ಹೇರ್ ಸ್ಟೈಲ್ ನಿರ್ವಹಣೆಗೂ ನೌಕರನ ನೇಮಿಸಿಕೊಂಡಿರುವ ನೀತಾ ಅಂಬಾನಿ;ದುಡ್ಡಿದ್ರೆ ಏನೂ ಮಾಡ್ಬಹುದೆಂದ ನೆಟ್ಟಿಗರು

By Anusha Shetty  |  First Published Jun 2, 2024, 11:57 AM IST

ನೀತಾ ಅಂಬಾನಿ ಧರಿಸುವ ಬಟ್ಟೆಯಿಂದ ಹಿಡಿದು ವಾಚ್ ತನಕ ಪ್ರತಿಯೊಂದು ವಸ್ತುವೂ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಈಗ ನೀತಾ ಅಂಬಾನಿ ತಮ್ಮ ಹೇರ್ ಸ್ಟೈಲ್ ಹಾಳಾಗದಂತೆ ನೋಡಿಕೊಳ್ಳುವುದಕೋಸ್ಕರ ಒಬ್ಬ ನೌಕರನನ್ನು ಹೊಂದಿದ್ದಾರೆ ಎಂಬ ಅರ್ಥದ ವಿಡಿಯೋವೊಂದು ವೈರಲ್ ಆಗಿದೆ.  
 


ಮುಖೇಶ್ ಅಂಬಾನಿ ಕುಟುಂಬ ಏನ್ ಮಾಡಿದ್ರೂ ಅದು ದೊಡ್ಡ ಸುದ್ದಿನೇ. ಈಗಂತೂ ಸೋಷಿಯಲ್ ಮೀಡಿಯಾದಲ್ಲಿ ಅಂಬಾನಿ ಕುಟುಂಬದವರದ್ದೇ ಫೋಟೋಗಳು, ವಿಡಿಯೋಗಳು. ನಿನ್ನೆಯಷ್ಟೇ (ಜೂ.1) ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಎರಡನೇ ಪ್ರೀವೆಡ್ಡಿಂಗ್ ಕಾರ್ಯಕ್ರಮ ಇಟಲಿಯ ಐಷಾರಾಮಿ ಕ್ರೂಸ್ ನಲ್ಲಿ ಮುಕ್ತಾಯವಾಗಿದೆ.  ಮೇ 29ರಿಂದ ಜೂನ್ 1ರ ತನಕ ಒಟ್ಟು ನಾಲ್ಕು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಅನೇಕ ಬಾಲಿವುಡ್ ತಾರೆಯರು, ವಿದೇಶಿ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು.  ಈ ನಡುವೆ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಅವರ ಕೆಲವು ದಿನಗಳ ಹಿಂದಿನ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸುತ್ತಿರುವ ನೀತಾ ಅವರ ಹೇರ್ ಸ್ಟೈಲ್ ಅನ್ನು ಒಬ್ಬ ವ್ಯಕ್ತಿ ಆಗಾಗ ಸರಿಪಡಿಸುತ್ತಿರೋದನ್ನು ಕಾಣಬಹುದು. ಅಂದ್ರೆ ಹೇರ್ ಸ್ಟೈಲ್ ಹಾಳಾಗದಂತೆ ನೋಡಿಕೊಳ್ಳಲು ಕೂಡ ನೀತಾ ಅಂಬಾನಿ ಅವರಿಗೆ ಒಬ್ಬ ನೌಕರನಿದ್ದಾನೆ. ಇದನ್ನು ನೋಡಿ ನೆಟ್ಟಿಗರು ದುಡ್ಡಿರೋರು ಮಾತ್ರ ಹೀಗೆಲ್ಲ ಮಾಡಲು ಸಾಧ್ಯ ಎಂದು ಕಾಮೆಂಟ್ ಮಾಡಿದ್ದಾರೆ.

ನೀತಾ ಅಂಬಾನಿ ವಯಸ್ಸು 60 ದಾಟಿದ್ದರೂ ಸೌಂದರ್ಯ ಮಾತ್ರ ಕುಂದಿಲ್ಲ. ಧರಿಸುವ ದಿರಿಸು, ಹೇರ್ ಸ್ಟೈಲ್, ಮೇಕಪ್, ಆಭರಣ ಹೀಗೆ ಪ್ರತಿಯೊಂದೂ ವಿಷಯಕ್ಕೂ ನೀತಾ ಸಾಕಷ್ಟು ಗಮನ ಹರಿಸುತ್ತಾರೆ. ಇನ್ನು ಅವರು ಧರಿಸುವ ದುಬಾರಿ ಬೆಲೆಯ ಸೀರೆ, ಡ್ರೆಸ್ ಗಳು, ನಕ್ಲೇಸ್, ವಾಚ್ ಗಳು ಸದಾ ಸುದ್ದಿಯಾಗುತ್ತಲೇ ಇರುತ್ತವೆ. ವಿವಿಧ ಕಾರ್ಯಕ್ರಮಗಳಲ್ಲಿ ಸ್ಟೈಲಿಷ್ ಆಗಿ ಕಾಣಿಸಿಕೊಳ್ಳುವ ನೀತಾ ಅಂಬಾನಿ ಸೌಂದರ್ಯದಲ್ಲಿ ಯಾವುದೇ ಬಾಲಿವುಡ್ ತಾರೆಯರಿಗಿಂತ ಕಡಿಮೆಯಿಲ್ಲ. 

 
 
 
 
 
 
 
 
 
 
 
 
 
 
 

Tap to resize

Latest Videos

A post shared by Mukesh Dhirubhai Ambani 🧿 (@mukeshambani.ril)

 

ಈ ವರ್ಷದ ಮಾರ್ಚ್ ನಲ್ಲಿ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ 'ವಿಶ್ವ ಸುಂದರಿ ಸ್ಪರ್ಧೆ 2024' ರಲ್ಲಿ ಪಾಲ್ಗೊಳ್ಳು ನೀತಾ ಅಂಬಾನಿ ಆಗಮಿಸಿದ್ದರು. ಆ ಸಂದರ್ಭದಲ್ಲಿ ಅವರ ಕೂದಲನ್ನು ಒಬ್ಬ ವ್ಯಕ್ತಿ ಆಗಾಗ ಸರಿಪಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಬಹುತೇಕರು ದುಡ್ಡಿರೋರು ಮಾತ್ರ ಹೀಗೆಲ್ಲ ಮಾಡಲು ಸಾಧ್ಯ ಎಂದಿದ್ದಾರೆ. ಇನ್ನೂ ಕೆಲವರು ಅವರ ದುಡ್ಡು, ಅವರಿಗೆ ಇಷ್ಟ ಬಂದಂತೆ ಮಾಡ್ತಾರೆ, ಉಳಿವರಿಗೇನು ಕಷ್ಟ ಎಂದು ಕೇಳಿದ್ದಾರೆ ಕೂಡ.

ಅಂದಹಾಗೇ ಮಾರ್ಚ್ ನಲ್ಲಿ ನಡೆದ 'ವಿಶ್ವ ಸುಂದರಿ ಸ್ಪರ್ಧೆ 2024' ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಅವರಿಗೆ ಮಿಸ್ ವರ್ಲ್ಡ್ ಫೌಂಡೇಷನ್ ವತಿಯಿಂದ ನೀಡುವ 'ಮಾನವತಾವಾದಿ' ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ದಾನ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ನೀತಾ ಅಂಬಾನಿ ಅವರ ಕಾರ್ಯಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿತ್ತು. ಇನ್ನು ಈ ಸಂದರ್ಭದಲ್ಲಿ ನೀತಾ ಅಂಬಾನಿ ಧರಿಸಿದ್ದ ಸೀರೆ ಬಗ್ಗೆ ಕೂಡ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಕಪ್ಪು ವರ್ಣದ ಬನಾರಸಿ ಜಂಗ್ಲ ಸೀರೆ ಧರಿಸಿದ್ದ ನೀತಾ ಅಂಬಾನಿಗೆ 60 ವರ್ಷ ಅಂದ್ರೆ ಯಾರೂ ನಂಬೋದು ಕಷ್ಟ ಅನ್ನುವಷ್ಟು ಮುದ್ದಾಗಿ ಕಾಣಿಸಿದ್ದರು. ಈ ಸೀರೆ ಬಗ್ಗೆ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ನಡೆದಿತ್ತು. 

ಅನಂತ್ ರಾಧಿಕಾ ಮದುವೆ; ವೈರಲ್ ಆಯ್ತು ಮುಖೇಶ್ ಮತ್ತು ನೀತಾ ಅಂಬಾನಿಯ 1984ರ ಸರಳ ವಿವಾಹದ ಫೋಟೋಗಳು..

ನೀತಾ ಅಂಬಾನಿ ಅವರು ರಿಲಯನ್ಸ್ ಫೌಂಡೇಷನ್ ಮೂಲಕ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಂಸ್ಥೆ ಮೂಲಕ ಸಾಕಷ್ಟು ದಾನವನ್ನು ಕೂಡ ಅವರು ಮಾಡುತ್ತಿದ್ದಾರೆ. ಇನ್ನು ನೀತಾ ಅಂಬಾನಿ ಆಗಾಗ ಅದ್ದೂರಿ ಪಾರ್ಟಿಗಳನ್ನು ಕೂಡ ಆಯೋಜಿಸುತ್ತಿರುತ್ತಾರೆ. ಇದರಲ್ಲಿ ಬಾಲಿವುಡ್ ತಾರೆಯರು ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಭಾಗವಹಿಸುತ್ತಾರೆ ಕೂಡ. ಅವರ ಈ ಅದ್ದೂರಿ ಪಾರ್ಟಿಗಳು ಕೂಡ ಸುದ್ದಿಯಾಗುತ್ತಲೇ ಇರುತ್ತವೆ. 

click me!