ದಕ್ಷಿಣ ಕನ್ನಡದ ಪುಟ್ಟ ಊರಿನಲ್ಲಿ ಆರಂಭಿಸಿದ ಬಿಂದು ಜೀರಾ ಮಸಾಲ ಡ್ರಿಂಕ್ ಇದೀಗ ಭಾರತದ ಅತೀ ದೊಡ್ಡ ಸಾಫ್ಟ್ ಡ್ರಿಂಕ್ ಬೆವರೇಜ್ ಕಂಪನಿಗಳಲ್ಲಿ ಒಂದಾಗಿದೆ. ಆಟೋ ಡ್ರೈವರ್ ಆಗಿದ್ದ ಬಿಂದು ಕಂಪನಿ ಮಾಲೀಕ ಇದೀಗ ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು ಖರೀದಿಸಿದ್ದಾರೆ. ಇದರ ಬೆಲೆ, ಮಾಲೀಕನ ಸ್ಫೂರ್ತಿಯ ಪಯಣ ಇಲ್ಲಿದೆ.
ಮಂಗಳೂರು(ಮಾ.17) ಭಾರತದ ಯಾವುದೇ ಪ್ರದೇಶವಾಗಲಿ, ಹೆಚ್ಚಿನ ಶ್ರೀಮಂತರೇ ಇರುವ ನಗರವಾಗಲಿ ರೋಲ್ಸ್ ರಾಯ್ಸ್ ಕಾರುಗಳು ಕಾಣ ಸಿಗವುದು ವಿರಳ. ಇದನ್ನು ಖರೀದಿಸುವುದು ಮಾತ್ರವಲ್ಲ, ನಿರ್ವಹಣೆ ಮಾಡಲು ಶ್ರೀಮಂತರಾದರೆ ಮಾತ್ರ ಸಾಲದು ಆಗರ್ಭ ಶ್ರೀಮಂತಿಕೆ ಬೇಕು. ಆದರೆ ಇದೀಗ ಕರ್ನಾಟಕ ಪುಟ್ಟ ಊರಾದ ಪುತ್ತೂರಿನಲ್ಲಿ ಹೊಚ್ಚ ಹೊಸ ರೋಲ್ಸ್ ರಾಯ್ಸ್ ಕಾರು ರಸ್ತೆಯಲ್ಲಿ ಕಾಣಸಿಗುತ್ತಿದೆ. ಇದು ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು. ಈ ಕಾರಿನ ಮಾಲೀಕ ಬೇರೆ ಯಾರು ಅಲ್ಲ, ಒನ್ ಅ್ಯಂಡ್ ಒನ್ಲಿ ಬಿಂದು ಜೀರಾ ಮಸಾಲಾ ಡ್ರಿಂಕ್ ಕಂಪನಿಯ ಮಾಲೀಕ ಸತ್ಯ ಶಂಕರ್.
ಆಟೋ ಡ್ರೈವರ್ ಆಗಿದ್ದ ಸತ್ಯ ಶಂಕರ್ ಎಸ್‌ಜಿ ಗ್ರೂಪ್ ಸಂಸ್ಥೆ ಕಟ್ಟಿ ನೂರಾರು ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದ್ದಾರೆ. ಇದೀಗ ಸತ್ಯ ಶಂಕರ್ ಕಂಪನಿ 850 ಕೋಟಿ ರೂಪಾಯಿಗೂ ಅಧಿಕ ಮೌಲ್ಯ ಹೊಂದಿದೆ. ಆಟೋ ಡ್ರೈವರ್ ಆಗಿದ್ದ ಸತ್ಯ ಶಂಕರ್ ಇತ್ತೀಚೆಗೆ ಅತೀ ದುಬಾರಿ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು ಖರೀದಿಸಿದ್ದಾರೆ. ಕರ್ನಾಟಕದಲ್ಲಿ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರಿನ ಆನ್ ರೋಡ್ ಬೆಲೆ ಸರಿಸುಮಾರು 11.30 ಕೋಟಿ ರೂಪಾಯಿ.
ರೋಲ್ಸ್ ರಾಯ್ಸ್ ಕಾರು ಖರೀದಿಗೆ ಹಣವಿದ್ರೆ ಸಾಕಾ? ಷರತ್ತಿಗೆ ಬದ್ಧವಾಗಿರ್ಬೇಕಾ?
ಸತ್ಯ ಶಂಕರ್ ತಮ್ಮ ಪತ್ನಿ ಜೊತೆಯಲ್ಲಿ ತೆರಳಿ ಕಾರು ಡೆಲಿವರಿ ಪಡೆದುಕೊಂಡಿದ್ದಾರೆ. ವಿಶೇಷ ಅಂದರೆ ಸತ್ಯ ಶಂಕರ್ ಎಲಿಗೆಂಟ್ ಕಲರ್ ಆಯ್ಕೆ ಮಾಡಿದ್ದಾರೆ. ಇಂಟಿರಿಯರ್ ಬರ್ಗುಂಡಿ ಬಣ್ಣದಲ್ಲಿದೆ. ಅತ್ಯಾಕರ್ಷಕ, ಐಷಾರಾಮಿತನದ ಈ ಕಾರು ಇದೀಗ ಪುತ್ತೂರಿನಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಸತ್ಯ ಶಂಕರ್ ಕೆ ಈ ಕಾರನ್ನು ಕಸ್ಟಮೈಸ್ಡ್ ಆರ್ಡರ್ ಮಾಡಿದ್ದಾರೆ. ಹೀಗಾಗಿ ಈ ಕಾರಿನಲ್ಲಿ ಸತ್ಯ ಶಂಕರ್ ಅವರ ನೇಮ್ ಕ್ಲೂಡ ಸೇರಿದೆ.
ಬಿಂದು ಜೀರಾ ಮಸಾಲಾ ಡ್ರಿಂಕ್ ಬಹುತೇಕರು ಕುಡಿದು ಆನಂದಿಸಿದ್ದಾರೆ. ಜೀರಿಗೆಯಿಂದ ತಯಾರಿಸಿದ ಈ ಮಸಾಲಾ ಡ್ರಿಂಕ್ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿದೆ. ಬಡ ಕುಟುಂಬದಲ್ಲಿ ಹುಟ್ಟಿದ ಸತ್ಯ ಶಂಕರ್ ಇದೀಗ ಕೋಟ್ಯಾಧಿಪತಿಯಾಗಿದ್ದಾರೆ. ಬಿಂದು ಜೀರಾ ಮಸಾಲಾ ಮೂಲಕ ಉದ್ಯಮ ಸಾಮ್ರಾಜ್ಯದಲ್ಲಿ ದಿಟ್ಟ ಹೆಜ್ಜೆ ಇಟ್ಟ ಸತ್ಯ ಶಂಕರ್ ಕೆ, ಬಿಂದು ಮಿನರಲ್ ವಾಟರ್, ಸಿಪ್ಪಾನ್ ಸೇರಿದಂತೆ ಹಲವು ಪಾನೀಯಗಳನ್ನು ತಮ್ಮ ಎಸ್‌ಜಿ ಗ್ರೂಪ್ ಅಡಿಯಲ್ಲಿ ಹೊರ ತಂದಿದ್ದಾರೆ. ಇದರ ಜೊತೆಗೆ ಹಲವು ತಿನಿಸುಗಳನ್ನು, ಉತ್ಪನ್ನಗಳನ್ನು ಹೊರತಂದಿದ್ದಾರೆ.
ಕಡು ಬಡತನದಲ್ಲಿ ಬೆಳೆದ ಸತ್ಯ ಶಂಕರ್ ಪಿಯುಸಿ ಬಳಿಕ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗಲಿಲ್ಲ. ಶಾಲಾ ಫೀಸು ಕಟ್ಟುವುದೇ ಅತ್ಯಂತ ದೊಡ್ಡ ಸವಾಲಾಗಿತ್ತು, ಇನ್ನು ಕಾಲೇಜು ಫೀಸು ದೂರದ ಮಾತಾಗಿತ್ತು. ಹೀಗಾಗಿ ಸತ್ಯ ಶಂಕರ್ ಕೆ, ಆಟೋ ರಿಕ್ಷಾ ಚಾಲನೆ ಕಲಿತು, ಆಟೋ ಓಡಿಸಲು ನಿರ್ಧರಿಸಿದ್ದರು. ಇದಕ್ಕಾಗಿ ಸರ್ಕಾರದ ಸ್ವಯಂ ಉದ್ಯೋಗ ಯೋಜನೆಯಡಿ ಸಾಲ ಪಡೆದು ಆಟೋ ರಿಕ್ಷಾ ಖರೀದಿಸಿದ್ದಾರೆ. ಆದರೆ ಸತ್ಯ ಶಂಕರ್ ಕೆ, ಕೇವಲ ಆಟೋ ಚಾಲಕನಾಗಿ ಉಳಿಯಲಿಲ್ಲ. ಸ್ವಂತ ಸಂಸ್ಥೆಯನ್ನೇ ಹುಟ್ಟು ಹಾಕಿ ಇದೀಗ ಕರ್ನಾಟಕಗ ಪ್ರಮುಖ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.
ಆಟೋ ದಿಂದ ಅಂಬಾಸಿಡರ್ ಕಾರಿನ ಮೂಲಕ ಟ್ಯಾಕ್ಸಿ ಸೇವೆ ನೀಡುತ್ತಿದ್ದ ಸತ್ಯ ಶಂಕರ್ ಹಂತ ಹಂತವಾಗಿ ಬೆಳೆದು ಬಂದಿದ್ದಾರೆ. ವಾಹನ ಬಿಡಿ ಭಾಗಗಳ ಮಾರಾಟ, ಟೈಯರ್ ಮಾರಾಟ, ಆಟೋಮೊಬೈಲ್ ಶಾಪ್ ತೆರೆದು ವ್ಯಾಪಾರ ಹೀಗೆ ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡರು. ಇದರ ಬೆನ್ನಲ್ಲೇ ಪ್ರವೀಣ್ ಕ್ಯಾಪಿಟಲ್ಸ್ ಆರಂಭಿಸಿ ಆಟೋಮೊಬೈಲ್ ಹಣಕಾಸು, ಸಾಲ ಸೌಲಭ್ಯ ನೀಡಲು ಮುಂದಾದರು. ಬಳಿಕ ಹಂತ ಹಂತವಾಗಿ ತಮ್ಮ ಉದ್ಯಮ ಬೆಳೆಸಿ ಇದೀಗ ಸಾವಿರ ಕೋಟಿ ರೂಪಾಯಿಗೂ ಅಧಿಕ ಒಡೆಯನಾಗಿದ್ದಾರೆ.
ಭಾರತದ ಈ ಕಾರು ರೋಲ್ಸ್ ರಾಯ್ಸ್ ಕಾರಿನಷ್ಟೇ ಸುರಕ್ಷಿತ, ಕೈಗೆಟುಕುವ ದರದಲ್ಲಿ ಲಭ್ಯ!