ನ. 29ರಿಂದ ಬೆಂಗಳೂರು ಟೆಕ್‌ ಶೃಂಗ: ಸಚಿವ ಪ್ರಿಯಾಂಕ್‌ ಖರ್ಗೆ

By Kannadaprabha News  |  First Published Nov 26, 2023, 5:44 AM IST

26ನೇ ಆವೃತ್ತಿಯ ಬೆಂಗಳೂರು ಶೃಂಗಸಭೆಯ ಮೂಲಕ ರಾಜ್ಯದ ಐಟಿ-ಬಿಟಿ ಕ್ಷೇತ್ರದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ‘ಬ್ರೇಕಿಂಗ್ ಬೌಂಡರೀಸ್’ ಅಡಿಬರಹದಲ್ಲಿ ಶೃಂಗಸಭೆ ನಡೆಯಲಿದ್ದು, 30 ದೇಶಗಳ ಟೆಕ್‌ ನಾಯಕರು, ಸ್ಟಾರ್ಟ್‌ಅಪ್‌ಗಳು, ಹೂಡಿಕೆದಾರರು ಮತ್ತು ಸಂಶೋಧನಾ ಪ್ರಯೋಗಾಲಯಗಳು ಪಾಲ್ಗೊಳ್ಳುತ್ತಿವೆ: ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ 


ಬೆಂಗಳೂರು(ನ.26):  ಮಾಹಿತಿ ತಂತ್ರಜ್ಞಾನ ಇಲಾಖೆ ಮತ್ತು ಭಾರತ ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್‌ ಸಹಯೋಗದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನ. 29ರಿಂದ ಡಿ.1ರವರೆಗೆ ಬೆಂಗಳೂರು ಟೆಕ್‌ ಶೃಂಗಸಭೆ 2023 ಆಯೋಜಿಸಲಾಗಿದೆ. ಈ ಬಾರಿಯ ಟೆಕ್‌ಶೃಂಗ ಸಭೆಯು ‘ಬ್ರೇಕಿಂಗ್ ಬೌಂಡರೀಸ್’ ಅಡಿಬರಹದಲ್ಲಿ ನಡೆಯಲಿದ್ದು, 30ಕ್ಕೂ ಹೆಚ್ಚಿನ ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 26ನೇ ಆವೃತ್ತಿಯ ಬೆಂಗಳೂರು ಶೃಂಗಸಭೆಯ ಮೂಲಕ ರಾಜ್ಯದ ಐಟಿ-ಬಿಟಿ ಕ್ಷೇತ್ರದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ‘ಬ್ರೇಕಿಂಗ್ ಬೌಂಡರೀಸ್’ ಅಡಿಬರಹದಲ್ಲಿ ಶೃಂಗಸಭೆ ನಡೆಯಲಿದ್ದು, 30 ದೇಶಗಳ ಟೆಕ್‌ ನಾಯಕರು, ಸ್ಟಾರ್ಟ್‌ಅಪ್‌ಗಳು, ಹೂಡಿಕೆದಾರರು ಮತ್ತು ಸಂಶೋಧನಾ ಪ್ರಯೋಗಾಲಯಗಳು ಪಾಲ್ಗೊಳ್ಳುತ್ತಿವೆ ಎಂದು ಹೇಳಿದರು.

Tap to resize

Latest Videos

ಅದಾನಿಗೆ ಕ್ಲೀನ್‌ಚಿಟ್‌ ಕೊಡುತ್ತಾ ಸುಪ್ರೀಂಕೋರ್ಟ್‌? ಮತ್ತೆ ಶುರುವಾಯ್ತು ಶುಕ್ರದೆಸೆ; 1.6 ಲಕ್ಷ ಕೋಟಿ ಲಾಭ!

ನ.29ರಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೃಂಗಸಭೆಯನ್ನು ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಚಿವರಾದ ಎಂ.ಬಿ. ಪಾಟೀಲ್‌, ಬೋಸರಾಜು ಭಾಗವಹಿಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಕಜಕಿಸ್ತಾನದ ಸಚಿವರಾದ ಬಗ್ದತ್‌ ಮುಸ್ಸಿನ್‌, ಮಾರ್ಕ್‌ ಪೇಪರ್ಮಾಸ್ಟರ್‌ ಭಾಗವಹಿಸಲಿದ್ದಾರೆ. ಹಾಗೆಯೇ, ಫಿನ್‌ಲ್ಯಾಂಡ್‌ನ ಸಚಿವೆ ಸಾರಿ ಮುಲ್ತಾಲಾ, ಜರ್ಮನಿ ಸಚಿವ ವೋಲ್ಕರ್‌ ವಿಸ್ಸಿಂಗ್‌ ವೀಡಿಯೋ ಸಂದೇಶ ನೀಡಲಿದ್ದಾರೆ ಎಂದರು.

ಶೃಂಗಸಭೆಯಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್‌ ಕ್ಷೇತ್ರದ ಕುರಿತು ಸಂವಾದ, ಡೀಪ್‌ ಟೆಕ್‌, ಸ್ಟಾರ್ಟ್‌ಅಪ್‌, ಬಯೋಟೆಕ್‌ ಕುರಿತ ಅಂತಾರಾಷ್ಟ್ರೀಯ ಪ್ರದರ್ಶನ ಇರಲಿದೆ. ಜಾಗತಿಕ ಆವಿಷ್ಕಾರಗಳ ಒಡಂಬಡಿಕೆ, ಭಾರತ-ಅಮೆರಿಕಾ ಕಾನ್‌ಕ್ಲೇವ್‌ ನಡೆಯಲಿದೆ. ಎಸ್‌ಟಿಪಿಐ-ಐಟಿ ರಫ್ತು ಪ್ರಶಸ್ತಿ, ಸ್ಮಾರ್ಟ್‌ಬಯೋ ಪ್ರಶಸ್ತಿಗಳು, ವಿಸಿ ಪ್ರಶಸ್ತಿ, ಎಟಿಎಫ್‌ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು, ಗ್ರಾಮೀಣ ಐಟಿ ರಸಪ್ರಶ್ನೆ ಸೇರಿದಂತೆ ಐಟಿ-ಬಿಟಿಗೆ ಸಂಬಂಧಿಸಿದ ವಿವಿಧ ಸ್ಪರ್ಧೆಗಳು ನಡೆಯಲಿವೆ. ಶೃಂಗಸಭೆ ಕುರಿತು ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ www.bengalurutechsummit.comಗೆ ಬೇಟಿ ನೀಡಬಹುದು ಎಂದು ವಿವರಿಸಿದರು.

ಉದ್ಯಮಿಯಾಗಲು ಕ್ರಿಕೆಟ್‌ಗೆ ವಿದಾಯ ಹೇಳಿ, 100 ಕೋಟಿ ರೂ ಕಂಪೆನಿ ಕಟ್ಟಿದ ಆಟಗಾರ!

ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಅವರೊಂದಿಗೆ ಸಂವಾದ ಇರಲಿದೆ. ನೋಬೆಲ್‌ ಪ್ರಶಸ್ತಿ ವಿಜೇತ ಅಮೆರಿಕನ್‌ ಜೀವಶಾಸ್ತ್ರಜ್ಞ ಡಾ. ಎಚ್‌.ರಾಬರ್ಟ್‌ ಹಾರ್ವಿಟ್ಜ್‌ ಸೇರಿದಂತೆ ಹಲವರು ಶೃಂಗಸಭೆಯಲ್ಲಿ ಪಾಲ್ಗೊಂಡು ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ. ಐಟಿಇ ಮತ್ತು ಡೀಪ್‌ ಟೆಕ್‌ ಟ್ರ್ಯಾಕ್‌ ಜಿಸಿಸಿಗಳಿಗೆ ಅವಕಾಶ, ಕೃತಕ ಬುದ್ಧಿಮತ್ತೆ, ಸುಸ್ಥಿರತೆಗಾಗಿ ತಂತ್ರಜ್ಞಾನ, ಭವಿಷ್ಯದ ಚಲನಶೀಲತೆ, ಸೈಬರ್‌ ಸುರಕ್ಷತೆ ಮತ್ತು ಸೈಬರ್‌ ವಾರ್‌ಫೇರ್‌, 5ಜಿ ಅಳವಡಿಕೆ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಸಂವಾದಗಳು ನಡೆಯಲಿವೆ ಎಂದು ತಿಳಿಸಿದರು.

ಚಂದ್ರಯಾನ ಕುರಿತು ವಿಶೇಷ ಪ್ರದರ್ಶನ

ದೇಶಕ್ಕೆ ಹೆಮ್ಮೆ ತಂದ ಚಂದ್ರಯಾನ 3ರ ಕುರಿತು ವಿಶೇಷ ಪ್ರದರ್ಶನ ಏರ್ಪಡಿಸಲಾಗುತ್ತಿದೆ. ಅದರಲ್ಲಿ ಚಂದ್ರಯಾನ 3 ಕಾರ್ಯಗತಗೊಂಡಿದ್ದು, ಅದರಲ್ಲಿ ಬಳಸಿದ ವಸ್ತುಗಳ ಪ್ರದರ್ಶನವಿರಲಿದೆ. ಅಲ್ಲದೆ, ಚಂದ್ರಯಾನ 3 ಅನುಭವ ನೀಡಲು ಸಿಮ್ಯುಲೇಷನ್‌ಗಳನ್ನು ಅಳವಡಿಸಲಾಗುತ್ತಿದೆ. ಚಂದ್ರಯಾನ 3 ಸಾಕಾರಗೊಳ್ಳಲು ವಸ್ತುಗಳನ್ನು ಪೂರೈಸಿದ ಎಲ್ಲ ಸಂಸ್ಥೆಗಳಿಗೂ ಪ್ರದರ್ಶನದಲ್ಲಿ ಅವಕಾಶ ಕೊಡಲಾಗುತ್ತಿದೆ ಎಂದು ಪ್ರಿಯಾಂಕ್‌ ಖರ್ಗೆ ತಿಳಿಸಿದರು.

click me!