
BSNL ಮತ್ತೊಮ್ಮೆ ವಿಶೇಷ ಪ್ರೊಮೋಶನಲ್ ಆಫರ್ ತಂದಿದೆ. 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ, ಹೊಸ BSNL ಸಂಪರ್ಕ ಪಡೆಯುವ ಗ್ರಾಹಕರಿಗಾಗಿ 'ಫ್ರೀಡಂ ಪ್ಲಾನ್ 2.0' ಅನ್ನು ಪರಿಚಯಿಸಿದೆ. ಈ ಪ್ಲಾನ್ ವಿಶೇಷತೆ ಏನು? ಆಫರ್ ಏನೆಲ್ಲಾ ಇದೆ ನೋಡೋಣ ಬನ್ನಿ.
ಈ ಪ್ರೊಮೋಶನ್‌ನಲ್ಲಿ ಸಾಮಾನ್ಯವಾಗಿ ರೀಚಾರ್ಜ್‌ಗೆ ಪಾವತಿಸಬೇಕಾದ ಮೊತ್ತವನ್ನು ಮನ್ನಾ ಮಾಡಲಾಗಿದೆ. 24 ದಿನಗಳ ವ್ಯಾಲಿಡಿಟಿ ಸಮಯದಲ್ಲಿ ಗ್ರಾಹಕರು ಯಾವುದೇ ಹೆಚ್ಚುವರಿ ರೀಚಾರ್ಜ್ ಮಾಡದೆ ಕರೆ, ಎಸ್‌ಎಂಎಸ್ ಮತ್ತು ಡೇಟಾ ಬಳಸಬಹುದು. ಆದರೆ, ಈ ವಿಶೇಷ ಸೌಲಭ್ಯ ಹೊಸ BSNL ಗ್ರಾಹಕರಿಗೆ ಮಾತ್ರ ಅನ್ವಯಿಸುತ್ತದೆ. ಈಗಾಗಲೇ BSNL ಸಿಮ್ ಬಳಸುತ್ತಿರುವವರಿಗೆ ಈ ಆಫರ್ ಲಭ್ಯವಿಲ್ಲ.
ಈ ಫ್ರೀಡಂ ಪ್ಲಾನ್‌ನಲ್ಲಿ 24 ದಿನಗಳವರೆಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲಿಂಗ್ ಸೌಲಭ್ಯ ಸಿಗುತ್ತೆ. ಇದರಿಂದ ದೇಶದಾದ್ಯಂತ ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕರೆಗಳನ್ನು ಮಾಡಬಹುದು. ಡೇಟಾ ವಿಚಾರಕ್ಕೆ ಬಂದರೆ, ಪ್ರತಿದಿನ 1 GB ಹೈ-ಸ್ಪೀಡ್ ಡೇಟಾ ನೀಡಲಾಗುತ್ತಿದೆ. ದಿನದ ಡೇಟಾ ಮಿತಿ ಮುಗಿದ ನಂತರ ಇಂಟರ್‌ನೆಟ್ ವೇಗ ಕಡಿಮೆಯಾಗುತ್ತದೆ. ಜೊತೆಗೆ, ಪ್ರತಿದಿನ 100 ಎಸ್‌ಎಂಎಸ್ ಕಳುಹಿಸುವ ಪ್ರಯೋಜನವೂ ಇದೆ.
BSNL ಕಳೆದ ಸ್ವಾತಂತ್ರ್ಯ ದಿನಾಚರಣೆಯಂದು 'ಆಜಾದಿ ಕಾ ಪ್ಲಾನ್' ಹೆಸರಿನಲ್ಲಿ 1 ರೂಪಾಯಿಯ ವಿಶೇಷ ಆಫರ್ ನೀಡಿತ್ತು. ಆಗ ಆ ಪ್ಲಾನ್‌ಗೆ 30 ದಿನಗಳ ವ್ಯಾಲಿಡಿಟಿ, ದಿನಕ್ಕೆ 2 GB ಡೇಟಾ ಮತ್ತು ಅನ್‌ಲಿಮಿಟೆಡ್ ಕರೆಗಳ ಸೌಲಭ್ಯವಿತ್ತು. ಈಗಿನ 'ಫ್ರೀಡಂ ಪ್ಲಾನ್ 2.0' ನಲ್ಲಿ ವ್ಯಾಲಿಡಿಟಿಯನ್ನು 24 ದಿನಗಳಿಗೆ ಮತ್ತು ಡೇಟಾವನ್ನು 1 GBಗೆ ಇಳಿಸಲಾಗಿದೆ. ಆದರೆ, ಅನ್‌ಲಿಮಿಟೆಡ್ ಕರೆಗಳು ಮತ್ತು 100 ಎಸ್‌ಎಂಎಸ್ ಸೌಲಭ್ಯಗಳು ಮುಂದುವರಿದಿವೆ.
ಫ್ರೀಡಂ ಆಫರ್ ಜೊತೆಗೆ, BSNL ತನ್ನ ಈಗಿನ ಗ್ರಾಹಕರಿಗೂ ಒಂದು ಗುಡ್ ನ್ಯೂಸ್ ನೀಡಿದೆ. ₹2,399 ವಾರ್ಷಿಕ ಪ್ಲಾನ್ ಮೇಲೆ ಹೆಚ್ಚುವರಿ ವ್ಯಾಲಿಡಿಟಿ ಘೋಷಿಸಿದೆ. ಆಗಸ್ಟ್ 12 ರಿಂದ ಸೆಪ್ಟೆಂಬರ್ 12, 2026ರ ನಡುವೆ ರೀಚಾರ್ಜ್ ಮಾಡುವವರಿಗೆ 365 ದಿನಗಳ ಬದಲು 412 ದಿನಗಳ (ಹೆಚ್ಚುವರಿ 47 ದಿನ) ವ್ಯಾಲಿಡಿಟಿ ಸಿಗಲಿದೆ. ಈ ಪ್ಲಾನ್‌ನಲ್ಲಿ ದಿನಕ್ಕೆ 2 GB ಡೇಟಾ, 100 ಎಸ್‌ಎಂಎಸ್ ಮತ್ತು ಅನ್‌ಲಿಮಿಟೆಡ್ ಕರೆಗಳು ಲಭ್ಯ.
BSNL ಘೋಷಿಸಿರುವ ಈ ಎರಡೂ ವಿಶೇಷ ಆಫರ್‌ಗಳು ಸೀಮಿತ ಅವಧಿಗೆ ಮಾತ್ರ ಲಭ್ಯ. 1 ರೂಪಾಯಿಯ 'ಫ್ರೀಡಂ ಪ್ಲಾನ್' ಮತ್ತು ₹2,399 ಪ್ಲಾನ್ ಮೇಲಿನ ಹೆಚ್ಚುವರಿ ವ್ಯಾಲಿಡಿಟಿ ಆಫರ್ ಸೆಪ್ಟೆಂಬರ್ 12, 2026ರವರೆಗೆ ಮಾತ್ರ ಇರಲಿದೆ. 4G ಸೇವೆ ವಿಸ್ತರಿಸುತ್ತಿರುವ ಈ ಸಮಯದಲ್ಲಿ, ಹೊಸ ಗ್ರಾಹಕರನ್ನು ಸೆಳೆಯಲು BSNL ಈ ಆಫರ್‌ಗಳನ್ನು ತಂದಿದೆ.
ಒಟ್ಟಾರೆಯಾಗಿ ಬಿಎಸ್‌ಎನ್‌ಎಲ್ ಘೋಷಿಸಿರುವ ಈ ಭರ್ಜರಿ ಪ್ಲಾನ್ ಪ್ರತಿಸ್ಪರ್ಧಿ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ ಹಾಗೂ ಏರ್‌ಟೆಲ್‌ನ ನಿದ್ದೆಕೆಡಿಸಿರುವುದಂತೂ ಸುಳ್ಳಲ್ಲ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.