
ಬೆಂಗಳೂರು [ಫೆ.09]: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಒಂದಾದ ಕೆನರಾ ಬ್ಯಾಂಕ್ ಫೆ.7 ರಿಂದ ತನ್ನ ಬಡ್ಡಿ ದರಗಳನ್ನು ಕಡಿತಗೊಳಿಸಿದೆ.
ಮೂಲ ವೆಚ್ಚದ ಬಂಡವಾಳ ಆಧಾರಿತ ಸಾಲದ ಬಡ್ಡಿ ದರವನ್ನು ಶೇ.0.25 ರಷ್ಟು(25 ಬೇಸಿಸ್ ಪಾಯಿಂಟ್ಸ್) ಕಡಿಮೆ ಮಾಡಿದೆ.
ಎಸ್‌ಬಿಐ ಸಾಲದ ಬಡ್ಡಿ ದರ, ಠೇವಣಿಗಳ ಬಡ್ಡಿ ದರ ಇಳಿಕೆ...
ಅಲ್ಲದೆ, ತಕ್ಷಣದ ಸಾಲ, ಒಂದು ತಿಂಗಳ ಸಾಲ, ಮೂರು ತಿಂಗಳ ಸಾಲ, ಆರು ತಿಂಗಳ ಸಾಲದ ಮೇಲಿನ ಬಡ್ಡಿ ದರಕ್ಕೆ ಶೇ. 0.25 ಮತ್ತು ಒಂದು ವರ್ಷದ ಸಾಲದ ಮೇಲಿನ ಬಡ್ಡಿಗೆ ಶೇ.0.15(15 ಬೇಸಿಸ್ ಪಾಯಿಂಟ್ಸ್) ನಷ್ಟುಕಡಿಮೆ ಮಾಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೊಸ ಬಡ್ಡಿದರಗಳ ವಿವರ
ತಕ್ಷಣದ ಸಾಲ -ಶೇ 7.65
ಒಂದು ತಿಂಗಳ ಸಾಲ -ಶೇ 7.65
ಮೂರು ತಿಂಗಳ ಸಾಲ -ಶೇ 7.95
ಆರು ತಿಂಗಳ ಸಾಲ -ಶೇ 8.10
ಒಂದು ವರ್ಷದ ಸಾಲ -ಶೇ 8.20
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.