ಮನೆಯಲ್ಲಿ ಕುಳಿತು ತಿಂಗಳಿಗೆ 1 ರಿಂದ 2 ಲಕ್ಷ ರೂಪಾಯಿ ಗಳಿಸುವ ಬ್ಯುಸಿನೆಸ್ ಐಡಿಯಾ ಇಲ್ಲಿದೆ. ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ ಈ ವ್ಯವಹಾರದಿಂದ ಉತ್ತಮ ಲಾಭ ಗಳಿಸಬಹುದು.
ಪ್ರತಿದಿನ 9 ರಿಂದ 5 ಗಂಟೆಯ ಕೆಲಸ ಮಾಡಿ ಬೇಸರವಾಗಿದೆಯಾ? ಹೊಸ ಬ್ಯುಸಿನೆಸ್ ಮಾಡಬೇಕೆಂಬ ಕನಸು ಇದೆಯಾ? ಆದ್ರೆ ಹೊಸ ಬ್ಯುಸಿನೆಸ್ ಆರಂಭಿಸಲು ಮನೆಯಿಂದ ದೂರ ಹೋಗಲು ಇಷ್ಟವಿಲ್ಲವೇ? ಈ ರೀತಿಯ ಗೊಂದಲದಲ್ಲಿ ನೀವು ಸಿಲುಕಿದ್ದರೆ ನಿಮಗಾಗಿ ಲಾಭದಾಯಕ ಬ್ಯುಸಿನೆಸ್ ಐಡಿಯಾ ಇಲ್ಲಿದೆ. ಈ ಬ್ಯುಸಿನೆಸ್‌ನ್ನು ಮನೆ ಆವರಣ ಅಥವಾ ಕೋಣೆಯೊಂದರಲ್ಲಿ ಶುರು ಮಾಡಬಹುದು. ಈ ವಸ್ತು ಪ್ರತಿ ಮನೆಗಳಲ್ಲಿ ಬಳಕೆಯಾಗೋದರಿಂದ ವರ್ಷದ 12 ತಿಂಗಳು ನಿಮ್ಮಉತ್ಪನ್ನಕ್ಕೆ ಬೇಡಿಕೆ ಇರುತ್ತದೆ.
ದೇಶದಲ್ಲಿ ಟೀ ಬಳಕೆ ಜನರಿಗೆ ಇಷ್ಟವಾಗುವ ಮತ್ತೊಂದು ವಸ್ತು ಅಂದ್ರೆ ಕುರುಕಲು ತಿಂಡಿಗಳು. ಅದರಲ್ಲಿಯೂ ಉಪ್ಪು-ಖಾರ-ಮಸಾಲೆ ಮಿಶ್ರಿತ ತಿಂಡಿಗೆ ಹೆಚ್ಚು ಬೇಡಿಕೆ ಇರುತ್ತದೆ. ಟೀ ಜೊತೆಗೆ ಏನಾದ್ರೂ ತಿನ್ನಲು ಬೇಕೆನಿಸಿದಾಗ ಥಟ್ ಅಂತ ನೆನಪಾಗೋದು ಈ ತಿಂಡಿಗಳು. ಮದುವೆ ಸೇರಿದಂತೆ ಎಲ್ಲಾ ರೀತಿಯ ಕಾರ್ಯಕ್ರಮಗಳಲ್ಲಿಯೂ ತಿಂಡಿಗಳಿಗೆ ಅಗ್ರಸ್ಥಾನ. ಈ ಕುರುಕಲು ತಿಂಡಿಯ ಬ್ಯುಸಿನೆಸ್‌ನ್ನು ಮನೆಯ ಸದಸ್ಯರೊಂದಿಗೆ ಸೇರಿ ಮಾಡಬಹುದಾಗಿದೆ .
ಬೆಳಗ್ಗೆ, ಸಂಜೆಯ ತಿಂಡಿಯಾಗಿ ಬಳಸಲಾಗುವ ನಿಮ್ಮ ಭಾಗದ ತಿಂಡಿಯನ್ನು ತಯಾರಿಸುವ ಕೆಲಸ ಮಾಡಿ. ಈ ಬ್ಯುಸಿನೆಸ್ ಆರಂಭಿಸಲು ನಿಮಗೆ 300 ರಿಂದ 500 ಚದರ ಮೀಟರ್ ಸ್ಥಳದ ಅವಶ್ಯಕತೆ ಇದೆ. ಆಹಾರ ಉತ್ಪದನಾ ಘಟಕವನ್ನು FSSAIನಲ್ಲಿ ರಿಜಿಸ್ಟರ್ ಮಾಡಿಕೊಳ್ಳಬೇಕು. FSSAI ಚಿಹ್ನೆ ಹೊಂದಿರುವ ಉತ್ಪನ್ನಗಳು ಗುಣಮಟ್ಟದ ವಿಶ್ವಾಸರ್ಹತೆಯನ್ನು ಹೊಂದಿರುತ್ತವೆ.
ಸ್ಥಳ ನಿಗದಿ ಮಾಡಿಕೊಂಡ ಬಳಿಕ ನೀವು ತಯಾರಿಸಬೇಕೆಂದುಕೊಂಡಿರುವ ತಿಂಡಿಗೆ ಬೇಕಾದ ಸಾಮಾಗ್ರಿಗಳನ್ನು ಖರೀದಿಸಿ. ಇಂದು ಆಹಾರ ತಯಾರಿಕೆ ಯಂತ್ರೋಪಕರಣಗಳು ಸಹ ಮಾರುಕಟ್ಟೆಯಲ್ಲಿ ಸಿಗುತ್ತವೆ. ಇದರಿಂದ ಕೆಲಸ ಸುಲಭವಾಗಿ ಮತ್ತು ಕಡಿಮೆ ಅವಧಿಯಲ್ಲಾಗುತ್ತದೆ. ಉತ್ಪನ್ನಗಳ ತಯಾರಿಕೆ ಆರಂಭಿಸಿದ ಕೂಡಲೇ ಸ್ಥಳೀಯವಾಗಿ ಜಾಹೀರಾತುಗಳ ಮೂಲಕ ಪ್ರಚಾರ ಮಾಡಬೇಕು. ಈ ರೀತಿಯ ಪ್ರಚಾರದಿಂದ ನಿಮ್ಮ ಉತ್ಪನ್ನಗಳ ಪರಿಚಯ ಜನರಿಗೆ ಆಗುತ್ತದೆ. ಭವಿಷ್ಯದಲ್ಲಿ ಈ ವ್ಯವಹಾರವನ್ನು ಹಂತ ಹಂತವಾಗಿಯೂ ವಿಸ್ತರಣೆ ಮಾಡಿಕೊಳ್ಳುವ ಎಲ್ಲಾ ಅವಕಾಶಗಳು ಹೇರಳವಾಗಿವೆ.
ಇದನ್ನೂ ಓದಿ: ಸ್ನೇಹಿತರೆಲ್ಲಾ ವಿದೇಶಕ್ಕೆ ಹೋದ್ರೆ, ಊರಲ್ಲಿದ್ದುಕೊಂಡೇ ವರ್ಷಕ್ಕೆ ₹2.5 ಕೋಟಿ ಗಳಿಸುತ್ತಿರೋ 34ರ ಯುವಕ
ಮಾರುಕಟ್ಟೆಯಲ್ಲಿ ನಿಮ್ಮ ಉತ್ಪನ್ನ ಬೇಡಿಕೆ ಆರಂಭವಾದ ನಂತರ ನಿಮಗೆ ಪ್ರತಿ ತಿಂಗಳು 1 ರಿಂದ 2 ಲಕ್ಷ ರೂಪಾಯಿ ಆದಾಯ ಬರುತ್ತದೆ. ಪ್ರತಿಯೊಂದು ಉತ್ಪನ್ನದ ಮಾರಾಟದ ಮೇಲೆ ಶೇ.20 ರಿಂದ ಶೇ.30ರಷ್ಟು ಲಾಭ ಸಿಗುತ್ತದೆ. ಹಬ್ಬ, ಮದುವೆ ಸೀಸನ್‌ಗಳಲ್ಲಿ ಈ ವ್ಯಾಪಾರ ದ್ವಿಗುಣಗೊಳ್ಳುತ್ತದೆ. ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡೋದರಿಂದ ನಷ್ಟದಿಂದ ದೂರವಾಗಬಹುದು.
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಯಾವುದೇ ವ್ಯಾಪಾರ ಸಂಪೂರ್ಣವಾಗಿ ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.
ಇದನ್ನೂ ಓದಿ: 1 ಎಕರೆ ಭೂಮಿಯಿಂದ ತಿಂಗಳಿಗೆ 1 ಕೋಟಿ ಸಂಪಾದಿಸುವ ವಿಧಾನ; ಶ್ರೀಮಂತರಾಗುವ ಟಿಪ್ಸ್