ಹೌದು, ನಿರುದ್ಯೋಗ 45 ವರ್ಷಗಳಲ್ಲೇ ಅಧಿಕ ಇದೆ: ಸತ್ಯ ಒಪ್ಪಿಕೊಂಡ ಕೇಂದ್ರ!

By Web DeskFirst Published May 31, 2019, 9:01 PM IST
Highlights

ಉದ್ಯೋಗ ಸೃಷ್ಟಿಯಲ್ಲಿನ ವೈಫಲ್ಯತೆ ಒಪ್ಪಿಕೊಂಡ ಕೇಂದ್ರ ಸರ್ಕಾರ| ನಿರುದ್ಯೋಗ ಪ್ರಮಾಣ ಕಳೆದ 45 ವರ್ಷಗಳಲ್ಲೇ ಅತಿ ಹೆಚ್ಚು ಎಂದ ಕೇಂದ್ರ| ‘ಗರಿಷ್ಠ ಮೌಲ್ಯದ ನೋಟುಗಳನ್ನು ನಿಷೇಧಿಸಿದ ಬಳಿಕ ನಿರುದ್ಯೋಗ ಪ್ರಮಾಣ ಹೆಚ್ಚು’| ಕೇಂದ್ರ ಅಂಕಿ ಅಂಶಗಳ ಸಚಿವಾಲಯದ ಮಾಹಿತಿ ಬಹಿರಂಗ| 2017-18ನೇ ಹಣಕಾಸು ವರ್ಷದಲ್ಲಿ ನಿರುದ್ಯೋಗ ಪ್ರಮಾಣ ಶೇ.6.01ಕ್ಕೆ ಏರಿಕೆ|  1972-73 ರ ನಂತರ ನಿರುದ್ಯೋಗ ಪ್ರಮಾಣ ಅತೀ ಹೆಚ್ಚು| 

ನವದೆಹಲಿ(ಮೇ.31): ಮೋದಿ 1.0 ಸರ್ಕಾರದ ಅವಧಿಯಲ್ಲಿ ಗರಿಷ್ಠ ಮೌಲ್ಯದ ನೋಟುಗಳನ್ನು ನಿಷೇಧಿಸಿದ ಬಳಿಕ, ದೇಶದಲ್ಲಿ ನಿರುದ್ಯೋಗ ಪ್ರಮಾಣ ಕಳೆದ 45 ವರ್ಷಗಳಲ್ಲೇ ಅತಿ ಹೆಚ್ಚು ದಾಖಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. 

ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಅಂಕಿ ಅಂಶಗಳ ಸಚಿವಾಲಯ, 2017-18ನೇ ಹಣಕಾಸು ವರ್ಷದಲ್ಲಿ ನಿರುದ್ಯೋಗ ಪ್ರಮಾಣ ಶೇ.6.01ಕ್ಕೆ ಏರಿದೆ ಎಂದು ಸ್ಪಷ್ಟಪಡಿಸಿದೆ. 1972-73 ರ ನಂತರ ನಿರುದ್ಯೋಗ ಪ್ರಮಾಣ 45 ವರ್ಷಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿದೆ ಎಂದು ಸರ್ಕಾರ ತನ್ನ ವರದಿಯಲ್ಲಿ ಅಧಿಕೃತವಾಗಿ ತಿಳಿಸಿದೆ.

Unemployment rate at 6.1% in financial year 2017-18 according to Labour Survey. pic.twitter.com/ZTr9RVhNny

— ANI (@ANI)

ಎಲ್ಲಾ ಉದ್ಯೋಗಶೀಲ ಯುವಕರಲ್ಲಿ ಶೇ.7.8ರಷ್ಟು ಜನರು ನಿರುದ್ಯೋಗಿಗಳಾಗಿದ್ದಾರೆ ಮತ್ತು ಗ್ರಾಮೀಣ ಭಾಗದಲ್ಲಿ ಇದರ ಪ್ರಮಾಣ ಶೇ. 5.3 ರಷ್ಟಿದೆ.  ಭಾರತದಲ್ಲಿ ನಿರುದ್ಯೋಗ ಪ್ರಮಾಣ ಶೇ.6.2 ರಷ್ಟಿದ್ದರೆ, ಮಹಿಳೆಯರಲ್ಲಿ ಶೇ.5.7 ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.
 

click me!