ಕಾಫಿ ಡೇ ಬಂದಾಗಲ್ಲ: ಕಂಪನಿಯಿಂದ ಮುಂಬೈ ಷೇರು ಮಾರುಕಟ್ಟೆಗೆ ಪತ್ರ!

Published : Jul 30, 2019, 04:11 PM ISTUpdated : Jul 30, 2019, 05:29 PM IST
ಕಾಫಿ ಡೇ ಬಂದಾಗಲ್ಲ: ಕಂಪನಿಯಿಂದ ಮುಂಬೈ ಷೇರು ಮಾರುಕಟ್ಟೆಗೆ ಪತ್ರ!

ಸಾರಾಂಶ

ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಹೆಗಡೆ ದಿಢೀರ್ ನಾಪತ್ತೆ| ಷೇರು ಮಾರುಕಟ್ಟೆಯಲ್ಲಿ ಸಂಸ್ಥೆಯ ಷೇರು ಮೌಲ್ಯ ದಿಢೀರ್ ಕುಸಿತ| ಮುಂಬೈ ಷೇರು ಮಾರುಕಟ್ಟೆಗೆ ಪತ್ರ ಬರೆದ ಕಾಫಿ ಡೇ ಸಂಸ್ಥೆ| ದೇಶದ ಎಲ್ಲಾ ಶಾಖೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂದ ಸಂಸ್ಥೆ| ಷೇರುದಾರರು ಆತಂಕಪಡದಿರುವಂತೆ ಕಾಫಿ ಡೇ ಮನವಿ|

ಬೆಂಗಳೂರು(ಜು.30): ಕೆಫೆ ಕಾಫಿ ಡೇ ಮಾಲೀಕ  ಸಿದ್ಧಾರ್ಥ ಹೆಗಡೆ ನಾಪತ್ತೆಯಾದ ಹಿನ್ನೆಲೆಯಲ್ಲಿ ಮುಂಬೈ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ದಿಢೀರ್ ಕುಸಿತ ಕಂಡಿದೆ. 

ಸಿದ್ಧಾರ್ಥ ಮಾಲೀಕತ್ವದ  ಕೆಫೆ ಕಾಫಿ ಡೇ, ಎಸ್ಐಸಿಎಎಲ್ ಷೇರು ಬೆಲೆ ತೀವ್ರ ಕುಸಿತಗೊಂಡಿದೆ. ನಿನ್ನೆಯ ವಹಿವಾಟು ಮುಕ್ತಾಯದ ಹೊತ್ತಿಗೆ 192 ರೂ ಮೌಲ್ಯವಿದ್ದ ಕೆಫೆ ಕಾಫಿ ಡೇ ಷೇರು ಮಾರುಕಟ್ಟೆ, ಇಂದು 153 ರೂ.ಗೆ ಇಳಿಕೆ ಕಂಡಿದೆ.

ಈ ಮಧ್ಯೆ ಮುಂಬೈ ಷೇರುಮಾರುಕಟ್ಟೆಗೆ ಪತ್ರ ಬರೆದಿರುವ ಸಂಸ್ಥೆ, ದೇಶಾದ್ಯಂತ ಸಂಸ್ಥೆಯ ಎಲ್ಲಾ ಶಾಖೆಗಳೂ ಎಂದಿನಂತೆ ಕೆಲಸ ನಿರ್ವಹಿಸಲಿದ್ದು, ಷೇರುದಾರರು ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದೆ.

"

ಸಂಸ್ಥೆಯ ಮಾಲೀಕ ನಾಪತ್ತೆಯಾಗಿದ್ದರೂ ದೇಶದ ಯಾವುದೇ ಶಾಖೆಯನ್ನು ಬಂದ್ ಮಾಡಲಾಗಿಲ್ಲ ಎಂದು ಕಾಫಿ ಡೇ ಸ್ಪಷ್ಟಪಡಿಸಿದೆ. ಈ ಪತ್ರದ ಹೊರತಾಗಿಯೂ  ಕೆಫೆ ಕಾಫಿ ಡೇ, ಎಸ್ಐಸಿಎಎಲ್ ಷೇರು ಬೆಲೆಯಲ್ಲಿ ಗಮನಾರ್ಹವಾದ ಬದಲಾವಣೆ ಕಂಡುಬಂದಿಲ್ಲ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಅಮೆರಿಕಾದ ಬಳಿಕ ಈಗ ಮೆಕ್ಸಿಕೋದಿಂದಲೂ ಭಾರತದ ಮೇಲೆ ಶೇ.50 ಸುಂಕ: ಜನವರಿ 1ರಿಂದಲೇ ಹೊಸ ತೆರಿಗೆ ಜಾರಿ
ಬೆಂಗಳೂರಿನಲ್ಲಿ ಊಬರ್‌ ಕ್ರಾಂತಿಯ ಹೆಜ್ಜೆ, B2B ಲಾಜಿಸ್ಟಿಕ್ಸ್, ಮೆಟ್ರೋ ಟಿಕೆಟ್‌ ಕೂಡ ಲಭ್ಯ!