Budget 2022 Expectations: ಬಂಪರ್ ಕೊಡುಗೆ ನಿರೀಕ್ಷೆಯಲ್ಲಿ ಆರೋಗ್ಯ ಕ್ಷೇತ್ರ; ಅನುದಾನದಲ್ಲಿ ಶೇ.10-12 ಹೆಚ್ಚಳ ಸಾಧ್ಯತೆ!

By Suvarna News  |  First Published Jan 19, 2022, 8:24 PM IST

*ಆರೋಗ್ಯ ಕ್ಷೇತ್ರಕ್ಕೆ 18,000 ಕೋಟಿ ರೂ.ಸಮಗ್ರ ಪ್ಯಾಕೇಜ್ (Package) ಘೋಷಿಸೋ ಸಾಧ್ಯತೆ
*2021ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಆರೋಗ್ಯ ಕ್ಷೇತ್ರದ ಸಮಗ್ರ ವೆಚ್ಚಕ್ಕೆ  223,846 ಕೋಟಿ ರೂ. ಮೀಸಲಿಟ್ಟಿದ್ದ ಸರ್ಕಾರ
*ಲಸಿಕಾ ಅಭಿಯಾನಕ್ಕೆ 50,000 ಕೋಟಿ ರೂ. ಮೀಸಲು


Business Desk: 2022-23ನೇ ಸಾಲಿನ ಕೇಂದ್ರ ಬಜೆಟ್ (Uninon Budget) ಅನ್ನು ವಿತ್ತ ಸಚಿವೆ (Finance Minister) ನಿರ್ಮಲಾ ಸೀತಾರಾಮನ್ (Nirmala Sitharaman) ಫೆಬ್ರವರಿ 1ರಂದು ಮಂಡಿಸಲಿದ್ದಾರೆ. ದೇಶದಲ್ಲಿ ಕೊರೋನಾ (Corona) ಮೂರನೇ ಅಲೆ ಸದ್ದು ಮಾಡುತ್ತಿರೋ ಈ ಸಮಯದಲ್ಲಿ ಆರೋಗ್ಯ ಕ್ಷೇತ್ರ (Health Sector) ಸಹಜವಾಗಿಯೇ ಬಜೆಟ್ ಬಗ್ಗೆ ಹೆಚ್ಚಿನ ನಿರೀಕ್ಷೆಗಳನ್ನಿಟ್ಟುಕೊಂಡಿದೆ. ಈ ಬಾರಿಯ ಬಜೆಟ್ ನಲ್ಲಿ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಮೊತ್ತದ ಅನುದಾನ ಘೋಷಿಸೋ ಸಾಧ್ಯತೆ ಹೆಚ್ಚಿದೆ. ಆರೋಗ್ಯ ಕ್ಷೇತ್ರದ ಮೇಲಿನ ವೆಚ್ಚವನ್ನು ಶೇ.10-12ರಷ್ಟು ಏರಿಕೆ ಮಾಡೋ ನಿರೀಕ್ಷೆಯಿದೆ. ಆರೋಗ್ಯ ಕ್ಷೇತ್ರಕ್ಕೆ 18,000 ಕೋಟಿ ರೂ. ಸಮಗ್ರ ಪ್ಯಾಕೇಜ್ (Package) ಘೋಷಿಸೋ ಸಾಧ್ಯತೆಯಿದೆ. 

2021ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಸರ್ಕಾರ ಆರೋಗ್ಯ ಕ್ಷೇತ್ರದ ಸಮಗ್ರ ವೆಚ್ಚಕ್ಕೆ  223,846 ಕೋಟಿ ರೂ. ಘೋಷಿಸಿತ್ತು. ಕಳೆದ ಬಾರಿಯ ಬಜೆಟ್ ನಲ್ಲಿ ಕೋವಿಡ್ -19 ಲಸಿಕಾ ಅಭಿಯಾನಕ್ಕೆ ಮೀಸಲಿಟ್ಟ ಅನುದಾನ ಈ ಬಾರಿಯೂ ಮುಂದುವರಿಯಲಿದೆ. ಲಸಿಕಾ ಅಭಿಯಾನಕ್ಕೆ ಸರ್ಕಾರ 50,000 ಕೋಟಿ ರೂ. ಮೀಸಲಿಟ್ಟಿತ್ತು.

Tap to resize

Latest Videos

undefined

Budget 2022 Expectations: ಗೃಹ ಸಾಲದ ಬಡ್ಡಿ ಮೇಲೆ 5 ಲಕ್ಷ ರೂ. ಆದಾಯ ತೆರಿಗೆ ಕಡಿತದ ನಿರೀಕ್ಷೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ

2021-22ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಮೀಸಲಿಟ್ಟ ಒಟ್ಟು ಅನುದಾನ ಜಿಡಿಪಿಯ (GDP)ಶೇ.1.2 ರಷ್ಟಿತ್ತು. ಕಳೆದ ವರ್ಷ ಬಿಡುಗಡೆಯಾದ  'ಭಾರತದಲ್ಲಿ ಕೋವಿಡ್ -19 ಪರಿಣಾಮದ ಆರೋಗ್ಯಸೇವಾ ಪರಿವರ್ತನೆ'  ಎಂಬ ಹೆಸರಿನ ಎಫ್ ಐಸಿಸಿಐ (FICCI) ಹಾಗೂ ಕೆಪಿಎಂಜಿ  (KPMG) ವರದಿ ಪ್ರಕಾರ ದೇಶದಲ್ಲಿ ಸಾವರ್ಜನಿಕ ಆರೋಗ್ಯ ವೆಚ್ಚದ ಪ್ರಮಾಣ ಜಿಡಿಪಿಯ (GDP) ಶೇ.2.5- ಶೇ.3.5 ಕ್ಕೆ ಹೆಚ್ಚಳವಾಗಬೇಕಾದ ಅಗತ್ಯವಿದೆ. 

ಕಳೆದ ವರ್ಷ ಕೊರೋನಾ ಎರಡನೇ ಅಲೆ ಕಾಣಿಸಿಕೊಂಡ ಸಂದರ್ಭದಲ್ಲಿ ದೇಶದ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಮೂಲಸೌಕರ್ಯ (Infrastructure) ಒದಗಿಸೋ ಜೊತೆ ಮೇಲ್ದರ್ಜೆಗೇರಿಸಬೇಕಾದ ಅಗತ್ಯ ಸರ್ಕಾರಕ್ಕೆ ಮನದಟ್ಟಾಗಿದೆ. ಆಸ್ಪತ್ರೆಗಳಲ್ಲಿ ಬೆಡ್ (Bed) ಸಿಗದೆ, ಆಕ್ಸಿಜನ್ ಕೊರತೆಯಾಗಿ, ಸೂಕ್ತಸಮಯದಲ್ಲಿ ವೈದ್ಯಕೀಯ ಚಿಕಿತ್ಸೆ ದೊರಕದೆ ಸಾವಿರಾರು ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದರು. ಆರೋಗ್ಯ ಸಿಬ್ಬಂದಿಯ ಕೊರತೆ ಕೂಡ ಎದುರಾಗಿತ್ತು. ಹೀಗಾಗಿ ಭಾರತೀಯ ಆರೋಗ್ಯ ಕ್ಷೇತ್ರದ ಕುಂದು ಕೊರತೆಗಳನ್ನು ಕೋವಿಡ್ -19 (COVID-19) ಅನಾವರಣಗೊಳಿಸಿತ್ತು. ಮುಂದಿನ ದಿನಗಳಲ್ಲಿ ಇಂಥ ಪರಿಸ್ಥಿತಿಗಳನ್ನು ದೇಶ ಸಮರ್ಥವಾಗಿ ನಿಭಾಯಿಸಬೇಕೆಂದ್ರೆ ಆರೋಗ್ಯ ಕ್ಷೇತ್ರಕ್ಕೆ ಸರ್ಕಾರ ಹೆಚ್ಚಿನ ಉತ್ತೇಜನ ನೀಡಬೇಕಾದ ಅಗತ್ಯವಿದೆ. ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಗಳ (Beds)ಹೆಚ್ಚಳ, ಔ‍ಷಧ ಪೂರೈಕೆ ಹಾಗೂ ಅಗತ್ಯ ವೈದ್ಯಕೀಯ ಸಿಬ್ಬಂದಿ (Health Faculty) ನಿಯೋಜನೆಗೆ ಸರ್ಕಾರ ಹೆಚ್ಚಿನ ಅನುದಾನ ಒದಗಿಸಬೇಕಾದ ಅಗತ್ಯವಿದೆ. ಆರೋಗ್ಯ ಕ್ಷೇತ್ರದ ಎಲ್ಲ ಅಗತ್ಯಗಳನ್ನು ಒಮ್ಮೆಗೇ ಪೂರೈಸಲು ಸಾಧ್ಯವಾಗದಿದ್ರೂ ಬಜೆಟ್ ನಲ್ಲಿ ಹಂತ ಹಂತವಾಗಿ ಅನುದಾನ ಒದಗಿಸೋ ಮೂಲಕ ಇದನ್ನು ಪೂರ್ಣಗೊಳಿಸಲು ಸಾಧ್ಯವಿದೆ. 

Budget 2022: ಕೇಂದ್ರ ಬಜೆಟ್ ಮಂಡನೆಗೆ ದಿನಗಣನೆ ಪ್ರಾರಂಭ; ಬಜೆಟ್ ಬಗ್ಗೆ ನಿಮಗೆಷ್ಟು ಗೊತ್ತು?

2022-23ನೇ ಸಾಲಿನ ಕೇಂದ್ರ ಬಜೆಟ್ ಜನವರಿ 31ರಿಂದ ಪ್ರಾರಂಭಗೊಳ್ಳಲಿದೆ. ಎರಡು ಹಂತಗಳಲ್ಲೇ ಬಜೆಟ್ ಅಧಿವೇಶನ (Budget session) ನಡೆಯಲಿದೆ. ರಾಷ್ಟ್ರಪತಿ (President) ಉಭಯ ಸದನಗಳನ್ನುದ್ದೇಶಿಸಿ ಮಾತನಾಡಿದ ಬಳಿಕ ಅಧಿವೇಶನಕ್ಕೆ ಚಾಲನೆ ಸಿಗಲಿದೆ.  ಫೆಬ್ರವರಿ 1ರ ಬೆಳಗ್ಗೆ 11ಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್  2022ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ.ಬಜೆಟ್ ಅಧಿವೇಶನ ಎರಡು ಹಂತಗಳಲ್ಲಿ ನಡೆಯಲಿದ್ದು,ಮೊದಲ ಹಂತ ಜನವರಿ 31ರಿಂದ ಫೆಬ್ರವರಿ 11ರವರೆಗೆ ನಡೆಯಲಿದೆ.ಇನ್ನು ಎರಡನೇ ಹಂತ ಮಾರ್ಚ್ 14ರಂದು ಪ್ರಾರಂಭವಾಗಿ ಏಪ್ರಿಲ್ 8ರಂದು ಕೊನೆಗೊಳ್ಳಲಿದೆ. ಇನ್ನು ಪ್ರತಿವರ್ಷದಂತೆ ಈ ವರ್ಷ ಕೂಡ ಆರ್ಥಿಕ ಸಮೀಕ್ಷೆಯನ್ನು (Economical Survey) ಜನವರಿ 31ರಂದು ಮಂಡನೆಯಾಗಲಿದೆ. 


 

click me!