
ನವದೆಹಲಿ: ಹೊಸ ವರ್ಷದ ಮೊದಲ ದಿನ ಜನಸಾಮಾನ್ಯರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಎಲ್‌ಪಿಜಿ ಸಿಲಿಂಡರ್ ರೀಫಿಲ್ಲಿಂಗ್ ಬೆಲೆಯಲ್ಲಿ ಇಳಿಕೆಯಾಗಿದ್ದು, ಹೊಸ ದರಗಳು ಇಂದಿನಿಂದಲೇ ಅನ್ವಯವಾಗಲಿವೆ. ತೈಲ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಜನವರಿರ 1ರಿಂದ 14.50 ರೂ ಇಳಿಕೆ ಮಾಡಿವೆ. ದೆಹಲಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ನ ಹೊಸ ಬೆಲೆ 1818.50 ರೂ.ನಿಂದ 1804 ರೂ.ಗೆ ಕಡಿಮೆಯಾಗಿದೆ.
ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನದಂದು ಎಲ್‌ಪಿಜಿ ಸಿಲಿಂಡರ್‌ಗಳನ್ನು ಪರಿಷ್ಕರಣೆ ಮಾಡುತ್ತವೆ. ಹೊಸ ದರಗಳು ತಿಂಗಳ ಮೊದಲ ದಿನದಿಂದಲೇ ಅನ್ವಯವಾಗುತ್ತವೆ. ಜನವರಿಯಲ್ಲಿಯೂ ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪರಿಶೀಲಿಸಿ ಹೊಸ ಬೆಲೆಯನ್ನು ಪ್ರಕಟಿಸಿವೆ. ಇಂದಿನಿಂದ 19 ಕೆಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗಿದೆ. ಕೋಲ್ಕತ್ತಾದಲ್ಲಿ 19 ಕೆಜಿ ಸಿಲಿಂಡರ್ ಬೆಲೆ 1927 ರೂ.ಗಳಿಂದ 1911 ರೂ.ಗೆ ಇಳಿಕೆಯಾಗಿದೆ. ಮುಂಬೈನಲ್ಲಿ 1771 ರೂ.ಗಳಿಂದ 1756 ರೂ.ಗೆ ಇಳಿದಿದೆ. ಚೆನ್ನೈನಲ್ಲಿ 1980.50 ರೂ.ಗಳಿಂದ 1980.50. ರೂ.ಗೆ ಕಡಿಮೆಯಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿಯೂ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಮೇಲೆ 16 ರೂ.ವರೆಗೆ ಇಳಿಕೆಯಾಗಿದೆ. ಡಿಸೆಂಬರ್‌ನಲ್ಲಿ 1,911 ರೂಪಾಯಿ ಪಾವತಿಸಲಾಗುತ್ತಿತ್ತು. ಜನವರಿಯಲ್ಲಿ ಬೆಲೆ ಇಳಿಕೆಯಾಗಿದ್ದು, ಈ ತಿಂಗಳು 19 ಕೆಜಿ ಎಲ್‌ಪಿಜಿ ಸಿಲಿಂಡರ್ 1,895 ರೂಪಾಯಿಗೆ ಸಿಗುತ್ತದೆ. ಗೃಹ ಬಳಕೆ ಸಿಲಿಂಡರ್ ಬೆಲೆ 805.50 ರೂಪಾಯಿ ಆಗಿದೆ.
ಇದನ್ನೂ ಓದಿ: 2025ರಲ್ಲಿ ಚಿನ್ನದ ಬೆಲೆ ಇಳಿಕೆಯಾಗುತ್ತಾ? ಆರ್ಥಿಕ ತಜ್ಞರ ಉತ್ತರ
ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಹಳೆಯ ದರಗಳೇ ಮುಂದುವರಿಯಲಿವೆ. ಗೃಹಬಳಕೆ ಸಿಲಿಂಡರ್ ಬೆಲೆ ಈ ವರ್ಷದ ಆಗಸ್ಟ್‌ನಿಂದ ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಕಳೆದ 5 ತಿಂಗಳಿನಿಂದ ಗೃಹಬಳಕೆ ಸಿಲಿಂಡರ್ ಬೆಲೆ ಸ್ಥಿರವಾಗಿದೆ. ಇಂಡೇನ್ ಕಂಪನಿ ಅತಿದೊಡ್ಡ ಎಲ್‌ಪಿಜಿ ಬ್ರ್ಯಾಂಡ್ ಆಗಿದ್ದು, ಇಂಡಿಯನ್ ಆಯಿಲ್ ಎರಡನೇ ಸ್ಥಾನದಲ್ಲಿದೆ. ಇತ್ತೀಚೆಗೆ ಎಲ್‌ಪಿಜಿ ಸಿಲಿಂಡರ್‌ಗಳನ್ನು 5 ಕೆಜಿ ಮತ್ತು 14.2 ಕೆಜಿಗಳಲ್ಲಿಯೂ ವಿತರಣೆ ಮಾಡಲಾಗುತ್ತಿದೆ. ವಾಣಿಜ್ಯ ಬಳಕೆ ಸಿಲಿಂಡರ್‌ಗಳು 19 ಕೆಜಿ, 47.5ಕೆಜಿ ಮತ್ತು 425 ಕೆಜಿ ವಿತರಣೆ ಮಾಡಲಾಗುತ್ತದೆ. 425 ಕೆಜಿ ಜಂಬೋ ಸಿಲಿಂಡರ್‌ಗಳನ್ನು ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ.
ಇದನ್ನೂ ಓದಿ: ಹೊಸ ವರ್ಷಕ್ಕೆ ಹೊಸ ಬದಲಾವಣೆ: ಇಂದಿನಿಂದ ಏನೇನಾಗುತ್ತೆ ಗೊತ್ತಾ?
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.