20,000 ಕೋಟಿ ದಾಟಿದ ಕೆನರಾ ಬ್ಯಾಂಕ್‌ ಜಾಗತಿಕ ವ್ಯವಹಾರ

By Kannadaprabha NewsFirst Published Jan 24, 2023, 2:45 PM IST
Highlights

ಡಿಸೆಂಬರ್‌ 2021ಕ್ಕೆ ಹೋಲಿಸಿದರೆ ಸದ್ಯ ಚಿನ್ನಾಭರಣದ ಮೇಲಿನ ಸಾಲ ಶೇ.34ರಷ್ಟು, ನಿವ್ವಳ ಬಡ್ಡಿ ಆದಾಯ ಶೇ.23.81ರಷ್ಟು, ಬಡ್ಡಿಯೇತರ ಆದಾಯ ಶೇ.10.3ರಷ್ಟು, ಶುಲ್ಕ ರಹಿತ ಆದಾಯ ಶೇ.13.02ರಷ್ಟು, ಗೃಹ ಸಾಲ ಶೇ.15.8ರಷ್ಟು ಬೆಳವಣಿಗೆಯಾಗಿದೆ. 

ಬೆಂಗಳೂರು(ಜ.24): ಸಾರ್ವಜನಿಕ ವಲಯದಲ್ಲಿ ಮುಂಚೂಣಿಯಲ್ಲಿರುವ ಕೆನರಾ ಬ್ಯಾಂಕ್‌ನ ಜಾಗತಿಕ ವ್ಯವಹಾರವು ವಾರ್ಷಿಕ ಶೇ.13.63ರಷ್ಟು ಬೆಳವಣಿಗೆಯೊಂದಿಗೆ 20 ಸಾವಿರ ಕೋಟಿ ರು. ಗಡಿ ದಾಟಿದೆ.

ಬ್ಯಾಂಕು ಪ್ರಸಕ್ತ ಆರ್ಥಿಕ ವರ್ಷದ (2022-2023) ಮೂರನೇ ತ್ರೈಮಾಸಿಕ ವರದಿ ಪ್ರಕಟಿಸಿದ್ದು, ನಿವ್ವಳ ಲಾಭವು 2021ರ ಡಿಸೆಂಬರ್‌ಗೆ ಹೋಲಿಸಿದರೆ ಶೇ.91.8ರಷ್ಟು ಹೆಚ್ಚಳದೊಂದಿಗೆ 2,882 ಕೋಟಿ ರು.ಗೆ ತಲುಪಿದೆ. ಒಟ್ಟಾರೆ ಜಾಗತಿಕ ಠೇವಣಿಯು ವಾರ್ಷಿಕ ಶೇ.11.5 ರಷ್ಟು ಬೆಳವಣಿಗೆಯಾಗಿ 11,63,470 ಕೋಟಿ ರು.ಗೆ ತಲುಪಿದೆ. ಸದ್ಯ ಬ್ಯಾಂಕ್‌ನ ಜಾಗತಿಕ ವ್ಯವಹಾರವು 20,14,443 ಕೋಟಿ ರು.ಗೆ ಏರಿಕೆಯಾಗಿದೆ. 2022ರ ಸೆಪ್ಟೆಂಬರ್‌ನಲ್ಲಿ ಶೇ.2.19 ರಷ್ಟುಇದ್ದ ನಿವ್ವಳ ಅನುತ್ಪಾದಕ ಆಸ್ತಿಗಳು ಶೇ.1.96ಕ್ಕೆ ಇಳಿಕೆಯಾಗಿವೆ.

ನಿಮ್ಮ ಕೆನರಾ ಬ್ಯಾಂಕ್ ಖಾತೆಯಿಂದ 147.5 ರೂ. ಕಡಿತವಾಗಿದೆಯೇ? ಯಾವ ಕಾರಣಕ್ಕೆ ಗೊತ್ತಾ?

ಡಿಸೆಂಬರ್‌ 2021ಕ್ಕೆ ಹೋಲಿಸಿದರೆ ಸದ್ಯ ಚಿನ್ನಾಭರಣದ ಮೇಲಿನ ಸಾಲ ಶೇ.34ರಷ್ಟು, ನಿವ್ವಳ ಬಡ್ಡಿ ಆದಾಯ ಶೇ.23.81ರಷ್ಟು, ಬಡ್ಡಿಯೇತರ ಆದಾಯ ಶೇ.10.3ರಷ್ಟು, ಶುಲ್ಕ ರಹಿತ ಆದಾಯ ಶೇ.13.02ರಷ್ಟು, ಗೃಹ ಸಾಲ ಶೇ.15.8ರಷ್ಟು ಬೆಳವಣಿಗೆಯಾಗಿದೆ. ಕೃಷಿ ಸಂಬಂಧಿಸಿದ ಸಾಲ ಪ್ರಮಾಣ ವಾರ್ಷಿಕ ಶೇ.20 ರಷ್ಟು ಹೆಚ್ಚಳವಾಗಿ 2,03,312 ಕೋಟಿ ರು. ತಲುಪಿದೆ. ಸದ್ಯ ಬ್ಯಾಂಕ್‌ 9720 ಶಾಖೆಗಳನ್ನು ಹೊಂದಿದ್ದು, 10,745 ಎಟಿಎಂಗಳು ಕಾರ್ಯಾಚರಣೆಯಲ್ಲಿವೆ.

click me!