ಚೀನಾಗೆ ವಾರದ ಹಿಂದೆ ಟ್ರಂಪ್ ಹೇಳಿದ್ರಂತೆ: ಕೇಳಿ ಭಾರತ ಹೇಳಿದಂತೆ!

By Web DeskFirst Published Oct 14, 2018, 1:22 PM IST
Highlights

ಅಮೆರಿಕದೊಂದಿಗೆ ಹೊಂದಾಣಿಕೆಗೆ ಮುಂದಾಯ್ತಾ ಚೀನಾ?! ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿದ್ದು ನಿಜಾನಾ?! ಚೀನಾ-ಭಾರತ ಹತ್ತಿರವಾಗುವುದನ್ನು ತಪ್ಪಿಸುತ್ತಿದ್ದಾರಾ ಟ್ರಂಪ್?! ವಾರದ ಹಿಂದೆಯೇ ಹೊಂದಾಣಿಕೆಗೆ ಆಗ್ರಹಿಸಿತ್ತಂತೆ ಚೀನಾ
      

ವಾಷಿಂಗ್ಟನ್(ಅ.14): ವಿಶ್ವದ ಒಂದು ರಾಷ್ಟ್ರ ಮತ್ತೊಂದು ರಾಷ್ಟ್ರದ ಜೊತೆ ಯಾವುದೇ ಒಪ್ಪಂದಕ್ಕೆ ಮುಂದಾಗಿದ್ದೇ ತಡ, ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತಮ್ಮ ಮೂಗು ತೂರಿಸಿಯೇ ಬಿಡುತ್ತಾರೆ.

ಅಮೆರಿಕದೊಂದಿಗೆ ವಾಣಿಜ್ಯ ಯುದ್ಧದಲ್ಲಿ ತೊಡಗಿ ತುಸು ಹೈರಾಣಾಗಿರುವ ಚೀನಾ, ನಾವಿಬ್ಬರು ಅಣ್ತಮ್ಮ, ಒಂದಾಗಿ ದೊಡ್ಡ ಶಕ್ತಿಯಾಗಿ ಬೆಳೆಯೋಣ ಅಂತಾ ಭಾರತದ ಮುಂದೆ ಅಂಗಲಾಚುತ್ತಿದೆ.

ಈ ವಿಷಯ ಗೊತ್ತಾಗಿದ್ದೇ ತಡ ಮತ್ತೆ ಟ್ರಂಪ್ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ. ವಾಣಿಜ್ಯ ಯುದ್ಧಕ್ಕೆ ಹೈರಾಣಾಗಿ ಚೀನಾ ವಾರದ ಹಿಂದೆಯೇ ಹೊಂದಾಣಿಕೆಯ ಪ್ರಸ್ತಾವವನ್ನು ತಮ್ಮ ಮುಂದೆ ಇರಿಸಿತ್ತು ಎಂದು ಹೇಳಿದ್ದಾರೆ.

ವಾರದ ಹಿಂದೆಯೇ ಚೀನಾ ಪರಸ್ಪರ ಹೊಂದಾಣಿಕೆಯ ಪ್ರಸ್ತಾವ ಇರಿಸಿದ್ದು, ಇದಕ್ಕೆ ತಾನು ಸ್ಪಷ್ಟವಾಗಿ ನಿರಾಕರಿಸಿದ್ದಾಗಿ ಟ್ರಂಪ್ ಹೇಳಿದ್ದಾರೆ. ಹೊಂದಾಣಿಕೆ ಮಾಡಿಕೊಳ್ಳುವಂತ ಗಾಂಭೀರ್ಯತೆ ನಿಮಗಿಲ್ಲ ಎಂದು ಚೀನಾಗೆ ತಿರುಗೇಟು ನೀಡಿದ್ದಾಗಿ ಅವರು ಹೇಳಿದ್ಧಾರೆ.

ಅಮೆರಿಕ-ಚೀನಾ ನಡುವಿನ ವಾಣಿಜ್ಯ ಒಪ್ಪಂದ ಅನ್ಯಾಯದಿಂದ ಕೂಡಿದ್ದು, ಇದು ಸರಿಯಾಗುವವರೆಗೂ ಚೀನಾದೊಂದಿಗೆ ಹೊಂದಾಣಿಕೆಯ ಮಾತೇ ಇಲ್ಲ ಎಂದು ಟ್ರಂಪ್ ನುಡಿದಿದ್ದಾರೆ.

ಇದೇ ಕಾರಣಕ್ಕೆ ಟ್ರಂಪ್ ಆಡಳಿತ ಚೀನಾದಿಂದ ಆಮದಾಗುವ 250 ಬಿಲಿಯನ್ ಮೊತ್ತದ ಉತ್ಪನ್ನಗಳಿಗೆ ಅಧಿಕ ತೆರಿಗೆ ವಿಧಿಸಿತ್ತು. ಇದನ್ನು ವಿರೋಧಿಸಿ ಚೀನಾ ಕೂಡ ಅಮೆರಿಕದ ಮೇಲೆ ಆಮದು ಸುಂಕ ಹೆಚ್ಚಳ ಮಾಡಿತ್ತು.

ಇನ್ನು ಟ್ರಂಪ್ ಉದ್ದೇಶಪೂರ್ವಕವಾಗಿ ಈ ಹೇಳಿಕೆ ನೀಡಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಚೀನಾ ತನ್ನ ನೆರೆ ರಾಷ್ಟ್ರ ಭಾರತದೊಂದಿಗೆ ವಾಣಿಜ್ಯ ಒಪ್ಪಂದಕ್ಕೆ ಮುಂದಾಗಿದ್ದು, ಇದನ್ನು ತಡೆಯಲು ಟ್ರಂಪ್ ಹೀಗೆ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

click me!