ಸಿದ್ಧಾರ್ಥ ಮಾಲೀಕತ್ವದ ಕಂಪನಿಗಳ ಷೇರು ಬೆಲೆಯಲ್ಲಿ ತೀವ್ರ ಕುಸಿತ!

By Web Desk  |  First Published Jul 30, 2019, 1:51 PM IST

ಸಿದ್ಧಾರ್ಥ ಮಾಲೀಕತ್ವದ ಕಂಪನಿಗಳ ಷೇರು ಬೆಲೆಯಲ್ಲಿ ತೀವ್ರ ಕುಸಿತ| ಕೆಫೆ ಕಾಫಿ ಡೇ, ಎಸ್ಐಸಿಎಎಲ್ ಷೇರು ಬೆಲೆ ತೀವ್ರ ಕುಸಿತ| ಷೇರು ಮಾರುಕಟ್ಟೆಯಲ್ಲಿ ಕೆಫೆ ಕಾಫಿ ಡೇ ಷೇರು ಮೌಲ್ಯ 38 ರೂ.ಗಳಷ್ಟು ಕುಸಿತ| ನಿನ್ನೆಯ ವಹಿವಾಟು ಮುಕ್ತಾಯದ ಹೊತ್ತಿಗೆ ಕೆಫೆ ಕಾಫಿ ಡೇ ಷೇರು ಮೌಲ್ಯ 192 ರೂ ಇತ್ತು


ಬೆಂಗಳೂರು[ಜು.30]: ಸೋಮವಾರ ಸಂಜೆಯಿಂದ ನಾಪತ್ತೆಯಾಗಿರುವ ಕಾಫಿ ಡೇ ಮಾಲೀಕ ಸಿದ್ಧಾರ್ಥ ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ನೇತ್ರಾವತಿ ನದಿಯಲ್ಲಿ ಹುಡುಕಾಟ ಆರಂಭಿಸಿ 12 ಗಂಟೆಗಳು ಉರುಳಿದರೂ ಉದ್ಯಮಿ ಪತ್ತೆಯಾಗಿಲ್ಲ. ಈಗಾಗಲೇ ಅವರು ಬರೆದಿದ್ದಾರೆನ್ನಲಾದ ಭಾವುಕ ಪತ್ರ ವೈರಲ್ ಆಗಿದ್ದು, ಗಂಟೆಗಳು ಉರುಳಿದಂತೆ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನಗಳು ಹೆಚ್ಚಾಗಲಾರಂಭಿಸಿವೆ. ಈ ಎಲ್ಲಾ ಬೆಳವಣಿಗೆಗ: ಬೆನ್ನಲ್ಲೇ ಸಿದ್ಧಾರ್ಥ ಮಾಲೀಕತ್ವದ ಮಾಲೀಕತ್ವದ ಕಂಪನಿಗಳ ಷೇರು ಬೆಲೆಯಲ್ಲೂ ತೀವ್ರ ಕುಸಿತವಾಗಿದೆ.

ಎಸ್. ಎಂ ಕೃಷ್ಣ ಅಳಿಯ, ಉದ್ಯಮಿ ಸಿದ್ಧಾರ್ಥ ಆತ್ಮಹತ್ಯೆ? ಪತ್ರದಲ್ಲಿ ಮಹತ್ವದ ಮಾಹಿತಿ!

Tap to resize

Latest Videos

ಸಿದ್ಧಾರ್ಥ ಮಾಲೀಕತ್ವದ  ಕೆಫೆ ಕಾಫಿ ಡೇ, ಎಸ್ಐಸಿಎಎಲ್ ಷೇರು ಬೆಲೆ ತೀವ್ರ ಕುಸಿತಗೊಂಡಿದೆ. ನಿನ್ನೆಯ ವಹಿವಾಟು ಮುಕ್ತಾಯದ ಹೊತ್ತಿಗೆ 192 ರೂ ಮೌಲ್ಯವಿದ್ದ ಕೆಫೆ ಕಾಫಿ ಡೇ ಷೇರು ಮಾರುಕಟ್ಟೆ, ಇಂದು ಮಂಗಳವಾರ 153 ರೂಗೆ ಇಳಿದಿದೆ. 

ಸಿದ್ಧಾರ್ಥರ ಮತ್ತೊಂದು ಕಂಪನಿ MICAL ಷೇರು ಬೆಲೆಯಲ್ಲೂ ತೀವ್ರ ಕುಸಿತವಗಿದ್ದು, ಸದ್ಯ 75 ರೂ.ಗೆ ಬಂದಿಳಿದಿದೆ. 

undefined

ಎಸ್‌.ಎಂ.ಕೃಷ್ಣ ಅಳಿಯ, ಕಾಫಿ ಡೇ ಮಾಲೀಕ ಸಿದ್ಧಾರ್ಥ ನೇತ್ರಾವತಿ ನದಿ ಬಳಿ ನಾಪತ್ತೆ

ಕಂಪೆನಿ ಮಾಲೀಕ ನಾಪತ್ತೆಯಾಗಿದ್ದಾರೆಂದು ಬಹಿರಂಗವಾದ ಬೆನ್ನಲ್ಲೇ ಷೇರು ಮಾರುಕಟ್ಟೆ ಶೇ, 20ರಷ್ಟು ಕುಸಿತ ಕಂಡಿದೆ.

click me!