ಮೆಟ್ರೋ ಕ್ಯೂಆರ್ ಕೋಡ್ ಬಳಕೆದಾರರ ಹೆಚ್ಚಳ, ಮೂರು ತಿಂಗಳಲ್ಲಿ ಬರೋಬ್ಬರಿ 6.19 ಕೋಟಿ ಹೆಚ್ಚುವರಿ ಆದಾಯ!

Published : May 28, 2023, 03:13 PM ISTUpdated : May 28, 2023, 03:15 PM IST
ಮೆಟ್ರೋ ಕ್ಯೂಆರ್ ಕೋಡ್ ಬಳಕೆದಾರರ ಹೆಚ್ಚಳ, ಮೂರು ತಿಂಗಳಲ್ಲಿ ಬರೋಬ್ಬರಿ 6.19 ಕೋಟಿ ಹೆಚ್ಚುವರಿ ಆದಾಯ!

ಸಾರಾಂಶ

ನಮ್ಮ ಮೆಟ್ರೋ ಕ್ಯೂಆರ್ ಕೋಡ್ ಬಳಸಿ ಬರೋಬ್ಬರಿ 8.5ಲಕ್ಷ ಜನ ಓಡಾಡಿದ್ದಾರೆ. ಇದರ ಜೊತೆಗೆ ಕಳೆದ ಮೂರು ತಿಂಗಳಲ್ಲಿ ಮೆಟ್ರೋ ಆದಾಯವು ಗಣನೀಯ ವಾಗಿ ಹೆಚ್ಚಳವಾಗಿದೆ.

ಬೆಂಗಳೂರು (ಮೆ.28): ನಮ್ಮ ಮೆಟ್ರೋ ಕ್ಯೂಆರ್ ಕೋಡ್ ಬಳಸಿ ಬರೋಬ್ಬರಿ 8.5ಲಕ್ಷ ಜನ ಓಡಾಡಿದ್ದಾರೆ. ನವೆಂಬರ್ ತಿಂಗಳಲ್ಲಿ ಪ್ರಾರಂಭಿಸಲಾಗಿದ್ದ ಕ್ಯೂ ಆರ್ ಕೋಡ್ ಸೇವೆಗೆ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ. ಮೆಟ್ರೋದಲ್ಲಿ ತ್ವರಿತ ಪ್ರಯಾಣಕ್ಕೆ ಉಪಯೋಗವಾಗುವಂತೆ ಬಿಎಂಆರ್‌ಸಿಎಲ್  ಈ ಸೇವೆ ನೀಡಿತ್ತು. ಜೊತೆಗೆ 5% ರಿಯಾಯಿತಿಯನ್ನೂ ಕೂಡ BMRCL ಕೊಟ್ಟಿತ್ತು. ಹೀಗಾಗಿ ನಾಲ್ಕು ತಿಂಗಳಲ್ಲಿ ನಾಲ್ಕು ಬಳಕೆದಾರರು ಏರಿಕೆ ಕಂಡಿದ್ದಾರೆ. ಎಪ್ರಿಲ್ ಅಂತ್ಯದ ವೇಳೆಗೆ ಕ್ಯೂಆರ್ ಕೋಡ್ ಮತ್ತು  ವಾಟ್ಸಾಪ್  ಚಾಟ್ ಬಾಟ್ ಬಳಸಿದ ಪ್ರಯಾಣಿಕರು 31.80 ಲಕ್ಷ ಮಂದಿ. ಈ ಮೂಲಕ ಸರಾಸರಿ 25ಸಾವಿರ ಜನರಿಂದ ನಿಯಮಿತ ಬಳಕೆಯಾಗಿದೆ

ತಿಂಗಳ ಬಳಕೆದಾರರು GFX :
ನವೆಂಬರ್ -2,17,708 ಬಳಕೆದಾರರು
ಡಿಸೆಂಬರ್- 4,39,502 ಬಳಕೆದಾರರು
ಜನವರಿ- 5,21,320 ಬಳಕೆದಾರರು
ಫೆಬ್ರವರಿ- 5,21,320 ಬಳಕೆದಾರರು
ಮಾರ್ಚ್- 6,63,956 ಬಳಕೆದಾರರು
ಎಪ್ರಿಲ್- 8,25,424 ಬಳಕೆದಾರರು

ಮೆಟ್ರೋ ಆದಾಯವೂ ಏರಿಕೆ: ಬಿಸಿಲ ಬೇಗೆ, ಹೊಸದಾದ ವೈಟ್‌ಫೀಲ್ಡ್‌ ಐಟಿ ಕಾರಿಡಾರ್‌, ಐಪಿಎಲ್‌ ಕ್ರೀಡಾಕೂಟ ಸೇರಿ ಇತರೆ ಕಾರಣದಿಂದ ‘ನಮ್ಮ ಮೆಟ್ರೋ’ದಲ್ಲಿ ಕಳೆದ ಮೂರು ತಿಂಗಳಲ್ಲಿ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದ್ದು, ಆದಾಯವೂ ಹೆಚ್ಚಳವಾಗಿದೆ. ಕಳೆದ ಫೆಬ್ರವರಿಗೆ ಹೋಲಿಸಿದರೆ ಏಪ್ರಿಲ್‌ನಲ್ಲಿ 25 ಲಕ್ಷಕ್ಕೂ ಅಧಿಕ ಜನ (25,03,193) ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದು, 6.19 ಕೋಟಿ ಹೆಚ್ಚುವರಿ ಆದಾಯ ಬಿಎಂಆರ್‌ಸಿಎಲ್‌ ಬೊಕ್ಕಸ ಸೇರಿದೆ.

ಬಿಸಿಲ ಬೇಗೆಗೆ ಬೇಸತ್ತ ಜನತೆ ಬೈಕ್‌ ಬಿಟ್ಟು ಮೆಟ್ರೋದಲ್ಲಿ ಸಂಚರಿಸುವುದು ಹೆಚ್ಚಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ ಪಂದ್ಯಾಟಗಳ ವೇಳೆ ರೈಲುಗಳ ಸಂಚಾರ ಅವಧಿ ವಿಸ್ತರಣೆ ಮಾಡಲಾಗಿತ್ತು. ಈ ವೇಳೆ ನಿತ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರು ಮೆಟ್ರೋ ಬಳಸಿದ್ದಾರೆ. ಇದರಲ್ಲದೆ ಐಟಿ ಕಾರಿಡಾರ್‌ ಕೂಡ ಹೆಚ್ಚಿನ ಪ್ರಯಾಣಿಕರನ್ನು ಮೆಟ್ರೋಗೆ ಒದಗಿಸಿದೆ.

ಕಳೆದ ಫೆಬ್ರವರಿಯಲ್ಲಿ 1.46 ಕೋಟಿ ಜನರು ಪ್ರಯಾಣಿಸಿದ್ದು, .34.90 ಕೋಟಿ ಆದಾಯಗಳಿಸಿತ್ತು. ಫೆ.6ರಂದು ಒಂದೇ ದಿನ .1.48 ಕೋಟಿ ಆದಾಯ ಗಳಿಸಿತ್ತು. ಈ ವೇಳೆ ಶೇ.60.35 ಪ್ರಯಾಣಿಕರು ಸ್ಮಾರ್ಚ್‌ ಕಾರ್ಡ್‌ಗಳನ್ನು ಶೇ.39.59 ಟೋಕನ್‌ಗಳನ್ನು, ಮತ್ತು ಶೇ.0.06 ಗ್ರೂಪ್‌ ಟಿಕೆಟನ್ನು ಬಳಸಿದ್ದರು.

ಮಾಚ್‌ರ್‍ನಲ್ಲಿ 1.60 ಕೋಟಿ ಜನರು ಪ್ರಯಾಣಿಸಿದ್ದು, .38.36 ಕೋಟಿ ಆದಾಯ ಗಳಿಸಿತ್ತು. ಮಾ.4ರಂದು ಒಂದೇ ದಿನದಲ್ಲಿ .1.48 ಕೋಟಿ ಆದಾಯ ಹರಿದುಬಂದಿತ್ತು. ಶೇ.59.85 ಪ್ರಯಾಣಿಕರು ಸ್ಮಾರ್ಚ್‌ಕಾರ್ಡ್‌ಗಳನ್ನು, ಶೇ.40.09 ಟೋಕನ್‌ಗಳನ್ನು ಮತ್ತು ಶೇ.0.06 ಗ್ರೂಪ್‌ ಟಿಕೆಟ್‌ ಬಳಸಿದ್ದಾರೆ.

Bengaluru: ಡಿಸೆಂಬರ್‌ನಲ್ಲಿ ಬೊಮ್ಮಸಂದ್ರಕ್ಕೆ ನಮ್ಮ ಮೆಟ್ರೋ: ಶೇ.80ರಷ್ಟು ಟ್ರ್ಯಾಕ್‌ ಅಳವಡಿಕೆ ಪೂರ್ಣ

ಕಳೆದ ತಿಂಗಳಲ್ಲಿ 1.71 ಕೋಟಿ ಪ್ರಯಾಣಿಕರು ಮೆಟ್ರೋ ಬಳಸಿದ್ದು .41.10 ಕೋಟಿ ಆದಾಯ ಗಳಿಸಿದೆ. ಏ.3ರಂದು 1.64 ಕೋಟಿ ಆದಾಯ ಗಳಿಸಿದೆ. ಶೇ.54.50 ಸ್ಮಾರ್ಚ್‌ ಕಾರ್ಡ್‌ಗಳನ್ನು, ಶೇ.45.45 ಟೋಕನ್‌ಗಳನ್ನು ಮತ್ತು ಶೇ.0.05 ಗ್ರೂಪ್‌ ಟಿಕೆಟನ್ನು ಬಳಸಿದ್ದಾರೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

 

ಚಾಲಕರಹಿತ ‘ನಮ್ಮ ಮೆಟ್ರೋ’ ನಿರ್ವಹಣೆಗೆ ಬೈಯಪ್ಪನಹಳ್ಳಿ ಡಿಪೋ ಬಳಿ ಹೊಸ ಕೇಂದ್ರ ನಿರ್ಮಾಣ

ಇದರ ಜೊತೆಗೆ ಮೆಟ್ರೋದ ಮೊದಲ ಟೆಕ್‌ ಕಾರಿಡಾರ್‌ ಆಗಿರುವ ಕೆ.ಆರ್‌.ಪುರ ಹಾಗೂ ವೈಟ್‌ಫೀಲ್ಡ್‌ ಮಾರ್ಗ ತೆರೆದುಕೊಂಡಿರುವುದು ಕೂಡ ಪ್ರಯಾಣಿಕರು ಹಾಗೂ ಆದಾಯ ಹೆಚ್ಚಳವಾಗಲು ಕಾರಣ ಎನ್ನುತ್ತಾರೆ ಬಿಎಂಆರ್‌ಸಿಎಲ್‌ ಅಧಿಕಾರಿಗಳು. ಜುಲೈ ಮಧ್ಯಂತರದ ವೇಳೆಗೆ ಬೈಯಪ್ಪನಹಳ್ಳಿಯಿಂದ ಕೆ.ಆರ್‌.ಪುರದವರೆಗೆ ಕಾಮಗಾರಿ ಪೂರ್ಣಗೊಂಡು ಈ ಮಾರ್ಗ ಪೂರ್ಣವಾದಲ್ಲಿ ನಿತ್ಯ ಒಂದೂವರೆ ಲಕ್ಷ ಹೆಚ್ಚುವರಿ ಪ್ರಯಾಣಿಕರು ಮೆಟ್ರೋ ಬಳಸುವ ನಿರೀಕ್ಷೆಯಿದ್ದು, ಪ್ರಯಾಣಿಕರ ಸಂಖ್ಯೆ ಮತ್ತಷ್ಟುಏರಿಕೆಯಾಗಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಹೇಳುತ್ತಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!
ಡಿಸೆಂಬರ್‌ 31ರ ಒಳಗೆ ಈ ಇಂಪಾರ್ಟೆಂಟ್‌ ಕೆಲಸ ಪೂರ್ತಿ ಮಾಡಿ, ಮತ್ತೆ ಸರ್ಕಾರ ಈ ಅವಕಾಶ ನೀಡಲ್ಲ..!