ಬಾಳೆನಾರಿನ ಈ ನ್ಯಾಪ್ಕಿನ್ 120 ಸಲ ಬಳಸಬಹುದು!

Published : Aug 21, 2019, 08:03 AM ISTUpdated : Aug 21, 2019, 10:09 AM IST
ಬಾಳೆನಾರಿನ ಈ ನ್ಯಾಪ್ಕಿನ್ 120 ಸಲ ಬಳಸಬಹುದು!

ಸಾರಾಂಶ

ಈ ನ್ಯಾಪ್‌ಕಿನ್‌ 120 ಸಲ ಬಳಸಬಹುದು!| ದಿಲ್ಲಿ ಐಐಟಿ ಪ್ರಾಧ್ಯಾಪಕರ ಸಹಕಾರದಲ್ಲಿ ಹೊಸ ನ್ಯಾಪ್‌ಕಿನ್‌| ಸಾನ್‌ಫೆ ಸಂಸ್ಥೆಯಿಂದ ಬಾಳೆಹಣ್ಣಿನ ನಾರು ಬಳಸಿ ನ್ಯಾಪ್‌ಕಿನ್‌| ಪ್ರಸ್ತುತ ಚಾಲ್ತಿಯಲ್ಲಿರುವ ನ್ಯಾಪ್‌ಕಿನ್‌ಗಳಿಂದ ಪರಿಸರಕ್ಕೆ ಹಾನಿ| ಹೀಗಾಗಿ ಹೊಸ ಮಾದರಿಯ ನ್ಯಾಪ್‌ಕಿನ್‌ ಉತ್ಪಾದಿಸಿದ ಸಂಸ್ಥೆ| 2 ನ್ಯಾಪ್‌ಕಿನ್‌ ಒಳಗೊಂಡ 1 ಪಾಕೆಟ್‌ನ ದರ 199 ರು.

ನವದೆಹಲಿ[ಆ.21]: ಮಹಿಳೆಯರ ಮುಟ್ಟಿನ ಸಂದರ್ಭದಲ್ಲಿ ನೈರ್ಮಲ್ಯಕ್ಕಾಗಿ ಬಳಕೆ ಮಾಡಲಾಗುವ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಸಾಮಾನ್ಯವಾಗಿ ಸಿಂಥೆಟಿಕ್‌ ಅಥವಾ ಪ್ಲಾಸ್ಟಿಕ್‌ನಿಂದ ತಯಾರಿಸಲಾಗಿರುತ್ತದೆ. ಆದರೆ, ಇದೇ ಮೊದಲ ಬಾರಿಗೆ ದೆಹಲಿಯ ಐಐಟಿ ಪ್ರಾಧ್ಯಾಪಕರ ಸಹಕಾರದೊಂದಿಗೆ ಸ್ಟಾರ್ಟಪ್‌ವೊಂದು ಬಾಳೆಹಣ್ಣಿನ ನಾರನ್ನು ಬಳಸಿ ವಿಶೇಷ ನ್ಯಾಪ್‌ಕಿನ್‌ ಅನ್ನು ತಯಾರಿಸಿದೆ. ಇದರ ವಿಶೇಷತೆಯೆಂದರೆ, ಈ ನ್ಯಾಪ್‌ಕಿನ್‌ ಅನ್ನು 2 ವರ್ಷಗಳವರೆಗೂ 120 ಬಾರಿ ಪುನಃ ಬಳಕೆ ಮಾಡಬಹುದಾಗಿದೆ ಎಂದು ಉತ್ಪಾದಕರು ತಿಳಿಸಿದ್ದಾರೆ.

ದೆಹಲಿ ಐಐಟಿ ಪ್ಯಾಧ್ಯಾಪಕರ ಸಹಕಾರದೊಂದಿಗೆ ‘ಸಾನ್‌ಫೆ’ ಎಂಬ ಸ್ಟಾರ್ಟಪ್‌ ಕಂಪನಿ ಅಭಿವೃದ್ಧಿಪಡಿಸಲಾಗಿರುವ ಈ ನ್ಯಾಪ್‌ಕಿನ್‌ನ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಿದ್ದು, 2 ನ್ಯಾಪ್‌ಕಿನ್‌ಗಳನ್ನೊಳಗೊಂಡ ಒಂದು ಪಾಕೆಟ್‌ನ ಬೆಲೆ 199 ರು. ಆಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ನ್ಯಾಪ್‌ಕಿನ್‌ಗಳು ಸಿಂಥೆಟಿಕ್‌ ಹಾಗೂ ಪ್ಲಾಸ್ಟಿಕ್‌ ಕಚ್ಚಾ ವಸ್ತುಗಳಿಂದ ತಯಾರಿಸಲ್ಪಟ್ಟಿರುತ್ತವೆ. ಹೀಗಾಗಿ, ಇವುಗಳು ಪರಿಸರದಲ್ಲಿ ಕೊಳೆತು ಹೋಗಲು 50-60 ವರ್ಷಗಳ ದೀರ್ಘಾಕಾಲೀನ ಅಗತ್ಯವಿದೆ. ಅಲ್ಲದೆ, ಬಳಕೆ ಮಾಡಲಾದ ಈ ನ್ಯಾಪ್‌ಕಿನ್‌ಗಳನ್ನು ಕಸದ ತೊಟ್ಟಿಗಳು, ಬಹಿರಂಗ ಸ್ಥಳಗಳಲ್ಲಿ, ನೀರಿನ ಮೂಲಗಳಲ್ಲಿ, ಶೌಚಾಲಯಗಳಲ್ಲಿ ಬಿಸಾಡಲಾಗುತ್ತದೆ. ಅಲ್ಲದೆ, ಇವುಗಳಿಗೆ ಬೆಂಕಿ ಸಹ ಇಡಲಾಗುತ್ತದೆ. ಇದರಿಂದ ಪರಿಸರಕ್ಕೆ ಪರಿಸರಕ್ಕೆ ಭಾರೀ ಹಾನಿಯಾಗುತ್ತದೆ ಎಂದು ಸ್ಟಾರ್ಟಪ್‌ ಸಂಸ್ಥೆಯ ಆರ್ಕಿಟ್‌ ಅಗರ್‌ವಾಲ್‌ ಹೇಳಿದರು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!