ಅದಾನಿಗೆ ಕ್ಲೀನ್‌ಚಿಟ್ ಕೊಡುತ್ತಾ ಸುಪ್ರೀಂಕೋರ್ಟ್? ಮತ್ತೆ ಶುರುವಾಯ್ತು ಶುಕ್ರದೆಸೆ; 1.6 ಲಕ್ಷ ಕೋಟಿ ಲಾಭ!
ಅದಾನಿ ಸಮೂಹ ಸಂಸ್ಥೆಗಳ ವಿರುದ್ಧದ ವಂಚನೆ ಆರೋಪಗಳ ಪರಿಶೀಲನೆಗೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಿಚಾರಣೆ ಮುಗಿಸಿದ್ದು, ತೀರ್ಪು ಕಾಯ್ದಿರಿಸಿದೆ. ನಂತರ,
ಶುಕ್ರವಾರ ಒಂದೇ ದಿನ ಅದಾನಿ ಗ್ರೂಪ್ ಕಂಪನಿಗಳ ಷೇರುಗಳ ಮೌಲ್ಯ ಸುಮಾರು 15 ಸಾವಿರ ಕೋಟಿ ರೂ. ನಷ್ಟು ಹೆಚ್ಚಾಗಿದೆ.
ದೇಶದ ನಂ. 1 ಶ್ರೀಮಂತ ಎನಿಸಿಕೊಂಡಿದ್ದ ಗೌತಮ್ ಅದಾನಿ, ಹಿಂಡೆನ್‌ಬರ್ಗ್ ವರದಿ ಹೊರಬಂದ ಬಳಿಕ ಲಕ್ಷಾಂತರ ಕೋಟಿ ರೂ. ನಷ್ಟ ಅನುಭವಿಸಿದೆ. ಇಷ್ಟು ದೊಡ್ಡ ಮೊತ್ತದ ಆಸ್ತಿ ಮೌಲ್ಯ ಕಳೆದುಕೊಂಡಿದ್ದು ಮಾತ್ರವಲ್ಲದೆ, ಈ ವರದಿ ಬಗ್ಗೆ ಸೆಬಿ ತನಿಖೆಯನ್ನೂ ನಡೆಸಿದೆ.
ಈಗ ಅವರ ಭವಿಷ್ಯ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ನಿರ್ಧಾರವಾಗಲಿದೆ. ಆದರೂ, ಇತ್ತೀಚೆಗೆ ಅದಾನಿಗೆ ಮತ್ತೆ ಶುಕ್ರದೆಸೆ ಮರಳಿದೆ ಎನ್ನಬಹುದು.
ಶುಕ್ರವಾರ ಒಂದೇ ದಿನ ಅದಾನಿ ಗ್ರೂಪ್ ಕಂಪನಿಗಳ ಷೇರುಗಳ ಮೌಲ್ಯ ಸುಮಾರು 15 ಸಾವಿರ ಕೋಟಿ ರೂ. ನಷ್ಟು ಹೆಚ್ಚಾಗಿದೆ. ಅಲ್ಲದೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಅದಾನಿ ಗ್ರೂಪ್ 1.67 ಲಕ್ಷ ಕೋಟಿ ರೂ. ಅಸ್ತಿಯನ್ನು ಮತ್ತೆ ಹೆಚ್ಚಿಸಿಕೊಂಡಿದೆ.
ಅಂದಹಾಗೆ, ಶುಕ್ರವಾರ ಒಂದೇ ದಿನ ಸುಮಾರು 15,000 ಕೋಟಿ ರೂ. ನಷ್ಟು ಆಸ್ತಿ ಮೌಲ್ಯ ಹೆಚ್ಚಳಕ್ಕೆ ಕಾರಣವೇ ಸುಪ್ರೀಂಕೋರ್ಟ್. ಸಮೂಹ ಸಂಸ್ಥೆಗಳ ವಿರುದ್ಧದ ವಂಚನೆ ಆರೋಪಗಳ ಪರಿಶೀಲನೆಗೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಿಚಾರಣೆ ಮುಗಿಸಿದ್ದು, ತೀರ್ಪು ಕಾಯ್ದಿರಿಸಿದೆ.
ಗೌತಮ್ ಅದಾನಿಯವರ ಕಂಪನಿಗಳಲ್ಲಿ "ಯಾವುದೇ ಸ್ಪಷ್ಟವಾದ ಮ್ಯಾನಿಪ್ಯುಲೇಷನ್ ಮಾದರಿಯನ್ನು" ನೋಡಿಲ್ಲ ಮತ್ತು ಯಾವುದೇ ನಿಯಂತ್ರಣ ವೈಫಲ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ನೇಮಿಸಿದ ತಜ್ಞರ ಸಮಿತಿಯು ಮೇ ತಿಂಗಳಲ್ಲಿ ಮಧ್ಯಂತರ ವರದಿ ನೀಡಿತ್ತು.
ಇನ್ನು, ಅದಾನಿ ಗ್ರೂಪ್ ಅನ್ನು ಗುರಿಯಾಗಿಸಿಕೊಂಡು ಜಾರ್ಜ್ ಸೊರೊಸ್ ಅನುದಾನಿತ ಗುಂಪಿನ ವರದಿಗೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅರ್ಜಿದಾರರ ವಿರುದ್ಧ ಕಠಿಣ ಪ್ರಶ್ನೆಗಳನ್ನು ಎತ್ತಿದೆ.
ನಾವು ವಿದೇಶಿ ವರದಿಗಳನ್ನು ಏಕೆ ಸತ್ಯವೆಂದು ತೆಗೆದುಕೊಳ್ಳಬೇಕು? ನಾವು ವರದಿಯನ್ನು ತಿರಸ್ಕರಿಸುತ್ತಿಲ್ಲ, ಆದರೆ ನಮಗೆ ಪುರಾವೆ ಬೇಕು. ಹಾಗಾದರೆ ಅದಾನಿ ಗ್ರೂಪ್ ವಿರುದ್ಧ ನಿಮ್ಮ ಬಳಿ ಏನು ಪುರಾವೆ ಇದೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಅರ್ಜಿದಾರರ ಪರ ವಕೀಲ ಪ್ರಶಾಂತ್ ಭೂಷಣ್‌ಗೆ ಪ್ರಶ್ನೆ ಮಾಡಿದ್ದಾರೆ.
ಅಲ್ಲದೆ, ಸೆಬಿ ಒಂದು ಶಾಸನಬದ್ಧ ಸಂಸ್ಥೆಯಾಗಿದ್ದು, ಸ್ಟಾಕ್ ಮಾರ್ಕೆಟ್ ಮ್ಯಾನಿಪ್ಯುಲೇಷನ್ ತನಿಖೆ ಮಾಡಲು ಪ್ರತ್ಯೇಕವಾಗಿ ವಹಿಸಲಾಗಿದೆ. ಈ ಹಿನ್ನೆಲೆ ನಾವು ಸೆಬಿಯನ್ನು ನಂಬುವುದಿಲ್ಲ ಮತ್ತು ನಮ್ಮದೇ ಆದ ಎಸ್‌ಐಟಿ ರಚಿಸುತ್ತೇವೆ ಎಂದು ನ್ಯಾಯಾಲಯ ಹೇಳುವುದು ಸರಿಯೇ ಎಂದೂ ಕೇಳಿದ್ದಾರೆ.
ಸುಪ್ರಿಂಕೋರ್ಟ್ ಈ ಅಭಿಪ್ರಾಯ ನೀಡಿದ ಬಳಿಕ ಅದಾನಿ ಗ್ರೂಪ್ ಷೇರುಗಳ ಮೌಲ್ಯ ಒಂದೇ ದಿನದಲ್ಲಿ ಸುಮಾರು 15 ಸಾವಿರ ಕೋಟಿ ರೂ. ನಷ್ಟು ಹೆಚ್ಚಾಗಿದೆ. ಅದಾನಿಗೆ ಕ್ಲೀನ್‌ಚಿಟ್ ಕೊಡ್ಬೋದಾ ಎಂದೂ ಹೇಳಲಾಗ್ತಿದೆ. ಈ ಹಿನ್ನೆಲೆ 10 ಲಿಸ್ಟೆಡ್ ಗ್ರೂಪ್ ಕಂಪನಿಗಳಲ್ಲಿ 9 ಷೇರುಗಳ ಮೌಲ್ಯ ಹೆಚ್ಚಾಗಿದೆ. ಈ ಕಾರಣಕ್ಕೆ ಮಾರುಕಟ್ಟೆ ಬಂಡವಾಳದಲ್ಲಿ 14,786 ಕೋಟಿ ರೂಪಾಯಿಗಳನ್ನು ಸೇರಿಸಿದೆ ಎಂದು ಷೇರು ವಿನಿಮಯದ ಅಂಕಿಅಂಶಗಳು ತೋರಿಸಿವೆ.
10 ಅದಾನಿ ಗ್ರೂಪ್ ಕಂಪನಿಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು ಶುಕ್ರವಾರದ ವಹಿವಾಟಿನ ಮುಕ್ತಾಯದ ವೇಳೆಗೆ ಸುಮಾರು 10.26 ಲಕ್ಷ ಕೋಟಿ ರೂ.ಗಳಾಗಿದ್ದು, ಹಿಂದಿನ ದಿನದ 10.11 ಲಕ್ಷ ಕೋಟಿ ರೂ. ಗಿಂತ ಹೆಚ್ಚಾಗಿದೆ.
ಇನ್ನು, ಸ್ಟಾಕ್ ಬೆಲೆಗಳ ಏರಿಕೆಯು ಹೂಡಿಕೆದಾರರು ಗುಂಪಿನಲ್ಲಿ ನಂಬಿಕೆಯನ್ನು ಮರುಸ್ಥಾಪಿಸುವುದರ ಸಂಕೇತವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಅಲ್ಲದೆ, ಇನ್ಮುಮದೆ ಅದಾನಿ ಗ್ರೂಪ್ ಷೇರುಗಳ ಮೌಲ್ಯ ಹಾಗೂ ಕಂಪನಿಯ ಮಾರುಕಟ್ಟೆ ಬಂಡವಾಳ ಮತ್ತಷ್ಟು ಹೆಚ್ಚಾಗಲಿದೆ ಎಂದೂ ಆಶಿಸಲಾಗಿದೆ.
ಅದಾನಿ ಗ್ರೂಪ್‌ನ 10 ಸ್ಟಾಕ್‌ಗಳಲ್ಲಿ 9ರ ಷೇರು ಮೌಲ್ಯ ಹೆಚ್ಚಾಗಿದ್ದು, ಈ ಪೈಕಿ ಸಮೂಹದ ಪ್ರಮುಖ ಸಂಸ್ಥೆಯಾದ ಅದಾನಿ ಎಂಟರ್‌ಪ್ರೈಸಸ್ ಶೇಕಡಾ 2.3 ರಷ್ಟು ಜಿಗಿದಿದೆ. ಇತರ ಗಮನಾರ್ಹ ಲಾಭದಾಯಕಗಳಲ್ಲಿ ಅದಾನಿ ಪವರ್ ಸೇರಿದ್ದು, 4.06 ಶೇಕಡಾವನ್ನು ಗಳಿಸಿದೆ, ಅದರ ಮಾರುಕಟ್ಟೆ ಮೌಲ್ಯವು 1.5 ಲಕ್ಷ ಕೋಟಿಗೆ ಏರಿಕೆಯಾಗಿದೆ.
ಹಾಗೆ, ಅದಾನಿ ಟೋಟಲ್ ಗ್ಯಾಸ್ (ಶೇ 1.2), ಅದಾನಿ ಎನರ್ಜಿ ಸೊಲ್ಯೂಷನ್ಸ್ (ಶೇ 0.84), ಮತ್ತು ಅದಾನಿ ಗ್ರೀನ್ ಎನರ್ಜಿ (ಶೇ 0.77) ಸಹ ಲಾಭಗಳಿಸಿದೆ. ಆದರೆ, ಅಂಬುಜಾ ಸಿಮೆಂಟ್ ಮಾತ್ರ ಶೇ.0.31ರಷ್ಟು ಕುಸಿತ ಕಂಡಿದ್ದು, ಷೇರುಗಳ ಮೌಲ್ಯ ಕುಸಿದಿದೆ.