ದೀಪಾವಳಿಗೆ ಉದ್ಯೋಗಿಗಳಿಗೆ ಇಪಿಎಫ್ ಒ ಗಿಫ್ಟ್; ಶೀಘ್ರದಲ್ಲೇ ಬ್ಯಾಂಕ್ ಖಾತೆಗೆ ಶೇ.8.15ರಷ್ಟು ಬಡ್ಡಿ ಕ್ರೆಡಿಟ್
ಇಪಿಎಫ್ ಖಾತೆಗೆ ಬಡ್ಡಿ ಯಾವಾಗ ಜಮೆಯಾಗುತ್ತದೆ ಎಂದು ಕಾಯುತ್ತಿರುವ ಉದ್ಯೋಗಿಗಳಿಗೆ ಶುಭ ಸುದ್ದಿಯಿದೆ. ಇಪಿಎಫ್ ಖಾತೆಗಳಿಗೆ ಬಡ್ಡಿ ಕ್ರೆಡಿಟ್ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಇಪಿಎಫ್ ಒ ಎಕ್ಸ್ ನಲ್ಲಿ ಮಾಹಿತಿ ನೀಡಿದೆ.
ನವದೆಹಲಿ (ನ.10): ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ ಒ) ಪಿಎಫ್ ಖಾತೆಗಳಿಗೆ ಶೇ.8.15ರಷ್ಟು ಬಡ್ಡಿ ಹಣ ಜಮೆ ಮಾಡುವ ಪ್ರಕ್ರಿಯೆ ಪ್ರಾರಂಭಿಸಿದೆ. ಈ ಬಗ್ಗೆ ಇಪಿಎಫ್ ಒ 'ಎಕ್ಸ್' ನಲ್ಲಿ(ಹಿಂದಿನ ಟ್ವಿಟ್ಟರ್ ) ಮಾಹಿತಿ ಹಂಚಿಕೊಂಡಿದೆ. ಎಕ್ಸ್ ನಲ್ಲಿ ಬಳಕೆದಾರರೊಬ್ಬರು 2022-23ನೇ ಹಣಕಾಸು ಸಾಲಿನ ಬಡ್ಡಿ ಇನ್ನೂ ಖಾತೆಗೆ ಜಮೆ ಆಗಲಿಲ್ಲ. ಯಾವಾಗ ಜಮೆಯಾಗಬಹುದು' ಎಂದು ಎಕ್ಸ್ ನಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಯಾಗಿ ಇಪಿಎಫ್ ಒ ಈ ಮಾಹಿತಿ ಹಂಚಿಕೊಂಡಿದೆ. 2022-23ನೇ ಹಣಕಾಸು ಸಾಲಿನಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆಗೆ ಶೇ.8.15ರಷ್ಟು ಬಡ್ಡಿ ನೀಡುವ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದೆ. ಇನ್ನು 2023-24ನೇ ಹಣಕಾಸು ಸಾಲಿನಲ್ಲಿ ಕೂಡ ಇಪಿಎಫ್ ಖಾತೆಗೆ ಈ ವರ್ಷದ ಜುಲೈಯಲ್ಲಿ ಶೇ.8.15ರಷ್ಟು ಬಡ್ಡಿ ನೀಡುವ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದೆ.
'ಪ್ರಕ್ರಿಯೆ ಪ್ರಗತಿಯಲ್ಲಿದೆ ಹಾಗೂ ಇದು ಕೆಲವೇ ದಿನಗಳಲ್ಲಿ ನಿಮಗೆ ಕಾಣಿಸಲಿದೆ ಕೂಡ. ಯಾವಾಗ ಬಡ್ಡಿ ಕ್ರೆಡಿಟ್ ಆಗುತ್ತದೋ ಅದನ್ನು ಒಟ್ಟಾಗಿ ಹಾಗೂ ಪೂರ್ಣ ಪ್ರಮಾಣದಲ್ಲಿ ಪಾವತಿಸಲಾಗುತ್ತದೆ. ಅಲ್ಲಿ ಯಾವುದೇ ಬಡ್ಡಿದರದ ನಷ್ಟವಾಗೋದಿಲ್ಲ. ಹೀಗಾಗಿ ದಯವಿಟ್ಟು ಶಾಂತಿಯಿಂದ ಕಾಯಿರಿ' ಎಂದು ಇಪಿಎಫ್ ಒ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದೆ. ಇದಕ್ಕೂ ಮುನ್ನ ಎಕ್ಸ್ ಬಳಕೆದಾರರೊಬ್ಬರು ತಮ್ಮ ಪೋಸ್ಟ್ ನಲ್ಲಿ '2022-23ನೇ ಹಣಕಾಸು ಸಾಲಿನ ಬಡ್ಡಿ ಇನ್ನೂ ಕ್ರೆಡಿಟ್ ಆಗಿಲ್ಲ. ಬಡ್ಡಿಯಾವಾಗ ಖಾತೆಗೆ ಜಮೆ ಆಗುತ್ತದೆ?' ಎಂದು ಪ್ರಶ್ನಿಸಿದ್ದರು.
EPF ಖಾತೆಯಿಂದ ಹಣ ವಿತ್ ಡ್ರಾ ಮಾಡೋ ಮುನ್ನ ತಿಳಿದಿರಲಿ ಈ ವಿಚಾರ;ಇಲ್ಲವಾದ್ರೆ ತೆರಿಗೆ ಕಟ್ಟಬೇಕಾಗುತ್ತದೆ ಎಚ್ಚರ!
ಇಪಿಎಫ್ ಒ ಬ್ಯಾಲೆನ್ಸ್ ಚೆಕ್ ಹೇಗೆ?
ಆನ್ ಲೈನ್ ನಲ್ಲಿ ಇಪಿಎಫ್ ಒ ಬ್ಯಾಲೆನ್ಸ್ ಚೆಕ್ ಮಾಡಲು ಹೀಗೆ ಮಾಡಿ:
*ಮೊದಲಿಗೆ ಯುಎಎನ್ ಪೋರ್ಟಲ್ https://unifiedportal-mem.epfindia.gov.in/memberinterface/ ಲಾಗಿ ಇನ್ ಆಗಿ.
*ನಿಮ್ಮ ಯುಎಎನ್ ಹಾಗೂ ಪಾಸ್ ವರ್ಡ್ ಬಳಸಿ ಲಾಗಿ ಇನ್ ಆಗಿ. ಆ ಬಳಿಕ ದೃಢೀಕರಣಕ್ಕೆ ಕ್ಯಾಪ್ಚಾ ನಮೂದಿಸಿ.
*ಈಗ ‘Online Services’ ಮೇಲೆ ಕ್ಲಿಕ್ ಮಾಡಿ ಹಾಗೂ ಕ್ಲೇಮ್ (Claim) ಆಯ್ಕೆ ಆರಿಸಿಕೊಳ್ಳಿ.
* ಆ ಬಳಿಕ ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ ನಮೂದಿಸಿ. ‘Verify’ ಮೇಲೆ ಕ್ಲಿಕ್ ಮಾಡಿ.
*ಈಗ ‘Yes’ಆಯ್ಕೆ ಮೇಲೆ ಕ್ಲಿಕ್ ಮಾಡಿ ಹಾಗೂ ಮುಂದುವರಿಯಿರಿ.
*‘Proceed for Online Claim’ ಮೇಲೆ ಕ್ಲಿಕ್ ಮಾಡಿ.
*ಈಗ ಕ್ಲೇಮ್ ಫಾರ್ಮ್ ನಲ್ಲಿ 'I Want To Apply For’ ಅಡಿಯಲ್ಲಿ ಯಾವ ಕಾರಣಕ್ಕೆ ಕ್ಲೇಮ್ ಮಾಡುತ್ತೀರಿ ಎಂಬುದನ್ನು ಆಯ್ಕೆ ಮಾಡಿ.
*ಈಗ ನಿಮ್ಮ ಹಣ ವಿತ್ ಡ್ರಾ ಮಾಡಲು ‘PF Advance (Form 31)’ಆರಿಸಿ. ಬಳಿಕ ಈ ರೀತಿ ಹಣ ಹಿಂಪಡೆಯೋ ಉದ್ದೇಶ, ಎಷ್ಟು ಹಣ ಬೇಕಾಗಿದೆ ಹಾಗೂ ನಿಮ್ಮ ವಿಳಾಸ ನೂದಿಸಬೇಕು.
*ಈಗ ಪ್ರಮಾಣಪತ್ರದ ಮೇಲೆ ಕ್ಲಿಕ್ ಮಾಡಿ ನಿಮ್ಮ ಅರ್ಜಿ ಸಲ್ಲಿಸಿ.
*ಅಗತ್ಯ ದಾಖಲೆಗಳನ್ನು ಕೋರಿದ್ರೆ ಅದನ್ನು ಸಲ್ಲಿಕೆ ಮಾಡಿ.
ಉದ್ಯೋಗದಾತ ಸಂಸ್ಥೆ ವಿತ್ ಡ್ರಾ ಮನವಿಗೆ ಅನುಮೋದನೆ ನೀಡಿದ ಬಳಿಕ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರುತ್ತದೆ.
ಎನ್‌ಪಿಎಸ್, ಪಿಪಿಎಫ್ ಅಥವಾ ವಿಪಿಎಫ್? ನಿಮ್ಮ ಭವಿಷ್ಯಕ್ಕಾಗಿ ಹಣವನ್ನು ಎಲ್ಲಿ ಹೂಡಿಕೆ ಮಾಡ್ಬೇಕು ನೋಡಿ..
ಉಮಂಗ್ ಆ್ಯಪ್ ಮೂಲಕ ಹೇಗೆ?
ಉಮಂಗ್ ಆ್ಯಪ್ (UMANG app ) ಮೂಲಕ ನಿಮ್ಮ ಇಪಿಎಫ್ ಒ ಖಾತೆಯಿಂದ ಹಣ ವಿತ್ ಡ್ರಾ ಮಾಡಲು ನಿಮ್ಮ ಯುನಿವರ್ಸಲ್ ಖಾತೆ ಸಂಖ್ಯೆ (ಯುಎಎನ್) ಅನ್ನು ಆಧಾರ್ ಸಂಖ್ಯೆ ಜೊತೆಗೆ ಲಿಂಕ್ ಮಾಡೋದು ಅಗತ್ಯ.ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಇಪಿಎಫ್ ಖಾತೆಯಿಂದ ಹಣ ವಿತ್ ಡ್ರಾ ಮಾಡಬಹುದು.
*ಮೊದಲಿಗೆ ಉಮಂಗ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ. ಆ ಬಳಿಕ ನಿಮ್ಮ ಮೊಬೈಲ್ ಸಂಖ್ಯೆ ಬಳಸಿ ನೋಂದಣಿ ಮಾಡಿ.
*ಆ್ಯಪ್ ನಲ್ಲಿ ಲಭ್ಯವಿರುವ ಅನೇಕ ಆಯ್ಕೆಗಳಲ್ಲಿ ಇಪಿಎಫ್ ಒ ಆಯ್ಕೆಯನ್ನು ಆರಿಸಿ.
*ಕ್ಲೇಮ್ ಆಯ್ಕೆ ಆರಿಸಿ ನಿಮ್ಮ ಯುಎಎನ್ ಸಂಖ್ಯೆ ಭರ್ತಿ ಮಾಡಿ.
* ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದಿರುವ ಒಟಿಪಿಯನ್ನು ಇಪಿಎಫ್ಒ ನಲ್ಲಿ ನಮೂದಿಸಿ.
*ನಿಮ್ಮ ಪಿಎಫ್ ಖಾತೆಯಿಂದ ವಿತ್ ಡ್ರಾ ವಿಧಾನ ಆಯ್ಕೆ ಮಾಡಿ ಹಾಗೂ ಅರ್ಜಿಯಲ್ಲಿ ಭರ್ತಿ ಮಾಡಿ.
*ಅರ್ಜಿಯನ್ನು ಸಲ್ಲಿಕೆ ಮಾಡಿ ಹಾಗೂ ವಿತ್ ಡ್ರಾ ಮನವಿಗೆ ರೆಫರೆನ್ಸ್ ಸಂಖ್ಯೆ ಸ್ವೀಕರಿಸಿ.
*ಈ ರೆಫರೆನ್ಸ್ ಸಂಖ್ಯೆ ಬಳಸಿಕೊಂಡು ವಿತ್ ಡ್ರಾ ಮನವಿ ಟ್ರ್ಯಾಕ್ ಮಾಡಿ.
*3 ಅಥವಾ 4 ದಿನಗಳಲ್ಲಿ ಇಪಿಎಫ್ ಒ ನಿಮ್ಮ ಖಾತೆಗೆ ಹಣವನ್ನು ವರ್ಗಾವಣೆ ಮಾಡುತ್ತದೆ.