ಎಸ್‌ಬಿಐ ಠೇವಣಿ ಮೇಲಿನ ಬಡ್ಡಿ ಇಳಿಕೆ

By Web DeskFirst Published Jul 30, 2019, 12:31 PM IST
Highlights

ಎಸ್‌ಬಿಐ ವಿವಿಧ ಹೂಡಿಕೆಯ ಮೇಲಿನ ಬಡ್ಡಿದವನ್ನು ಕಡಿತಗೊಳಿಸಿದೆ.ಹೆಚ್ಚುವರಿ ಹಣಕಾಸಿನ ಹರಿವು ಹಾಗೂ ಕುಸಿಯುತ್ತಿರುವ ಬಡ್ಡಿದರ ಸನ್ನಿವೇಶ ಬಡ್ಡಿದರ ಇಳಿಕೆಗೆ ಕಾರಣ ಎನ್ನಲಾಗಿದೆ. 

ನವದೆಹಲಿ [ಜು.30]: ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ಎಸ್‌ಬಿಐ ವಿವಿಧ ಹೂಡಿಕೆಯ ಮೇಲಿನ ಬಡ್ಡಿದವನ್ನು ಕಡಿತಗೊಳಿಸಿದೆ. ಪರಿಷ್ಕೃತ ಬಡ್ಡಿ ದರ ಆ.1ರಿಂದ ಜಾರಿಗೆ ಬರಲಿದೆ.

10 ರಿಂದ 45 ದಿನಗಳ ಅವಧಿಯ ಠೇವಣಿಯ ಮೇಲಿನ ಬಡ್ಡಿ ದರವನ್ನು ಶೇ.5.75ರಿಂದ ಶೇ.5.00ಕ್ಕೆ ಇಳಿಕೆ ಮಾಡಲಾಗಿದೆ. ಅದೇ ರೀತಿ 46 ದಿನದಿಂದ 179 ದಿನಗಳ ಠೇವಣಿಯ ಮೇಲಿನ ಬಡ್ಡಿದರವನ್ನು ಶೇ.6.25ರಿಂದ ಶೇ.5.75ಕ್ಕೆ ಇಳಿಕೆಯಾಗಲಿದೆ. 

3 ರಿಂದ 5 ವರ್ಷ ಒಳಗಿನ ಠೇವಣಿಯ ಬಡ್ಡಿದರವನ್ನು ಶೇ.6.70ರಿಂದ ಶೇ.6.60ಕ್ಕೆ ಇಳಿಕೆ ಮಾಡಲಾಗಿದೆ. 5ರಿಂದ 10 ವರ್ಷಗಳ ಠೇವಣಿಯ ಮೇಲಿನ ಬಡ್ಡಿದರವನ್ನು ಶೇ.6.60ರಿಂದ ಶೇ.6.50ಕ್ಕೆ ಇಳಿಕೆ ಮಾಡಲಾಗಿದೆ. 

ಹೆಚ್ಚುವರಿ ಹಣಕಾಸಿನ ಹರಿವು ಹಾಗೂ ಕುಸಿಯುತ್ತಿರುವ ಬಡ್ಡಿದರ ಸನ್ನಿವೇಶ ಬಡ್ಡಿದರ ಇಳಿಕೆಗೆ ಕಾರಣ ಎಂದು ಎಸ್‌ಬಿಐ ತಿಳಿಸಿದೆ.

click me!