
ವಿದೇಶಿ ಫುಡ್ ಸ್ಟ್ರೀಟ್ ನಲ್ಲಿ ಭಾರತೀಯ ಆಹಾರ ಮಿಸ್ ಮಾಡ್ತಾ ಹೋಗ್ತಿರ್ತೀರಿ. ಎಲ್ಲೋ ಸಮೋಸಾ (Samosa) ಘಮ ಮೂಗಿಗೆ ಬಡಿಯುತ್ತೆ. ಬಾಯಲ್ಲಿ ನೀರು ಬರೋ ಜೊತೆಗೆ ಎಲ್ಲಿ ಅಂತ ಕಣ್ಣು ಹುಡುಕಾಟ ಶುರು ಮಾಡಿರುತ್ತೆ. ಬಿಸಿಬಿಸಿಯಾದ ಸಮೋಸಾ ಕಣ್ಣಿಗೆ ಕಾಣ್ತಿದ್ದಂತೆ ಕಾಲು, ರಸ್ತೆ ಮೇಲೆ ನಿಲ್ಲೋದಿಲ್ಲ. ಆರ್ಡರ್ ಮಾಡಿ, ರುಚಿಯಾದ ಸಮೋಸಾವನ್ನು ಬಾಯಿಗೆ ಇಳಿಸೋದೆ. ವಿದೇಶದಲ್ಲಿ ಭಾರತೀಯ ಆಹಾರಕ್ಕೆ ಬಹು ಬೇಡಿಕೆ ಇದೆ. ಅತಿ ಹೆಚ್ಚು ಭಾರತೀಯರು ವಿದೇಶದಲ್ಲಿ ನೆಲೆಸಿದ್ದು, ಭಾರತೀಯ ಆಹಾರವನ್ನು ಮಿಸ್ ಮಾಡಿಕೊಳ್ತಿರ್ತಾರೆ. ಅವರಿಗೆ ಸ್ವಾದಿಷ್ಟ ಭಾರತೀಯ ಆಹಾರ ಉಣಬಡಿಸುವ ಬಾಣಸಿಗನೇ ಬುದ್ಧಿವಂತ. ಲಂಡನ್ ನಲ್ಲಿ ಸಮೋಸಾ ಮಾರಾಟ ಮಾಡುವ ಮೂಲಕ ಭಾರತೀಯನೊಬ್ಬ ಪ್ರಸಿದ್ಧಿಗೆ ಬಂದಿದ್ದಾನೆ. ಬರೀ ಸಮೋಸಾ ರುಚಿ ಮಾತ್ರವಲ್ಲ ಆತನ ತಿಂಗಳ ಗಳಿಕೆ ಎಲ್ಲರನ್ನು ಹುಬ್ಬೇರಿಸಿದೆ.
ಲಂಡನ್ ನಲ್ಲಿ ಸಮೋಸಾ ಮಾರಾಟ ಮಾಡ್ತಿರುವ ಬಿಹಾರದ ವ್ಯಕ್ತಿ ಈಗ ಎಲ್ಲರ ಕೇಂದ್ರ ಬಿಂದು. ಸೋಶಿಯಲ್ ಮೀಡಿಯಾದಲ್ಲಿ ಅವ್ರ ವಿಡಿಯೋ ವೈರಲ್ ಆಗಿದೆ. ಘಂಟಾವಾಲಾ ಬಿಹಾರಿ ಸಮೋಸಾ ಹೆಸರಿನಲ್ಲಿ ಅಂಗಡಿ ತೆರೆಯಲಾಗಿದೆ. ವಿಶಿಷ್ಠ ರೀತಿಯಲ್ಲಿ ಸಮೋಸಾ ತಯಾರಿಸುವ ವ್ಯಕ್ತಿ ಆತ್ಮವಿಶ್ವಾಸ, ಮಾತಿನ ಮೂಲಕವೇ ಗ್ರಾಹಕರನ್ನು ಸೆಳೆಯುತ್ತಿದ್ದಾರೆ. ಬಿಹಾರಿ ಸ್ಟೈಲ್ ನಲ್ಲಿ ಮಾತನಾಡುವ ವ್ಯಕ್ತಿ, ಇಂಥ ಸಮೋಸಾ ನಿಮಗೆ ಎಲ್ಲೂ ಸಿಗೋಕೆ ಸಾಧ್ಯ ಇಲ್ಲ ಎನ್ನುತ್ತಾರೆ. ಅವ್ರ ಅಂಗಡಿ ಮುಂದೆ ದೊಡ್ಡ ಕ್ಯೂ ಇರುತ್ತೆ. ಘಂಟಾವಾಲಾ ಸಮೋಸಾಕ್ಕೆ ಸಮೋಸಾ ಪ್ರಿಯರು ಮಾರು ಹೋಗಿದ್ದಾರೆ. ಒಂದೆರಡು ಸಮೋಸಾ ತಿಂದು ಮತ್ತೊಂದೆರಡು ಸಮೋಸಾ ಪ್ಯಾಕ್ ಮಾಡ್ಕೊಂಡು ಮನೆಗೆ ಹೋಗ್ತಿದ್ದಾರೆ. ಹಾಗಾಗಿಯೇ ಅವ್ರ ಗಳಿಕೆ ಡಬಲ್ ಆಗಿದೆ. ವಿದೇಶಿಗರೂ ಪ್ರೀತಿಯಿಂದ ಸಮೋಸಾ ತಿನ್ನೋದನ್ನು ನೀವು ವಿಡಿಯೋದಲ್ಲಿ ನೋಡ್ಬಹುದು.
Best AI Finance Tools: ಎಐ ಹೇಳಿದಂತೆ ಕೇಳಿ, ಹಣ ಉಳಿತಾಯ ಖಚಿತ: ಇಲ್ಲಿದೆ ಸ್ಮಾರ್ಟ್ ಫೈನಾನ್ಸ್ ಟೂಲ್‌ಗಳ ಲಿಸ್ಟ್!
ಮಾಹಿತಿ ಪ್ರಕಾರ ಲಂಡನ್ ನಲ್ಲಿ ಸಮೋಸಾ ಮಾರಾಟ ಮಾಡುವ ವ್ಯಕ್ತಿ ಪ್ರತಿ ದಿನ 10 ಲಕ್ಞ ರೂಪಾಯಿ ಸಂಪಾದನೆ ಮಾಡ್ತಿದ್ದಾರಂತೆ. ಅದಕ್ಕೆ ಲೆಕ್ಕ ನೀಡಲಾಗಿದೆ. ಎರಡು ಸಮೋಸಾವನ್ನು 5 ಡಾಲರ್ ಗೆ ಮಾರಾಟ ಮಾಡಲಾಗುತ್ತದೆ. ಘಂಟಾವಾಲಾ ಸಮೋಸಾ ಮಾರಾಟಗಾರ ದಿನಕ್ಕೆ 7500 ಡಾಲರ್ ನಿಂದ 10,000 ಡಾಲರ್ ಗಳಿಸ್ತಾನೆ. ಅಂದ್ರೆ ಸುಮಾರು 9 -10 ಲಕ್ಷ ಸಂಪಾದನೆ ಆದಂಗೆ ಆಯ್ತು.
ಚೀನಾದ ಸಹಾಯದೊಂದಿಗೆ ಸೈಲೆಂಟ್ ಆಗಿಯೇ ಅಮೆರಿಕಕ್ಕೆ ಬಹುದೊಡ್ಡ ಏಟು ನೀಡಿದ ಭಾರತ!
ಇದಕ್ಕೆ ಕಾರಣ ಸ್ಮಾಟ್ ಬ್ಯುಸಿನೆಸ್ :
ಒಬ್ಬ ಸಣ್ಣ ವ್ಯಾಪಾರಿ ತಿಂಗಳಿಗೆ ಇಷ್ಟೊಂದು ಹಣ ಸಂಪಾದನೆ ಮಾಡ್ತಾನೆ ಅಂದ್ರೆ ಅದಕ್ಕೆ ಅದೃಷ್ಟ, ಟೇಸ್ಟ್ ಕಾರಣ ಅಂತ ನಾವಂದ್ಕೊಳ್ತೇವೆ. ಆದ್ರೆ ಇದೆಲ್ಲಕ್ಕಿಂತ ಆತನ ಸ್ಮಾಟ್ ಬ್ಯುಸಿನೆಸ್ ಐಡಿಯಾ ಇಲ್ಲಿ ಮಹತ್ವ ಪಡೆದಿದೆ. • ಹೆಚ್ಚು ಬೇಡಿಕೆ ಇರುವ, ಕಡಿಮೆ ಪೂರೈಕೆ ಇರುವ ಜಾಗವನ್ನು ಆಯ್ಕೆ ಮಾಡ್ಕೊಂಡಿದ್ದಾರೆ. ಲಂಡನ್ ನಲ್ಲಿ ಭಾರತೀಯ ಆಹಾರ ಅದ್ರಲ್ಲೂ ಸಮೋಸಾಕ್ಕೆ ಬೇಡಿಕೆ ಹೆಚ್ಚಿದೆ. ಆದ್ರೆ ಮಾರಾಟಗಾರರ ಸಂಖ್ಯೆ ಕಡಿಮೆ. • ಸಾಮಾನ್ಯವಾಗಿ ಲಂಡನ್ ನಲ್ಲಿ ಒಂದು ಡಾಲರ್ ಗೆ ಒಂದು ಸಮೋಸಾ ಲಭ್ಯವಿದೆ. ಆದ್ರೆ ಇವರು ಎರಡು ಸಮೋಸಾವನ್ನು 5 ಡಾಲರ್ ಗೆ ಮಾರಾಟ ಮಾಡ್ತಿದ್ದಾರೆ. ಆದ್ರೂ ಇವರ ಸಮೋಸಾಕ್ಕೆ ಡಿಮ್ಯಾಂಡ್ ಇರಲು ಕಾರಣ ಭಾವನೆ ಮತ್ತು ಹೆರಿಟೇಜ್. since 1969 ಎಂಬ ಬೋರ್ಡ್ ಅನೇಕರ ಗಮನ ಸೆಳೆಯುತ್ತದೆ. ಅವರ ಬಿಹಾರಿ ಉಡುಪು ಕೂಡ ಗ್ರಾಹಕರನ್ನು ಆಕರ್ಷಿಸುತ್ತದೆ. ಇದು ವ್ಯಾಪಾರಸ್ಥರ ಸ್ಟ್ರಾಟಜಿಯಾಗಿದೆ. • ವ್ಯಾಪಾರಸ್ಥರ ಪ್ಲಸ್ ಪಾಯಿಂಟ್ ವೈರಲ್ ಆಗಿರೋದು. ಅವರ ಭಿನ್ನ ಭಿನ್ನ ವಿಡಿಯೋ, ಹೊಸ ಸ್ಟೈಲ್, ಸಮೋಸಾ ತಯಾರಿಸುವ ಬಗೆ ಇಷ್ಟೊಂದು ಗಳಿಕೆಗೆ ಕಾರಣವಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.