80-90s Famous TV Ads; ಇನ್ನಷ್ಟು, ಮತ್ತಷ್ಟು ಕೇಳಬೇಕೆನ್ನಿಸುವ, ಆ ದಿನಗಳಲ್ಲಿ ತೇಲಿಹೋಗುವ ಈ ಜಾಹೀರಾತುಗಳ ಕೇಳಿ...

Published : Jun 11, 2025, 07:17 PM IST
80 90s Advertisements

ಸಾರಾಂಶ

80-90ರ ದಶಕದಲ್ಲಿ ಕೆಲವೊಂದು ಜಾಹೀರಾತುಗಳು ಅದೆಷ್ಟು ಮನಸ್ಸಿಗೆ ಹಿತಕೊಡುತ್ತಿದ್ದವು ಎಂದರೆ, ಅವುಗಳನ್ನೆಲ್ಲಾ ಒಂದೆಡೆ ಹಾಡಿ ರಸದೌತಣ ನೀಡಿದ್ದಾರೆ ಈ ಗಾಯಕಿ.. ಕೇಳಿ... 

80-90ರ ದಶಕದಲ್ಲಿ ಇನ್ನೂ ಕನ್ನಡದ ಖಾಸಗಿ ವಾಹಿನಿಗಳು ಅಷ್ಟೊಂದು ಲಗ್ಗೆ ಇಡದ ದಿನಗಳಲ್ಲಿ ದೂರದರ್ಶನ (ಡಿಡಿ) ಚಾನೆಲ್ ಹಾಗೂ ಆಕಾಶವಾಣಿಯಲ್ಲಿ ಬರುತ್ತಿದ್ದ ಕೆಲವು ಹಿಂದಿಯ ಜಾಹೀರಾತುಗಳು ದೊಡ್ಡ ಮಟ್ಟದಲ್ಲಿ ಹವಾ ಸೃಷ್ಟಿಸಿದ್ದವು. ಅವುಗಳನ್ನು ಹಾಡುವುದು ಎಂದರೇನೇ ಏನೋ ಸೊಗಸು ಎನ್ನುವಂಥವು ಅವು. ಅದು ಕೇವಲ ಜಾಹೀರಾತು ಆಗಿರದೇ ಒಂದು ರೀತಿಯಲ್ಲಿ ಪ್ರತಿ ಮನೆಗಳಲ್ಲಿಯೂ ಗುನುಗುನುಗಿಸುವ ಸಿನಿಮಾ ಹಾಡುಗಳಂತೆಯೇ ಆಗಿಬಿಟ್ಟಿದ್ದವು. ಅಂದಿನ ಸಿನಿಮಾ ಹಾಡುಗಳಂತೆಯೇ ಇಂದಿಗೂ ಅವು ಹಚ್ಚ ಹಸಿರಾಗಿಯೇ ಉಳಿದಿವೆ. ಇಂದು ಸಹಸ್ರಾರು ರೀತಿಯ ಜಾಹೀರಾತುಗಳು ಬಂದರೂ, ಇಂದಿನ ತಂತ್ರಜ್ಞಾನಕ್ಕೆ ತಕ್ಕಂತೆ ಜಾಹೀರಾತುಗಳಲ್ಲಿ ವಿವಿಧ ನಮೂನೆಗಳನ್ನು ಮಾಡುತ್ತಿದ್ದರೂ, ಅಂದಿನ ಬಹುತೇಕ ಜಾಹೀರಾತುಗಳಲ್ಲಿ ಬರುವ ಹಾಡುಗಳನ್ನು ಮರೆಯಲು ಸಾಧ್ಯವೇ ಇಲ್ಲ ಎನ್ನಬಹುದೇನೋ.

ಅವುಗಳ ಪೈಕಿ ವಾಷಿಂಗ್​ ಪೌಡರ್​ ನಿರ್ಮಾ, ವಿಕೋ ಟರ್ಮರಿಕ್​, ಲೈಫ್​ಬಾಯ್​, ಹಮಾರಾ ಬಜಾಜ್​, ಮೆರೊಲೈಟ್​... ಹೀಗೆ ಹಲವು ಜಾಹೀರಾತು ಸೇರಿವೆ. ಅವುಗಳನ್ನು ಒಂದೇ ವಿಡಿಯೋದಲ್ಲಿ ಕೇಳಿಸಿದರೆ ಹೇಗೆ ಇರುತ್ತದೆ? ಆ ದಿನಗಳನ್ನು ನೆನಪುಮಾಡಿಕೊಳ್ಳುವ ಸೊಗಸಾದ ವಿಡಿಯೋ ಒಂದು ಇದೀಗ ವೈರಲ್​ ಆಗಿದೆ. ಇದರಲ್ಲಿ ವಾಷಿಂಗ್​ ಪೌಡರ್​ ನಿರ್ಮಾ, ವಿಕೋ ಟರ್ಮರಿಕ್​, ಲೈಫ್​ಬಾಯ್​, ಹಮಾರಾ ಬಜಾಜ್​, ಮೆರೊಲೈಟ್​ ಜಾಹೀರಾತುಗಳನ್ನು ಕೇಳಬಹುದಾಗಿದೆ. ಅದ್ಭುತವಾಗಿ ಎಲ್ಲವನ್ನೂ ಒಂದೇ ಕಡೆ ಹಾಡಲಾಗಿದೆ. ಇದನ್ನು ಈಗಿನ ಪೀಳಿಗೆಯವರು ನೋಡಿದರೆ ಅಬ್ಬಾ ನಿಜವಾಗಿಯೂ ಜಾಹೀರಾತುಗಳು ಇಷ್ಟೊಂದು ಸುಂದರವಾಗಿದ್ದವೇ ಎಂದು ಕೇಳುವಂತಿದೆ.

ಸಾಮಾನ್ಯವಾಗಿ ಟಿವಿಗಳಲ್ಲಿ ಜಾಹೀರಾತು ಬಂದಾಗ ಪ್ಚಿ ಪ್ಚಿ ಎಂದು ಹೇಳುವುದು ಉಂಟು. ಇನ್ನು ಯುಟ್ಯೂಬ್​ಗಳಲ್ಲಿ ಜಾಹೀರಾತುಗಳನ್ನು ಸ್ಕಿಪ್​ ಮಾಡಿ ನೋಡುವುದು ಇದೆ, ಕೆಲವೊಮ್ಮೆ ಅವರು ಹೆಚ್ಚಿಗೆ ದುಡ್ಡು ಕೊಟ್ಟಾಗ ಸ್ಕಿಪ್​ ಆಪ್ಷನ್​ ಇರುವುದಿಲ್ಲ, ಆ ಸಮಯದಲ್ಲಿ ಅಯ್ಯೋ ಇದೊಂದು ಎಂದು ಬೈದುಕೊಳ್ಳುವುದು ಇದೆ. ಆದರೆ, ಈ ಜಾಹೀರಾತುಗಳ ಹಾಡುಗಳನ್ನು ಕೇಳಿದರೆ ಮತ್ತೊಮ್ಮೆ, ಮಗದೊಮ್ಮೆ ಕೇಳಬೇಕು ಎನ್ನಿಸುತ್ತದೆ.

ಮಾಧ್ಯಮಗಳಲ್ಲಿ ಮಾತ್ರವಲ್ಲದೇ ಜಾಹೀರಾತು ಎನ್ನುವುದು ಈಗ ದೊಡ್ಡ ಮಾರುಕಟ್ಟೆಯಾಗಿ ಬೆಳೆದಿದೆ. ಭಾರತೀಯ ಜಾಹೀರಾತು ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿದ್ದು, 2024 ರಲ್ಲಿ 908.6 ಬಿಲಿಯನ್ ರೂ. ಮೀರಿದೆ ಮತ್ತು 2033 ರ ವೇಳೆಗೆ 2,118.8 ಬಿಲಿಯನ್ ರೂ. ತಲುಪುವ ನಿರೀಕ್ಷೆಯಿದೆ. ಡಿಜಿಟಲ್ ಜಾಹೀರಾತು ಒಂದು ಪ್ರಮುಖ ಚಾಲಕವಾಗಿದೆ. ಡಿಜಿಟಲ್ ಮಾಧ್ಯಮವು ಒಟ್ಟು ಜಾಹೀರಾತು ವೆಚ್ಚದ ಗಮನಾರ್ಹ ಭಾಗವನ್ನು ಕೊಡುಗೆ ನೀಡುತ್ತದೆ. ಭಾರತವು ಜಾಗತಿಕವಾಗಿ ಉನ್ನತ ಜಾಹೀರಾತು ಮಾರುಕಟ್ಟೆಗಳಲ್ಲಿ ಒಂಬತ್ತನೇ ಸ್ಥಾನದಲ್ಲಿದೆ, ಯುಎಸ್, ಚೀನಾ, ಯುಕೆ, ಜಪಾನ್ ಮತ್ತು ಜರ್ಮನಿ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ.

 

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!