
ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ತನ್ನಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳೋದರ ಜೊತೆಯಲ್ಲಿ ಕಡಿಮೆ ಬೆಲೆಯ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆಗೊಳಿಸುವ ಮೂಲಕ ಜನರಿಗೆ ಹತ್ತಿರವಾಗುತ್ತಿದೆ. ಇದೀಗ ಮತ್ತೊಂದು ಕೈಗೆಟುವಕ ಬೆಲೆಯ ಪ್ರಿಪೇಯ್ಡ್ ಪ್ಲಾನ್ ತಂದಿರೋದರಿಂದ ದೇಶದ ಪ್ರಮುಖ ಮೂರು ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ಏರ್‌ಟೆಕ್ ಮತ್ತು ವೊಡಾಫೋನ್ ಐಡಿಯಾಗಳಿಗೆ ಟೆನ್ಷನ್ ಹೆಚ್ಚಾಗಿದೆ. ಮೂರು ಟೆಲಿಕಾಂ ಕಂಪನಿಗಳಿಗಿಂತ ಕಡಿಮೆ ಬೆಲೆಯ ಪ್ಲಾನ್‌ಗಳನ್ನು ಬಿಎಸ್‌ಎನ್‌ಎಲ್ ಪರಿಚಯಿಸುತ್ತಿದೆ. ಕಡಿಮೆ ಬೆಲೆ ಜೊತೆಯಲ್ಲಿ ದೀರ್ಘವಾಧಿ ವ್ಯಾಲಿಡಿಟಿಯನ್ನು ಈ ಪ್ಲಾನ್‌ಗಳು ಒಳಗೊಂಡಿದೆ. ಮತ್ತೊಂದೆಡೆ ಬಿಎಸ್‌ಎನ್‌ಎಲ್ ತನ್ನ ನೆಟ್‌ವರ್ಕ್ ವ್ಯಾಪ್ತಿಯನ್ನು ವಿಸ್ತರಣೆ ಮಾಡಿಕೊಳ್ಳುತ್ತಿರೋದರಿಗೆ 4G ಮೊಬೈಲ್ ಟವರ್ ಅಳವಡಿಕೆ ಮಾಡುತ್ತಿದೆ. ಈಗಾಗಲೇ ದೇಶದಲ್ಲಿ 65,000 ಹೊಸ ಟವರ್ ಸ್ಥಾಪಿಸಿದ್ದು, ಶೀಘ್ರದಲ್ಲಿಯೇ ಈ ಸಂಖ್ಯೆ 1,00,000 ದಾಟಲಿದೆ ಎಂದು ಬಿಎಸ್‌ಎನ್‌ಎಲ್ ವಿಶ್ವಾಸ ವ್ಯಕ್ತಪಡಿಸಿದೆ.
ಬಿಎಸ್‌ಎನ್‌ಎಲ್ ತನ್ನ ಎಕ್ಸ್ ಖಾತೆಯಲ್ಲಿ ಕಡಿಮೆ ಬೆಲೆ ಮತ್ತು ಹೆಚ್ಚು ವ್ಯಾಲಿಡಿಟಿಯ ಪ್ಲಾನ್ ಮಾಹಿತಿಯನ್ನು ನೀಡಿದೆ. ಈ ಪ್ರಿಪೇಯ್ಡ್ ಪ್ಲಾನ್ 347 ರೂ.ಗಳಾಗಿದ್ದು, ಬಳಕೆದಾರರಿಗೆ ಭಾರತದಾದ್ಯಂತ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತವಾಗಿ ಕರೆ ಮಾಡುವ ಆಯ್ಕೆಯನ್ನು ನೀಡಲಾಗಿದೆ. ದೆಹಲಿ ಮತ್ತು ಮುಂಬೈನಲ್ಲಿ MTNL ಪ್ರದೇಶಗಳು ಸೇರಿದಂತೆ ನ್ಯಾಷನಲ್ ರೋಮಿಂಗ್ ನೊಂದಿಗೆ ಅನ್‌ಲಿಮಿಟೆಡ್ ಕರೆ ಮಾಡಬಹುದು.
BSNL Rs 347 Prepaid Plan Details
347 ರೂಪಾಯಿ ಪ್ಲಾನ್‌ನಲ್ಲಿ ಗ್ರಾಹಕರಿಗೆ ಪ್ರತಿದಿನ 2GB ಹೈಸ್ಪೀಡ್ ಡೇಟಾ ಜೊತೆಯಲ್ಲಿ ಉಚಿತವಾಗಿ 100 ಎಸ್‌ಎಂಎಸ್ ಕಳುಹಿಸಬಹುದು. 347 ರೂ. ಪ್ಲಾನ್ 54 ದಿನದ ವ್ಯಾಲಿಡಿಟಿಯನ್ನು ಹೊಂದಿದೆ. ಈ ಪ್ಲಾನ್ ಜೊತೆ ಬಳಕೆದಾರರಿಗೆ ಹೆಚ್ಚುವರಿಯಾಗಿ 450 ಲೈವ್ ಟಿವಿ ಚಾನೆಲ್, BiTV ಮತ್ತು ಒಟಿಟಿ ಅಪ್ಲಿಕೇಷನ್‌ಗಳ ಚಂದಾದಾರಿಕೆ ಉಚಿತವಾಗಿ ಸಿಗಲಿದೆ.
ಇದನ್ನೂ ಓದಿ: ಬಿಎಸ್‌ಎನ್‌ಎಲ್ ಬಳಕೆದಾರರಿಗೆ ಜಾಕ್‌ಪಾಟ್; ಜಸ್ಟ್ 5 ರೂಪಾಯಿಯಲ್ಲಿ ಅಧಿಕ ಡೇಟಾ
6 ಸಾವಿರ ಕೋಟಿ ಪ್ಯಾಕೇಜ್
4G ಮೊಬೈಲ್ ಟವರ್ ಅಳವಡಿಕೆ ಮಾಡುತ್ತಿರುವಮ ಬಿಎಸ್‌ಎನ್‌ಎಲ್‌ಗೆ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 6,000 ಕೋಟಿ ರೂ. ಅನುದಾನ ನೀಡಲು ಅನುಮೋದನೆ ನೀಡಿದೆ ಎಂದು ವರದಿಯಾಗಿದೆ. ಈ ಅನುದಾನದಿಂದ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ತನ್ನ ಸೇವೆ ಗುಣಮಟ್ಟ ಸುಧಾರಿಸಿಕೊಳ್ಳಲು ಸಹಾಯವಾಗಲಿದೆ ಎಂದು ನಂಬಲಾಗಿದೆ.
ಗ್ರಾಹಕರಿಗೆ ಬರುವ ಅನಪೇಕ್ಷಿತ ಮಾರ್ಕೆಟಿಂಗ್ ಕರೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಈ ರೀತಿಯ ಮಾರ್ಕೆಟಿಂಗ್ ಕರೆಗಳನ್ನು ಮಾಡುವ ಕಂಪನಿಗಳಿಗೆ 10 ಲಕ್ಷ ರೂ.ವರೆಗೆ ದಂಡ ವಿಧಿಸಲಗುವುದು ಎಂದು TRAI ಎಚ್ಚರಿಕೆ ನೀಡಿದೆ. ಇದರ ಜೊತೆಯಲ್ಲಿ TRAI ಡು-ನಾಟ್-ಡಿಸ್ಟರ್ಬ್ (DND) ಎಂಬ ಹೊಸ ಅಪ್ಲಿಕೇಶನ್ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಜಿಯೋ, ಏರ್‌ಟೆಲ್‌ಗೆ ಸೆಡ್ಡು ಹೊಡೆದ ಬಿಎಸ್‌ಎನ್ಎಲ್; ಅತೀ ಕಡಿಮೆ ಬೆಲೆ 90 ದಿನದ ಪ್ಲಾನ್
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.