ಕೇಂದ್ರ ಸರ್ಕಾರಿ ನೌಕರರಿಗೆ ಹಾಗೂ ಪಿಂಚಣಿದಾರರಿಗೆ ಆರೋಗ್ಯ ಸೇವೆ ಕಲ್ಪಿಸುವ ನೋಡಲ್ ಸಂಸ್ಥೆಯಾಗಿರುವ ಸಿಜಿಎಚ್ ಎಸ್ ಪ್ಯಾಕೇಜ್ ದರಗಳನ್ನು ಪರಿಷ್ಕರಿಸಲಾಗಿದೆ. ಒಪಿಡಿ ಸೇರಿದಂತೆ ವಿವಿಧ ದರಗಳನ್ನು ಪರಿಷ್ಕರಿಸಲಾಗಿದೆ. ಸಿಜಿಎಚ್ ಎಸ್ (CGHS) ಅಡಿಯಲ್ಲಿ ಶಿಫಾರಸ್ಸು ಪ್ರಕ್ರಿಯೆಯನ್ನು ಕೂಡ ಸರಳೀಕರಿಸಲಾಗಿದೆ.
ನವದೆಹಲಿ(ಏ.16): ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಎಚ್ ಎಸ್) ಪ್ಯಾಕೇಜ್ ದರಗಳನ್ನು ಪರಿಷ್ಕರಿಸಲು ನಿರ್ಧರಿಸಿದೆ. ಹಾಗೆಯೇ ಉದ್ಯೋಗಿಗಳ ಪ್ರಯೋಜನಕ್ಕಾಗಿ ರೆಫರಲ್ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಒಪಿಡಿ ದರವನ್ನು ಈ ಹಿಂದಿನ 150ರೂ.ನಿಂದ 350ರೂ.ಗೆ ಏರಿಕೆ ಮಾಡಲಾಗಿದೆ. ಹಾಗೆಯೇ ಐಪಿಡಿ ಸಂದರ್ಶನ ಶುಲ್ಕದಲ್ಲಿ 50ರೂ. ಹೆಚ್ಚಳ ಮಾಡಿ 350ರೂ.ಗೆ ಏರಿಕೆ ಮಾಡಲಾಗಿದೆ. ಇನ್ನು ಐಸಿಯು ಸೇವೆಗಳನ್ನು ವಾಸ್ತವ್ಯ ಸೇರಿದಂತೆ ಎಲ್ಲ ವಾರ್ಡ್ ಗಳಿಗೂ 5,400ರೂ. ನಿಗದಿಪಡಿಸಲಾಗಿದೆ. ಅಂದಾಜು 42ಲಕ್ಷ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಸಿಜಿಎಚ್ ಎಸ್ ಆರೋಗ್ಯ ಸೇವೆ ಕಲ್ಪಿಸುವ ನೋಡಲ್ ಸಂಸ್ಥೆಯಾಗಿದೆ. ಈ ಯೋಜನೆ ಅಡಿಯಲ್ಲಿ ಪಿಂಚಣಿದಾರರು ಹಾಗೂ ನಿರ್ದಿಷ್ಟ ಇತರ ವರ್ಗಗಳ ಫಲಾನುಭವಿಗಳು ಹಾಗೂ ಅವರ ಅವಲಂಬಿತರು ನೋಂದಣಿಯಾಗಿದ್ದಾರೆ.
ಇನ್ನು ಆಸ್ಪತ್ರೆ ಕೋಣೆ ಬಾಡಿಗೆ ದರದಲ್ಲಿ ಕೂಡ ಪರಿಷ್ಕರಣೆ ಮಾಡಲಾಗಿದೆ. ಇನ್ನು ಜನರಲ್ ಕೋಣೆಯ ಬಾಡಿಗೆಯನ್ನು ಈ ಹಿಂದಿನ 1000ರೂ.ನಿಂದ 1,500ರೂ.ಗೆ ನಿಗದಿಪಡಿಸಲಾಗಿದೆ. ಇನ್ನು ಸೆಮಿ ಪ್ರೈವೇಟ್ ವಾರ್ಡ್ ಬಾಡಿಗೆಯನ್ನು ಈ ಹಿಂದಿನ 2000ರೂ.ನಿಂದ 3,000ರೂ.ಗೆ ಹೆಚ್ಚಳ ಮಾಡಲಾಗಿದೆ. ಪ್ರೈವೇಟ್ ರೂಮ್ ಬಾಡಿಗೆಯನ್ನು 3,000ರೂ.ನಿಂದ 4,500ರೂ.ಗೆ ಏರಿಕೆ ಮಾಡಲಾಗಿದೆ.ಈ ಪರಿಷ್ಕರಣೆಯಿಂದ ಸರ್ಕಾರದ ಮೇಲೆ 240 ಕೋಟಿ ರೂ.ನಿಂದ 300 ಕೋಟಿ ರೂ. ಹೆಚ್ಚುವರಿ ವೆಚ್ಚದ ಹೊರೆ ಬೀಳಲಿದೆ.
ಎರಡು ವರ್ಷಗಳಲ್ಲಿ ಇನ್ಫೋಸಿಸ್ ಷೇರುಗಳಿಂದ ಅಕ್ಷತಾ ಮೂರ್ತಿ ಗಳಿಸಿದ ಆದಾಯ ಎಷ್ಟು ಗೊತ್ತಾ?
ಹೇಳಿಕೆಯೊಂದರ ಪ್ರಕಾರ ಸಚಿವಾಲಯವು ಪ್ರಾರಂಭದಲ್ಲಿ ಕನ್ಸಲ್ಟೇಷನ್ ಶುಲ್ಕ, ಐಸಿಯು ಶುಲ್ಕಗಳು ಹಾಗೂ ರೂಮ್ ಬಾಡಿಗೆಯ ಸಿಜಿಎಚ್ ಎಸ್ ಪ್ಯಾಕೇಜ್ ದರಗಳನ್ನು ಪರಿಷ್ಕರಿಸಲು ಪ್ರಸ್ತಾವನೆ ಸಲ್ಲಿಸಿತ್ತು. ಫಲಾನುಭವಿಗಳ ಬೇಡಿಕೆಗಳು ಹಾಗೂ ಆರೋಗ್ಯ ಕ್ಷೇತ್ರದ ವಿವಿಧ ವೆಚ್ಚಗಳ ಏರಿಕೆಯನ್ನು ಪರಿಗಣಿಸಿ ಈ ನಿರ್ಧಾರ ಕೈಗೊಂಡಿತ್ತು.
ಇನ್ನು ಸಿಜಿಎಚ್ ಎಸ್ (CGHS) ಅಡಿಯಲ್ಲಿ ರೆಫರಲ್ ಪ್ರಕ್ರಿಯೆಯನ್ನು ಕೂಡ ಸರಳೀಕರಿಸಲಾಗಿದೆ. ಈ ಹಿಂದೆ ಸಿಜಿಎಚ್ ಎಸ್ (CGHS) ಫಲಾನುಭವಿ ಸಿಜಿಎಚ್ ಎಸ್ ಕ್ಷೇಮಾ ಕೇಂದ್ರಕ್ಕೆ ವೈಯಕ್ತಿಕ ಭೇಟಿ ನೀಡಿದ್ರೆ ಮಾತ್ರ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗುತ್ತಿತ್ತು. ಆದರೆ, ಈಗ ಸಿಜಿಎಚ್ ಎಸ್ ಫಲಾನುಭವಿ ದಾಖಲೆಗಳ ಜೊತೆಗೆ ತನ್ನ ಪ್ರತಿನಿಧಿಯನ್ನು ಕಳುಹಿಸಿ ಆಸ್ಪತ್ರೆಗೆ (Hospital) ಶಿಫಾರಸ್ಸು ಮಾಡುವ ಪ್ರಕ್ರಿಯೆ ಪೂರ್ಣಗೊಳಿಸಬಹುದು. ವಿಡಿಯೋ ಕಾಲ್ (Video call) ಮುಖಾಂತರ ಕೂಡ ಆಸ್ಪತ್ರೆಗೆ ಶಿಫಾರಸ್ಸು ಪತ್ರವನ್ನು ಸಿಜಿಎಚ್ ಎಸ್ ಕ್ಷೇಮಾ ಕೇಂದ್ರದಿಂದ ಪಡೆಯಬಹುದು.
ಆಧಾರ್ ಕಾರ್ಡ್ ನಲ್ಲಿ ಎಷ್ಟು ಬಾರಿ ವಿಳಾಸ ನವೀಕರಿಸಬಹುದು? ಹೇಗೆ? ಇಲ್ಲಿದೆ ಮಾಹಿತಿ
ಸಿಜಿಎಚ್ ಎಸ್ ಅಡಿಯಲ್ಲಿ ಯಾವೆಲ್ಲ ಸೌಲಭ್ಯಗಳು ಲಭ್ಯ?
*ಔಷಧಿ ವಿತರಣೆ ಜೊತೆಗೆ ಕ್ಷೇಮಾ ಕೇಂದ್ರದಲ್ಲಿ ಒಪಿಡಿ (OPD)ಚಿಕಿತ್ಸೆ.
*ಪಾಲಿಕ್ಲಿನಿಕ್ (Polyclinic), ಸರ್ಕಾರಿ ಆಸ್ಪತ್ರೆಗಳು ಹಾಗೂ ಸಿಜಿಎಚ್ ಎಸ್ ಪಟ್ಟಿಯಲ್ಲಿರುವ ಆಸ್ಪತ್ರೆಗಳಲ್ಲಿ ಪರಿಣಿತರಿಂದ ಸಲಹೆ.
*ಸರ್ಕಾರಿ ಹಾಗೂ ಸಿಜಿಎಚ್ ಎಸ್ ಪಟ್ಟಿಯಲ್ಲಿರುವ ಆಸ್ಪತ್ರೆಗಳಲ್ಲಿ ಒಪಿಡಿ/ಒಳರೋಗಿಗಳ ವಿಭಾಗದಲ್ಲಿ ಚಿಕಿತ್ಸೆ.
*ಸರ್ಕಾರಿ ಆಸ್ಪತ್ರೆ ಹಾಗೂ ನಿಗದಿತ ಡಯೋಗ್ನಸ್ಟಿಕ್ ಕೇಂದ್ರಗಳಲ್ಲಿ ರೋಗಪತ್ತೆ ಪರೀಕ್ಷೆಗಳು.
*ನಿಗದಿತ ಆಸ್ಪತ್ರೆಗಳು ಹಾಗೂ ಡಯೋಗ್ನಸ್ಟಿಕ್ ಕೇಂದ್ರಗಳಲ್ಲಿ ಪಿಂಚಣಿದಾರರು (Pensioners) ಹಾಗೂ ಇತರ ಗುರುತಿಸಿದ ಫಲಾನುಭವಿಗಳಿಗೆ ನಗದುರಹಿತ ಚಿಕಿತ್ಸಾ ಸೌಲಭ್ಯ ಲಭ್ಯ.
*ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ತುರ್ತು ಹಾಗೂ ನಿಗದಿತ ರೋಗದ ಚಿಕಿತ್ಸಾ ವೆಚ್ಚವನ್ನು ಮರುಪಾವತಿ ಮಾಡಲಾಗುತ್ತದೆ.
*ಶ್ರವಣ ಸಾಧನಗಳು, ಕೃತಕ ಕಾಲುಗಳು ಹಾಗೂ ಇತರ ಅಗತ್ಯ ಸಾಧನಗಳ ಖರೀದಿಗೆ ತಗುಲಿದ ವೆಚ್ಚವನ್ನು ಮರುಪಾವತಿ ಮಾಡುವ ಸೌಲಭ್ಯವಿದೆ.
*ಕುಟುಂಬ ಕಲ್ಯಾಣ, ತಾಯಿ ಹಾಗೂ ಮಗುವಿನ ಆರೋಗ್ಯ ಸೇವೆಗಳು.
*ವೈದ್ಯಕೀಯ ಸಲಹೆ.