ಭಾರತದಲ್ಲಿ ಕೆಲಸ ಮಾಡುವ ಅತ್ಯುತ್ತಮ ಕಂಪನಿಗಳ ಪೈಕಿ ಮುಕೇಶ್ ಅಂಬಾನಿ ರಿಲಯನ್ಸ್‌ಗೆ ಎಷ್ಟನೇ ಸ್ಥಾನ?

Published : Jun 27, 2026, 01:21 PM IST
reliance jio ipo

ಸಾರಾಂಶ

ಭಾರತದಲ್ಲಿ ಕೆಲಸ ಮಾಡಲು ಅತ್ಯುತ್ತಮ ಕಂಪನಿಗಳ ಪಟ್ಟಿ ಬಿಡುಗಡೆಯಾಗಿದೆ. ಈ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ನೇೃತ್ವದ ರಿಲಯನ್ಸ್ ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿರುವ ಟಾಪ್ ಕಂಪನಿಗಳು ಯಾವುದು?

ನವದೆಹಲಿ (ಜೂ.27) ಕೆಲಸದ ವಿಚಾರದಲ್ಲಿ ಭಾರತದಲ್ಲಿ ಹೆಚ್ಚು ದುಡಿಸಿಕೊಳ್ಳುತ್ತಾರೆ, ವೇತನ ಕಡಿಮೆ, ಹೆಚ್ಚುವರಿ ಗಂಟೆ ಕೆಲಸ ಸೇರಿದಂತೆ ಹಲವು ಆರೋಪಗಳಿವೆ. ಇದರ ನಡುವೆ ಹಲವು ಕಂಪನಿಗಳು ಕೈತುಂಬಾ ಸಂಬಳ ನೀಡಿ ಉದ್ಯೋಗಿಗಳನ್ನು ಉತ್ತಮವಾಗಿ ನೋಡಿಕೊಳ್ಳುವ ಕಂಪನಿಗಳಿವೆ. ಇದೀಗ ಗ್ರೇಟ್ ಪ್ಲೇಸ್ ಟು ವರ್ಕ್ ಇನ್‌ಸ್ಟಿಟ್ಯೂಟ್ ಪ್ರಕಟಿಸಿರುವ ಭಾರತದಲ್ಲಿ ಕೆಲಸ ಮಾಡಲು ಅತ್ಯುತ್ತಮ ಸ್ಥಳʼ 2026 ಪಟ್ಟಿಯಲ್ಲಿ ಕೆಲ ಪ್ರಮುಖ ಕಂಪನಿಗಳು ಸ್ಥಾನ ಪಡೆದಿದೆ. ಹಿಲ್ಟನ್, ಸಿಸ್ಕೋ ಸಿಸ್ಟಮ್ಸ್ ಇಂಡಿಯಾ ಮತ್ತು ಸಿಂಕ್ರೋನಿ ಇಂಟರ್‌ನ್ಯಾಷನಲ್ ಟಾಪ್ 3 ಸ್ಥಾನ ಪಡೆದಿದೆ. ಇನ್ನು ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ 13ನೇ ಸ್ಥಾನ ಪಡೆದುಕೊಂಡಿದೆ.

1.30 ಲಕ್ಷ ಉದ್ಯೋಗಿಗಳ ಸಂಸ್ಥೆ ರಿಲಯನ್ಸ್

ಈ ರ‍್ಯಾಂಕಿಂಗ್ ಅನ್ನು ‘ಗ್ರೇಟ್ ಪ್ಲೇಸ್ ಟು ವರ್ಕ್ ಇನ್‌ಸ್ಟಿಟ್ಯೂಟ್’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಘೋಷಿಸಲಾಯಿತು. ರಿಲಯನ್ಸ್ ರಿಟೇಲ್ ದೇಶದ ಅತಿ ದೊಡ್ಡ ರಿಟೇಲ್ ನೆಟ್‌ವರ್ಕ್ ಅನ್ನು ಮುನ್ನಡೆಸುತ್ತಿದ್ದು, ವರದಿಯ ಪ್ರಕಾರ ಭಾರತದಲ್ಲಿ ಕಂಪನಿಯ ಉದ್ಯೋಗಿಗಳ ಸಂಖ್ಯೆ 1,30,457 ಆಗಿದೆ. ಇಷ್ಟೊಂದು ಬೃಹತ್ ಉದ್ಯೋಗಿ ಬಳಗವನ್ನು ಹೊಂದಿದ್ದರೂ ಸಹ, ಟಾಪ್-100 ಕಂಪನಿಗಳಲ್ಲಿ 13ನೇ ಸ್ಥಾನವನ್ನು ಪಡೆದುಕೊಳ್ಳುವುದು ಕಂಪನಿಯ ಉತ್ತಮ ಕಾರ್ಯಕ್ಷಮತೆ ಮತ್ತು ಸಂಸ್ಕೃತಿಗೆ ಸಾಕ್ಷಿಯಾಗಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ಗೆ ಮತ್ತೊಂದು ಗರಿ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಮತ್ತು ರಿಲಯನ್ಸ್ ರಿಟೇಲ್ ಸಂಸ್ಥೆಗಳನ್ನು ಜಂಟಿಯಾಗಿ " ರಾಷ್ಟ್ರ ನಿರ್ಮಾಣದಲ್ಲಿ ಭಾರತದ ಅತ್ಯುತ್ತಮ ಉದ್ಯೋಗದಾತರು) ಎಂದು ಗುರುತಿಸಲಾಗಿದೆ. ಕೇವಲ ವ್ಯವಹಾರಕ್ಕಷ್ಟೇ ಸೀಮಿತವಾಗಿರದೆ, ಉದ್ಯೋಗ ಸೃಷ್ಟಿ, ಅಗತ್ಯ ಸೇವೆಗಳು ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ಕೊಡುಗೆ ನೀಡುವ ಕಂಪನಿಗಳಿಗೆ ಈ ಗೌರವವನ್ನು ನೀಡಲಾಗುತ್ತದೆ.

ಮೌಲ್ಯಮಾಪನ ಹೇಗೆ ನಡೆಯುತ್ತದೆ?

ಕೆಲಸ ಮಾಡಲು ಅತ್ಯುತ್ತಮ ಸ್ಥಳʼ ರ‍್ಯಾಂಕಿಂಗ್ ಅನ್ನು ಉದ್ಯೋಗಿಗಳ ಅನುಭವ ಮತ್ತು ಕಂಪನಿಯ ಕಾರ್ಯವೈಖರಿ, ಪದ್ಧತಿಗಳ ಮೌಲ್ಯಮಾಪನದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಇದರಲ್ಲಿ 'ಟ್ರಸ್ಟ್ ಇಂಡೆಕ್ಸ್ ಸರ್ವೆ'ಗೆ ಶೇ. 75 ರಷ್ಟು ಮತ್ತು ಸಾಂಸ್ಕೃತಿಕ ಮೌಲ್ಯಮಾಪನಕ್ಕೆ ಶೇ. 25 ರಷ್ಟು ಆದ್ಯತೆ ನೀಡಲಾಗುತ್ತದೆ. ರ‍್ಯಾಂಕಿಂಗ್ ಸಂಸ್ಥೆಯ ಪ್ರಕಾರ, ಟಾಪ್-100 ಪಟ್ಟಿಯಲ್ಲಿ ಸ್ಥಾನ ಪಡೆಯಲು ಯಾವುದೇ ತೀರ್ಪುಗಾರರು ಅಥವಾ ವ್ಯಕ್ತಿಯ ಅಭಿಪ್ರಾಯ ಮುಖ್ಯವಲ್ಲ. ಬದಲಿಗೆ ಉದ್ಯೋಗಿಗಳ ಪ್ರತಿಕ್ರಿಯೆ ಮತ್ತು ಅಲ್ಲಿನ ಕೆಲಸದ ವಾತಾವರಣವೇ ಪ್ರಮುಖ ಪಾತ್ರ ವಹಿಸುತ್ತದೆ.

ರಿಟೇಲ್ ವಲಯವು ಅತ್ಯಂತ ವೇಗವಾಗಿ ಬದಲಾಗುತ್ತಿರುವ ಈ ಸಮಯದಲ್ಲಿ ರಿಲಯನ್ಸ್ ರಿಟೇಲ್ ಈ ಸಾಧನೆ ಮಾಡಿದೆ. ಆನ್‌ಲೈನ್ ಮತ್ತು ಆಫ್‌ಲೈನ್ ವ್ಯವಹಾರ, ತಂತ್ರಜ್ಞಾನ, ಸಪ್ಲೈ ಚೈನ್ ಮತ್ತು ಮಳಿಗೆಗಳ ಕಾರ್ಯಾಚರಣೆಗಳು ವ್ಯಾಪಕವಾಗಿ ವಿಸ್ತರಿಸುತ್ತಿರುವ ನಡುವೆಯೂ, ಈ ರ‍್ಯಾಂಕಿಂಗ್ ಕಂಪನಿಯು ತನ್ನ ಉದ್ಯೋಗಿಗಳಿಗೆ ನೀಡುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಭಾರತದಲ್ಲಿ ಅತೀ ಹೆಚ್ಚು ಶ್ರೀಮಂತ ದೇವಸ್ಥಾನಗಳಿವು, ಕೈಬಿಚ್ಚಿ ದಾನ ನೀಡ್ತಾರೆ ಭಕ್ತರು
ಆಫ್-ರೋಡಿಂಗ್ ಪ್ರಿಯರಿಗೆ ಹಬ್ಬದ ಸುದ್ದಿ; ರಗಡ್ ಲುಕ್, ಪವರ್‌ಫುಲ್ ಬಾಡಿಯೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡ್ತಿವೆ 3 ಹೊಸ ದೈತ್ಯ SUV