
ನವದೆಹಲಿ (ಜು.16):ದೇಶಾದ್ಯಂತ ಟೊಮ್ಯಾಟೋ ಬೆಲೆ ಗಗನಕ್ಕೇರಿದ್ದು, ಮಹಿಳೆಯರ ನಿದ್ದೆಗೆಡಿಸಿದೆ. ಜನಸಾಮಾನ್ಯರು ಟೊಮ್ಯಾಟೋ ಖರೀದಿಸೋದನ್ನೇ ನಿಲ್ಲಿಸಿದ್ದಾರೆ ಕೂಡ. ಇಂಥ ಸಮಯದಲ್ಲಿ ಟೊಮ್ಯಾಟೋ ಬೆಲೆ ಇನ್ನಷ್ಟು ಏರಿಕೆಯಾಗುವ ಸುದ್ದಿಗಳು ಹರಿದಾಡುತ್ತಿವೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಟೊಮ್ಯಾಟೋ ದರಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದ್ದು, ಟೊಮ್ಯಾಟೋವನ್ನು ಈಗಾಗಲೇ ಕೆಜಿಗೆ 90ರೂ. ರಿಯಾಯ್ತಿ ದರದಲ್ಲಿ ಮಾರಾಟ ಮಾಡುತ್ತಿದೆ. ಈಗ ಈ ರಿಯಾಯ್ತಿ ಮಾರಾಟ ದರವನ್ನು ಕೆಜಿಗೆ 90ರೂ.ನಿಂದ 80ರೂ.ಗೆ ಇಳಿಕೆ ಮಾಡಲು ನಿರ್ಧರಿಸಿದೆ. ಗ್ರಾಹಕ ವ್ಯವಹಾರಗಳು, ಆಹಾರ ಹಾಗೂ ಸಾರ್ವಜನಿಕ ವಿತರಣೆ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದ್ದು, ದೇಶದ 500ಕ್ಕೂ ಅಧಿಕ ಮಾರುಕಟ್ಟೆಗಳಲ್ಲಿ ಮರುಪರಿಶೀಲನೆ ನಡೆಸಿದ ಬಳಿಕ ಇಂದಿನಿಂದ ಟೊಮ್ಯಾಟೋವನ್ನು ಕೆಜಿಗೆ 80ರೂ. ದರ ನಿಗದಿಪಡಿಸಿ ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ.
ನವದೆಹಲಿ, ನೋಯ್ಡಾ, ಲಖ್ನೋ, ಕಾನ್ಪುರ್, ವಾರಾಣಾಸಿ, ಪಟ್ನಾ, ಮುಜಾಫರ್ ಪುರ ಹಾಗೂ ಆರಾದ ಅನೇಕ ಕಡೆಗಳಲ್ಲಿ ಎನ್ ಎಎಫ್ ಇಡಿ ಹಾಗೂ ಎನ್ ಸಿಸಿಎಫ್ ಮೂಲಕ ಟೊಮ್ಯಾಟೋವನ್ನು ಇಂದಿನಿಂದ ಕೆಜಿಗೆ 80ರೂ.ಗೆ ಮಾರಾಟ ಮಾಡಲು ಪ್ರಾರಂಭಿಸಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ನಾಳೆಯಿಂದ ಇದನ್ನು ಇನ್ನಷ್ಟು ನಗರಗಳಿಗೆ ಅಲ್ಲಿನ ಮಾರುಕಟ್ಟೆ ಬೆಲೆಗಳನ್ನು ಆಧಾರಿಸಿ ವಿಸ್ತರಿಸಲಾಗುವುದು ಎಂದು ಸಚಿವಾಲಯ ಮಾಹಿತಿ ನೀಡಿದೆ. ಸರ್ಕಾರದ ಮಧ್ಯಪ್ರವೇಶ ಹಾಗೂ ಕೇಂದ್ರ ಸರ್ಕಾರ ಗ್ರಾಹಕರಿಗೆ ನಿರಾಳತೆ ಒದಗಿಸಲು ನಿರ್ಧರಿಸಿದ ಬಳಿಕ ಟೊಮ್ಯಾಟೋ ಸಗಟು ದರದಲ್ಲಿಇಳಿಕೆಯಾಗಿದೆ ಎಂಬ ಮಾಹಿತಿಯನ್ನು ಕೂಡ ಆಹಾರ ಹಾಗೂ ಸಾರ್ವಜನಿಕ ವಿತರಣೆ ಸಚಿವಾಲಯ ನೀಡಿದೆ.
ದೇಶದ 500ಕ್ಕೂ ಅಧಿಕ ಮಾರುಕಟ್ಟೆಗಳಲ್ಲಿನ ಪರಿಸ್ಥಿತಿಯನ್ನು ಮರುಪರಿಶೀಲಿಸಿದ ಬಳಿಕ ಟೊಮ್ಯಾಟೋವನ್ನು ಕೆಜಿಗೆ 80ರೂ. ದರದಲ್ಲಿಇಂದಿನಿಂದ (ಜು.16) ಮಾರಾಟ ಮಾಡಲು ನಿರ್ಧರಿಸಲಾಗಿದೆ. ನವದೆಹಲಿ, ನೋಯ್ಡಾ, ಲಖ್ನೋ, ಕಾನ್ಪುರ್, ವಾರಾಣಾಸಿ, ಪಟ್ನಾ, ಮುಜಾಫರ್ ಪುರ ಹಾಗೂ ಆರಾದ ಅನೇಕ ಕಡೆಗಳಲ್ಲಿ ಎನ್ ಎಎಫ್ ಇಡಿ ಹಾಗೂ ಎನ್ ಸಿಸಿಎಫ್ ಮೂಲಕ ಟೊಮ್ಯಾಟೋವನ್ನು ಕೆಜಿಗೆ 80ರೂ.ನಂತೆ ಮಾರಾಟ ಮಾಡಲು ಪ್ರಾರಂಭಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಟೊಮ್ಯಾಟೋ ದರಗಳು ಪ್ರತಿದಿನ ಹೊಸ ಮೈಲಿಗಲ್ಲುಗಳನ್ನು ದಾಟುತ್ತಿದ್ದು, ವಾರಗಳಿಂದ 100 ರೂಪಾಯಿಗಳ ಗಡಿಯಲ್ಲಿ ಸುಳಿದಾಡುತ್ತಿದೆ. ದೆಹಲಿಯಲ್ಲಿ 200 ರೂ. ಆಗಿದ್ದರೆ, ಉತ್ತರಾಖಂಡದ ಕೆಲವೆಡೆ 250 ರೂ. ಸಹ ಆಗಿತ್ತು. ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯು ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಟೊಮ್ಯಾಟೋಗಳನ್ನು ಖರೀದಿಸಿ ಮತ್ತು ಟೊಮ್ಯಾಟೋ ದರದಲ್ಲಿ ಅತಿದೊಡ್ಡ ಜಿಗಿತವನ್ನು ದಾಖಲಿಸಿರುವ ಪ್ರದೇಶಗಳಲ್ಲಿ ವಿತರಿಸಲು ರಾಷ್ಟ್ರೀಯ ಕೃಷಿ ಸಹಕಾರಿ ಮಾರಾಟ ಒಕ್ಕೂಟ ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟಕ್ಕೆ ಇತ್ತೀಚೆಗೆ ನಿರ್ದೇಶನ ನೀಡಿತ್ತು ಕೂಡ.
ಕೆಂಪು ಹವಳ: ಒಂದೇ ತಿಂಗಳಲ್ಲಿ ರೈತನ ಕೋಟ್ಯಧಿಪತಿ ಮಾಡಿದ ಟೊಮೆಟೋ
ಜೂನ್ ತಿಂಗಳ ಶುರುವಿನಲ್ಲಿ ಕೇಜಿಗೆ 40 ರೂ. ಇದ್ದ ಟೊಮೆಟೋ ಬೆಲೆ ಜುಲೈ ಮೊದಲನೇ ವಾರದಲ್ಲಿ 100 ರೂ. ದಾಟಿ ಕೆಲವು ಭಾಗದಲ್ಲಿ 200ರೂ.ವರೆಗೆ ತಲುಪಿದೆ. ಇದಕ್ಕೆ ಮುಖ್ಯ ಕಾರಣವೆಂದರೆ, ದೇಶದ ಉತ್ತರ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆ. ಹೀಗಾಗಿ ಬೆಳೆ ಹಾನಿ ಭಾರಿ ಪ್ರಮಾಣದಲ್ಲಿ ಆಗಿದ್ದು ನಷ್ಟವಾಗುತ್ತಿದೆ ಎಂದು ಹೇಳಲಾಗಿದೆ.
ಪ್ರಸ್ತುತ ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದಿಂದ ಟೊಮ್ಯಾಟೋ ಪೂರೈಕೆಯಾಗುತ್ತಿದೆ ಎಂದು ಸರ್ಕಾರ ಹೇಳಿದೆ. ಹಾಗೂ, ದೆಹಲಿ ಮತ್ತು ಹತ್ತಿರದ ನಗರಗಳು ಹಿಮಾಚಲ ಪ್ರದೇಶದಿಂದ ಮತ್ತು ಕರ್ನಾಟಕದಿಂದ ದಾಸ್ತಾನುಗಳನ್ನು ಸ್ವೀಕರಿಸುತ್ತಿವೆ ಎಂದೂ ವರದಿಯಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.