ಮೇನಲ್ಲಿ ಭರ್ಜರಿ 1.41 ಲಕ್ಷ ಕೋಟಿ ರು. ಜಿಎಸ್‌ಟಿ ಆದಾಯ!

By Suvarna News  |  First Published Jun 2, 2022, 8:52 AM IST

* ಜಿಎಸ್‌ಟಿ ಭರ್ಜರಿ ಸಂಗ್ರಹ

* ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.44ರಷ್ಟುಏರಿಕೆ

* ಜಿಎಸ್‌ಟಿ ಇಂದ ಬರುವ ಆದಾಯ ಸತತ ಹೆಚ್ಚಳ

* ಮಾರ್ಚ್‌ ತಿಂಗಳಲ್ಲಿ ಸಾರ್ವಕಾಲಿಕ ಗರಿಷ್ಠ ಕಂಡಿದ್ದ ಜಿಎಸ್‌ಟಿ


ನವದೆಹಲಿ(ಜೂ.02): ಸರಕು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸುವಿಕೆಯಿಂದ ಬರುವ ಆದಾಯ ಕಳೆದ 2 ತಿಂಗಳಿನಿಂದ ಏರಿಕೆಯಾಗುತ್ತಿದ್ದು, ಮೇ ತಿಂಗಳಿನಲ್ಲಿ ಸರ್ಕಾರ ಸುಮಾರು 1.41 ಲಕ್ಷ ಕೋಟಿ ರು. ಆದಾಯ ಗಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜಿಎಸ್‌ಟಿಯಿಂದ ಬಂದ ಆದಾಯವು ಶೇ. 44 ರಷ್ಟುಏರಿಕೆಯಾಗಿದೆ.

ಜನವರಿಯಲ್ಲಿ 1.40 ಲಕ್ಷ ಕೋಟಿ ರು., ಫೆಬ್ರುವರಿಯಲ್ಲಿ 1.33 ಲಕ್ಷ ಕೋಟಿ ರು., ಮಾಚ್‌ರ್‍ನಲ್ಲಿ 1.42 ಲಕ್ಷ ಕೋಟಿ ರು., ಏಪ್ರಿಲ್‌ನಲ್ಲಿ 1.68 ಲಕ್ಷ ಕೋಟಿ ರು. ಹಾಗೂ ಮೇ ತಿಂಗಳಿನಲ್ಲಿ 1.41 ಲಕ್ಷ ಕೋಟಿ ರು. ಆದಾಯವನ್ನು ಜಿಎಸ್‌ಟಿಯಿಂದ ಸರ್ಕಾರ ಪಡೆದುಕೊಂಡಿದೆ. ಮಾಚ್‌ರ್‍ ತಿಂಗಳಿನಲ್ಲಿ ಗಳಿಸಿದ ಆದಾಯ ಈವರೆಗಿನ ಸಾರ್ವಕಾಲಿಕ ಗರಿಷ್ಠವೆನಿಸಿದೆ.

Tap to resize

Latest Videos

‘ಮೇ 2022ರಲ್ಲಿ ಸಿಜಿಎಸ್‌ಟಿ ಇಂದ 25,036 ಕೋಟಿ ರು., ಎಸ್‌ಜಿಎಸ್‌ಟಿ ಇಂದ 32,001 ಕೋಟಿ ರು. ಐಜಿಎಸ್‌ಟಿಯಿಂದ 37,469 ಕೋಟಿ ರು., ಸೆಸ್‌ ವಿಧಿಸುವಿಕೆಯಿಂದ 10,502 ಕೋಟಿ ರು. ಸೇರಿ ಒಟ್ಟಾರೆ ಜಿಎಸ್‌ಟಿಯಿಂದ ಗಳಿಸಿದ ಆದಾಯ 1,40,885 ಕೋಟಿ ರು. ಆಗಿದೆ’ ಎಂದು ಆರ್ಥಿಕ ಸಚಿವಾಲಯ ತಿಳಿಸಿದೆ.

ಇದು ಕಳೆದ ವರ್ಷ ಜಿಎಸ್‌ಟಿ ಇಂದ ಬಂದ ಆದಾಯಕ್ಕಿಂತ ಶೇ. 44ರಷ್ಟುಅಧಿಕವಾಗಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಸರ್ಕಾರ ಜಿಎಸ್‌ಟಿಯಿಂದ 97,821 ಕೋಟಿ ರು. ಆದಾಯ ಗಳಿಸಿತ್ತು.

click me!