
ಹಣ ಸಂಪಾದಿಸಲು ಸಿಟಿಗೆ ಹೋಗ್ಬೇಕಾಗಿಲ್ಲ. ಸರಿಯಾದ ಪ್ಲಾನ್, ಪರಿಶ್ರಮ ಮತ್ತು ತಾಳ್ಮೆ ಇದ್ದರೆ ಹಳ್ಳಿಯಲ್ಲೇ ಸ್ವಂತ ಉದ್ಯಮ ಆರಂಭಿಸಿ ಉತ್ತಮ ಆದಾಯ ಗಳಿಸಬಹುದು. ಹಳ್ಳಿಯಲ್ಲಿ ಶುರು ಮಾಡ್ಬಹುದಾದಂತ ಲಾಭದಾಯಕ ಉದ್ಯಮಗಳ ಸಂಖ್ಯೆ ಸಾಕಷ್ಟಿದೆ.
ನಿಮಗೆ ಯಾವುದೇ ವಿಷಯದಲ್ಲಿ ಉತ್ತಮ ಜ್ಞಾನವಿದ್ದರೆ ಮಕ್ಕಳಿಗೆ ಟ್ಯೂಷನ್ ಹೇಳಬಹುದು. ಶಾಲಾ ಮಕ್ಕಳ ಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಇದು ನಿರಂತರ ಆದಾಯ ನೀಡುವ ಉದ್ಯಮ. ನಿಮ್ಮ ಟೀಚಿಂಗ್ ಉತ್ತಮವಾಗಿದ್ರೆ ಪಾಲಕರು ಮಕ್ಕಳನ್ನು ನಿಮ್ಮ ಬಳಿ ಕಳುಹಿಸಲು ಆಸಕ್ತಿ ತೋರಿಸ್ತಾರೆ. ಮನೆಯಲ್ಲಿ ಮಕ್ಕಳಿರುವ ತಾಯಂದಿರು ಕೂಡ ಈ ಕ್ಲಾಸ್ ಆರಾಮವಾಗಿ ನಡೆಸಿ ಹಣ ಸಂಪಾದನೆ ಮಾಡ್ಬಹುದು.
ಆನ್ಲೈನ್ ಶಾಪಿಂಗ್ ಹೆಚ್ಚಾಗಿದೆ. Amazon, Flipkart ಸೇರಿದಂತೆ ವಿವಿಧ ಇ-ಕಾಮರ್ಸ್ ಕಂಪನಿಗಳ ಮೂಲಕ ಗ್ರಾಮೀಣ ಪ್ರದೇಶದಲ್ಲೂ ಜನರು ಶಾಪಿಂಗ್ ಮಾಡ್ತಿದ್ದಾರೆ. ನೀವು ಇದನ್ನೇ ಬಂಡವಾಳ ಮಾಡ್ಕೊಂಡು ಮಾರಾಟ ಶುರು ಮಾಡ್ಬಹುದು. ಇದ್ರಲ್ಲಿ ನಿಮಗೆ ಸಾಕಷ್ಟು ಆಯ್ಕೆಗಳಿವೆ. ಗ್ರಾಮೀಣ ಪ್ರದೇಶದ ವಸ್ತುಗಳನ್ನು ಆನ್ಲೈನ್ ನಲ್ಲಿ ಮಾರಾಟ ಮಾಡ್ಬಹುದು. ಇಲ್ಲ ವಸ್ತುಗಳ ಬಗ್ಗೆ ಬರೀ ಜಾಹೀರಾತು ನೀಡಿ, ಅದ್ರಿಂದ ಕಮಿಷನ್ ಗಳಿಸಬಹುದು. ಆನ್ಲೈನ್ ನಲ್ಲಿ ವಸ್ತು ಖರೀದಿ ಮಾಡಿ ಅದನ್ನು ಗ್ರಾಮೀಣ ಪ್ರದೇಶದಲ್ಲಿ ಮಾರಾಟ ಕೂಡ ಮಾಡ್ಬಹುದು.
ಯೂಟ್ಯೂಬ್ ಚಾನಲ್
ಯೂಟ್ಯೂಬ್ ಚಾನೆಲ್ ಶುರು ಮಾಡಲು ಯಾವ್ದೇ ಸಿಟಿಯ ಅಗತ್ಯವಿಲ್ಲ. ನೀವು ಹಳ್ಳಿ ಮನೆಯಲ್ಲೇ ಕುಳಿತು ಅಡುಗೆ, ಕೃಷಿ, ಗ್ರಾಮೀಣ ಜೀವನ, ಪಶುಸಂಗೋಪನೆ, ಸ್ಥಳೀಯ ಸಂಸ್ಕೃತಿ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ವಿಡಿಯೋ ಮಾಡಿ ಆದಾಯ ಗಳಿಸಬಹುದು. ಚಾನಲ್ ಬೆಳೆಯುತ್ತಿದ್ದಂತೆ ಜಾಹೀರಾತು, ಬ್ರ್ಯಾಂಡ್ ಸಹಭಾಗಿತ್ವ ಮತ್ತು ಇತರ ಮಾರ್ಗಗಳಿಂದ ಹಣ ಸಂಪಾದಿಸಬಹುದು.
RBIನಿಂದ ಹೊಸ ಹೆಜ್ಜೆ; ಬರಲಿವೆ 10 & 20 ರೂ. ಮುಖಬೆಲೆಯ ವಿಶೇಷ ಪ್ಲಾಸ್ಟಿಕ್ ನೋಟುಗಳು
ಮೊಬೈಲ್ ರಿಪೇರಿ ಅಂಗಡಿ
ಮೊಬೈಲ್ ಬಳಕೆ ಎಲ್ಲೆಡೆ ಹೆಚ್ಚಿರುವುದರಿಂದ ರಿಪೇರಿ ಸೇವೆಗೆ ಬೇಡಿಕೆ ಯಾವಾಗಲೂ ಇರುತ್ತದೆ. ಸಣ್ಣ ತರಬೇತಿ ಪಡೆದು ಈ ಉದ್ಯಮ ಆರಂಭಿಸಬಹುದು. ಮೊಬೈಲ್ ರಿಪೇರಿಗೆ ಸಾಕಷ್ಟು ತರಬೇತಿಗಳು ಲಭ್ಯವಿದೆ. ಇದ್ರ ಜೊತೆ ನೀವು ಮೊಬೈಲ್ ಎಕ್ಸಸರಿಸ್ ಕೂಡ ಮಾರಾಟ ಮಾಡ್ಬಹುದು.
ವೆಬ್ಸೈಟ್ ಅಥವಾ ಬ್ಲಾಗ್
ವೆಬ್ ಡಿಸೈನ್ ಅಥವಾ ಬರವಣಿಗೆಯಲ್ಲಿ ಆಸಕ್ತಿ ಇದ್ದರೆ ವೆಬ್ಸೈಟ್ ಆರಂಭಿಸಿ ಜಾಹೀರಾತು ಹಾಗೂ ಅಫಿಲಿಯೇಟ್ ಮಾರ್ಕೆಟಿಂಗ್ ಮೂಲಕ ಆದಾಯ ಗಳಿಸಬಹುದು. ಆನ್ಲೈನ್ ನಲ್ಲಿ ಈಗ ಸಾಕಷ್ಟು ಟ್ರಾನ್ಸ್ ಲೇಷನ್, ಎಡಿಟಿಂಗ್ ಸೇರಿದಂತೆ ಸಾಕಷ್ಟು ಅವಕಾಶಗಳಿದ್ದು, ನೀವದನ್ನು ಸುಲಭವಾಗಿ ಹಳ್ಳಿಯಲ್ಲೇ ಮಾಡ್ಬಹುದು.
ಮಿನಿ ಬ್ಯಾಂಕ್
ಬ್ಯಾಂಕಿಂಗ್ ಸೇವೆಗಳು ಕಡಿಮೆ ಇರುವ ಪ್ರದೇಶಗಳಲ್ಲಿ CSP ಕೇಂದ್ರ ತೆರೆಯುವ ಮೂಲಕ ಹಣ ಠೇವಣಿ, ಹಣ ತೆಗೆಯುವುದು, ಖಾತೆ ತೆರೆಯುವುದು ಮುಂತಾದ ಸೇವೆ ನೀಡಿ ಕಮಿಷನ್ ಪಡೆಯಬಹುದು.
ಗ್ರಾಹಕರಿಗೆ ಸೈಲೆಂಟ್ ಆಗಿ ಶಾಕ್ ನೀಡಿದ ಏರ್‌ಟೆಲ್: ಅತ್ಯಂತ ಜನಪ್ರಿಯ ಮೊಬೈಲ್ ರಿಚಾರ್ಜ್ ಪ್ಲಾನ್ ರದ್ದು
CSC ಕೇಂದ್ರ
ಸರ್ಕಾರಿ ದಾಖಲೆಗಳು, ಆಧಾರ್ ಸೇವೆ, ಪ್ಯಾನ್ ಕಾರ್ಡ್, ವಿದ್ಯುತ್ ಬಿಲ್ ಪಾವತಿ ಸೇರಿದಂತೆ ಹಲವು ಡಿಜಿಟಲ್ ಸೇವೆಗಳನ್ನು ಒದಗಿಸಿ ಉತ್ತಮ ಆದಾಯ ಗಳಿಸಬಹುದು.
ಅಗರಬತ್ತಿ ತಯಾರಿಕೆ
ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ ಉದ್ಯಮಗಳಲ್ಲಿ ಇದು ಪ್ರಮುಖವಾದದ್ದು. ವರ್ಷಪೂರ್ತಿ ಅಗರಬತ್ತಿಗೆ ಬೇಡಿಕೆ ಇರುತ್ತದೆ. ನೀವು ಇದನ್ನು ಮನೆಯಲ್ಲಿ ತಯಾರಿಸಿ, ಒಳ್ಳೆ ಹೆಸರಿನಲ್ಲಿ ಇದನ್ನು ಮಾರಾಟ ಮಾಡಬಹುದು.
ಫಾಸ್ಟ್ ಫುಡ್ ಸ್ಟಾಲ್
ಶಾಲೆ, ಕಾಲೇಜು, ಮಾರುಕಟ್ಟೆ ಅಥವಾ ಬಸ್ ನಿಲ್ದಾಣದ ಬಳಿ ಸಣ್ಣ ಆಹಾರ ಮಳಿಗೆ ಆರಂಭಿಸಿದರೆ ಉತ್ತಮ ಆದಾಯ ಗಳಿಸಬಹುದು. ಇದಕ್ಕೆ ಕಡಿಮೆ ಬಂಡವಾಳ ಸಾಕು. ನೀವು ರುಚಿಕರ ಆಹಾರ ನೀಡಿದ್ರೆ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತದೆ.
ಫಾರ್ಮ್
ನೀವು ಕೋಳಿ ಸಾಕಣೆ, ಹಸು ಸಾಕಣೆ, ಜೇನು, ಮೀನು ಸೇರಿದಂತೆ ಬೇರೆ ಬೇರೆ ಪ್ರಾಣಿಗಳ ಸಾಕಣೆ ಶುರು ಮಾಡಿ ಅದ್ರಿಂದಲೂ ಆದಾಯ ಗಳಿಸಬಹುದು. ನಿಮ್ಮ ಈ ಉದ್ಯಮಗಳಿಗೆ ಸರ್ಕಾರ ಸಾಲ ಸೌಲಭ್ಯ ಕೂಡ ನೀಡುತ್ತದೆ.
ಗುತ್ತಿಗೆ ಕೆಲಸ
ಹಳ್ಳಿಗಳಲ್ಲಿ ಜನಸಂಖ್ಯೆ ಕಡಿಮೆಯಾಗ್ತಿದೆ. ಮದುವೆ, ಸಮಾರಂಭಗಳಿಗೆ ಅಡುಗೆ ಮಾಡುವವರು, ಬಡಿಸುವವರು, ಕಾರ್ಯಕ್ರಮಕ್ಕೆ ಸಿದ್ಧತೆ ಮಾಡುವವರು ಕೂಡ ಕಡಿಮೆ ಆಗ್ತಿದ್ದಾರೆ. ನೀವು ಮದುವೆ ಅಥವಾ ಯಾವುದೇ ಕಾರ್ಯಕ್ರಮದ ಗುತ್ತಿಗೆ ಪಡೆಯುವ ಉದ್ಯಮ ಶುರು ಮಾಡಿ, ಕೈತುಂಬ ಸಂಪಾದನೆ ಮಾಡ್ಬಹುದು.
ಎಲೆಕ್ಟ್ರಾನಿಕ್ ರಿಪೇರಿ
ಟಿವಿ, ಫ್ರಿಜ್, ಕೂಲರ್, ವಾಷಿಂಗ್ ಮೆಷಿನ್ ಸೇರಿದಂತೆ ಗೃಹೋಪಯೋಗಿ ವಸ್ತುಗಳ ದುರಸ್ತಿ ಸೇವೆಗೆ ಉತ್ತಮ ಬೇಡಿಕೆ ಇದೆ. ಇವುಗಳ ರಿಪೇರಿ ನಿಮಗೆ ತಿಳಿದಿದ್ರೆ ನೀವು ಇದನ್ನು ಮನೆಯಲ್ಲಿಯೇ ಶುರು ಮಾಡ್ಬಹುದು.
ಅಕ್ಕಿ ಗಿರಣಿ
ಭತ್ತ ಬೆಳೆಯುವ ಪ್ರದೇಶಗಳಲ್ಲಿ ಅಕ್ಕಿ ಗಿರಣಿ ಆರಂಭಿಸಿದರೆ ರೈತರಿಗೆ ಸೇವೆ ನೀಡುವುದರ ಜೊತೆಗೆ ಉತ್ತಮ ಆದಾಯವೂ ಗಳಿಸಬಹುದು. ಇದು
ನೆನಪಿರಲಿ
ಯಾವುದೇ ಉದ್ಯಮ ಆರಂಭಿಸುವ ಮುನ್ನ ನಿಮ್ಮ ಪ್ರದೇಶದಲ್ಲಿ ಯಾವ ಸೇವೆಗೆ ಹೆಚ್ಚು ಬೇಡಿಕೆ ಇದೆ ಎಂಬುದನ್ನು ತಿಳಿದುಕೊಳ್ಳಿ. ನಿಮ್ಮ ಬಂಡವಾಳ, ಸ್ಥಳೀಯ ಮಾರುಕಟ್ಟೆ ಮತ್ತು ಗ್ರಾಹಕರ ಅಗತ್ಯಕ್ಕೆ ಅನುಗುಣವಾಗಿ ಉದ್ಯಮ ಆಯ್ಕೆ ಮಾಡುವುದು ಮುಖ್ಯ. ಅಗತ್ಯವಿರುವ ಪರವಾನಗಿ ಮತ್ತು ನೋಂದಣಿಗಳನ್ನು ಪಡೆದು ಕಾನೂನುಬದ್ಧವಾಗಿ ಉದ್ಯಮ ಆರಂಭಿಸಿ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.