Bengaluru Tech Salary: ಬೆಂಗಳೂರಲ್ಲಿ ವಾಸಿಸಲು 50 ಲಕ್ಷ ಸಂಬಳ ಸಾಲದು ಎಂದ ಟೆಕ್ಕಿ, ಪೋಸ್ಟ್ ವೈರಲ್!

Published : Jun 11, 2025, 10:15 PM IST
Bengaluru Tech Salary: ಬೆಂಗಳೂರಲ್ಲಿ ವಾಸಿಸಲು 50 ಲಕ್ಷ ಸಂಬಳ ಸಾಲದು ಎಂದ ಟೆಕ್ಕಿ, ಪೋಸ್ಟ್ ವೈರಲ್!

ಸಾರಾಂಶ

ಬೆಂಗಳೂರಿನಲ್ಲಿ ಜೀವನ ವೆಚ್ಚ ಹೆಚ್ಚಿರುವುದರಿಂದ 50 ಲಕ್ಷ ಸಂಬಳ ಸಾಲದು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. 25  ಲಕ್ಷ ಎಂಬಂತೆ ಭಾಸವಾಗುತ್ತಿದೆ ಎಂದಿದ್ದಾನೆ.

ಭಾರತದ ಐಟಿ ರಾಜಧಾನಿ ಎಂದರೆ ಬೆಂಗಳೂರು. ಬಹಳ ಜನದಟ್ಟಣೆ ಮತ್ತು ದುಬಾರಿ ನಗರ. ಸಾಮಾನ್ಯ ಸೌಕರ್ಯಗಳಿರುವ ಮನೆ ಬಾಡಿಗೆಗೆ ಪಡೆಯಲು ಹೆಚ್ಚಿನ ಹಣ ಬೇಕಾಗುತ್ತದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜೀವನ ವೆಚ್ಚ ಜನರನ್ನು ಕಂಗಾಲಾಗಿಸಿದೆ. ಉತ್ತಮ ಸಂಬಳ ಬಂದರೂ ಜೀವನ ನಡೆಸುವುದು ಕಷ್ಟ ಎಂಬುದು ಬಹುತೇಕರ ಅಳಲು. ಆದರೆ ಐಟಿ ಕ್ಷೇತ್ರದಲ್ಲಿ ಉತ್ತಮ ಸಂಬಳ ಪಡೆಯುವವರೂ ಇದ್ದಾರೆ. ಅಂತಹ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಅಂತಹದ್ದೇ ಒಂದು ಪೋಸ್ಟ್ ಈಗ ಚರ್ಚೆಯಲ್ಲಿದೆ.

'50 ಲಕ್ಷ ವಾರ್ಷಿಕ ಸಂಬಳ ಈಗ 25 ಲಕ್ಷದಷ್ಟೇ ಇದೆಯೇ  ಎಂಬ ಪ್ರಶ್ನೆ ಪೋಸ್ಟ್‌ನಲ್ಲಿದೆ. ಸೌರವ್ ದತ್ತ ಎಕ್ಸ್ (ಟ್ವಿಟರ್) ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. 'ಬೆಂಗಳೂರಿನ ಐಟಿ ಕ್ಷೇತ್ರದಲ್ಲಿ ಅನೇಕರು 50ಲಕ್ಷ ಸಂಬಳ ಪಡೆಯುತ್ತಾರೆ ಎಂದು ಕೇಳಿದ್ದೇನೆ. ಅದು ಉಬ್ಬಿಸಿ ಹೇಳಿದ ಸಿಟಿಸಿ ಆಗಿರಬಹುದು ಅಥವಾ 50 ಲಕ್ಷ ಈಗ 25 ಲಕ್ಷದಷ್ಟೇ ಇರಬಹುದು. ಟೆಕ್ಕಿಗಳು ಇದನ್ನು ದೃಢೀಕರಿಸಬಲ್ಲಿರಾ?' ಎಂದು ಕೇಳಿದ್ದಾರೆ.

 

ಈ ಪೋಸ್ಟ್ ಬೇಗನೆ ವೈರಲ್ ಆಯ್ತು. ಬೆಂಗಳೂರಿನಲ್ಲಿ ಜೀವನ ವೆಚ್ಚ ಹೆಚ್ಚಿರುವುದರಿಂದ 50 ಲಕ್ಷ ಸಂಬಳ ಸಾಲದು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಬಹುತೇಕರು ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

50 ಲಕ್ಷ ಸಂಬಳ ಸಿಗುವುದಿಲ್ಲ, ಅದು ಉತ್ಪ್ರೇಕ್ಷೆ ಎಂದು ಕೆಲವರು ಹೇಳಿದ್ದಾರೆ. ಆದರೆ ಹೆಚ್ಚಿನವರು 50 ಲಕ್ಷ ಸಂಬಳ ಸಿಗುವುದು ನಿಜ ಎಂದಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!