ಉಲ್ಟಾಪಲ್ಟಾ ಯಾಕಾಗ್ತಿದೆ?: ಸೆನ್ಸೆಕ್ಸ್, ನಿಫ್ಟಿ ಕುಸಿತ!

By Web DeskFirst Published May 31, 2019, 8:45 PM IST
Highlights

ಮುಂಬೈ ಷೇರು ಮಾರುಕಟ್ಟೆ ದಿಢೀರ ಕುಸಿತ| 117.77 ಅಂಕ ಕುಸಿತ ಕಂಡ ಷೇರು ವಿನಿಮಯ ಕೇಂದ್ರದ  ಸೂಚ್ಯಂಕ| 23.10 ಅಂಕ ಕುಸಿತ ಕಂಡ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ| ಏಷ್ಯಾ ಮಾರುಕಟ್ಟೆಗಳಲ್ಲಿನ ದುರ್ಬಲ ವಹಿವಾಟು ಕಾರಣ| 

ಮುಂಬೈ(ಮೇ.31): ಮುಂಬೈ ಷೇರು ವಿನಿಮಯ ಕೇಂದ್ರದ  ಸೂಚ್ಯಂಕ ಸೆನ್ಸೆಕ್ಸ್, ಇಂದು 117.77 ಅಂಕ ಕುಸಿತ ಕಂಡು 39,714.20 ಕ್ಕೆ ಇಳಿದಿದೆ. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ -ಎನ್ಎಸ್ಇ  ಸೂಚ್ಯಂಕ ನಿಫ್ಟಿ ಕೂಡ 23.10 ಅಂಕ ಕುಸಿದು 11,922.80 ಕ್ಕೆ ಇಳಿದಿದೆ.

ಏಷ್ಯಾ ಮಾರುಕಟ್ಟೆಗಳಲ್ಲಿನ ದುರ್ಬಲ ವಹಿವಾಟಿನಿಂದ ಸ್ಥಳೀಯ ಹೂಡಿಕೆದಾರರು ಪೇಟೆಯಲ್ಲಿ ಲಾಭದ ಪ್ರವೃತ್ತಿ ತೋರಿರುವುದು ಸೆನ್ಸೆಕ್ಸ್ ಕುಸಿತಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಎಫ್ಎಂಸಿಜಿ, ಆಟೋ, ಲೋಹ ಮತ್ತು ವಿದ್ಯುತ್‌ ಮುಂತಾದ ವಲಯಗಳ ಸೂಚ್ಯಂಕಗಳಲ್ಲಿನ ನಷ್ಟ ಮಾರುಕಟ್ಟೆಯನ್ನು ದುರ್ಬಲಗೊಳಿದ್ದು, ಯೆಸ್‌ ಬ್ಯಾಂಕ್, ಐಟಿಸಿ, ಎಮ್ ಅಂಡ್‌ ಎಮ್ ಹಾಗೂ ವಿಇಡಿಎಲ್‌ ಷೇರುಗಳು ತೀವ್ರ ನಷ್ಟ ಕಂಡಿವೆ.
 

click me!