ವ್ಯಾಪಾರ ಮಾಡಲು ಬುದ್ದಿವಂತಿಕೆ ಬೇಕು. ಹಣವಿದೆ ಎಂಬ ಕಾರಣಕ್ಕೆ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಿ ಕೈಸುಟ್ಟುಕೊಂಡವರು ಸಾಕಷ್ಟು ಮಂದಿ. ಯಾವ ಜಾಗದಲ್ಲಿ ಯಾವ ವ್ಯಾಪಾರ ಶುರು ಮಾಡಿದ್ರೆ ಲಾಭಕರ ಎಂಬುದನ್ನು ಅರಿತು,ಕಡಿಮೆ ಬಂಡವಾಳದಲ್ಲಿಯೇ ಹೆಚ್ಚು ಗಳಿಸಬಲ್ಲ ಬ್ಯುಸಿನೆಸ್ ಶುರು ಮಾಡ್ಬಹುದು.
ಕಂಪನಿ (Company)ಯಲ್ಲಿ ಕೆಲಸ ಮಾಡುವುದಕ್ಕಿಂತ ಸ್ವಂತ ವ್ಯಾಪಾರ(Business)ದಲ್ಲಿ ಗಳಿಕೆ ಮಾಡ್ಬೇಕೆಂಬ ಬಯಕೆಯನ್ನು ಅನೇಕರು ಹೊಂದಿರುತ್ತಾರೆ. ದೊಡ್ಡ ನಗರಗಳಿಗಿಂತ ಸಣ್ಣ ಪಟ್ಟಣ (Town)ಗಳಲ್ಲಿ ಉದ್ಯೋಗ ಶುರು ಮಾಡಲು ಬಯಸ್ತಾರೆ. ಸಣ್ಣ ಪಟ್ಟಣದಲ್ಲಿ ಸ್ಮಾರ್ಟ್ ಉದ್ಯೋಗ (Employment) ಶುರು ಮಾಡಿ ಹೆಚ್ಚಿನ ಹಣ ಗಳಿಸಬಹುದು. ಕಡಿಮೆ ವೆಚ್ಚ(Cost)ದಲ್ಲಿ ವ್ಯಾಪಾರ ಶುರು ಮಾಡಿ ಹೆಚ್ಚು ಗಳಿಸುವ ಆಯ್ಕೆಯನ್ನು ನೀವು ಆಯ್ದುಕೊಳ್ಳುವುದು ಉತ್ತಮ. ಅನೇಕ ಬಾರಿ ದೊಡ್ಡ ಹೂಡಿಕೆ ಮಾಡಿ ಕೈಸುಟ್ಟುಕೊಳ್ತೇವೆ. ಹಾಗಾಗಿ ಕಡಿಮೆ ಹೂಡಿಕೆಯಲ್ಲಿ ವ್ಯಾಪಾರ ಶುರು ಮಾಡಿ ನಂತ್ರ ಹೂಡಿಕೆಯನ್ನು ಹೆಚ್ಚು ಮಾಡಬಹುದು. ಸಣ್ಣ ಪಟ್ಟಣದಲ್ಲಿ ಬೆಸ್ಟ್ ವ್ಯಾಪಾರ ಯಾವುದು ಎಂಬುದನ್ನು ಇಂದು ಹೇಳ್ತೇವೆ.
ಪಾನಿ ಪುರಿ, ಚಾಟ್ ವ್ಯಾಪಾರ : ಚಿಕ್ಕ ನಗರವೇ ಆಗಿರಲಿ ಅಥವಾ ದೊಡ್ಡ ನಗರವೇ ಆಗಿರಲಿ,ಹಳ್ಳಿಯಾಗಿರಲಿ ಸಣ್ಣ ಪಟ್ಟಣವಾಗಿರಲಿ ,ಚಾಟ್ ಗೆ ಹೆಚ್ಚಿನ ಬೇಡಿಕೆಯಿದೆ. ಸಂಜೆ ಸಮಯದಲ್ಲಿ ಪಾನಿ ಪುರಿ ತಿನ್ನಲು ಬಹುತೇಕ ಎಲ್ಲರಿಗೂ ಇಷ್ಟ. ಸಣ್ಣ ವ್ಯಾಪಾರ ಮಾಡಲು ಯೋಚಿಸುತ್ತಿದ್ದರೆ, ಪಾನಿ ಪುರಿ, ಚಾಟ್ ಮಾರಾಟದ ವ್ಯಾಪಾರ ಉತ್ತಮ ಆಯ್ಕೆಯಾಗಿದೆ. ವಿಶೇಷವೆಂದರೆ ಇದಕ್ಕಾಗಿ ನಿಮಗೆ ಯಾವುದೇ ರೀತಿಯ ದೊಡ್ಡ ಜಾಗವಾಗಲೀ, ಸಾಕಷ್ಟು ಹಣವಾಗಲೀ ಬೇಕಾಗಿಲ್ಲ. ನೀವು ಇದನ್ನು ಸಣ್ಣ ಜಾಗದಲ್ಲಿಯೂ ಮಾಡಬಹುದು. ಕಡಿಮೆ ವೆಚ್ಚದಲ್ಲಿ ಶುರು ಮಾಡಬಹುದು.
undefined
ಸ್ಟೇಷನರಿ ಅಥವಾ ಪುಸ್ತಕದ ಅಂಗಡಿ ವ್ಯಾಪಾರ : ಶಾಲೆಗಳಿರುವ ಸ್ಥಳಗಳಲ್ಲಿ ಪಟ್ಟಿ,ಪುಸ್ತಕದ ಅವಶ್ಯಕತೆ ಹೆಚ್ಚಿರುತ್ತದೆ. ಸ್ವಂತ ವ್ಯವಹಾರವನ್ನು ಪ್ರಾರಂಭಿಸುವ ಆಲೋಚನೆಯಲ್ಲಿದ್ದರೆ ಸ್ಟೇಷನರಿ ಮತ್ತು ಪುಸ್ತಕದ ಅಂಗಡಿಯ ವ್ಯವಹಾರವು ನಿಮಗೆ ಲಾಭದಾಯಕವೆಂದು ಸಾಬೀತುಪಡಿಸಬಹುದು. ಜನನಿಬಿಡಿ ಪ್ರದೇಶಗಳಲ್ಲಿ ನೀವು ಇದನ್ನು ತೆರೆಯಬಹುದು. ಈ ವ್ಯವಹಾರವನ್ನು ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಬಹುದು. ಕ್ರಮೇಣ ಸ್ಟೇಷನರಿಯನ್ನು ನೀವು ವಿಸ್ತರಿಸಬಹುದು. ಪ್ರಿಂಟರ್,ಜೆರಾಕ್ಸ್ ಸೌಲಭ್ಯ ನೀಡಬಹುದು.
ಕಾರ್ಪೆಂಟರ್ ವ್ಯಾಪಾರ : ಬಾಗಿಲು, ಕಿಟಕಿ, ಖುರ್ಚಿ, ಮೇಜು, ಬೀರು ಹೀಗೆ ಎಲ್ಲ ವಸ್ತುಗಳು ಪ್ರತಿ ಮನೆಗೂ ಅತ್ಯಗತ್ಯ. ಕಾರ್ಪೆಂಟರ್ ಇಲ್ಲದೆ ಕೆಲಸ ನಡೆಯುವುದಿಲ್ಲ. ನಿಮಗೆ ಇದರಲ್ಲಿ ಆಸಕ್ತಿಯಿದ್ದರೆ ನೀವು ಈ ವ್ಯಾಪಾರ ಶುರು ಮಾಡಬಹುದು. ಇದನ್ನು ಕೂಡ ಕಡಿಮೆ ಬಂಡವಾಳದಲ್ಲಿ ಶುರು ಮಾಡಬಹುದು.
Elon Musk Starlinkಗೆ ಕೇಂದ್ರ ಸರ್ಕಾರ ಚಾಟಿ: ಪ್ರಿ ಆರ್ಡರ್ ಹಣ ವಾಪಸ್ ನೀಡಲಿರುವ ಕಂಪನಿ !
ಜನರಲ್ ಸ್ಟೋರ್ಸ್ : ಜನರಲ್ ಸ್ಟೋರ್ಸ್ ವ್ಯವಹಾರ ಕೂಡ ಉತ್ತಮ ಆಯ್ಕೆಯಾಗಿದೆ. ಹಳ್ಳಿಯಿಂದ ಸಣ್ಣ ಪಟ್ಟಣಗಳಲ್ಲಿ ಇದ್ರ ಅಗತ್ಯತೆ ಹೆಚ್ಚಿದೆ. ದೊಡ್ಡ ಪಟ್ಟಣಗಳಲ್ಲಿ ಆನ್ಲೈನ್ ನಲ್ಲಿ ಸೇವೆ ಲಭ್ಯವಿದೆ. ಆದ್ರೆ ಸಣ್ಣ ಪಟ್ಟಣಗಳಲ್ಲಿ ಜನರಲ್ ಸ್ಟೋರ್ಸ್ ಗೆ ಬಂದು ಸಾಮಾನುಗಳನ್ನು ಜನರು ಖರೀದಿ ಮಾಡುವುದು ಹೆಚ್ಚು. ಬೇಳೆಕಾಳುಗಳು, ಅಕ್ಕಿ, ಸಾಬೂನು, ಹಾಲು, ಬ್ರೆಷ್,ಪೇಸ್ಟ್ ಹೀಗೆ ದಿನನಿತ್ಯ ಬಳಸುವ ವಸ್ತುಗಳನ್ನು ನೀವು ಅಂಡಗಿಯಲ್ಲಿ ಇಡಬೇಕಾಗುತ್ತದೆ. ನೀವು ಈ ಅಂಗಡಿ ತೆರೆಯುವಾಗ ಸುತ್ತಮುತ್ತಲ ಪ್ರದೇಶದ ಬಗ್ಗೆ ವಿಚಾರಿಸಿ. ಹೆಚ್ಚು ಜನರಿರುವ ಹಾಗೂ ಒಂದೆರಡು ಜನರಲ್ ಸ್ಟೋರ್ ಇರುವ ಜಾಗ ಅಥವಾ ಜನರಲ್ ಸ್ಟೋರ್ಸ್ ಗೆ ಬಹುದೂರ ಹೋಗುವ ಅನಿವಾರ್ಯವಿರುವ ಸ್ಥಳದಲ್ಲಿ ಇದನ್ನು ತೆರೆಯುವುದು ಉತ್ತಮ.
ಬಟ್ಟೆ ಅಂಗಡಿ : ಸಣ್ಣ ಪಟ್ಟಣಗಳಲ್ಲಿ ನೀವು ಬಟ್ಟೆ ಅಂಗಡಿಯನ್ನು ತೆರೆಯಬಹುದು. ಬಟ್ಟೆಗಳಿಗೆ ಇಲ್ಲಿ ಬೇಡಿಕೆಯಿರುತ್ತದೆ. ದಿನನಿತ್ಯ ಬಳಸುವ ಬಟ್ಟೆ ಹಾಗೂ ಒಳ ಉಡುಪುಗಳನ್ನು ನೀವು ಮಾರಾಟ ಮಾಡಬಹುದು. ಆರಂಭದಲ್ಲಿ ಮನೆಯಲ್ಲಿಯೇ ನೀವು ಈ ವ್ಯವಹಾರ ಶುರು ಮಾಡಬಹುದು.
LIC IPO: ಈ ತಿಂಗಳ ಮೂರನೇ ವಾರ ಸೆಬಿಗೆ ಕರಡು ಪ್ರತಿ ಸಲ್ಲಿಕೆ ಸಾಧ್ಯತೆ; ಹಾಗಾದ್ರೆ ಎಲ್ಐಸಿ ಐಪಿಒ ಯಾವಾಗ?
ಗ್ರಂಥಿಗೆ ಅಂಗಡಿ : ಪೂಜೆ ಸಾಮಾನುಗಳು ಒಂದೇ ಜಾಗದಲ್ಲಿ ಸಿಗುವುದು ಕಷ್ಟ. ನಗರಗಳಲ್ಲಿ ಗ್ರಂಥಿಗೆ ಅಂಗಡಿಯಲ್ಲಿ ನಿಮಗೆ ಎಲ್ಲ ಪೂಜೆ ವಸ್ತುಗಳು ಸಿಗುತ್ತವೆ. ಪಟ್ಟಣದಲ್ಲಿ ಇಂಥ ಅಂಗಡಿಗಳ ಸಂಖ್ಯೆ ಕಡಿಮೆ. ಒಂದೊಂದು ಸಾಮಗ್ರಿಗೆ ಒಂದೊಂದು ಅಂಗಡಿಗೆ ಹೋಗಬೇಕಾಗುತ್ತದೆ. ಪೂಜೆ,ಹೋಮ,ಮದುವೆ ಸಮಾರಂಭಕ್ಕೆ ಬೇಕಾದ ಧೂಮ,ದೀಪ,ಕಳಶ ಸೇರಿದಂತೆ ಎಲ್ಲ ವಸ್ತುಗಳು ಒಂದೇ ಅಂಗಡಿಯಲ್ಲಿ ಸಿಕ್ಕರೆ ಸುಲಭವಾಗುತ್ತದೆ.