Business Ideas : 25 ಸಾವಿರ ಹೂಡಿಕೆಯ ಈ ಬ್ಯುಸಿನೆಸ್‌ನಲ್ಲಿ ಸಿಗುತ್ತೆ 3 ಲಕ್ಷ ಲಾಭ

By Suvarna News  |  First Published Jun 2, 2022, 2:33 PM IST

ಬ್ಯುಸಿನೆಸ್ ಗೆ ಇಳಿದು ಕೈಸುಟ್ಟು ಕೊಳ್ಳುವ ಬದಲು, ಯಾವ ವ್ಯವಹಾರ ಶುರು ಮಾಡ್ಬೇಕು ಎಂಬುದನ್ನು ಸರಿಯಾಗಿ ತಿಳಿದಿರಬೇಕು. ಅದ್ರ ಬೇಡಿಕೆ, ಸರ್ಕಾರದಿಂದ ಸಹಾಯ ಎಲ್ಲ ಮಾಹಿತಿ ಪಡೆದು ನಂತ್ರ ವ್ಯವಹಾರ ಶುರು ಮಾಡ್ಬೇಕು. ಕಡಿಮೆ ಹೂಡಿಕೆಯಲ್ಲಿ ಹೆಚ್ಚು ಲಾಭ ತರುವ ಮುತ್ತಿನ ಬ್ಯುಸಿನೆಸ್ ಬಗ್ಗೆ ಇಂದು ಹೇಳ್ತೇವೆ. 
 


ಬ್ಯುಸಿನೆಸ್ (Business) ಮಾಡ್ಬೇಕು ಎನ್ನುವ ಆಸೆ ಇದೆ. ತಕ್ಕ ಮಟ್ಟಿಗೆ ಹಣ (Money ) ಕೂಡ ಇದೆ. ಆದ್ರೆ ಯಾವ ಉದ್ಯಮ (Industry) ಶುರು ಮಾಡಬೇಕು? ಯಾವುದ್ರಲ್ಲಿ ಹೆಚ್ಚಿನ ಲಾಭ (Profit) ವಿದೆ ಎಂಬುದು ಗೊತ್ತಾಗ್ತಿಲ್ಲ ಎನ್ನುವವರಿದ್ದಾರೆ. ನೀವೂ ಉದ್ಯಮ ಶುರು ಮಾಡುವ ಪ್ಲಾನ್ ನಲ್ಲಿದ್ದು, ನಿಮಗೂ ಈ ಚಿಂತೆ ಕಾಡ್ತಿದ್ದರೆ ಈ ಸುದ್ದಿಯನ್ನು ಓದಿ. ಕಡಿಮೆ ಹೂಡಿಕೆ (Investment) ಯಲ್ಲಿ ಹೆಚ್ಚು ಗಳಿಸುವ ಉದ್ಯಮದ ಬಗ್ಗೆ ನಾವಿಂದು ಮಾಹಿತಿ ನೀಡ್ತೇವೆ. ಸಣ್ಣ ಉದ್ದಿಮೆಗಳಿಗೂ ದೊಡ್ಡ ಲಾಭ ನೀಡುವ ಶಕ್ತಿ ಇದೆ. ಅಂತಹ ಒಂದು ವ್ಯವಹಾರವಿದೆ. ಅದಕ್ಕೆ ಕೇವಲ  25000 ರೂಪಾಯಿ ಹೂಡಿಕೆ ಮಾಡಿದ್ರೆ  ತಿಂಗಳಿಗೆ 3 ಲಕ್ಷ ರೂಪಾಯಿವರೆಗೆ ಆದಾಯ ಬರುತ್ತಿದೆ. ಈ ಉದ್ಯಮವನ್ನು ದೊಡ್ಡ ಮಟ್ಟದಲ್ಲಿ ಆರಂಭಿಸಬೇಕಾದರೆ ಕೇಂದ್ರ ಸರ್ಕಾರದಿಂದ ಶೇಕಡಾ 50ರಷ್ಟು ಸಹಾಯಧನವೂ ದೊರೆಯುತ್ತದೆ. 

ಇಂದು ನಾವು ಹೇಳ್ತಿರುವ ಉದ್ಯಮ ಮತ್ತ್ಯಾವುದೂ ಅಲ್ಲ ಮುತ್ತಿನ ಕೃಷಿ. ಮುತ್ತಿನ ಕೃಷಿ ಬಹಳ ಆಸಕ್ತಿದಾಯಕ ವ್ಯವಹಾರವಾಗಿದೆ. ನಗರ ಪ್ರದೇಶಗಳಲ್ಲಿ ಇದರ ಬಗ್ಗೆ ತುಂಬಾ ಜನರಿಗೆ ತಿಳಿದಿಲ್ಲ. ಆದರೆ  ಇತ್ತೀಚಿನ ವರ್ಷಗಳಲ್ಲಿ ಇದರತ್ತ ಗಮನ ಹೆಚ್ಚಿದೆ. ಗುಜರಾತ್  ಪ್ರದೇಶಗಳಲ್ಲಿ ಇದರ ಕೃಷಿಯಿಂದಾಗಿ ಅನೇಕ ರೈತರು ಲಕ್ಷಪತಿಗಳಾಗಿದ್ದಾರೆ. ಅದೇ ಸಮಯದಲ್ಲಿ, ಒಡಿಶಾ ಮತ್ತು ಬೆಂಗಳೂರಿನಲ್ಲೂ ಇದು ಉತ್ತಮ ವ್ಯಾಪ್ತಿಯನ್ನು ಹೊಂದಿದೆ.  

ಮುತ್ತು ಕೃಷಿಗೆ ಏನು ಬೇಕು? : ಮುತ್ತುಗಳ ಕೃಷಿಗೆ ಕೊಳದ ಅಗತ್ಯವಿದೆ. ಇದರಲ್ಲಿ ಸಿಂಪಿ ಪ್ರಮುಖ ಪಾತ್ರ ವಹಿಸುತ್ತದೆ. ಮುತ್ತು ಕೃಷಿಗೆ ರಾಜ್ಯ ಮಟ್ಟದಲ್ಲೂ ತರಬೇತಿ ನೀಡಲಾಗುತ್ತದೆ. ಕೊಳವಿಲ್ಲದಿದ್ದರೆ ಅದನ್ನು ಕೂಡ ವ್ಯವಸ್ಥೆ ಮಾಡಲಾಗುತ್ತದೆ. ನಿಮ್ಮ ಹೂಡಿಕೆಯ ಮೇಲೆ ನೀವು ಸರ್ಕಾರದಿಂದ ಶೇಕಡಾ 50ರಷ್ಟು ಸಬ್ಸಿಡಿ ಪಡೆಯಬಹುದು. ದಕ್ಷಿಣ ಭಾರತ ಮತ್ತು ಬಿಹಾರದ ದರ್ಭಾಂಗದ ಸಿಂಪಿಗಳ ಗುಣಮಟ್ಟ ತುಂಬಾ ಉತ್ತಮವಾಗಿದೆ.

Tap to resize

Latest Videos

Business Ideas : 8ನೇ ತರಗತಿ ಪಾಸಾದ್ರೆ ಸಾಕು, ಲಕ್ಷಾಂತರ ರೂ. ಗಳಿಸ್ಬಹುದು

ಕೃಷಿ ಪ್ರಾರಂಭಿಸುವುದು ಹೇಗೆ? : ಕೃಷಿ ಆರಂಭಿಸಲು ನುರಿತ ವಿಜ್ಞಾನಿಗಳಿಂದ ತರಬೇತಿ ಪಡೆಯಬೇಕು. ಅನೇಕ ಸಂಸ್ಥೆಗಳಲ್ಲಿ ಸರ್ಕಾರವೇ ಉಚಿತವಾಗಿ ತರಬೇತಿಯನ್ನು ನಡೆಸುತ್ತದೆ. ಸರ್ಕಾರಿ ಸಂಸ್ಥೆಗಳು ಅಥವಾ ಮೀನುಗಾರರಿಂದ ಸಿಂಪಿ ಖರೀದಿಸುವ ಮೂಲಕ ಕೃಷಿ ಪ್ರಾರಂಭಿಸಿ. ಸಿಂಪಿಗಳನ್ನು ಎರಡು ದಿನಗಳ ಕಾಲ ಕೊಳದ ನೀರಿನಲ್ಲಿ ಇಡಲಾಗುತ್ತದೆ. ಸೂರ್ಯನ ಬೆಳಕು ಮತ್ತು ಗಾಳಿಗೆ ಒಡ್ಡಿಕೊಂಡ ನಂತರ, ಸಿಂಪಿಯ ಶೆಲ್ ಮತ್ತು ಸ್ನಾಯುಗಳು ಸಡಿಲವಾಗುತ್ತವೆ. ಸ್ನಾಯುಗಳು ಸಡಿಲವಾದಾಗ, ಸಿಂಪಿಗೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ   ಅದರೊಳಗೆ ಅಚ್ಚನ್ನು ಹಾಕಲಾಗುತ್ತದೆ. ಅಚ್ಚು ಸಿಂಪಿಯನ್ನು ಚುಚ್ಚಿದಾಗ, ಒಳಗಿನಿಂದ ಒಂದು ವಸ್ತು ಹೊರಬರುತ್ತದೆ. ಸ್ವಲ್ಪ ಸಮಯದ ನಂತರ, ಅಚ್ಚು ಮುತ್ತಿನ ಆಕಾರದಲ್ಲಿ ಸಿದ್ಧವಾಗುತ್ತದೆ. ಅಚ್ಚಿನಲ್ಲಿ ಯಾವುದೇ ಆಕಾರವನ್ನು ಹಾಕುವ ಮೂಲಕ ನೀವು ಬೇರೆ ಬೇರೆ ವಿನ್ಯಾಸದ ಮುತ್ತನ್ನು ಸಿದ್ಧಪಡಿಸಬಹುದು. ಡಿಸೈನರ್ ಮುತ್ತುಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. 

ಮೇನಲ್ಲಿ ಭರ್ಜರಿ 1.41 ಲಕ್ಷ ಕೋಟಿ ರು. ಜಿಎಸ್‌ಟಿ ಆದಾಯ!

ನೀವು ಪ್ರತಿ ತಿಂಗಳು ಎಷ್ಟು ಗಳಿಸುವಿರಿ ? : ಒಂದು ಸಿಂಪಿ ತಯಾರಿಸಲು ಸುಮಾರು 25 ರಿಂದ 35 ರೂಪಾಯಿ ಖರ್ಚಾಗುತ್ತದೆ.  ಒಂದು ಸಿಂಪಿಯಿಂದ 2 ಮುತ್ತುಗಳನ್ನು ತಯಾರಿಸಲಾಗುತ್ತದೆ. ಒಂದು ಮುತ್ತಿನ ಬೆಲೆ ಸುಮಾರು 120 ರೂಪಾಯಿ. ಗುಣಮಟ್ಟ ಉತ್ತಮವಾಗಿದ್ದರೆ ನೀವು 200 ರೂಪಾಯಿಗಳವರೆಗೆ ಮಾರಾಟ ಮಾಡಬಹುದು.  ಒಂದು ಎಕರೆ ಕೆರೆಯಲ್ಲಿ 25 ಸಾವಿರ ಸಿಂಪಿ ಹಾಕಬಹುದು. ಇದರ ಮೇಲೆ ನಿಮ್ಮ ಹೂಡಿಕೆ ಸುಮಾರು 8 ಲಕ್ಷ ರೂಪಾಯಿ ಎಂದಾದ್ರೆ ಸಿಂಪಿಗಳು ಉತ್ತವಾಗಿದ್ದರೆ ಮತ್ತು ಉತ್ತಮ ಮಾರುಕಟ್ಟೆ ಲಭ್ಯವಿದ್ರೆ  ಒಬ್ಬರು ವಾರ್ಷಿಕವಾಗಿ 30 ಲಕ್ಷ ರೂಪಾಯಿಗಳವರೆಗೆ ಆದಾಯ ಗಳಿಸಬಹುದು. 

click me!