ಮನೆ ಇರೋರು ಎಲ್ಲರೂ ಹಿಡಿ ಬಳಸ್ತಾರೆ, ವ್ಯಾಪಾರ ಆಗೋದು ಪಕ್ಕಾ

By Suvarna NewsFirst Published Jan 3, 2023, 2:56 PM IST
Highlights

ಬ್ಯುಸಿನೆಸ್ ಮಾಡ್ಬೇಕು ಅಂದಾಗ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಗೊಂದಲವಿರುತ್ತದೆ. ಸದಾ ಬೇಡಿಕೆಯಲ್ಲಿರುವ ಹಾಗೂ ಕಡಿಮೆ ಬಂಡವಾಳದ ಬ್ಯುಸಿನೆಸ್ ಒಳ್ಳೆಯದು. ಅದ್ರಲ್ಲಿ ಪೊರಕೆ ತಯಾರಿಸುವ ವ್ಯವಹಾರ ಕೂಡ ಸೇರಿದೆ.  
 

ಪ್ರತಿ ದಿನ ಬಳಕೆಯಾಗುವ ವಸ್ತುಗಳಲ್ಲಿ ಪೊರಕೆ ಕೂಡ ಒಂದು. ಮನೆ ಸ್ವಚ್ಛಗೊಳಿಸೋದ್ರಿಂದ ಹಿಡಿದು, ವ್ಯಾಪಾರದ ಸ್ಥಳ, ಕಚೇರಿ, ಬೀದಿಗಳನ್ನು ಕ್ಲೀನ್ ಮಾಡಲು ಪೊರಕೆ ಬಳಸ್ತೇವೆ. ಪೊರಕೆಗೆ ಬೇಡಿಕೆ ಹೆಚ್ಚಿದೆ. ನೀವೂ ವ್ಯಾಪಾರ ಶುರು ಮಾಡುವ ಪ್ಲಾನ್ ನಲ್ಲಿದ್ದರೆ ಪೊರಕೆ ಸಿದ್ಧಪಡಿಸುವ ವ್ಯವಹಾರ ಆರಂಭಿಸಬಹುದು. ಸದಾ ಬೇಡಿಕೆಯಲ್ಲಿರುವ ಹಾಗೂ ಕಡಿಮೆ ಖರ್ಚಿನಲ್ಲಿ ಶುರು ಮಾಡಬಹುದಾದ ವ್ಯವಹಾರ ಇದು. ನಾವಿಂದು ಪೊರಕೆ ವ್ಯಾಪಾರದ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

ಪೊರಕೆ (Broom) ವ್ಯಾಪಾರ ಶುರು ಮಾಡಲು ನೀವು ಪಟ್ಟಣದಲ್ಲಿ ಇರಬೇಕಾಗಿಲ್ಲ. ಹಳ್ಳಿಯಲ್ಲೂ ಪೊರಕೆ ವ್ಯಾಪಾರ (Business) ಮಾಡಬಹುದು. ನಿಮಗೆ ಯಾವುದೇ ತರಬೇತಿಯ ಅಗತ್ಯವಿರುವುದಿಲ್ಲ. ನಿಮ್ಮ ಮನೆಯಿಂದಲೇ ಪೊರಕೆ ತಯಾರಿಸಿ ನೀವೇ ಮಾರಾಟ (Sale ) ಮಾಡಬಹುದು. ಇದಲ್ಲದೆ ನೀವು ನಿಮ್ಮ ವ್ಯಾಪಾರವನ್ನು ಹೆಚ್ಚಿಸಲು ಬಯಸಿದರೆ ಸಾಕಷ್ಟು ಪೊರಕೆಗಳನ್ನು ತಯಾರಿಸಿ ಅದನ್ನು ಸಣ್ಣ ವ್ಯಾಪಾರಿಗಳಿಗೆ ಮಾರಾಟ ಮಾಡಬಹುದು. 

ಕನಿಷ್ಠ ಹೂಡಿಕೆ, ಗರಿಷ್ಠ ಗಳಿಕೆಗೆ ಇರುವ 5 ಮಾರ್ಗಗಳು ಇವೇ ನೋಡಿ!

ಪೊರಕೆ ವ್ಯಾಪಾರ ಶುರು ಮಾಡೋದು ಹೇಗೆ? :  ಪೊರಕೆ ಮಾಡುವ ವ್ಯವಹಾರವನ್ನು ಪ್ರಾರಂಭಿಸಲು ಹೆಚ್ಚಿನ ಬಂಡವಾಳವನ್ನು ಹೂಡಿಕೆ ಮಾಡಬೇಕಾಗಿಲ್ಲ. ಇದಕ್ಕಾಗಿ ಯಾವುದೇ ವಿಶೇಷ ಸ್ಥಳದ ಅಗತ್ಯವಿಲ್ಲ. ಕಡಿಮೆ ಬಂಡವಾಳ ಮತ್ತು ಕಡಿಮೆ ಸ್ಥಳಾವಕಾಶದ ವ್ಯಾಪಾರಕ್ಕೆ ಇದು ಒಳ್ಳೆಯದು. ಕೆಲಸ (Work) ಕ್ಕೆ ಕೆಲವರನ್ನು ನೇಮಿಸಿಕೊಳ್ಳುವ ಮೂಲಕ ನೀವು ಪೊರಕೆ ಸಿದ್ಧಪಡಿಸಬಹುದು. ಹೆಚ್ಚು ಪೊರಕೆ ಸಿದ್ಧ ಮಾಡ್ತಿರಿ ಎಂದಾದ್ರೆ ಯಂತ್ರವನ್ನು ಬಳಸಿ. ಪೊರಕೆ ತಯಾರಿಸುವ ಯಂತ್ರವನ್ನು ನೀವು ಸ್ಥಳೀಯ ಮಾರುಕಟ್ಟೆ ಅಥವಾ ಆನ್ಲೈನ್ ನಲ್ಲಿ ಖರೀದಿ ಮಾಡಬಹುದು. ನಾನಾ ರೀತಿಯ ಪೊರಕೆ ಲಭ್ಯವಿದ್ದು, ನಿಮಗೆ ಅನುಕೂಲವಾಗುವ ಪೊರಕೆ ತಯಾರಿಸಿ ಮಾರಾಟ ಮಾಡಿ.

ಪೊರಕೆ ವ್ಯಾಪಾರಕ್ಕೆ ನೋಂದಣಿ ಅಗತ್ಯವೇ? : ಪೊರಕೆ ತಯಾರಿಕೆ ವ್ಯಾಪಾರವು ಸಣ್ಣ ವ್ಯಾಪಾರದ ಅಡಿಯಲ್ಲಿ ಬರುತ್ತದೆ. ಹಾಗಾಗಿ ನೀವು ಗ್ರಾಮದಲ್ಲಿ ಸಣ್ಣ ಪ್ರಮಾಣದಲ್ಲಿ ಈ ವ್ಯವಹಾರವನ್ನು ಮಾಡುತ್ತಿದ್ದರೆ ಯಾವುದೇ ನೋಂದಣಿ ಅಗತ್ಯವಿಲ್ಲ. ನೋಂದಣಿ ಇಲ್ಲದೆ ನೀವು ಈ ಕೆಲಸವನ್ನು ಮಾಡಬಹುದು. ಆದರೆ ಈ ವ್ಯವಹಾರವನ್ನು ದೊಡ್ಡ ಪ್ರಮಾಣದಲ್ಲಿ ಮಾಡಲು ಬಯಸಿದರೆ ಅಥವಾ ಸಗಟು ವ್ಯಾಪಾರಿಯಾಗಲು ಬಯಸಿದರೆ  ಸಣ್ಣ ಉದ್ಯಮದ ಅಡಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಇದರೊಂದಿಗೆ ನಿಮ್ಮ ಲಾಭವನ್ನು ಪರಿಗಣಿಸಿ, ಜಿಎಸ್ಟಿ ನೋಂದಣಿಯನ್ನು ಸಹ ಮಾಡಿಸಬೇಕು.

ಪೊರಕೆ ವ್ಯಾಪಾರಕ್ಕೆ ಖರ್ಚು : ದೊಡ್ಡ ಪ್ರಮಾಣದಲ್ಲಿ ನೀವು ಪೊರಕೆ ವ್ಯಾಪಾರ ಶುರು ಮಾಡ್ತಿದ್ದರೆ ಯಂತ್ರ ಅಗತ್ಯ.  ಯಂತ್ರ ಮತ್ತು ದಾರದಂತಹ ವಸ್ತುಗಳನ್ನು ಖರೀದಿಸಬೇಕಾಗುತ್ತದೆ.  ಯಂತ್ರಕ್ಕಾಗಿ ಸುಮಾರು 20 ಸಾವಿರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಹಳ್ಳಿಯಲ್ಲಾದ್ರೆ ಕಚ್ಚಾ ವಸ್ತುಗಳು ಸುಲಭವಾಗಿ ಸಿಗುತ್ತವೆ. ಪಟ್ಟಣದಲ್ಲಿ ಸ್ವಲ್ಪ ಖರ್ಚು ಹೆಚ್ಚು. ಅಲ್ಲಿ ನೀವು ಸುಮಾರು ಒಂದು ಲಕ್ಷ ರೂಪಾಯಿ ಹೂಡಿಕೆ ಮಾಡಬೇಕು.  

ನೀವಿನ್ನೂ ಆಧಾರ್ ಕಾರ್ಡ್ ಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡಿಲ್ವ? ಹಾಗಾದ್ರೆ ಈ ಸರಳ ವಿಧಾನ ಅನುಸರಿಸಿ

ಪೊರಕೆ ವ್ಯಾಪಾರದಿಂದಾಗುವ ಲಾಭ : ಪೊರಕೆ ತಯಾರಿಸುವ ವ್ಯವಹಾರದಲ್ಲಿ ಎಂದಿಗೂ ನಷ್ಟವಾಗುವುದಿಲ್ಲ. ಹಾಗೆ ಎಂದಿಗೂ ವ್ಯಾಪಾರ ನಿಲ್ಲುವುದಿಲ್ಲ. ಈ ವಸ್ತುಗಳು ಡೇಟ್ ಬಾರ್ ಆಗದ ಕಾರಣ ಅದನ್ನು ಎಷ್ಟು ದಿನ ಬೇಕಾದ್ರೂ ಇಡಬಹುದು. ಹಾಗಾಗಿ ಪೊರಕೆ ವ್ಯಾಪಾರದಲ್ಲಿ ಲಾಭ ಸಿಗುತ್ತದೆ. ಎಷ್ಟು ಪೊರಕೆ ತಯಾರಿಸುತ್ತೀರಿ ಮತ್ತು ಯಾವ ಪ್ರಮಾಣದಲ್ಲಿ ಈ ವ್ಯವಹಾರವನ್ನು ಮಾಡುತ್ತಿದ್ದೀರಿ ಎಂಬುದರ ಮೇಲೆ ಲಾಭ ನಿಂತಿದೆ. ನೀವು ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ಮಾಡುತ್ತಿದ್ದರೆ ಸುಲಭವಾಗಿ ತಿಂಗಳಿಗೆ ಸುಮಾರು 20-30 ಸಾವಿರ ಲಾಭವನ್ನು ನೀವು ಗಳಿಸಬಹುದು. ಒಂದೇ ವಿಧದ ಪೊರಕೆ ತಯಾರಿಸುತ್ತಿದ್ದರೆ ಲಾಭ ಕಡಿಮೆಯಾಗಬಹುದು. ಬಗೆ ಬಗೆಯ ಪೊರಕೆ ತಯಾರಿಸುತ್ತಿದ್ದರೆ ಲಾಭ ಹೆಚ್ಚಾಗಬಹುದು. ಹಾಗೆಯೇ ನಿಮ್ಮ ಮಾರಾಟ ವಿಧಾನ ಹಾಗೂ ಗುಣಮಟ್ಟ ಕೂಡ ಇಲ್ಲಿ ಮಹತ್ವ ಪಡೆಯುತ್ತದೆ. 
 

click me!