
ನವದೆಹಲಿ(ಜೂ.18): ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಹಣಕಾಸು ಸಚಿವರ ತಂಡವು ಸರಕು ಮತ್ತು ಸೇವಾ ತೆರಿಗೆ ಜಿಎಸ್‌ಟಿ ಸ್ತರ ಬದಲಾವಣೆಯ ಕುರಿತು ಚರ್ಚಿಸಲು ನಿನ್ನೆ(ಶುಕ್ರವಾರ) ನಡೆಸಿದ ಸಭೆ ಒಮ್ಮತಕ್ಕೆ ಬರಲು ವಿಫಲವಾಗಿದೆ. ಈ ಸಮಿತಿಯ ಕೆಲವು ಸದಸ್ಯರು ತೆರಿಗೆ ಸ್ಲಾಬ್ ಮತ್ತು ದರವನ್ನು ಬದಲಾಯಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೀಗಾಗಿ ಕಳೆದ ನ.20ರಂದು ನಡೆದ ಸಭೆಯಲ್ಲಿ ಒಮ್ಮತಕ್ಕೆ ಬರಲಾದ ವಿಷಯಗಳ ಕುರಿತ ಯಥಾಸ್ಥಿತಿಯ ವರದಿಯನ್ನು ಕೇಂದ್ರೀಯ ಜಿಎಸ್ಟಿ ಮಂಡಳಿಗೆ ಸಲ್ಲಿಸಲು ನಿರ್ಧರಿಸಲಾಗಿದೆ. ಮಂಡಳಿ ಸಭೆ ಜೂ.28,29ರಂದು ಶ್ರೀನಗರದಲ್ಲಿ ನಡೆಯಲಿದೆ.
ಮೇನಲ್ಲಿ ಭರ್ಜರಿ 1.41 ಲಕ್ಷ ಕೋಟಿ ರು. ಜಿಎಸ್‌ಟಿ ಆದಾಯ!
ಹಾಲಿ ಶೇ.5, ಶೇ.12, ಶೇ,18 ಮತ್ತು ಶೇ.28ರಷ್ಟಿರುವ ತೆರಿಗೆ ಸ್ತರವನ್ನು ಶೇ.8, ಶೇ.18, ಮತ್ತು ಶೇ.28ಕ್ಕೆ ಬದಲಾಯಿಸುವ ಪ್ರಸ್ತಾಪ ಸಮಿತಿ ಮುಂದಿತ್ತು. ಜೊತೆಗೆ ಹಾಲಿ ತೆರಿಗೆ ಪಟ್ಟಿಯಲ್ಲಿ ಇರದ ಕೆಲ ವಸ್ತುಗಳನ್ನು ತೆರಿಗೆ ಪಟ್ಟಿಗೆ ಸೇರಿಸುವ, ಕೆಲ ವಸ್ತುಗಳನ್ನು ಮೇಲಿನ ತೆರಿಗೆ ಸ್ತರಕ್ಕೆ ಏರಿಸುವ ಪ್ರಸ್ತಾಪವೂ ಮುಂದಿತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.