ನವೆಂಬರ್‌ನಲ್ಲಿ 17 ದಿನ ಮುಚ್ಚಿರುತ್ತೆ ಬ್ಯಾಂಕ್: ಈ ದಿನಾಂಕ ನೋಟ್ ಮಾಡ್ಕೊಳ್ಳಿ!

By Suvarna NewsFirst Published Oct 26, 2021, 2:40 PM IST
Highlights

* ಸಾಲು ಸಾಲು ಹಬ್ಬಗಳು, ನವೆಂಬರ್‌ನಲ್ಲಿದೆ 17 ದಿನ ರಜೆ

* ಬ್ಯಾಂಕ್ ಕೆಲಸ ಇದ್ರೆ ಈ ದಿನಾಂಕ ನೋಟ್‌ ಮಾಡಿ

* ಹೀಗಿದೆ ಬ್ಯಾಂಕ್ ರಜಾದಿನಗಳ ಪಟ್ಟಿ

ನವದೆಹಲಿ(ಅ.26): ನವೆಂಬರ್‌ ತಿಂಗಳಲ್ಲಿ ಒಂದಾದ ಬಳಿಕ ಮತ್ತೊಂದರಂತೆ ಸಾಲು ಸಾಲು ಹಬ್ಬಗಳಿವೆ. ಹೀಗಿರುವಾಗ ತುಂಬಾ ಅಗತ್ಯದ ಕೆಲಸದಿಂದ ಬ್ಯಾಂಕ್‌ಗೆ ತೆರಳಲು ಸಿದ್ಧತೆ ನಡೆಸಿರುವವರು ಸರ್ಕಾರಿ ಹಾಗೂ ಖಾಸಗಿ ರಜಾ ದಿನಗಳ ಬಗ್ಗೆ ತಪ್ಪದೇ ತಿಳಿದುಕೊಳ್ಳಿ. ಈ ಮೂಲಕ ಬ್ಯಾಂಕ್ ಕೆಲಸ ಯಾವುದೇ ಅಡೆ ತಡೆ ಇಲ್ಲದೇ ನಡೆಯಲಿದೆ.

ಆರ್‌ಬಿಐ ಈ ಬಗ್ಗೆ ಮಾರ್ಗಸೂಚಿ ಹೊರಡಿಸಿದ್ದು, ಇದರಲ್ಲಿ ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಬ್ಯಾಂಕ್‌ಗಳು, ಸಹಕಾರಿ ಬ್ಯಾಂಕ್‌ಗಳು ಮತ್ತು ದೇಶಾದ್ಯಂತ ಪ್ರಾದೇಶಿಕ ಬ್ಯಾಂಕ್‌ಗಳು ಯಾವೆಲ್ಲ ದಿನಾಂಕದಂದು ಕಾರ್ಯ ನಿರ್ವಹಿಸುವುದಿಲ್ಲ ಎಂಬ ಬಗ್ಗೆ ಮಾಹಿತಿ ನೀಡಿದೆ.

RBI ರಜಾದಿನಗಳ ಪಟ್ಟಿಯನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ; ನೆಗೋಶಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್ ಹಾಲಿಡೇ; ಮತ್ತು ಬ್ಯಾಂಕ್‌ಗಳ ಖಾತೆಗಳನ್ನು ಮುಚ್ಚುವುದು.

ವಿವಿಧ ರಾಜ್ಯ ಹಾಗೂ ಪ್ರದೇಶಕ್ಕನುಗುಣವಾಗಿ ನವೆಂಬರ್‌ ತಿಂಗಳಲ್ಲಿ ಬರೋಬ್ಬರಿ 17 ದಿನ ಬ್ಯಾಂಕ್‌ಗಳು ಮುಚ್ಚಿರಲಿವೆ. ಹೀಗಾಗಿ ಈ 17 ದಿನ ದೇಶಾದ್ಯಂತ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಉದಾಹರಣೆಗೆ ಬಿಹಾರದಲ್ಲಿ ಛತ್ ಪೂಜೆ ದಿನ ಬ್ಯಾಂಕ್ ಶಾಖೆಗಳನ್ನು ಮುಚ್ಚಬಹುದು ಆದರೆ ಈಶಾನ್ಯ ರಾಜ್ಯಗಳಲ್ಲಿ ಆಚರಿಸಲಾಗುವ ವಂಗಲಾ ಉತ್ಸವದಂದು ತೆರೆದಿರುತ್ತವೆ

ಇಲ್ಲಿದೆ ನೋಟಿ ಬ್ಯಾಂಕ್ ರಜಾದಿನದ ಸಂಪೂರ್ಣ ಪಟ್ಟಿ

ನವೆಂಬರ್ 1: ಕನ್ನಡ ರಾಜ್ಯೋತ್ಸವ/ಕುತ್(ಕರ್ನಾಟಕ ಹಾಗೂ ಈಂಫಾಲದ ಎಲ್ಲಾ ಬ್ಯಾಂಕ್ ಶಾಖೆಗಳು ಮುಚ್ಚಿರಲಿವೆ)

ನವೆಂಬರ್ 3: ನರಕ ಚತುರ್ದಶಿ(ಕರ್ನಾಟಕದಲ್ಲಿ ಬ್ಯಾಂಕ್‌ಗಳು ಮುಚ್ಚಿರಲಿವೆ)

ನವೆಂಬರ್ 4: ದೀಪಾವಳಿ ಅಮವಾಸ್ಯೆ (ಲಕ್ಷ್ಮೀ ಪೂಜೆ)/ದೀಪಾವಳಿ/ಕಾಳಿ ಪೂಜೆ(ಅಗರ್ತಲಾ, ಅಹಮದಾಬಾದ್, ಐಜ್ವಾಲ್, ಬೇಲಾಪುರ್, ಭೋಪಾಲ್, ಭುವನೇಶ್ವರ್, ಚಂಡೀಗಢ, ಚೆನ್ನೈ, ಡೆಹ್ರಾಡೂನ್, ಗ್ಯಾಂಗ್ಟಾಕ್, ಗುವಾಹಟಿ, ಹೈದರಾಬಾದ್, ಇಂಫಾಲ್, ಜೈಪುರ, ಜಮ್ಮು, ಕಾನ್ಪುರ್, ಕೊಚ್ಚಿ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ಪಣಜಿ, ಪಾಟ್ನಾ, ರಾಯ್ಪುರ್ , ರಾಂಚಿ, ಶಿಲ್ಲಾಂಗ್, ಶಿಮ್ಲಾ, ಶ್ರೀನಗರ ಮತ್ತು ತಿರುವನಂತಪುರಂ ವ್ಯಾಪ್ತಿಗೊಳಪಡುವ ಬ್ಯಾಂಕ್‌ಗಳು ಮುಚ್ಚಲಿವೆ)

ನವೆಂಬರ್ 5: ದೀಪಾವಳಿ (ಬಲಿ ಪಾಡ್ಯಮಿ)/ವಿಕ್ರಮ್ ಸಂವಂತ್ ಹೊಸ ವರ್ಷದ ದಿನ/ಗೋವರ್ಧನ ಪೂಜೆ(ಅಹಮದಾಬಾದ್, ಬೇಲಾಪುರ್, ಬೆಂಗಳೂರು, ಡೆಹ್ರಾಡೂನ್, ಗ್ಯಾಂಗ್ಟಾಕ್, ಜೈಪುರ, ಕಾನ್ಪುರ್, ಲಕ್ನೋ, ಮುಂಬೈ ಮತ್ತು ನಾಗ್ಪುರ)

ನವೆಂಬರ್ 6: ಭಾಯಿ ದೂಜ್/ಚಿತ್ರಗುಪ್ತ ಜಯಂತಿ/ಲಕ್ಷ್ಮಿ ಪೂಜೆ/ದೀಪಾವಳಿ/ನಿಂಗೋಲ್ ಚಕೌಬಾ(ಗ್ಯಾಂಗ್ಟಾಕ್, ಇಂಫಾಲ್, ಕಾನ್ಪುರ್, ಲಕ್ನೋ ಹಾಗೂ ಶಿಮ್ಲಾ)

ನವೆಂಬರ್ 10: ಛತ್ ಪೂಜೆ/ಸೂರ್ಯ ಪಷ್ಟಿ ದಲಾ ಛಾತ್/ಸಯನ್ ಅರ್ಧ್ಯ(ಪಾಟ್ನಾ, ರಾಂಚಿ)

ನವೆಂಬರ್ 11: ಛತ್ ಪೂಜೆ(ಪಾಟ್ನಾ)

ನವೆಂಬರ್ 12: ವಂಗಲ ಹಬ್ಬ(ಶಿಲ್ಲಾಂಗ್)

ನವೆಂಬರ್ 19: ಗುರುನಾನಕ್ ಜಯಂತಿ/ಕಾರ್ತಿಕ ಪೂರ್ಣಿಮಾ(ಐಜ್ವಾಲ್, ಬೇಲಾಪುರ್, ಭೋಪಾಲ್, ಚಂಡೀಗಢ, ಡೆಹ್ರಾಡೂನ್, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ್, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ರಾಯ್ಪುರ್, ರಾಂಚಿ, ಶಿಮ್ಲಾ ಮತ್ತು ಶ್ರೀನಗರ)

ನವೆಂಬರ್ 22: ಕನಕದಾಸ ಜಯಂತಿ(ಕರ್ನಾಟಕ)

ನವೆಂಬರ್ 23: ಸೆಂಗ್ ಕುಟ್ಸ್ನೆಮ್(ಶಿಲ್ಲಾಂಗ್)

ಮೇಲಿನ ರಜಾದಿನಗಳ ಜೊತೆಗೆ, ತಿಂಗಳ ನಾಲ್ಕು ಭಾನುವಾರಗಳು ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರಗಳು ಈ ದಿನಾಂಕಗಳಲ್ಲಿ ಹೀಗಿವೆ

ನವೆಂಬರ್ 7: ಭಾನುವಾರ

ನವೆಂಬರ್ 13: ತಿಂಗಳ ಎರಡನೇ ಶನಿವಾರ

ನವೆಂಬರ್ 14: ಭಾನುವಾರ

ನವೆಂಬರ್ 21: ಭಾನುವಾರ

ನವೆಂಬರ್ 27: ತಿಂಗಳ ನಾಲ್ಕನೇ ಶನಿವಾರ

ನವೆಂಬರ್ 28: ಭಾನುವಾರ

click me!