥವಾ ವಿತ್ ಡ್ರಾ ಮಾಡಿದ ನಗದು ಹಣವನ್ನು ಅವರಿಗೆ ತಲುಪಿಸಲು 200ರೂ. ಹಾಗೂ ತೆರಿಗೆಗಳನ್ನು ವಿಧಿಸಲಾಗುತ್ತದೆ. ಚೆಕ್ ಸೇರಿದಂತೆ ಯಾವುದೇ ಇನ್ಸ್ಟ್ರುಮೆಂಟ್(instrument) ತೆಗೆದುಕೊಂಡು ಹೋಗಲು 100 +ತೆರಿಗೆಗಳನ್ನು ವಿಧಿಸಲಾಗುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
ಎಸ್ ಬಿಐ ಗ್ರಾಹಕರು ಹೋಮ್ ಬ್ರಾಂಚ್ ನಲ್ಲಿ ( Home Branch) ಡೋರ್ ಸ್ಟೆಪ್ ಸೇವೆಗೆ ಮನವಿ ಸಲ್ಲಿಸಬಹುದು. ಹಣಕಾಸುರಹಿತ ವಹಿವಾಟಿಗೆ  Non-financial transactions ) ಪ್ರತಿ ಭೇಟಿಗೆ ಎಸ್ ಬಿಐ 60ರೂ. +ಜಿಎಸ್ ಟಿ ವಿಧಿಸುತ್ತದೆ. ಇನ್ನು ಹಣಕಾಸು ವಹಿವಾಟುಗಳಿಗೆ 100+ ಜಿಎಸ್ ಟಿ ಶುಲ್ಕ ವಿಧಿಸಲಾಗುತ್ತದೆ. ಪ್ರತಿ ವಹಿವಾಟಿನಲ್ಲಿ( transactions) ನಗದು ವಿತ್ ಡ್ರಾ ಹಾಗೂ ಠೇವಣಿ ಮೊತ್ತದ ಮಿತಿ ದಿನಕ್ಕೆ 20,000ರೂ. 

Education Loan: ಉನ್ನತ ವಿದ್ಯಾಭ್ಯಾಸಕ್ಕೆ ಶೈಕ್ಷಣಿಕ ಸಾಲ ಪಡೆಯುತ್ತಿದ್ದೀರಾ? ಹಾಗಾದ್ರೆ ಈ 5 ವಿಷಯ ತಿಳಿದಿರಲಿ

ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)
70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ಪಿಎನ್ ಬಿ ಬ್ಯಾಂಕ್ ಡೋರ್ ಸ್ಟೆಪ್ ಸೇವೆ ಸೌಲಭ್ಯವಿದೆ.  ಪ್ರಸ್ತುತ ಬ್ಯಾಂಕ್ ತನ್ನ ಶಾಖೆಯ 5 ಕಿ.ಮೀ. ವ್ಯಾಪ್ತಿಯೊಳಗೆ ಮಾತ್ರ ಈ ಸೇವೆಯನ್ನು ಒದಗಿಸುತ್ತಿದೆ. ಹಣಕಾಸು ಹಾಗೂ ಹಣಕಾಸುರಹಿತ ಸೇವೆಗಳಿಗೆ 100 +ಜಿಎಸ್ ಟಿ ವಿಧಿಸಲಾಗುತ್ತಿದೆ.

ಕೋಟಕ್ ಮಹೀಂದ್ರ ಬ್ಯಾಂಕ್
60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನರಿಗೆ ಕೋಟಕ್ ಮಹೀಂದ್ರ ಬ್ಯಾಂಕ್ (Kotak Mahindra Bank) ಡೋರ್ ಸ್ಟೆಪ್ (Doorstep)ಸೇವೆ ಒದಗಿಸುತ್ತದೆ. ಗ್ರಾಹಕರ ನೋಂದಾಯಿತ ವಿಳಾಸಕ್ಕೆ ಈ ಸೇವೆ ನೀಡಲಾಗುತ್ತದೆ. 
 

click me!