ಪಿಎಫ್‌ ವಿತ್‌ಡ್ರಾ ವಿಚಾರವಾಗಿ ಬಿಗ್‌ ಅಪ್‌ಡೇಟ್‌ ನೀಡಿದ EPFO!

By Santosh Naik  |  First Published Dec 27, 2023, 10:34 PM IST

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್‌ಒ) ತನ್ನ ಚಂದಾದಾರರಿಗೆ ಎರಡು ದೊಡ್ಡ ಅಪ್‌ಡೇಟ್‌ಗಳನ್ನು ನೀಡಿದೆ. ಕೋವಿಡ್ ಕಾಲದಲ್ಲಿ ಮುಂಗಡ ಹಣವನ್ನು ಹಿಂಪಡೆಯುವ ಸೌಲಭ್ಯವನ್ನು ಕೊನೆ ಮಾಡಲಾಗಿದೆ. ಅದರೊಂದಿಗೆ  ಖಾತೆಗಳನ್ನು ಫ್ರೀಜ್ ಮಾಡಲು ಮತ್ತು ಡಿ-ಫ್ರೀಜಿಂಗ್ ಮಾಡಲು SOP ನೀಡಲಾಗಿದೆ.
 


ಮುಂಬೈ (ಡಿ.27): ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್‌ಒ) ಚಂದಾದಾರರಿಗೆ ದೊಡ್ಡ ಅಪ್‌ಡೇಟ್‌ ನೀಡಿದೆ. ಕೋವಿಡ್‌-19 ಸಂದರ್ಭದಲ್ಲಿ ಪ್ರಾರಂಭ ಮಾಡಲಾಗಿದ್ದ ದೊಡ್ಡ ಸೌಲಭ್ಯವನ್ನು ಇಪಿಎಫ್‌ಓ ಮುಚ್ಚಿದೆ. ಅದರೊಂದಿಗೆ, ಇಪಿಎಫ್‌ಒ ಪಿಎಫ್ ಖಾತೆಗಳನ್ನು ಫ್ರೀಜ್ ಮಾಡಲು ಮತ್ತು ಡಿ-ಫ್ರೀಜ್ ಮಾಡಲು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಅನ್ನು ಬಿಡುಗಡೆ ಮಾಡಿದೆ. ಕೋವಿಡ್‌-19 ಸಾಂಕ್ರಾಮಿಕ ಸಮಯದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು, ಸರ್ಕಾರವು ನೌಕರರಿಗೆ ಕೋವಿಡ್‌-19 ಮುಂಗಡ ಹಣವನ್ನು ಹಿಂತೆಗೆದುಕೊಳ್ಳುವ ಸೌಲಭ್ಯವನ್ನು ನೀಡಿತ್ತು. ಇದರ ಅಡಿಯಲ್ಲಿ, ಯಾವುದೇ ಇಪಿಎಫ್‌ಒ ಸದಸ್ಯರು ತಮ್ಮ ಪಿಎಫ್ ಖಾತೆಯಿಂದ ಅಗತ್ಯವಿರುವ ಸಂದರ್ಭದಲ್ಲಿ ಕೋವಿಡ್ ಮುಂಗಡವಾಗಿ ಹಣವನ್ನು ಹಿಂಪಡೆಯಬಹುದಾಗಿತ್ತು. ಎಕನಾಮಿಕ್ ಟೈಮ್ಸ್ ವರದಿ ಮಾಡಿರುವ ಪ್ರಕಾರ,  ಈಗ ಈ ಸೌಲಭ್ಯವನ್ನು ನಿಲ್ಲಿಸಲಾಗಿದೆ. ಈ ನಿಟ್ಟಿನಲ್ಲಿ ಯಾವುದೇ ಅಧಿಸೂಚನೆಯನ್ನು ಹೊರಡಿಸದಿದ್ದರೂ, ಸಾಫ್ಟ್‌ವೇರ್‌ನಲ್ಲಿ ಮರುಪಾವತಿಸಲಾಗದ ಕೋವಿಡ್ ಮುಂಗಡ ಆಯ್ಕೆಯನ್ನು ನಿಲ್ಲಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಆದ್ದರಿಂದ ಖಾತೆದಾರರು ಅದಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.

ಕೋವಿಡ್-19 ಅಡ್ವಾನ್ಸ್ ಫಂಡ್ ಹಿಂಪಡೆಯುವಿಕೆಯೊಂದಿಗೆ, ಇಪಿಎಫ್‌ಒ ಮತ್ತೊಂದು ಹೊಸ ನಿಯಮವನ್ನು ಪರಿಚಯಿಸಿದೆ. ಸಂಸ್ಥೆಯು ಖಾತೆಗಳನ್ನು ಫ್ರೀಜ್ ಮಾಡಲು ಮತ್ತು ಡಿ-ಫ್ರೀಜ್ ಮಾಡಲು SOP ನೀಡಿದೆ. ಇದರ ಅಡಿಯಲ್ಲಿ, ಫ್ರೀಜ್ ಮಾಡಿದ ಖಾತೆಯನ್ನು ಪರಿಶೀಲಿಸುವ ಸಮಯ ಮಿತಿಯನ್ನು 30 ದಿನಗಳವರೆಗೆ ಸೀಮಿತಗೊಳಿಸಲಾಗಿದೆ. ಆದಾಗ್ಯೂ, ಈ ಗಡುವನ್ನು ಇನ್ನೂ 14 ದಿನಗಳವರೆಗೆ ವಿಸ್ತರಿಸಲು ಅವಕಾಶವಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ಅವಧಿಯಲ್ಲಿ ಫ್ರೀಜ್ ಮಾಡಲು ಅಥವಾ ಡಿ-ಫ್ರೀಜ್ ಮಾಡಲು ನೀವು ಖಾತೆಯನ್ನು ಪರಿಶೀಲಿಸುವುದು ಕಡ್ಡಾಯವಾಗಿರುತ್ತದೆ.

ವಂಚನೆಯನ್ನು ನಿಲ್ಲಿಸಬಹುದು: ಖಾತೆಗಳ ಫ್ರೀಜ್ ಅಥವಾ ಡಿ-ಫ್ರೀಜಿಂಗ್‌ಗಾಗಿ ನೀಡಲಾದ SOP ಯೊಂದಿಗೆ ವಂಚನೆಯನ್ನು ತಡೆಯಬಹುದು. ಯಾವುದೇ ಖಾತೆಯಲ್ಲಿ ಹಣವನ್ನು ಸುರಕ್ಷಿತವಾಗಿರಿಸುವುದು ಅವಶ್ಯಕ ಎಂಬುದು ಮೊದಲ ಮತ್ತು ಪ್ರಮುಖ ವಿಷಯ ಎಂದು ಎಸ್ಒಪಿ ದಾಖಲೆಯಲ್ಲಿ ಹೇಳಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಪರಿಶೀಲನೆಯ ನಂತರ, ಖಾತೆಯನ್ನು ಹೊಂದಿರುವ ವ್ಯಕ್ತಿ ಮಾತ್ರ ಖಾತೆಯಿಂದ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ.

ನಿಮ್ಮ ವೇತನದಿಂದ ಕಡಿತಗೊಳಿಸಿದ ಪಿಎಫ್ ಮೊತ್ತವನ್ನು ಕಂಪನಿ ಇಪಿಎಫ್ ಒಗೆ ಜಮೆ ಮಾಡಿಲ್ವಾ? ಹಾಗಾದ್ರೆ ಹೀಗೆ ಮಾಡಿ..

Tap to resize

Latest Videos

ಪರಿಶೀಲನೆಗೆ ಇದು ಅವಶ್ಯಕ: ಸಂಶಯಾಸ್ಪದ ಖಾತೆ ವಹಿವಾಟುಗಳನ್ನು ಗುರುತಿಸಲು MID ಅಥವಾ UAN ಮತ್ತು ಸಂಸ್ಥೆಗಳ ಪರಿಶೀಲನೆ ಅಗತ್ಯ ಎಂದು EPFO ಹೇಳಿದೆ. ಇದು ನೌಕರರ ಭವಿಷ್ಯ ನಿಧಿ, ಪಿಎಫ್, ಪಿಂಚಣಿ ಮತ್ತು ವಿಮಾ ಯೋಜನೆಯನ್ನು ನಡೆಸುತ್ತಿದೆ ಮತ್ತು ದೇಶಾದ್ಯಂತ ಒಟ್ಟು 6 ಕೋಟಿ ಜನರು ಈ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬುದು ಗಮನಾರ್ಹ.

ದೀಪಾವಳಿಗೆ ಉದ್ಯೋಗಿಗಳಿಗೆ ಇಪಿಎಫ್ ಒ ಗಿಫ್ಟ್; ಶೀಘ್ರದಲ್ಲೇ ಬ್ಯಾಂಕ್ ಖಾತೆಗೆ ಶೇ.8.15ರಷ್ಟು ಬಡ್ಡಿ ಕ್ರೆಡಿಟ್

click me!