ಮೆಟ್ರೋ ಕ್ಯಾಶ್ & ಕ್ಯಾರಿ ರಿಲಯನ್ಸ್ ತೆಕ್ಕೆಗೆ? 4,060 ಕೋಟಿ ರೂ. ಒಪ್ಪಂದಕ್ಕೆ ಜರ್ಮನಿ ಸಂಸ್ಥೆ ಒಪ್ಪಿಗೆ

By Suvarna News  |  First Published Nov 7, 2022, 12:18 PM IST

*ಮೆಟ್ರೋ ಕ್ಯಾಶ್ &  ಕ್ಯಾರಿ ಭಾರತದ ವಹಿವಾಟು ಖರೀದಿಗೆ ರಿಲಯನ್ಸ್ ಬಿಡ್
*ಈ ಸಂಬಂಧ ಉಭಯ ಸಂಸ್ಥೆಗಳ ನಡುವೆ ಕಳೆದ ಕೆಲವು ತಿಂಗಳಿಂದ ಮಾತುಕತೆ 
*ಕಳೆದ ವಾರ ರಿಲಯನ್ಸ್ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದ ಜರ್ಮನಿ ಕಂಪನಿ


ನವದೆಹಲಿ (ನ.7): ಜರ್ಮನಿ ಮೂಲದ ಮೆಟ್ರೋ ಎಜೆ ಸಮೂಹದ ಕ್ಯಾಶ್ &  ಕ್ಯಾರಿ ಸಂಸ್ಥೆಯ ಭಾರತದ ವಹಿವಾಟನ್ನು  4,060 ಕೋಟಿ ರೂ.ಗೆ  (500  ಮಿಲಿಯನ್ ಯುರೋಸ್) ಸ್ವಾಧೀನಪಡಿಸಿಕೊಳ್ಳಲು ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ. ಖರೀದಿ ಒಪ್ಪಂದದ ಕುರಿತಾಗಿ ಉಭಯ ಸಂಸ್ಥೆಗಳ ನಡುವೆ ಕಳೆದ ಕೆಲವು ತಿಂಗಳಿಂದ ಮಾತುಕತೆ ನಡೆಯುತ್ತಿದ್ದು, ರಿಲಯನ್ಸ್ ರಿಟೇಲ್ ಪ್ರಸ್ತಾವಕ್ಕೆ ಜರ್ಮನಿ ಸಂಸ್ಥೆ ಕಳೆದ ವಾರ ಒಪ್ಪಿಗೆ ನೀಡಿದೆ ಎಂದು ಹೇಳಲಾಗಿದೆ. ಈ ಒಪ್ಪಂದದಲ್ಲಿ ಮೆಟ್ರೋ ಕ್ಯಾಶ್  & ಕ್ಯಾರಿ ಸಂಸ್ಥೆಯ 31 ಸಗಟು ವಿತರಣಾ ಕೇಂದ್ರಗಳು, ಜಮೀನು ಹಾಗೂ ಇತರ ಆಸ್ತಿಗಳು ಸೇರಿವೆ. ಆದರೆ., ಖರೀದಿಯ ಬಗ್ಗೆ ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಮೆಟ್ರೋ ಪ್ರತಿಕ್ರಿಯಿಸಲು ನಿರಾಕರಿಸಿವೆ. ಭಾರತದ ಮೆಟ್ರೋ ಕ್ಯಾಶ್ & ಕ್ಯಾರಿ ವಹಿವಾಟಿನ ಖರೀದಿ ರಿಲಯನ್ಸ್ ರಿಟೇಲ್ ಕಂಪನಿಗೆ ತನ್ನ ಉದ್ಯಮವನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲು ನೆರವಾಗಲಿದೆ. ಮೆಟ್ರೋ ಒಟ್ಟು 34 ರಾಷ್ಟ್ರಗಳಲ್ಲಿ ವಹಿವಾಟು ಹೊಂದಿದ್ದು, 2003ರಲ್ಲಿ ಭಾರತದ ಮಾರುಕಟ್ಟೆ ಪ್ರವೇಶಿಸಿತ್ತು. ಕಿರಣಿ ಅಂಗಡಿಗಳು, ಹೋಟೆಲ್ ಗಳು, ರೆಸ್ಟೋರೆಂಟ್ ಗಳು ಹಾಗೂ ಕೇಟರರ್ಸ್, ಖಾಸಗಿ ಕಂಪನಿಗಳು ಹಾಗೂ ಕೆಲವು ಸಂಸ್ಥೆಗಳು ಮೆಟ್ರೋ ಕ್ಯಾಶ್ ಹಾಗೂ ಕ್ಯಾರಿಯ ಗ್ರಾಹಕರಾಗಿದ್ದಾರೆ.
ಮೆಟ್ರೋ ಕ್ಯಾಶ್ &  ಕ್ಯಾರಿ ಬೆಂಗಳೂರಿನಲ್ಲಿ 6, ಹೈದರಾಬಾದ್ ನಲ್ಲಿ 4, ಮುಂಬೈ ಮತ್ತು ನವದೆಹಲಿಯಲ್ಲಿ ತಲಾ 2 ಮಳಿಗೆಗಳನ್ನು ಹೊಂದಿದೆ. ಇನ್ನು ಕೋಲ್ಕತ್ತ, ಜೈಪುರ, ಜಲಂಧರ, ಅಮೃತಸರ, ಅಹಮದಾಬಾದ್, ಸೂರತ್, ಇಂದೋರ್, ಲಖನೌ, ಮೀರತ್, ನಾಸಿಕ್, ಗಾಜಿಯಾಬಾದ್, ತುಮಕೂರು, ವಿಜಯವಾಡ, ವಿಶಾಖಪಟ್ಟಣಂ, ಗುಂಟೂರು, ಹುಬ್ಬಳ್ಳಿಯಲ್ಲಿ ತಲಾ ಒಂದು ಕೇಂದ್ರ ಹೊಂದಿದೆ. 

ಜುಲೈ 2020ರಲ್ಲಿ ಇ-ಕಾಮರ್ಸ್ ಪ್ರಮುಖ ಸಂಸ್ಥೆ ಫ್ಲಿಪ್ ಕಾರ್ಟ್ ಗ್ರೂಪ್ ವಾಲ್ ಮಾರ್ಟ್ ಇಂಡಿಯಾ ಪ್ರೈ.ಲಿ.ನಲ್ಲಿ ಶೇ.100ರಷ್ಟು ಷೇರುಗಳನ್ನು ಸ್ವಾಧೀನಪಡಿಸಿಕೊಂಡಿತ್ತು. ವಾಲ್ ಮಾರ್ಟ್ ಕ್ಯಾಶ್ & ಕ್ಯಾರಿ ಉದ್ಯಮವನ್ನು ಉತ್ತಮ ಬೆಲೆಗೆ ತುಂಬಾ ಚೆನ್ನಾಗಿ ನಡೆಸುತ್ತಿತ್ತು. ಮೆಟ್ರೋ ಕ್ಯಾಶ್ & ಕ್ಯಾರಿ ಉದ್ಯಮ ಖರೀದಿಗೆ ಇತರ ಅನೇಕ ರಿಟೇಲ್ ಸಂಸ್ಥೆಗಳು ಆಸಕ್ತಿ ತೋರಿದ್ದವು. ಅದರಲ್ಲಿ ಲೋಟಸ್ ಬ್ರ್ಯಾಂಡ್ ಅಡಿಯಲ್ಲಿ ಕ್ಯಾಶ್ & ಕ್ಯಾರಿ ಉದ್ಯಮ ನಡೆಸುವ ಸಿಯಾಮ್ ಮಾಕ್ರೊ ಪ್ರಮುಖ ಸಂಸ್ಥೆಯಾಗಿದೆ. ಆದರೆ, ಕಳೆದ ತಿಂಗಳು ಮೆಟ್ರೋ ಕ್ಯಾಶ್ &  ಕ್ಯಾರಿ ಭಾರತದ ಖರೀದಿಗೆ ಸಂಬಂಧಿಸಿದ ಬಿಡ್ ಹಿಂದೆ ಪಡೆಯುತ್ತಿರೋದಾಗಿ ಘೋಷಿಸಿತ್ತು.

Tap to resize

Latest Videos

ಎಫ್ ಡಿ ಮೇಲೆ ಶೇ.7.50ರಷ್ಟು ಬಡ್ಡಿ ನೀಡುತ್ತೆ ಈ ಖಾಸಗಿ ಬ್ಯಾಂಕ್!

ರಿಲಯನ್ಸ್ ಇಂಡ ಸ್ಟ್ರೀಸ್ ಇತ್ತೀಚೆಗೆ ತನ್ನ ಉದ್ಯಮ (Business) ವಿಸ್ತರಿಸುತ್ತಿದೆ. ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಹೂಡಿಕೆ (Invest) ಮಾಡಿದೆ ಕೂಡ. ನಾಲ್ಕೈದು ದಿನಗಳ ಹಿಂದಷ್ಟೇ  ರಿಲಯನ್ಸ್ ರಿಟೇಲ್ ಸಲೂನ್ ಉದ್ಯಮಕ್ಕೆ ಕಾಲಿಡಲು ಸಜ್ಜಾಗಿದೆ ಎಂಬ ಬಗ್ಗೆ ವರದಿಯಾಗಿತ್ತು.  ಚೆನ್ನೈ ಮೂಲದ  'ನ್ಯಾಚುರಲ್ಸ್ ಸಲೂನ್ ಆ್ಯಂಡ್ ಸ್ಪಾ' ಸಲೂನ್ ಕಂಪನಿಯ ಶೇ.49ರಷ್ಟು ಷೇರುಗಳನ್ನು ಖರೀದಿಸಲು ರಿಲಯನ್ಸ್ ಮುಂದಾಗಿದೆ ಎಂದು ಹೇಳಲಾಗಿತ್ತು. ಇನ್ನೂ ಕೆಲವು ದಿನಗಳ ಹಿಂದೆ  ರಿಲಯನ್ಸ್ ಸಂಸ್ಥೆ ಮೊದಲ ಇನ್ -ಹೌಸ್ ಪ್ರೀಮಿಯಂ ಫ್ಯಾಷನ್ ಹಾಗೂ ಲೈಫ್ ಸ್ಟೈಲ್ ಸ್ಟೋರ್ (Lifestyle store) ಪ್ರಾರಂಭಿಸಿತ್ತು. 

ಟಾಟಾ ಕಾರು ಕೊಳ್ಳಲು ಬಯಸಿದ್ದೀರಾ... ನಾಳೆಯಿಂದ ರೇಟ್ ಜಾಸ್ತಿಯಾಗುತ್ತೆ

217 ಬಿಲಿಯನ್ ಡಾಲರ್‌ ಮೌಲ್ಯದ ರಿಲಯನ್ಸ್‌ ಇಂಡಸ್ಟ್ರೀಸ್‌ (Reliance Industries) ಸಂಸ್ಥೆಯ ಅಂಗ ಸಂಸ್ಥೆಯಾಗಿರುವ ರಿಲಯನ್ಸ್‌ ರೀಟೇಲ್‌ (Reliance Retail) ಕಂಪನಿಯ ಮುಖ್ಯಸ್ಥೆಯನ್ನಾಗಿ (Chairperson) ಇಶಾ ಅಂಬಾನಿಯನ್ನು ತಂದೆ ಮುಖೇಶ್‌ ಅಂಬಾನಿ ಆಗಸ್ಟ್ ನಲ್ಲಿ ನೇಮಕ ಮಾಡಿದ್ದರು. 


 

click me!