ಜನವರಿ 2025ರಲ್ಲಿ 15 ದಿನ ಬ್ಯಾಂಕ್ ಬಂದ್; ಯಾವ ದಿನ ರಜೆ ಗೊತ್ತಾ?

Published : Dec 30, 2024, 12:03 PM ISTUpdated : Dec 30, 2024, 12:21 PM IST
ಜನವರಿ 2025ರಲ್ಲಿ 15 ದಿನ ಬ್ಯಾಂಕ್ ಬಂದ್; ಯಾವ ದಿನ ರಜೆ ಗೊತ್ತಾ?

ಸಾರಾಂಶ

ಹೊಸ ವರ್ಷದ ಆಚರಣೆ, ಹಬ್ಬಗಳು ಮತ್ತು ವಾರಾಂತ್ಯಗಳು ಸೇರಿದಂತೆ ವಿವಿಧ ಕಾರಣಗಳಿಗಾಗಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಗ್ರಾಹಕರು ತಮ್ಮ ಬ್ಯಾಂಕಿಂಗ್ ವ್ಯವಹಾರಗಳನ್ನು ಯೋಜಿಸಲು ರಜಾದಿನಗಳ ಪಟ್ಟಿಯನ್ನು ಪರಿಶೀಲಿಸುವುದು ಮುಖ್ಯ.

ಬೆಂಗಳೂರು: ಹೊಸ ವರ್ಷ-2025ರ ಆಗಮನಕ್ಕೆ ಇಡೀ ಜಗತ್ತು ಕಾಯುತ್ತಿದೆ. ಹೊಸ ವರ್ಷದ ಆಗಮನದ ಜೊತೆಯಲ್ಲಿಯೇ ಕೆಲವೊಂದು ವಿಷಯಗಳನ್ನು ತಿಳಿದುಕೊಳ್ಳುವುದು ಸೂಕ್ತವಾಗಿದೆ. 2025ರ ಜನವರಿಯಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 15 ದಿನ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳು ಬಂದ್ ಆಗಿರಲಿವೆ. ನೇರವಾಗಿ ಬ್ಯಾಂಕ್‌ಗೆ ತೆರಳಿ ಹಣಕಾಸಿನ ವ್ಯವಹಾರ ನಡೆಸುವ ಗ್ರಾಹಕರಿಗೆ ಸಮಸ್ಯೆಯಾಗಲಿದೆ. ಆದ್ದರಿಂದ ಯಾವ ದಿನ ಬ್ಯಾಂಕ್ ತೆರೆದಿರುತ್ತೆ ಮತ್ತು ಮುಚ್ಚಿರುತ್ತೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ರಜಾದಿನಗಳನ್ನು ಗಮನದಲ್ಲಿಟ್ಟುಕೊಂಡು ಬ್ಯಾಂಕ್‌ಗೆ ತೆರಳುವ ದಿನವನ್ನು ಶೆಡ್ಯೂಲ್ ಮಾಡಿಕೊಳ್ಳಲು ಸಹಾಯವಾಗುತ್ತದೆ. 

ಜನವರಿ 1ರಂದು ಕೆಲವು ಬ್ಯಾಂಕ್‌ಗಳು ರಜೆಯಲ್ಲಿರುತ್ತವೆ. ಮೊದಲ ದಿನ ಬ್ಯಾಂಕ್‌ಗೆ ತೆರಳುವ ಪ್ಲಾನ್ ಮಾಡಿಕೊಂಡಿದ್ರೆ ಮುಂದೂಡಿಕೆ ಮಾಡೋದು ಒಳ್ಳೆಯದು. ಇನ್ನುಳಿದಂತೆ ಜನವರಿಯಲ್ಲಿ ಯಾವ ದಿನ ಬ್ಯಾಂಕ್ ಮುಚ್ಚಲ್ಪಟ್ಟಿರುತ್ತೆ ಎಂಬುದರ ಮಾಹಿತಿ ಇಲ್ಲಿದೆ.

ಜನವರಿ-2025ರ ಬ್ಯಾಂಕ್ ರಜಾದಿನಗಳ ಪಟ್ಟಿ
ಜನವರಿ 1: ಹೊಸ ವರ್ಷದ ದಿನ
ಜನವರಿ 2: ಹೊಸ ವರ್ಷ ಮತ್ತು ಮನ್ನಂ ಜಯಂತಿ
ಜನವರಿ 5: ಭಾನುವಾರ
ಜನವರಿ 6: ಗುರು ಗೋಬಿಂದ್ ಸಿಂಗ್ ಜಯಂತಿ
ಜನವರಿ 11: ಎರಡನೇ ಶನಿವಾರ
ಜನವರಿ 12: ಭಾನುವಾರ ಮತ್ತು ಸ್ವಾಮಿ ವಿವೇಕಾನಂದ ಜಯಂತಿ
ಜನವರಿ 14: ಮಕರ ಸಂಕ್ರಾಂತಿ ಮತ್ತು ಪೊಂಗಲ್
ಜನವರಿ 15: ತಿರುವಳ್ಳುವರ್ ದಿನ, ಮಾಘ ಬಿಹು ಮತ್ತು ಮಕರ ಸಂಕ್ರಾಂತಿ
ಜನವರಿ 16: ಉಜ್ಜವರ ತಿರುನಾಳ್
ಜನವರಿ 19: ಭಾನುವಾರ
ಜನವರಿ 22: ಇಮೊಯಿನ್
ಜನವರಿ 23: ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ
ಜನವರಿ 25: ನಾಲ್ಕನೇ ಶನಿವಾರ
ಜನವರಿ 26: ಗಣರಾಜ್ಯೋತ್ಸವ
ಜನವರಿ 30: ಸೋನಮ್ ಲೋಸರ್

ಇದನ್ನೂ ಓದಿ: ಭಾರತೀಯರ ಗೃಹ ಬಳಕೆ ವೆಚ್ಚ ಏರಿಕೆ; 2011ಕ್ಕಿಂತ ಶೇ.188ರಷ್ಟು ಹೆಚ್ಚಳ

ಜನವರಿಯಲ್ಲಿನ ಬ್ಯಾಂಕ್ ರಜಾದಿನಗಳನ್ನು ಇಲ್ಲಿ ನೀಡಲಾಗಿದೆ. ಈ ವೇಳಾಪಟ್ಟಗೆ ಅನುಗುಣವಾಗಿ ನೀವು ನಿಮ್ಮ  ಕೆಲಸವನ್ನು ನಿಗದಿಪಡಿಸಿಕೊಳ್ಳಬಹುದು. ಭಾರತೀಯ ರಿಸರ್ವ್ ಬ್ಯಾಂಕ್ (RBI) 2025 ರ ಅಧಿಕೃತ ಬ್ಯಾಂಕ್ ರಜಾದಿನಗಳನ್ನು ಇನ್ನೂ ಘೋಷಿಸಿಲ್ಲ. ಇವೆಲ್ಲವೂ ಸಾಮಾನ್ಯ ರಜೆಗಳ ಮಾಹಿತಿ ಇಲ್ಲಿದೆ. ಕೆಲ ಪ್ರಾದೇಶಿಕ ಹಬ್ಬಗಳಂದು ಆಯಾ ಪ್ರದೇಶದಲ್ಲಿ ಮಾತ್ರ ರಜೆ ಇರುತ್ತದೆ. ಪ್ರಮುಖ ಹಬ್ಬಗಳನ್ನು ಆಚರಿಸುವ ದಿನ ಆಯಾ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರುತ್ತದೆ. 

ಇನ್ನುಳಿದಂತೆ ರಜಾದಿನಗಳಲ್ಲಿ ಎಂದಿನಂತೆ ಎಟಿಎಂ ಸೇವೆ ಗ್ರಾಹಕರಿಗೆ ಲಭ್ಯವಿರುತ್ತದೆ. ಆನ್‌ಲೈನ್ ಮೂಲಕವೂ ಗ್ರಾಹಕರು ಯಾವುದೇ ಅಡೆತಡೆಯಿಲ್ಲದೇ ಹಣಕಾಸಿನ ವ್ಯವಹಾರವನ್ನು ನಡೆಸಬಹುದಾಗಿದೆ. ಈ ರಜಾದಿನಗಳನ್ನು ನಿಮ್ಮ ಹತ್ತಿರದ ಬ್ಯಾಂಕ್ ಕಚೇರಿಯಲ್ಲಿ ದೃಢೀಕರಿಸಿ ಮತ್ತು ಅದಕ್ಕೆ ಅನುಗುಣವಾಗಿ ನಿಮ್ಮ ಕೆಲಸವನ್ನು ನಿರ್ವಹಿಸಿ ಇದರಿಂದ ನೀವು ಯಾವುದೇ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ.

ಇದನ್ನೂ ಓದಿ: ಕಡಿಮೆ ಬಡ್ಡಿದರದಲ್ಲಿ ಪರ್ಸನಲ್‌ ಲೋನ್‌ ಬೇಕಾ? ಈ ಎಲ್ಲಾ ದಾಖಲೆಗಳನ್ನ ಸರಿಯಾಗಿ ಇರಿಸಿಕೊಳ್ಳಿ!

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!