ಏಷ್ಯಾದ ಟಾಪ್ 20 ಶ್ರೀಮಂತ ಕುಟುಂಬ ಪಟ್ಟಿಯಲ್ಲಿ 6 ಭಾರತೀಯರು, ಮೊದಲ ಸ್ಥಾನ ಯಾರಿಗೆ?

Published : Feb 13, 2025, 05:32 PM ISTUpdated : Feb 13, 2025, 05:33 PM IST
ಏಷ್ಯಾದ ಟಾಪ್ 20 ಶ್ರೀಮಂತ ಕುಟುಂಬ ಪಟ್ಟಿಯಲ್ಲಿ 6 ಭಾರತೀಯರು, ಮೊದಲ ಸ್ಥಾನ ಯಾರಿಗೆ?

ಸಾರಾಂಶ

ಏಷ್ಯಾದ ಟಾಪ್ 20 ಶ್ರೀಮಂತ ಕುಟುಂಬ ಪಟ್ಟಿ ಬಿಡುಗಡೆಯಾಗಿದೆ. ಇದರಲ್ಲಿ 6 ಭಾರತೀಯರು ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಯಾರಿದ್ದಾರೆ? ಸ್ಥಾನ ಪಡೆದ 6 ಭಾರತೀಯರು ಯಾರು?

ನವದೆಹಲಿ(ಫೆ.13) ಭಾರತ ವಿಶ್ವದಲ್ಲಿ 5ನೇ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಇದೀಗ 3ನೇ ಆರ್ಥಿಕತೆಯಾಗುವತ್ತ ಹೆಜ್ಜೆ ಇಟ್ಟಿದೆ. ಭಾರತ ಮಾತ್ರವಲ್ಲ, ಭಾರತೀಯರೂ ಶ್ರೀಮಂತಿಕೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಹಲವು ಭಾರತೀಯರಿದ್ದಾರೆ. ವಿಶೇಷ ಅಂದರೆ ಇದೀಗ ಏಷ್ಯಾದ 20 ಶ್ರೀಮಂತ ಕುಟುಂಬದ ಪಟ್ಟಿ ಪ್ರಕಟಗೊಂಡಿದೆ. ಬ್ಲೂಮ್‌ಬರ್ಗ್ ಈ ಶ್ರೀಮಂತ ಕುಟುಂಬದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿಶೇಷ ಅಂದರೆ ಏಷ್ಯಾದ ಅತೀ ಶ್ರೀಮಂತ 20 ಕುಟುಂಬಗಳ ಪಟ್ಟಿಯಲ್ಲಿ ಮೊದಲ ಸ್ಥಾನವ್ನು ಅಂಬಾನಿ ಕುಟುಂಬ ಆಕ್ರಮಿಸಿಕೊಂಡಿದೆ.  ಅಂಬಾನಿ ಕುಟುಂಬದ ಜೊತೆ ಒಟ್ಟು 6 ಭಾರತೀಯ ಕುಟುಂಬಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಕುಟುಂಬಗಳು
ಅಂಬಾನಿ ಕುಟುಂಬ, ರಿಲಯನ್ಸ್ ಗ್ರೂಪ್ ಬ್ಯೂಸಿನೆಸ್(ಭಾರತ)
ಮಿಸ್ತ್ರಿ ಕುಟುಂಬ, ಶಪೂರ್ಜಿ ಪಲೋಂಜಿ, ಟಾಟಾ ಸನ್ಸ್(ಭಾರತ)
ಜಿಂದಾಲ್, ಒಪಿ ಜಿಂದಾಲ್ ಗ್ರೂಪ್(ಭಾರತ)
ಬಿರ್ಲಾ, ಆದಿತ್ಯ ಬಿರ್ಲಾ ಗ್ರೂಪ್(ಭಾರತ)
ಬಜಾಜ್, ಬಜಾಜ್ ಗ್ರೂಪ್(ಭಾರತ)
ಹಿಂದುಜಾ,ಹಿಂದೂಜ ಗ್ರೂಪ್(ಭಾರತ)

ಈತನ ಆಸ್ತಿ ಮುಂದೆ ಮಸ್ಕ್, ಅಂಬಾನಿ ಲೆಕ್ಕಕ್ಕಿಲ್ಲ, ಆದರೂ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನವಿಲ್ಲ

ಭಾರತದ 6 ಕುಟುಂಬಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ವಿಶೇಷ ಅಂದರೆ ಭಾರತದ ಗರಿಷ್ಠ ಕುಟುಂಬಗಳ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇನ್ನು ಹಾಂಗ್‌ಕಾಂಗ್ ದೇಶದ ನಾಲ್ಕು ಕುಟುಂಬಗಳು ಈ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಅತೀ ದೊಡ್ಡ ಆರ್ಥಿಕತೆ, ವಹಿವಾಟು, ಉತ್ಪಾದನಾ ವಲಯವಾಗಿ ಗುರುತಿಸಿಕೊಂಡಿರುವ ಚೀನಾದಲ್ಲಿ ಶ್ರೀಮಂತ ಕುಟುಂಬ ಕಡಿಮೆ ಇದೆ.  ಈ ಪಟ್ಟಿಯಲ್ಲಿ ಚೀನಾದ ಕೇವಲ ಒಂದು ಕುಟುಂಬ ಮಾತ್ರ ಸ್ಥಾನ ಪಡೆದಿದೆ. 

ಏಷ್ಯಾದ ಟಾಪ್ 20 ಶ್ರೀಮಂತ ಕುಟುಂಬ
ಅಂಬಾನಿ ಕುಟುಂಬ, ರಿಲಯನ್ಸ್ ಗ್ರೂಪ್ ಬ್ಯೂಸಿನೆಸ್(ಭಾರತ)
ಚೀರವನೊಂಟ್ಸ್ ಕುಟುಂಬ, ಚರೊಯೆನ್ ಪೋಕ್‌ಫಂಡ್ ಗ್ರೂಪ್(ಥಾಯ್ಲೆಂಡ್)
ಹರ್ಟೊನೊಸ್ ಕುಟುಬಂ, ಡಿಜರುಮ್ ಬ್ಯಾಂಕ್ ಸೆಂಟ್ರಲ್ ಏಷ್ಯ(ಇಂಡೋನೇಷಿಯಾ)
ಮಿಸ್ತ್ರಿ ಕುಟುಂಬ, ಶಪೂರ್ಜಿ ಪಲೋಂಜಿ, ಟಾಟಾ ಸನ್ಸ್(ಭಾರತ)
ಕ್ವೋಕ್ಸ್, ಸನ್ ಹಂಗ್ ಕೈಪ್ರಾಪರ್ಟಿಸ್(ಹಾಂಗ್‌ಕಾಂಗ್)
ತ್ಸಯಿ, ಕ್ಯಾಥೆ ಫಿನಾನ್ಶಿಯಲ್(ತೈವಾನ್)
ಜಿಂದಾಲ್, ಒಪಿ ಜಿಂದಾಲ್ ಗ್ರೂಪ್(ಭಾರತ)
ಯುವಿಧ್ಯಾಸ್, ಟಿಸಿಪಿ ಗ್ರೂಪ್ -ರೆಡ್ ಬುಲ್(ಥಾಯ್ಲೆಂಡ್)
ಬಿರ್ಲಾ, ಆದಿತ್ಯ ಬಿರ್ಲಾ ಗ್ರೂಪ್(ಭಾರತ)
ಲೀಸ್, ಸ್ಯಾಮ್‌ಸಂಗ್ (ದಕ್ಷಿಣ ಕೊರಿಯಾ)
ಝಾಂಗ್ಸ್, ಚೀನಾ ಹಂಗ್‌ಕ್ವಿಯೋ(ಚೀನಾ)
ಚೆಂಗ್ಸ್, ನ್ಯೂ ವರ್ಲ್ಡ್ ಡೆವಲಪ್‌ಮೆಂಟ್(ಹಾಂಗ್‌ಕಾಂಗ್)
ಬಜಾಜ್, ಬಜಾಜ್ ಗ್ರೂಪ್(ಭಾರತ)
ಪಾವೋ, ವೂವ್ಸ್, BW ಗ್ರೂಪ್(ಹಾಂಗ್‌ಕಾಂಗ್)
ಕ್ವೀಕ್, ಹಾಂಗ್ ಲೆಂಗ್ ಗ್ರೂಪ್(ಸಿಂಗಾಪುರ)
ಕದೂರೀಸ್, ಸಿಎಲ್‌ಪಿ ಹೋಲ್ಡಿಂಗ್ಸ್(ಹಾಂಗ್‌ಕಾಂಗ್)
ಚಿರತಿವ್ಯಾಟ್ಸ್, ಸೆಂಟ್ರಲ್ ಗ್ರೂಪ್(ಥಾಯ್ಲೆಂಡ್)
ಹಿಂದುಜಾ,ಹಿಂದೂಜ ಗ್ರೂಪ್(ಭಾರತ)
ಸೈಸ್, ಎಸ್ಎಂ ಇನ್‌ವೆಸ್ಟ್‌ಮೆಂಟ್(ಪಿಲಿಫೈನ್ಸ್)

ಅತಿ ಹೆಚ್ಚು ಆಸ್ತಿ ಹೊಂದಿರುವ ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿ ಇಲ್ಲಿದೆ ನೋಡಿ!
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Gold Silver Price Today: ಚಿನ್ನದ ದರದಲ್ಲಿ ಏರಿಕೆನಾ? ಇಳಿಕೆನಾ?
ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ