ಮತ್ತೆ ಏರಿಕೆಯಾಗುತ್ತಾ ಸಿಮೆಂಟ್ ಬೆಲೆ? ಪ್ರತಿ ಚೀಲಕ್ಕೆ 10-30ರೂ. ಹೆಚ್ಚಳ ನಿರೀಕ್ಷೆ

Published : Nov 07, 2022, 04:14 PM IST
ಮತ್ತೆ ಏರಿಕೆಯಾಗುತ್ತಾ ಸಿಮೆಂಟ್ ಬೆಲೆ? ಪ್ರತಿ ಚೀಲಕ್ಕೆ 10-30ರೂ. ಹೆಚ್ಚಳ ನಿರೀಕ್ಷೆ

ಸಾರಾಂಶ

*ಬೆಲೆಯೇರಿಕೆಗೆ ಸಿಮೆಂಟ್ ಕಂಪನಿಗಳ ಸಿದ್ಧತೆ *ಅಕ್ಟೋಬರ್ ನಲ್ಲಷ್ಟೇ ಸಿಮೆಂಟ್ ದರ ಪ್ರತಿ ಬ್ಯಾಗಿಗೆ 3-4ರೂ. ಹೆಚ್ಚಳ  *ನವೆಂಬರ್ ನಲ್ಲೇ ಬೆಲೆಯೇರಿಕೆ ಸಾಧ್ಯತೆ

ನವದೆಹಲಿ (ಅ.7): ಕಳೆದ ತಿಂಗಳಷ್ಟೇ ಬೆಲೆ ಹೆಚ್ಚಳ ಮಾಡಿದ್ದ ಸಿಮೆಂಟ್ ಕಂಪನಿಗಳು ನವೆಂಬರ್ ನಲ್ಲಿ ಕೂಡ ಪ್ರತಿ ಬ್ಯಾಗ್ ಮೇಲೆ 10-30ರೂ. ಏರಿಕೆ ಮಾಡಲು ಯೋಜನೆ ರೂಪಿಸುತ್ತಿವೆ ಎಂದು ಎಮ್ಕೆ ಗ್ಲೋಬಲ್ ಫೈನಾನ್ಷಿಯಲ್ ಸರ್ವೀಸಸ್ ಲಿ. ತಿಳಿಸಿದೆ. ಅಕ್ಟೋಬರ್ ನಲ್ಲಷ್ಟೇ ದೇಶದಲ್ಲಿ ಸಿಮೆಂಟ್ ದರವನ್ನು ಪ್ರತಿ ಬ್ಯಾಗಿಗೆ 3-4ರೂ. ಹೆಚ್ಚಳ ಮಾಡಲಾಗಿತ್ತು. ಇನ್ನು ಗ್ಲೋಬಲ್ ಫೈನಾನ್ಷಿಯಲ್ ಸರ್ವೀಸಸ್ ಲಿ.  ವರದಿ ಪ್ರಕಾರ ದಕ್ಷಿಣ ಮತ್ತು ಪೂರ್ವ ಭಾರತದಲ್ಲಿ ತಿಂಗಳಿಗೆ ಸಿಮೆಂಟ್ ಬೆಲೆಯಲ್ಲಿ ಶೇ.2ರಿಂದ 3ರಷ್ಟು ಹೆಚ್ಚಳವಾಗಿದೆ. ಇನ್ನು ಪಶ್ಚಿಮ ಭಾರತದಲ್ಲಿ ಸಿಮೆಂಟ್ ಬೆಲೆಯಲ್ಲಿ ಶೇ.1ರಷ್ಟು ಏರಿಕೆಯಾಗಿದೆ. ಆದರೆ, ಉತ್ತರ ಮತ್ತು ಕೇಂದ್ರ ಭಾರತದಲ್ಲಿ ಮಾತ್ರ ಸಿಮೆಂಟ್ ಬೆಲೆಯಲ್ಲಿ ಶೇ.1ರಷ್ಟು ಇಳಿಕೆಯಾಗಿದೆ. 'ಸಿಮೆಂಟ್ ಕಂಪನಿಗಳು ವಿವಿಧ ಪ್ರದೇಶಗಳಲ್ಲಿ ಸಿಮೆಂಟ್ ನ ಪ್ರತಿ ಚೀಲದ ಮೇಲೆ 10 ರೂ.ನಿಂದ 30 ರೂ.ವರೆಗೆ ಬೆಲೆಯೇರಿಕೆ ಮಾಡಲು ಯೋಚಿಸಿವೆ. ಮುಂದಿನ ದಿನಗಳಲ್ಲಿ ಬೆಲೆ ಹೆಚ್ಚಳದ ಬಗ್ಗೆ ಸ್ಪಷ್ಟ ನಿರ್ಧಾರ ಪ್ರಕಟಿಸಲಿವೆ' ಎಂದು ಎಮ್ಕೆ ಗ್ಲೋಬಲ್ ಮಾಹಿತಿ ನೀಡಿದೆ.

ಕಾರಣವೇನು?
ಮುಂಗಾರು ಮಳೆ ಇನ್ನೂ ನಿರ್ಗಮಿಸದಿರೋದು, ಅಕ್ಟೋಬರ್ ತಿಂಗಳಲ್ಲಿ ಹಬ್ಬಗಳ ಹಿನ್ನೆಲೆಯಲ್ಲಿ ಸಾಲು ಸಾಲು ರಜೆಗಳು ನಿರ್ಮಾಣ ಚಟುವಟಿಕೆ ಮೇಲೆ ಪರಿಣಾಮ ಬೀರಿವೆ. ಅಲ್ಲದೆ, ಕಾರ್ಮಿಕರ ಸಮಸ್ಯೆ ಕೂಡ ಸಮಸ್ಯೆ ತಂದೊಡ್ಡಿದೆ. ಈ ಎಲ್ಲ ಕಾರಣಗಳಿಂದ ಅಕ್ಟೋಬರ್ ನಲ್ಲಿ ಸಿಮೆಂಟ್ ಬೇಡಿಕೆ ತಗ್ಗಿತ್ತು. ಆದರೆ, ಎಲ್ಲ ಹಬ್ಬಗಳು ಮುಗಿದಿರುವ ಹಿನ್ನೆಲೆಯಲ್ಲಿ ನವೆಂಬರ್ ನಲ್ಲಿ ಕಟ್ಟಡ ಕಾಮಗಾರಿಗಳು ವೇಗ ಪಡೆದುಕೊಳ್ಳಲಿದ್ದು, ಸಿಮೆಂಟ್ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಎಮ್ಕೆ ಗ್ಲೋಬಲ್ ವರದಿ ತಿಳಿಸಿದೆ.

ಮೆಟ್ರೋ ಕ್ಯಾಶ್ & ಕ್ಯಾರಿ ರಿಲಯನ್ಸ್ ತೆಕ್ಕೆಗೆ? 4,060 ಕೋಟಿ ರೂ. ಒಪ್ಪಂದಕ್ಕೆ ಜರ್ಮನಿ ಸಂಸ್ಥೆ ಒಪ್ಪಿಗೆ

ಮುಂದಿನ ತ್ರೈಮಾಸಿಕದಲ್ಲಿ ಸಿಮೆಂಟ್ ಉತ್ಪಾದನೆ ವೆಚ್ಚದ ಒತ್ತಡ ತಗ್ಗುವ ನಿರೀಕ್ಷೆಯಿದೆ. ಹೀಗಾಗಿ ಸಿಮೆಂಟ್ ದರದಲ್ಲಿ ಹೆಚ್ಚಿನ ಏರಿಕೆ ಕಾಣುವ ಸಾಧ್ಯತೆಯಿಲ್ಲ ಎಂದು ಹೇಳಲಾಗಿದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಸಿಮೆಂಟ್ ವಲಯ ಸಾಕಷ್ಟು ಹಿನ್ನಡೆ ಕಂಡಿತ್ತು. ಮಳೆಗಾಲದಲ್ಲಿ ನಿರ್ಮಾಣ ಕಾಮಗಾರಿಗಳು ಸ್ಥಗಿತಕೊಂಡ ಕಾರಣ ಸಿಮೆಂಟ್ ಬೇಡಿಕೆ ತಗ್ಗಿತ್ತು. 

ತಗ್ಗಿದ ಉಕ್ಕಿನ ಬೆಲೆ
ಇತ್ತ ಸಿಮೆಂಟ್  (Cement) ದರ (Price) ಹೆಚ್ಚಳವಾಗಿದ್ರೆ ಅತ್ತ ಉಕ್ಕಿನ (Steel) ಬೆಲೆ ತಗ್ಗಿದೆ. ಕಳೆದ ಆರು ತಿಂಗಳಲ್ಲಿ ಉಕ್ಕಿನ ದರದಲ್ಲಿಶೇ.4ರಷ್ಟು ಇಳಿಕೆಯಾಗಿದೆ. ಇದಕ್ಕೆ ಮುಖ್ಯಕಾರಣ ಕೇಂದ್ರ ಸರ್ಕಾರ ಉಕ್ಕಿನ ರಫ್ತಿನ (Export) ಮೇಲೆ ಶೇ.15ರಷ್ಟು ಸುಂಕ ವಿಧಿಸಿರೋದು. ಇದ್ರಿಂದ ದೇಶೀಯ ಮಾರುಕಟ್ಟೆಯಲ್ಲಿ ಉಕ್ಕಿನ ಲಭ್ಯತೆ ಹೆಚ್ಚಿದ್ದು, ಇದೇ ಕಾರಣದಿಂದ ಬೆಲೆ ಇಳಿಕೆಯಾಗಿದೆ. ಏಪ್ರಿಲ್ ನಲ್ಲಿ ಉಕ್ಕಿನ ಬೆಲೆಯಲ್ಲಿ ಭಾರೀ ಏರಿಕೆಯಾಗಿತ್ತು, ಟನ್ ಗೆ 78,800 ರೂ. ತನಕ ಏರಿಕೆಯಾಗಿತ್ತು. ಆದರೆ, ಸದ್ಯ ಉಕ್ಕಿನ ಬೆಲೆ ಅಂದಾಜು 57,000ರೂ.ನಷ್ಟಿದೆ. 

ಮೇನಲ್ಲಿ ಬೆಲೆ ಏರಿಕೆಯನ್ನು (Price hike) ನಿಯಂತ್ರಿಸುವ ನಿಟ್ಟಿನಲ್ಲಿ ಕಬ್ಬಿಣ (Iron), ಉಕ್ಕು (Steel) ಮತ್ತು ಪ್ಲಾಸ್ಟಿಕ್‌ (Plastic) ಮೇಲಿನ ಆಮದು ಸುಂಕವನ್ನು ಕಡಿತ ಮಾಡಲು ಕೇಂದ್ರ ಮಹತ್ವದ ನಿರ್ಧಾರ ಕೈಗೊಂಡಿತ್ತು. 

ಎಫ್ ಡಿ ಮೇಲೆ ಶೇ.7.50ರಷ್ಟು ಬಡ್ಡಿ ನೀಡುತ್ತೆ ಈ ಖಾಸಗಿ ಬ್ಯಾಂಕ್!

ನವೆಂಬರ್ ನಲ್ಲಿ ಮಳೆ ಕಡಿಮೆಯಾಗುವ ಹಿನ್ನೆಲೆಯಲ್ಲಿ ನಿರ್ಮಾಣ ಕಾಮಗಾರಿಗಳು ವೇಗ ಪಡೆದುಕೊಳ್ಳಲಿವೆ. ಇದರಿಂದ ಸಿಮೆಂಟ್ ಬೇಡಿಕೆ ಹೆಚ್ಚಲಿದೆ. ಈಗಾಗಲೇ ದೇಶದಲ್ಲಿ ಹಣದುಬ್ಬರ ಹೆಚ್ಚಳವಾಗಿದ್ದು, ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಜೊತೆಗೆ ಗೃಹಸಾಲಗಳ ಮೇಲಿನ ಬಡ್ಡಿದರ ಕೂಡ ಹೆಚ್ಚಳವಾಗಿದೆ. ಇದ್ರಿಂದ ಇಎಂಐ ಹೊರೆ ಹೆಚ್ಚಿದೆ. ಇವೆಲ್ಲದರ ನಡುವೆ ಸಿಮೆಂಟ್ ದರದಲ್ಲಿ ಬೆಲೆ ಹೆಚ್ಚಳವಾಗಿರೋದು ಮನೆ ಕಟ್ಟೋರ ಮೇಲಿನ ಹೊರೆ ಹೆಚ್ಚಿಸಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ