8000 ಕೋಟಿ ರೂ. ಬೃಹತ್ ಬ್ಯಾಂಕ್‌ ಹಗರಣ ಪತ್ತೆ, ಸಿಬಿಐನಿಂದ ಪ್ರಕರಣ ದಾಖಲು!

By Kannadaprabha NewsFirst Published Dec 19, 2020, 7:55 AM IST
Highlights

ಆಂಧ್ರದಲ್ಲಿ .8000 ಕೋಟಿ ಬ್ಯಾಂಕ್‌ ಹಗರಣ ಪತ್ತೆ| ಹೈದರಾಬಾದ್‌ ಕಂಪನಿಯಿಂದ ವಂಚನೆ| ಸಿಬಿಐನಿಂದ ಪ್ರಕರಣ ದಾಖಲು| ಕಂಪನಿ ಮೇಲೆ ದಾಳಿ

ನವದೆಹಲಿ(ಡಿ.19): 13 ಸಾವಿರ ಕೋಟಿ ರು. ಮೊತ್ತದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣ ಹಚ್ಚ ಹಸಿರಾಗಿರುವಾಗಲೇ, ದೇಶದಲ್ಲಿ ಮತ್ತೊಂದು ಕಂಪನಿ ಬ್ಯಾಂಕುಗಳಿಗೆ ಮೆಗಾ ವಂಚನೆ ಮಾಡಿದೆ. ಹೈದರಾಬಾದ್‌ ಮೂಲದ ಟ್ರಾನ್ಸ್‌ಸ್ಟ್ರಾಯ್‌ ಕಂಪನಿಯು ಕೆನರಾ ಬ್ಯಾಂಕ್‌ ನೇತೃತ್ವದ ಬ್ಯಾಂಕುಗಳ ಒಕ್ಕೂಟಕ್ಕೆ 7926 ಕೋಟಿ ರು. ಮೋಸ ಮಾಡಿದೆ. ಇದನ್ನು ದೇಶ ಕಂಡ ಅತಿದೊಡ್ಡ ಬ್ಯಾಂಕಿಂಗ್‌ ಹಗರಣಗಳಲ್ಲಿ ಒಂದು ಎಂದು ಹೇಳಲಾಗಿದೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಸಿಬಿಐ, 12/18/2020 10:05:46 Pಋಟ್ರಾನ್ಸ್‌ಸ್ಟ್ರಾಯ್‌ ಕಂಪನಿ ಹಾಗೂ ಅದರ ನಿರ್ದೇಶಕರ ಹೈದರಾಬಾದ್‌ ಮತ್ತು ಗುಂಟೂರಿನ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದೆ. ದಾಳಿಗೊಳಗಾದವರಲ್ಲಿ ಟ್ರಾನ್ಸ್‌ಸ್ಟ್ರಾಯ್‌ ಕಂಪನಿಯ ಹೆಚ್ಚುವರಿ ನಿರ್ದೇಶಕರಾಗಿರುವ ತೆಲುಗುದೇಶಂ ಮಾಜಿ ಸಂಸದ ರಾಯಪತಿ ಸಾಂಬಶಿವ ರಾವ್‌ ಕೂಡ ಇದ್ದಾರೆ. ರಾಯಪತಿ ಜತೆಗೆ ಕಂಪನಿ, ಅದರ ಮುಖ್ಯಸ್ಥ-ವ್ಯವಸ್ಥಾಪಕ (ಸಿಎಂಡಿ) ನಿರ್ದೇಶಕ ಚೆರುಕುರಿ ಶ್ರೀಧರ್‌, ಹೆಚ್ಚುವರಿ ನಿರ್ದೇಶಕ ಅಕ್ಕಿನೇನಿ ಸತೀಶ್‌ ಅವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.

ಹೈದರಾಬಾದ್‌ ಮೂಲದ ಈ ಖಾಸಗಿ ಕಂಪನಿ ಹಾಗೂ ಅದರ ನಿರ್ದೇಶಕರು ಹಲವು ಬ್ಯಾಂಕುಗಳಿಂದ ಸೌಲ ಸೌಲಭ್ಯ ಪಡೆದಿದ್ದರು. ಕೆನರಾ ಬ್ಯಾಂಕ್‌ ನೇತೃತ್ವದಲ್ಲಿ ಹಲವು ಬ್ಯಾಂಕುಗಳು ಒಕ್ಕೂಟ ಮಾಡಿಕೊಂಡು ಸಾಲ ಕೊಟ್ಟಿದ್ದವು. ಬ್ಯಾಲೆನ್ಸ್‌ ಶೀಟ್‌, ಅಕೌಂಟ್‌ ಪುಸ್ತಕ, ಸ್ಟಾಕ್‌ ಸ್ಟೇಟ್‌ಮೆಂಟ್‌ಗಳನ್ನು ತಿರುಚಿ ಕಂಪನಿ ಮೋಸ ಮಾಡಿದೆ. ಸಾಲ ಪಡೆದ ಹಣವನ್ನು ನಿರ್ದೇಶಕರು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ಬ್ಯಾಂಕುಗಳಿಗೆ 7926.01 ಕೋಟಿ ರು. ವಂಚನೆಯಾಗಿದೆ ಎಂದು ಸಿಬಿಐ ವಕ್ತಾರ ಆರ್‌.ಕೆ. ಗೌರ್‌ ಅವರು ತಿಳಿಸಿದ್ದಾರೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣ 2018ರಲ್ಲಿ ಬೆಳಕಿಗೆ ಬಂದು ದೇಶಾದ್ಯಂತ ಸಂಚಲನಕ್ಕೆ ಕಾರಣವಾಗಿತ್ತು. ವಜ್ರೋದ್ಯಮಿ ನೀರವ್‌ ಮೋದಿ (6000 ಕೋಟಿ ರು.) ಹಾಗೂ ಆತನ ಚಿಕ್ಕಪ್ಪ ಮೆಹುಲ್‌ ಚೋಕ್ಸಿ (7080.86 ಕೋಟಿ) 13 ಸಾವಿರ ಕೋಟಿ ರು. ಹಣವನ್ನು ಪಂಜಾಬ್‌ ನ್ಯಾಷನಲ್‌ ಬ್ಯಾಂಕಿನಿಂದ ಸಾಲ ಪಡೆದು ವಂಚಿಸಿ ದೇಶದಿಂದಲೇ ಪರಾರಿಯಾಗಿದ್ದರು. ಅದನ್ನು ದೇಶದ ಅತಿದೊಡ್ಡ ಬ್ಯಾಂಕಿಂಗ್‌ ಹಗರಣ ಎಂದು ಕರೆಯಲಾಗುತ್ತದೆ.

click me!