ಮಲ್ಯ ಸೇರಿ ಟಾಪ್ 30 ದೊಡ್ಡ ಸುಸ್ತಿದಾರರ ಹೆಸರು ಬಹಿರಂಗ| 4 ವರ್ಷಗಳ ಬಳಿಕ ಸುಪ್ರೀಂಕೋರ್ಟ್ ಆದೇಶ ಪಾಲಿಸಿದ ಆರ್‌ಬಿಐ
ನವದೆಹಲಿ[ನ.22]: ದೇಶದ ಬೃಹತ್ ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿಬಹಿರಂಗಪಡಿಸಬೇಕು ಎಂಬ ಸುಪ್ರೀಂಕೋರ್ಟ್ ಆದೇಶವನ್ನು 4 ವರ್ಷಗಳ ಬಳಿಕ ಆರ್‌ಬಿಐ ಪಾಲನೆ ಮಾಡಿದೆ. ಆರ್‌ಟಿಐ ಕಾಯ್ದೆಯಡಿ ಉದ್ದೇಶಪೂರ್ವಕ ಸುಸ್ತಿದಾರರ ಮಾಹಿತಿ ನೀಡಲು ಕೋರಿದ್ದ ಅರ್ಜಿಗೆ ಉತ್ತರಿಸಿರುವ ಆರ್‌ಬಿಐ, ಕರ್ನಾಟಕ ಮೂಲದ ಉದ್ಯಮಿ ವಿಜಯ್ ಮಲ್ಯ ನೇತೃತ್ವದ ಕಿಂಗ್‌ಫಿಶರ್ ವಿಮಾನಯಾನ ಸಂಸ್ಥೆ, ವಜ್ರೋದ್ಯಮಿ ಮೆಹುಲ್ ಚೋಕ್ಸಿಗೆ ಸೇರಿದ ಕಂಪನಿ ಸೇರಿದಂತೆ 30 ಕಂಪನಿಗಳು/ ವ್ಯಕ್ತಿಗಳ ಹೆಸರನ್ನು ಪ್ರಕಟಿಸಿದೆ.
undefined
ಈ ಹಿಂದೆ ಉದ್ದೇಶ ಪೂರ್ವಕ ಸುಸ್ತಿದಾರರ ಮಾಹಿತಿಯನ್ನು ಆರ್‌ಟಿಐ ಅಡಿ ಬಹಿರಂಗಪಡಿಸಲು ಕಳೆದ 10 ವರ್ಷಗಳಿಂದ ಆರ್‌ಬಿಐ ನಿರಾಕರಿಸುತ್ತಲೇ ಬಂದಿತ್ತು. ಈ ಮಾಹಿತಿ ಬಹಿರಂಗಪಡಿಸುವುದು ದೇಶದ ಆರ್ಥಿಕ ಹಿತಾಸಕ್ತಿಗೆ ವಿರುದ್ಧ ಮತ್ತು ವಿಶ್ವಾಸಾರ್ಹತೆಗೂ ಧಕ್ಕೆಯಾಗಲಿದೆ ಎಂಬ ನೆಪದೊಂದಿಗೆ ಆರ್‌ಬಿಐ ಈ ಮಾಹಿತಿ ನಿರಾಕರಿಸುತ್ತಿತ್ತು.
ಮಲ್ಯ ರೀತಿ ಸಿಬಲ್ ವಂಚನೆ: ಬರ್ಖಾದತ್ ಆರೋಪ
ಪ್ರಮಖ ಕಂಪನಿಗಳು: ಗೀತಾಂಜಲಿ ಜೆಮ್ಸ್ ಲಿ.(5044 ಕೋಟಿ ರು.), ರೀ ಆ್ಯಗ್ರೋ ಲಿ. (4197 ಕೋಟಿ ರು.), ವಿನ್ಸಮ್ ಡೈಮಂಡ್ಸ್ ಅಂಡ್ ಜ್ಯುವೆಲರಿ ಲಿ. (3386 ಕೋಟಿ ರು.), ರುಚಿ ಸೋಯಾ ಇಂಡಸ್ಟ್ರೀಸ್ ಲಿ. (3225 ಕೋಟಿ ರು.), ರೊಟಮ್ಯಾಕ್ ಗ್ಲೋಬಲ್ ಪ್ರೈ.ಲಿ. (2844 ಕೋಟಿ ರು.), ಕಿಂಗ್‌ಫಿಶರ್ ಏರ್‌ಲೈನ್ಸ್ ಲಿ. (2488 ಕೋಟಿ ರು.)
ನವೆಂಬರ್ 22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ