ತೆರಿಗೆದಾರರೇ ಗಮನಿಸಿ, ಅಧಿಕ ಪ್ರೀಮಿಯಂ ಹೊಂದಿರುವ ಜೀವ ವಿಮಾ ಪಾಲಿಸಿಗಳ ಆದಾಯ ಲೆಕ್ಕಾಚಾರಕ್ಕೆ ಹೊಸ ನಿಯಮ

By Suvarna News  |  First Published Aug 17, 2023, 2:51 PM IST

ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 10(10)  ಅಡಿಯಲ್ಲಿ 5 ಲಕ್ಷ ರೂ. ಮೀರಿದ ಪ್ರೀಮಿಯಂ ಹೊಂದಿರುವ ಜೀವ ವಿಮಾ ಪಾಲಿಸಿಗಳಿಂದ ಬರುವ ಆದಾಯಕ್ಕೆ ತೆರಿಗೆ ವಿನಾಯ್ತಿ ಸಿಗೋದಿಲ್ಲ ಎಂದು ಸಿಬಿಡಿಟಿ ತಿಳಿಸಿದೆ. 
 


ನವದೆಹಲಿ (ಆ.17): 5 ಲಕ್ಷ ರೂ. ಮೀರಿದ ಪ್ರೀಮಿಯಂ ಹೊಂದಿರುವ ಜೀವ ವಿಮಾ ಪಾಲಿಸಿಗಳಿಂದ ಬರುವ ಆದಾಯವನ್ನು ಲೆಕ್ಕ ಹಾಕಲು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಹೊಸ ನಿಯಮಗಳನ್ನು ರೂಪಿಸಿದೆ. ಈ ಸಂಬಂಧ ಮಹತ್ವದ ನಿರ್ಣಯ ಕೈಗೊಂಡಿರುವ ಮಂಡಳಿ,ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 10(10) 5 ಲಕ್ಷ ರೂ.  ಮೇಲ್ಪಟ್ಟ ಪ್ರೀಮಿಯಂ ಹೊಂದಿರುವ ಪಾಲಿಸಿಗಳಿಗೆ ಅನ್ವಯಿಸೋದಿಲ್ಲ ಎಂದು ತಿಳಿಸಿದೆ. ಈ ಷರತ್ತು 2023ರ ಏಪ್ರಿಲ್ 1ರಿಂದ ಜಾರಿಯಲ್ಲಿದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 10(10)  ಜೀವ ವಿಮಾ ಪಾಲಿಸಿಗಳ ಅಡಿಯಲ್ಲಿ ಸ್ವೀಕರಿಸಿದ ನಿರ್ದಿಷ್ಟ ಮೊತ್ತಕ್ಕೆ ತೆರಿಗೆ ವಿನಾಯ್ತಿ ನೀಡುತ್ತದೆ.  ಅಲ್ಲದೆ, ಅಂಥ ಪಾಲಿಸಿಗಳಿಂದ ದೊರೆತ ಬೋನಸ್ ಮೇಲೆ ಕೂಡ ವಿನಾಯ್ತಿ ನೀಡುತ್ತದೆ. ಆದರೆ, ಈ ವಿನಾಯ್ತಿ ಹೊಸ ಸಿಬಿಡಿಟಿ ಷರತ್ತುಗಳ ಅಡಿಯಲ್ಲಿ ಅನ್ವಯಿಸೋದಿಲ್ಲ. ಈ ಕ್ರಮ ದೊಡ್ಡ ಮೊತ್ತದ ಜೀವ ವಿಮಾ ಪಾಲಿಸಿಗಳಿಂದ ಬಂದ ಆದಾಯವನ್ನು ಲಕ್ಕ ಹಾಕುವಾಗ ಎದುರಾಗುವ ಗೊಂದಲಗಳನ್ನು ದೂರ ಮಾಡುತ್ತದೆ. 

ಸಿಬಿಡಿಟಿ ಅಧಿಸೂಚನೆ ಅನ್ವಯ ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 10 (10D) ಜೀವ ವಿಮಾ ಪಾಲಿಸಿ ಅಡಿಯಲ್ಲಿ ದೊರೆತ ಯಾವುದೇ ಮೊತ್ತದ ಮೇಲೆ ಆದಾಯ ತೆರಿಗೆ ವಿನಾಯ್ತಿ ನೀಡುತ್ತದೆ. ಇಂಥ ಪಾಲಿಸಿಗಳಿಗೆ ಸಿಕ್ಕ ಬೋನಸ್ ಹಣ ಕೂಡ ನಿರ್ದಿಷ್ಟ ವಿನಾಯ್ತಿಗಳಿಗೆ ಒಳಪಡುತ್ತದೆ. 5 ಲಕ್ಷ ರೂ.  ಮೇಲ್ಪಟ್ಟ ಪ್ರೀಮಿಯಂ ಹೊಂದಿರುವ ಜೀವ ವಿಮಾ ಪಾಲಿಸಿಗೆ ಸಂಬಂಧಿಸಿದಂತೆ ಯುನಿಟ್ ಲಿಂಕ್ಡ್ ವಿಮಾ ಪಾಲಿಸಿ ಹೊರತುಪಡಿಸಿ  2023ರ ಏಪ್ರಿಲ್ 1 ಅಥವಾ ಆ ಬಳಿಕ ವಿತರಿಸಿದ ಇತರ ಪಾಲಿಸಿಗಳ ಅಡಿಯಲ್ಲಿ ಪಡೆದ ಮೊತ್ತಕ್ಕೆ ಆದಾಯ ತೆರಿಗೆ ಕಾಯ್ದೆಯ ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಯಾವುದೇ ವಿನಾಯ್ತಿ ಇಲ್ಲ. ಈ ನಿಯಮ 2024-25ನೇ ಸಾಲಿನ ಮೌಲ್ಯಮಾಪನ ವರ್ಷದಿಂದಲೇ ಜಾರಿಗೆ ಬರಲಿದೆ ಎಂದು ಸಿಬಿಡಿಟಿ ತಿಳಿಸಿದೆ.

Tap to resize

Latest Videos

ವಿಳಂಬ ಐಟಿಆರ್ ಸಲ್ಲಿಕೆ ವೇಳೆ ದಂಡ ಪಾವತಿಸೋದು ಹೇಗೆ? ಎಲ್ಲಿ? ಇಲ್ಲಿದೆ ಮಾಹಿತಿ

ಒಂದು ವೇಳೆ ಯುನಿಟ್ ಲಿಂಕ್ಡ್ ವಿಮಾ ಪಾಲಿಸಿ ಹೊರತುಪಡಿಸಿ ಒಂದಕ್ಕಿಂತ ಹೆಚ್ಚಿನ  ಜೀವ ವಿಮಾ ಪಾಲಿಸಿಗಳ ಪ್ರೀಮಿಯಂ ಪಾವತಿಸುತ್ತಿದ್ದರೆ ಅಂಥ ಸಂದರ್ಭಗಳಲ್ಲಿ ಆದಾಯ ತೆರಿಗೆ ಸೆಕ್ಷನ್ ಅಡಿಯಲ್ಲಿ ವಿನಾಯ್ತಿ ಸಿಗುತ್ತದೆ. ಆದರೆ, ಇಲ್ಲಿ ಕೂಡ ಒಟ್ಟು ಪ್ರೀಮಿಯಂ ಮೊತ್ತ ಈ ಹಿಂದಿನ ಯಾವುದೇ ವರ್ಷದಲ್ಲಿ 5ಲಕ್ಷ ರೂ. ಮೀರಿರಬಾರದು. ಆದರೆ, ಯಾವುದೇ ವ್ಯಕ್ತಿಯ ಮರಣವಾದ ಸಂದರ್ಭದಲ್ಲಿ ಈ ವಿನಾಯ್ತಿ ಸಿಗೋದಿಲ್ಲ.

ಹಣಕಾಸು ಕಾಯ್ದೆ 2021ರ ಮೂಲಕ ಈ ಹಿಂದೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 10ಗೆ (10D) ನಾಲ್ಕರಿಂದ ಏಳರ ತನಕದ ನಿಬಂಧನೆಗಳನ್ನು ಅಳವಡಿಸಲಾಗಿತ್ತು. ಅದರ ಅನ್ವಯ 01.02.2021ರಂದು ಅಥವಾ ಅದರ ನಂತರ ವಿತರಿಸಲ್ಪಟ್ಟ ಯಾವುದೇ ಯುನಿಟ್ ಲಿಂಕ್ಡ್ ವಿಮಾ ಪಾಲಿಸಿ (ಯುಎಲ್ ಐಪಿ) ಪ್ರೀಮಿಯಂ 2.5ಲಕ್ಷ ರೂ. ಮೀರಿದ್ದರೆ ಆ ಪಾಲಿಸಿ ಅಡಿಯಲ್ಲಿ ದೊರೆತ ಮೊತ್ತಕ್ಕೆ ತೆರಿಗೆ ವಿನಾಯ್ತಿ ಸಿಗೋದಿಲ್ಲ. ಇನ್ನು ಒಂದಕ್ಕಿಂ ಹೆಚ್ಚು ಯುಎಲ್ ಐಪಿಗಳಿಗೆ ಪ್ರೀಮಿಯಂ ಪಾವತಿಸುತ್ತಿದ್ದರೆ 01.02.2021ರ ನಂತರ ಪಡೆದ ಪಾಲಿಸಿಗಳಿಗೆ ವಿನಾಯ್ತಿ ಸಿಗುತ್ತದೆ. ಆದರೆ, ಆ ಪಾಲಿಸಿಗಳ ಒಟ್ಟು ಪ್ರೀಮಿಯಂ ಮೊತ್ತ 2.5ಲಕ್ಷ ರೂ. ಮೀರಬಾರದು ಎಂದು ಸಿಬಿಡಿಟಿ ಸುತ್ತೋಲೆ ತಿಳಿಸಿದೆ. 

ಐಟಿಆರ್ ಸಲ್ಲಿಕೆ ವೇಳೆ ನೀವು ಈ ತಪ್ಪು ಮಾಡಿದ್ರೆ ಬೀಳುತ್ತೆ ಭಾರೀ ದಂಡ!

2024-25ನೇ ಮೌಲ್ಯಮಾಪನ ವರ್ಷದ ಐಟಿಆರ್ ಸಲ್ಲಿಕೆ ಮಾಡುವಾಗ ತೆರಿಗೆದಾರರು 5ಲಕ್ಷ ರೂ.ಗಿಂತ ಹೆಚ್ಚಿನ ಪ್ರೀಮಿಯಂ ಪಾವತಿಸುವ ಜೀವ ವಿಮೆಗಳಿಗೆ ತೆರಿಗೆ ವಿನಾಯ್ತಿ ಕೋರುವಂತಿಲ್ಲ. ಹೀಗಾಗಿ ಈ ವಿಷಯವನ್ನು ತೆರಿಗೆದಾರರು ಗಮನದಲ್ಲಿಟ್ಟುಕೊಳ್ಳೋದು ಉತ್ತಮ. 

click me!