*ಬ್ಯಾಂಕ್ ಖಾತೆದಾರರು ಕಾಲ ಕಾಲಕ್ಕೆ ಕೆವೈಸಿ ಮಾಹಿತಿ ಅಪ್ಡೇಟ್ ಮಾಡೋದು ಅಗತ್ಯ
*ಕೆವೈಸಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸದ ಗ್ರಾಹಕರ ಖಾತೆ ಸ್ಥಗಿತಗೊಳಿಸದಂತೆ RBI ನೀಡಿದ್ದ ಆದೇಶ ಡಿ.31ಕ್ಕೆ ಮುಗಿಯಲಿದೆ.
*ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಖಾತೆ ಸ್ಥಗಿತಗೊಳಿಸದಂತೆ ಆದೇಶದ ನೀಡಿದ್ದ RBI
ಮುಂಬೈ(ಡಿ.25): ಬ್ಯಾಂಕ್(Bank)ಹಾಗೂ ಹಣಕಾಸು ಸೇವಾ ಸಂಸ್ಥೆಗಳಲ್ಲಿ(Financial Service Organizations) ಖಾತೆ(Account) ಹೊಂದಿರುವ, ತಮ್ಮ ಗುರುತು ಮತ್ತು ವಿಳಾಸ ಪುರಾವೆಗಳನ್ನು(KYC documents) ಒದಗಿಸಲು ವಿಫಲವಾಗಿರುವ ನಾಗರಿಕರ ಖಾತೆಗಳು ಜ.1ರಿಂದ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ‘ನಿಮ್ಮ ಗ್ರಾಹಕರನ್ನು ಅರಿಯಿರಿ’(KYC)ಪ್ರಕ್ರಿಯೆಗಳನ್ನು ಪೂರ್ಣಗೊಳಿಸದ ಗ್ರಾಹಕರ(Customers) ಬ್ಯಾಂಕ್ ಖಾತೆಗಳನ್ನು(Bank accunts)ಕೋವಿಡ್ (COVID) ಹಿನ್ನೆಲೆಯಲ್ಲಿ ಸ್ಥಗಿತಗೊಳಿಸದಂತೆ ಭಾರತೀಯ ರಿಸರ್ವ್ ಬ್ಯಾಂಕ್ (RBI)ನೀಡಿದ್ದ ಆದೇಶದ ಅವಧಿ ಡಿ.31ಕ್ಕೆ ಮುಗಿಯಲಿದೆ. ಹೀಗಾಗಿ ಜ.1ರಿಂದ ಬ್ಯಾಂಕು ಹಾಗೂ ಹಣಕಾಸು ಸಂಸ್ಥೆಗಳು ‘ಕೆವೈಸಿ’ ಆಗದ ತಮ್ಮ ಗ್ರಾಹಕರ ಖಾತೆಗಳನ್ನು ಬಂದ್ ಮಾಡುವ ಸಾಧ್ಯತೆಗಳು ಕಂಡುಬರುತ್ತಿವೆ.
ಯಾವುದೇ ಸಮಯದಲ್ಲಿ ಪರಿಶೀಲಿಸಿದ್ರೂ ನೂರಾರು ಬ್ಯಾಂಕ್ ಗ್ರಾಹಕರ ಕೆವೈಸಿ ಅವಧಿ ಮುಗಿದಿರೋದು ಸಾಮಾನ್ಯ. ಏಕೆಂದ್ರೆ ಕೆವೈಸಿ ಪರಿಷ್ಕರಣೆ ನಿರಂತರ ಪ್ರಕ್ರಿಯೆಯಾಗಿದೆ. ಕಾಲ ಕಾಲಕ್ಕೆ ಕೆವೈಸಿ ಪರಿಷ್ಕರಿಸೋದು ಅಗತ್ಯವಾಗಿದೆ. ಆದ್ರೆ ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಕೆವೈಸಿ ದಾಖಲೆಗಳ ಪರಿಷ್ಕರಣೆಗೆ ಗ್ರಾಹಕರ ಮೇಲೆ ಒತ್ತಡ ಹೇರದಂತೆ ಆರ್ ಬಿಐ ಬ್ಯಾಂಕ್ ಗಳಿಗೆ 2021ರ ಮೇನಲ್ಲಿ ಸುತ್ತೋಲೆ ಹೊರಡಿಸಿತ್ತು. ಆದ್ರೆ ಈ ನಿರ್ದೇಶನದ ಅವಧಿ ಈ ತಿಂಗಳ ಅಂತ್ಯಕ್ಕೆ ಕೊನೆಗೊಳ್ಳಲಿದೆ. ಅಕ್ರಮ ಹಣ ವರ್ಗಾವಣೆ, ಬೇನಾಮಿ ಖಾತೆಗಳು ಹಾಗೂ ತೆರಿಗೆ ವಂಚನೆ ತಡೆಯೋ ಉದ್ದೇಶದಿಂದ ಆರ್ ಬಿಐ ಬ್ಯಾಂಕ್ ಹಾಗೂ ಹಣಕಾಸು ಸೇವಾ ಸಂಸ್ಥೆಗಳಲ್ಲಿ ಖಾತೆ ಹೊಂದಿರೋ ಗ್ರಾಹಕರು ಕೆವೈಸಿ ದಾಖಲೆಗಳನ್ನು ನೀಡೋದನ್ನು ಕಡ್ಡಾಯ ಮಾಡಿತ್ತು.
undefined
Aadhaar card: ಆಧಾರ್ ಕಾರ್ಡ್ ಕಳೆದು ಹೋಗಿದೆಯಾ? ಮರಳಿ ಪಡೆಯಲು ಹೀಗೆ ಮಾಡಿ
ಎಷ್ಟು ವರ್ಷಕ್ಕೊಮ್ಮೆ KYC ಪರಿಷ್ಕರಣೆ ಮಾಡಬೇಕು?
ಅಕ್ರಮ ಹಣ ವರ್ಗಾವಣೆ ಕಾಯ್ದೆಯ (Anti-money laundering Act) ಭಾಗವಾಗಿರುವುದರಿಂದ ಗ್ರಾಹಕರು ಬ್ಯಾಂಕ್ ಮಾತ್ರವೇ ಅಲ್ಲದೆ ಮ್ಯೂಚುವಲ್ ಫಂಡ್(Mutual Fund),ಬ್ರೋಕಿಂಗ್ ಸಂಸ್ಥೆ(Broking organization), ಡೆಪಾಸಿಟರೀಸ್‌ನಂತಹ ಹಣಕಾಸು ಸಂಸ್ಥೆಗಳಲ್ಲಿ ಕಾಲಕಾಲಕ್ಕೆ ಕೆವೈಸಿ ಪರಿಷ್ಕರಣೆ ಮಾಡಿಸಬೇಕಾಗಿದೆ. ಬ್ಯಾಂಕುಗಳು ಹೇಳುವ ಪ್ರಕಾರ, ಹೆಚ್ಚು ಅಪಾಯವಿಲ್ಲದ (Low Risk) ಗ್ರಾಹಕರು 10 ವರ್ಷಗಳಿಗೊಮ್ಮೆ ತಮ್ಮ ಕೆವೈಸಿ ಪರಿಷ್ಕರಣೆ ಮಾಡಿಸಿದರೆ ಸಾಕು. ಹೆಚ್ಚು ಅಪಾಯದ (High Risk)) ಗ್ರಾಹಕರು ಪ್ರತಿ 2 ವರ್ಷಗಳಿಗೊಮ್ಮೆ ಕೆವೈಸಿ ನೀಡ ಬೇಕು. ಗ್ರಾಹಕರು ಬಳಕೆ ಮಾಡುವು ದನ್ನೇ ನಿಲ್ಲಿಸಿರುವ, ನಿಷ್ಕ್ರಿಯವಾಗಿರುವ ಖಾತೆಗಳನ್ನು ಮರುಬಳಕೆ ಮಾಡಲು ಹೊಸದಾಗಿ ಕೆವೈಸಿ ದಾಖಲೆಗಳನ್ನು ಸಲ್ಲಿಸಬೇಕು. ಹೆಚ್ಚು ಅಪಾಯವಿಲ್ಲದ ಗ್ರಾಹಕರು 10 ವರ್ಷಗಳಿಗೊಮ್ಮೆ ಕೆವೈಸಿ ನೀಡಬೇಕಾಗಿದೆಯಾದರೂ, ಬ್ಯಾಂಕ್ ಕಳುಹಿಸಿದ ಯಾವುದೇ ಅಂಚೆ ವಾಪಸ್ ಬಂದರೆ ಹೊಸದಾಗಿ ಕೆವೈಸಿ ನೀಡಬೇಕಾಗುತ್ತದೆ.
ಕೆವೈಸಿ ಮಾಡಿಸಲು ಯಾವೆಲ್ಲ ದಾಖಲೆಗಳು ಅಗತ್ಯ?
ಗ್ರಾಹಕರು ಕೆವೈಸಿ ಮಾಡಿಸಲು ಪಾನ್ ಕಾರ್ಡ್(PAN Card), ಆಧಾರ್ ಕಾರ್ಡ್ (Aadhaar Card), ಮತದಾರರ ಚೀಟಿ(Voter's Identity Card),ಡ್ರೈವಿಂಗ್ ಲೈಸೆನ್ಸ್ (Driving Licence),ನರೇಗಾ ಉದ್ಯೋಗ ಚೀಟಿ, ಪಾಸ್ ಪೋರ್ಟ್( Passport) ಇವೆಷ್ಟರಲ್ಲಿ ಯಾವುದಾದರೊಂದು ಒಂದು ದಾಖಲೆಯನ್ನು ಗುರುತು ಹಾಗೂ ವಿಳಾಸ ದೃಢೀಕರಣಕ್ಕಾಗಿ ನೀವು ಬ್ಯಾಂಕಿಗೆ ನೀಡಬೇಕಾಗುತ್ತದೆ. ಬ್ಯಾಂಕುಗಳಿಗೆ ಕೆವೈಸಿ ಸಲ್ಲಿಕೆ ಮಾಡಲು ಗ್ರಾಹಕರಿಗೆ ಹಲವಾರು ಮಾರ್ಗಗಳಿವೆ. ಉದಾಹರಣೆಗೆ ವಿಡಿಯೋ ಕೆವೈಸಿ, ಡಿಜಿಲಾಕರ್ ಮೂಲಕ ದಾಖಲೆಗಳನ್ನು ಹಂಚಿಕೊಳ್ಳೋ ಅವಕಾಶವಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳಿಂದ ಕೆವೈಸಿ ದಾಖಲೆ ಪಡೆಯಲು ಕರೆ ಮಾಡಿದ್ದೇವೆ ಎಂದು ಹೇಳಿ ಅನೇಕರನ್ನು ವಂಚಿಸಿರೋ ಪ್ರಕರಣಗಳು ನಡೆದಿವೆ. ಹೀಗಾಗಿ ಕೆವೈಸಿಗೆ ಸಂಬಂಧಿಸಿ ಯಾವುದೇ ಕರೆ ಬಂದರೂ ಸರಿಯಾಗಿ ವಿಚಾರಿಸಿ ಆ ಬಳಿಕ ಮಾಹಿತಿ ನೀಡಿ. ಇಲ್ಲವಾದ್ರೆ ನೇರವಾಗಿ ಬ್ಯಾಂಕಿಗೇ ತೆರಳಿ ಮಾಹಿತಿ ನೀಡಿ. ಬ್ಯಾಂಕಿಗೆ ನೇರವಾಗಿ ತೆರಳಿ ಮಾಹಿತಿ ನೀಡೋದು ಹೆಚ್ಚು ಸುರಕ್ಷಿತ ವಿಧಾನವಾಗಿದೆ.