
ಬೆಂಗಳೂರು (ಡಿ.21): ಚಿನ್ನ(Gold)ಅಂದ್ರೆ ಮಹಿಳೆಯರಿಗೆ ವಿಶೇಷವಾದ ಆಕರ್ಷಣೆ. ಅದೆಷ್ಟೇ ಆಭರಣಗಳಿದ್ರೂ ಇನ್ನೂ ಖರೀದಿಸೋ ಬಯಕೆ. ಇದೇ ಕಾರಣಕ್ಕೆ ಪ್ರತಿದಿನ ಚಿನ್ನದ ಬೆಲೆ ಪರಿಶೀಲಿಸೋ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಅಂಥವರಿಗೆ ಇಂದು ಖುಷಿ ಪಡೋ ಸುದ್ದಿಯಿದೆ. ಅದೇನೆಂದ್ರೆ ಇಂದು (ಡಿ.21) ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಇನ್ನು ಬೆಳ್ಳಿ (Silver) ಖರೀದಿಸೋರಿಗೆ ಕೂಡ ಇಂದು ಶುಭ ಸುದ್ದಿಯಿದೆ. ಬೆಳ್ಳಿ ಬೆಲೆಯಲ್ಲಿ ಕೂಡ ಇಳಿಕೆಯಾಗಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ. ಆದ್ರೆ ಕಳೆದ ಎರಡು ದಿನಗಳಿಂದ ಸ್ಥಿರತೆ ಕಾಯ್ದುಕೊಂಡಿದ್ದ ಚಿನ್ನದ ಬೆಲೆ ಇಂದು ಇಳಿಕೆಯಾಗಿದೆ. ಇನ್ನು ಬೆಳ್ಳಿ ಬೆಲೆ ನಿನ್ನೆ ಕೂಡ ಇಳಿಕೆಯಾಗಿದ್ದು, ಇಂದು ಕೂಡ ಅದೇ ಹಾದಿಯಲ್ಲಿ ಸಾಗಿದೆ. ಒಮಿಕ್ರಾನ್ ಭೀತಿ, ದೇಶದಲ್ಲಿ ಹಣದುಬ್ಬರ ದರದಲ್ಲಿ ಏರಿಕೆ ಚಿನ್ನ ಹಾಗೂ ಬೆಳ್ಳಿ ಬೆಲೆ ಮೇಲೆ ಪರಿಣಾಮ ಬೀರೋ ಸಾಧ್ಯತೆಯೂ ಇದೆ. ಇಂದು (ಡಿ.21) ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ(Bengaluru) ದರ ಎಷ್ಟಿದೆ?
ಬೆಂಗಳೂರಿನಲ್ಲಿ (Bengaluru)ಚಿನ್ನದ ಬೆಲೆಯಲ್ಲಿ ಇಂದು 400ರೂ. ಇಳಿಕೆಯಾಗಿದೆ. ನಿನ್ನೆ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 45,700ರೂ. ಇದ್ದು, ಇಂದು 45,300ರೂ. ಇದೆ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 49,850ರೂ. ಇದ್ದು, ಇಂದು 49, 420ರೂ. ಇದೆ. ಅಂದ್ರೆ 430ರೂ. ಇಳಿಕೆಯಾಗಿದೆ. ಒಂದು ಕೆ.ಜಿ. ಬೆಳ್ಳಿ ಬೆಲೆಯಲ್ಲಿ ಇಂದು 500ರೂ. ಇಳಿಕೆ ಕಂಡುಬಂದಿದೆ. ಒಂದು ಕೆ.ಜಿ.ಬೆಳ್ಳಿಗೆ ನಿನ್ನೆ 61,900ರೂ. ಇದ್ರೆ ಇಂದು 61,400ರೂ. ಇದೆ.
ದೆಹಲಿಯಲ್ಲಿ(Delhi) ಹೇಗಿದೆ?
ದೆಹಲಿಯಲ್ಲಿ ಚಿನ್ನದ ಬೆಲೆ ಇಂದು ಸ್ಥಿರವಾಗಿದೆ. ನಿನ್ನೆ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 47,850ರೂ. ಇತ್ತು. ಇಂದು ಕೂಡ ಅಷ್ಟೇ ಇದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ ಯಾವುದೇ ಬದಲಾವಣೆ ಆಗಿಲ್ಲ. ನಿನ್ನೆ 52, 200ರೂ. ಇದ್ದ ಚಿನ್ನದ ದರ ಇಂದು ಕೂಡ ಅಷ್ಟೇ ಇದೆ. ಒಂದು ಕೆ.ಜಿ. ಬೆಳ್ಳಿ ದರದಲ್ಲಿ ನಿನ್ನೆಗಿಂತ ಇಂದು 500ರೂ. ಇಳಿಕೆಯಾಗಿದೆ. ನಿನ್ನೆ 61,900ರೂ. ಆಗಿದ್ದ ಬೆಳ್ಳಿ ಬೆಲೆ ಇಂದು 61,400ರೂ. ಆಗಿದೆ.
ಮುಂಬೈನಲ್ಲಿ (Mumbai) ಎಷ್ಟಿದೆ?
ಮುಂಬೈನಲ್ಲಿ ಕೂಡ ಇಂದು ಚಿನ್ನದ ದರದಲ್ಲಿ 10ರೂ. ಇಳಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 47,640ರೂ.ಇದ್ದು, ಇಂದು 47,630ರೂ. ಇದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ 48,640ರೂ. ಇತ್ತು, ಇಂದು 48,630ರೂ. ಇದೆ. ಬೆಳ್ಳಿ ದರದಲ್ಲಿಇಂದು 500ರೂ. ಇಳಿಕೆಯಾಗಿದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 61,900ರೂ. ಇದ್ದು, ಇಂದು 500ರೂ. ಇಳಿಕೆಯಾಗಿ 61,400ರೂ. ಆಗಿದೆ.
Sensex crashes ದೇಶದಲ್ಲಿ ಓಮಿಕ್ರಾನ್ ಹೆಚ್ಚಳದ ಆತಂಕ, ಸೆನ್ಸೆಕ್ಸ್ 1189 ಅಂಕಗಳ ಮಹಾಪತನ
ಚೆನ್ನೈಯಲ್ಲಿ (chennai) ದರ ಹೀಗಿದೆ
ಚೆನ್ನೈಯಲ್ಲಿ ಇಂದು ಚಿನ್ನದ ದರದಲ್ಲಿ370ರೂ. ಇಳಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು 45, 540ರೂ.ಇದೆ. ನಿನ್ನೆ 45,910ರೂ. ಇತ್ತು. 24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ 50, 100ರೂ. ಇದ್ದು, ಇಂದು 420ರೂ. ಇಳಿಕೆಯಾಗಿ 49,680ರೂ. ಆಗಿದೆ. ಬೆಳ್ಳಿ ದರದಲ್ಲಿ ನಿನ್ನೆಗಿಂತ ಇಂದು 760ರೂ. ಇಳಿಕೆಯಾಗಿದ್ದು, ಒಂದು ಕೆ.ಜಿ. ಬೆಳ್ಳಿಗೆ 65,200ರೂ.ಇದೆ.
"
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.