Joint Home Loan: ಪತಿ-ಪತ್ನಿ ಇಬ್ಬರೂ ಜಂಟಿಯಾಗಿ ಗೃಹಸಾಲ ಪಡೆದ್ರೆ ಎಷ್ಟೆಲ್ಲ ಲಾಭಗಳಿವೆ ಗೊತ್ತಾ?

Suvarna News   | Asianet News
Published : Jan 06, 2022, 03:17 PM IST
Joint Home Loan: ಪತಿ-ಪತ್ನಿ ಇಬ್ಬರೂ ಜಂಟಿಯಾಗಿ ಗೃಹಸಾಲ ಪಡೆದ್ರೆ ಎಷ್ಟೆಲ್ಲ ಲಾಭಗಳಿವೆ ಗೊತ್ತಾ?

ಸಾರಾಂಶ

*ಮಹಿಳೆಯರನ್ನು ಸಹ ಅರ್ಜಿದಾರರನ್ನಾಗಿ ಹೊಂದಿದ್ರೆ ಕಡಿಮೆ ಬಡ್ಡಿದರದಲ್ಲಿ ಸಿಗುತ್ತೆ ಸಾಲ *ಇಬ್ಬರು ಅರ್ಜಿದಾರರಿದ್ದಾಗ ದೊಡ್ಡ ಮೊತ್ತದ ಗೃಹಸಾಲ ನೀಡಲು ಬ್ಯಾಂಕುಗಳು ಹಿಂದೇಟು ಹಾಕೋದಿಲ್ಲ *ಜಂಟಿ ಗೃಹಸಾಲದಿಂದ ಇಎಂಐ ಮೊತ್ತ ಕೂಡ ತಗ್ಗುತ್ತದೆ

Business Desk: ಸ್ವಂತ ಸೂರು ಹೊಂದೋ ಬಯಕೆ ಎಲ್ಲರಿಗೂ ಇರುತ್ತೆ. ಆದ್ರೆ ಮನೆ ಕಟ್ಟೋದು ಅಥವಾ ಖರೀದಿಸೋದು ಸಾಮಾನ್ಯ ಸಂಗತಿನಾ? ಅದಕ್ಕೆ ಲಕ್ಷಾಂತರ ರೂಪಾಯಿ ಬೇಕು. ಅಷ್ಟು ಹಣವನ್ನು ಎಲ್ಲಿಂದ ತರೋದು ಎಂಬ ಪ್ರಶ್ನೆಯಂತೂ ಇದ್ದೇಇರುತ್ತೆ. ಆದ್ರೆ ಇತ್ತೀಚೆಗೆ ಉದ್ಯೋಗಸ್ಥರಿಗೆ(Employees) ಬ್ಯಾಂಕುಗಳು(Banks) ಗೃಹ ಸಾಲ ನೀಡೋ ಮೂಲಕ ಸ್ವಂತ ಮನೆಯ ಕನಸನ್ನು ನನಸಾಗಿಸಿಕೊಳ್ಳಲು ನೆರವು ನೀಡುತ್ತಿವೆ. ಗೃಹಸಾಲ ( Home loan) ನೀಡಲು ಬ್ಯಾಂಕುಗಳಂತೂ ಪೈಪೋಟಿಗೆ ನಿಂತಿವೆ.  ಅದಕ್ಕಾಗಿಯೇ ಸ್ಪರ್ಧಾತ್ಮಕ ಬಡ್ಡಿದರದಲ್ಲಿ(Interest rate) ಸಾಲ ನೀಡುತ್ತಿವೆ. ಗೃಹ ಸಾಲವನ್ನು ಒಬ್ಬರ ಹೆಸರಿನಲ್ಲಿ ಪಡೆಯೋ ಬದಲು ಜಂಟಿಯಾಗಿ (Joint) ಪಡೆದ್ರೆ ಕೆಲವೊಂದು ಪ್ರಯೋಜನಗಳಿವೆ. ಹಾಗಾದ್ರೆ ಜಂಟಿ ಗೃಹಸಾಲ ( Home loan)ಪಡೆದ್ರೆ ಏನೆಲ್ಲ ಲಾಭಗಳಿವೆ? ಇಲ್ಲಿದೆ ಮಾಹಿತಿ.

ಕಡಿಮೆ ಬಡ್ಡಿದರ
ಗೃಹ ಸಾಲಕ್ಕೆ ಪತಿ (Husband)ಹಾಗೂ ಪತ್ನಿ(Wife)ಇಬ್ಬರೂ ಜಂಟಿಯಾಗಿ (Joint) ಅರ್ಜಿ ಸಲ್ಲಿಸೋದ್ರಿಂದ ಬಡ್ಡಿದರದಲ್ಲಿ ರಿಯಾಯ್ತಿ ಸಿಗುತ್ತದೆ. ಮಹಿಳೆ ಕೂಡ ಆಸ್ತಿಯ ಪಾಲುದಾರಳಾಗಿದ್ದು,  ಸಹ ಅರ್ಜಿದಾರಳಾಗಿದ್ದ (co-applicant) ಸಂದರ್ಭದಲ್ಲಿ ಬ್ಯಾಂಕುಗಳು ಕಡಿಮೆ ಬಡ್ಡಿದರದಲ್ಲಿ ಗೃಹಸಾಲ ನೀಡುತ್ತವೆ. ಮನೆ ಮಾಲೀಕತ್ವ ಮಹಿಳೆಗೂ ಸಿಗಬೇಕು ಎನ್ನೋ ಕಾರಣಕ್ಕೆ ಭಾರತದಲ್ಲಿ ಬಹುತೇಕ ಬ್ಯಾಂಕುಗಳು ಹಾಗೂ ಗೃಹ ಹಣಕಾಸು ಸಂಸ್ಥೆಗಳು ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತವೆ. ಪುರುಷ ಅರ್ಜಿದಾರರಿಗೆ ಹೋಲಿಸಿದ್ರೆ ಮಹಿಳೆಯರಿಗೆ  5 ಬೇಸಿಸ್ ಪಾಯಿಂಟ್ಸ್ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತವೆ.

SBI Gift to Customers: 5 ಲಕ್ಷದವರೆಗಿನ IMPS ವಹಿವಾಟಿಗೆ ಇನ್ನು ಚಾರ್ಜ್ ಇರಲ್ಲ!

ಹೆಚ್ಚಿನ ಅರ್ಹತೆ 
ನೀವು ಮಹಿಳಾ ಸಹ ಅರ್ಜಿದಾರರೊಂದಿಗೆ ಗೃಹಸಾಲಕ್ಕೆ ಅರ್ಜಿ ಹಾಕಿದ್ರೆ ನಿಮಗೆ ದೊಡ್ಡ ಮೊತ್ತದ ಸಾಲ ಸಿಗೋ ಸಾಧ್ಯತೆಗಳು ಹೆಚ್ಚಿರುತ್ತವೆ.  ನಿಮ್ಮ ಮಾಸಿಕ ಆದಾಯ ಹಾಗೂ ಈ ಹಿಂದೆ ನೀವು ಸಾಲಗಳನ್ನು ಹೇಗೆ ಮರುಪಾವತಿಸಿದ್ದೀರಿ ಎಂಬುದನ್ನು ಪರಿಶೀಲಿಸಿದ ಬಳಿಕವೇ ಬ್ಯಾಂಕ್ ನಿಮಗೆ ಎಷ್ಟು ಮೊತ್ತದ ಸಾಲ ನೀಡಬೇಕು ಎಂಬುದನ್ನು ನಿರ್ಧರಿಸುತ್ತದೆ. ಹೀಗಾಗಿ ನೀವು ಜಂಟಿಯಾಗಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ರೆ ಇಬ್ಬರ ಆದಾಯ ಹಾಗೂ ಕ್ರೆಡಿಟ್ ಸ್ಕೋರ್ ಗಳನ್ನು ಒಟ್ಟಿಗೆ ಪರಿಗಣಿಸೋ ಕಾರಣ ನಿಮಗೆ ದೊಡ್ಡ ಮೊತ್ತದ ಸಾಲ ಸಿಗೋ ಸಾಧ್ಯತೆಯಿರುತ್ತದೆ. 

ತೆರಿಗೆ ವಿನಾಯ್ತಿ
ತೆರಿಗೆ ಪಾವತಿಗೆ ಸಂಬಂಧಿಸಿ ಗೃಹ ಸಾಲದಿಂದ ಎರಡೆರಡು ಲಾಭವಿದೆ. ನೀವು ಮರುಪಾವತಿಸೋ ಪ್ರಧಾನ ಮೊತ್ತಕ್ಕೆ ಆದಾಯ ತೆರಿಗೆ ಕಾಯ್ದೆ (Income Tax Act) ಸೆಕ್ಷನ್ 80C ಅಡಿಯಲ್ಲಿ  1.5ಲಕ್ಷ ರೂ. ತನಕ ತೆರಿಗೆ ವಿನಾಯ್ತಿ(Tax Deduction) ಪಡೆಯಬಹುದು.  ಹಾಗೆಯೇ ಸೆಕ್ಷನ್ 24 ಅಡಿಯಲ್ಲಿ ಬಡ್ಡಿ(Interest) ಪಾವತಿ ಮೇಲೆ 2ಲಕ್ಷ ರೂ. ತನಕ ತೆರಿಗೆ ಉಳಿತಾಯ ಮಾಡಬಹುದು. ಜಂಟಿ ಗೃಹ ಸಾಲದಲ್ಲಿ ಇಬ್ಬರು ಸಾಲಗಾರರು ಕೂಡ ತೆರಿಗೆ ಪ್ರಯೋಜನ ಪಡೆಯಬಹುದು. ಗೃಹಸಾಲದಿಂದ ಒಬ್ಬ ಸಾಲಗಾರ  3.5ಲಕ್ಷ ರೂ. ತನಕ ತೆರಿಗೆ ವಿನಾಯ್ತಿ ಪಡೆಯಬಹುದು. ಇಬ್ಬರೂ ಒಟ್ಟಿಗೆ 7ಲಕ್ಷ ರೂ. ತನಕ ತೆರಿಗೆ ವಿನಾಯ್ತಿ ಪಡೆಯಬಹುದು.

Doorstep Banking: ಮನೆ ಬಾಗಿಲಿಗೇ ಬ್ಯಾಂಕಿಂಗ್ ಸೇವೆ ಪಡೆಯಲು ಏನ್ಮಾಡ್ಬೇಕು? ಯಾವೆಲ್ಲ ಬ್ಯಾಂಕುಗಳಲ್ಲಿದೆ ಈ ಸೌಲಭ್ಯ?

ಕಡಿಮೆ ಇಎಂಐ ಮೊತ್ತ
ನೀವು ಶೇ.7 ಬಡ್ಡಿದರದಲ್ಲಿ 15 ವರ್ಷಗಳ ಅವಧಿಗೆ 30ಲಕ್ಷ ರೂ. ಗೃಹ ಸಾಲ ಪಡೆದಿದ್ದೀರಿ ಎಂದು ಭಾವಿಸೋಣ. ನಿಮ್ಮ ಇಎಂಐ (EMI) ಸುಮಾರು 26,965ರೂ. ಆಗಿರುತ್ತೆ. ಒಂದು ವೇಳೆ ನೀವು ಜಂಟಿಯಾಗಿ ಗೃಹ ಸಾಲ ಪಡೆದಿದ್ರೆ ಇಎಂಐ ಮೊತ್ತ ಇಬ್ಬರಿಗೂ ಸಮನಾಗಿ ಹಂಚಿಕೆಯಾಗುತ್ತೆ. ಹೀಗಾಗಿ ಗೃಹಸಾಲ ಪಡೆಯೋವಾಗ ಒಬ್ಬರೇ ಅರ್ಜಿದಾರರಾಗೋ ಬದಲು ಇನ್ನೊಬ್ಬರು ಸಹ ಅರ್ಜಿದಾರನ್ನು ಹೊಂದೋದು ಆರ್ಥಿಕವಾಗಿ ಹೆಚ್ಚು ಲಾಭದಾಯಕ. 


 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!