ಖಾತೆ ಒಂದು ಲಾಭ ಹಲವು;ಉದ್ಯೋಗಸ್ಥ ಮಹಿಳೆಯರಿಗೆ ಹೊಸ ಉಳಿತಾಯ ಖಾತೆ ಪರಿಚಯಿಸಿದ ಬ್ಯಾಂಕ್ ಆಫ್ ಇಂಡಿಯಾ

By Suvarna NewsFirst Published Dec 12, 2023, 5:17 PM IST
Highlights

ಉದ್ಯೋಗಸ್ಥ ಮಹಿಳೆಯರಿಗಾಗಿ ಬ್ಯಾಂಕ್ ಆಫ್ ಇಂಡಿಯಾ 'ನಾರಿಶಕ್ತಿ ಉಳಿತಾಯ ಖಾತೆ' ಪರಿಚಯಿಸಿದೆ. ಈ ಖಾತೆ ತೆರೆಯುವ ಮೂಲಕ ಮಹಿಳೆಯರು ಅಪಘಾತ ವಿಮಾ ಕವರೇಜ್, ಉಚಿತ ಕ್ರೆಡಿಟ್ ಕಾರ್ಡ್ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಪಡೆಯಬಹುದು
 

ಮುಂಬೈ (ಡಿ.12): ಇಂದು ಮಹಿಳೆ ಉದ್ಯೋಗಸ್ಥೆಯಾಗಿದ್ದು, ಹಣಕಾಸಿನ ನಿರ್ವಹಣೆಯಲ್ಲಿ ಸ್ವಾತಂತ್ರ್ಯವಾಗಿ ಯೋಚಿಸುವ ಸಾಮರ್ಥ್ಯ ಹೊಂದಿದ್ದಾಳೆ. ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗಾಗಿಯೇ ವಿವಿಧ ಉಳಿತಾಯದ ಯೋಜನೆಗಳನ್ನು ಕೆಲವು ಬ್ಯಾಂಕ್ ಗಳು ಪರಿಚಯಿಸುತ್ತಿವೆ. ಇದೀಗ ಬ್ಯಾಂಕ್ ಆಫ್ ಇಂಡಿಯಾ ಕೂಡ 'ನಾರಿಶಕ್ತಿ ಉಳಿತಾಯ ಖಾತೆ'ಯನ್ನು ಪರಿಚಯಿಸಿದೆ. ಇದನ್ನು 18 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಸ್ವತಂತ್ರ ಹಣಕಾಸಿನ ಮೂಲವನ್ನು ಹೊಂದಿರೋರಿಗಾಗಿ ರೂಪಿಸಲಾಗಿದೆ. ಈ ಖಾತೆಗೆ ವಿಮಾ ಕವರೇಜ್, ಕಡಿಮೆ ಬಡ್ಡಿದರದಲ್ಲಿ ಸಾಲ ಸೇರಿದಂತೆ ಅನೇಕ  ಸೌಲಭ್ಯಗಳನ್ನು ಕೂಡ ನೀಡಲಾಗಿದೆ. ಹೀಗಾಗಿ ಉದ್ಯೋಗಸ್ಥ ಮಹಿಳೆಯರು ಈ ಖಾತೆಯ ಪ್ರಯೋಜನ ಪಡೆಯಬಹುದು. ಮಹಿಳೆಯರ ಹಣಕಾಸಿನ ಸದೃಢತೆಗೆ ನೆರವು ನೀಡೋದು ಹಾಗೂ ಅವರ ಗೌರವ ಹೆಚ್ಚಿಸುವ ಗುರಿಯನ್ನು ಈ ಖಾತೆ ಹೊಂದಿದೆ.

ನಾರಿ ಶಕ್ತಿ ಉಳಿತಾಯ ಖಾತೆ ಪ್ರಯೋಜನಗಳು:
1.ವೈಯಕ್ತಿಕ ಅಪಘಾತ ವಿಮಾ ಕವರೇಜ್:
ಈ ಖಾತೆ 100 ಲಕ್ಷ ರೂ. ತನಕ ವೈಯಕ್ತಿಕ ಅಪಘಾತ ವಿಮಾ ಕವರೇಜ್ ಹೊಂದಿದೆ. ಈ ಮೂಲಕ ಮಹಿಳಾ ಖಾತೆದಾರರಿಗೆ ಸುರಕ್ಷತೆ ಹಾಗೂ ಭದ್ರತೆಯನ್ನು ಒದಗಿಸುತ್ತದೆ.

Latest Videos

2.ಆರೋಗ್ಯ ವಿಮೆ ಹಾಗೂ ಸ್ವಾಸ್ಥ್ಯ ಉತ್ಪನ್ನಗಳ ಮೇಲೆ ಡಿಸ್ಕೌಂಟ್ : ನಾರಿ ಶಕ್ತಿ ಉಳಿತಾಯ ಖಾತೆ ಹೊಂದಿರುವ ಮಹಿಳೆಯರು ಆರೋಗ್ಯ ವಿಮೆ ಹಾಗೂ ಸ್ವಾಸ್ಥ್ಯ ಉತ್ಪನ್ನಗಳ ಮೇಲೆ ಆಸಕ್ತಿದಾಯಕ ಡಿಸ್ಕೌಂಟ್ ಗಳನ್ನು ಪಡೆಯಬಹುದು.

3. ಲಾಕರ್ ಸೌಲಭ್ಯದ ಮೇಲೆ ಆಕರ್ಷಕ ರಿಯಾಯಿತಿ: ಗೋಲ್ಡ್ ಹಾಗೂ ಡೈಮಾಂಡ್ ಎಸ್ ಬಿ ಖಾತೆದಾರರುಲಾಕರ್ ಸೌಲಭ್ಯದ ಮೇಲೆ ರಿಯಾಯಿತಿ ಪಡೆಯಲು ಅವಕಾಶವಿದೆ. 

4.ಪ್ಲಾಟಿನಂ ಎಸ್ ಬಿ ಖಾತೆದಾರರಿಗೆ ಉಚಿತ ಸೌಲಭ್ಯ: ಪ್ಲಾಟಿನಂ ಬ್ಯಾಂಕ್ ಖಾತೆ ಹೊಂದಿರೋರು ಅನೇಕ ಉಚಿತ ಬ್ಯಾಂಕಿಂಗ್ ಸೌಲಭ್ಯಗಳನ್ನು ಪಡೆಯಬಹುದಾಗಿದೆ. 

ಸಾಲಗಾರರಿಗೆ ಶುಭಸುದ್ದಿ; ಸತತ 5ನೇ ಬಾರಿ ರೆಪೋದರ ಏರಿಸದ ಆರ್ ಬಿಐ

5.ರಿಟೇಲ್ ಸಾಲಗಳ ಬಡ್ಡಿ ಮೇಲೆ ರಿಯಾಯ್ತಿ: ನಾರಿ ಶಕ್ತಿ ಉಳಿತಾಯ ಖಾತೆ ಹೊಂದಿರುವ ಮಹಿಳೆಯರು ವಿಶೇಷ ರಿಯಾಯ್ತಿ ದರದಲ್ಲಿ ರಿಟೇಲ್ ಸಾಲಗಳನ್ನು ಪಡೆಯಲು ಅರ್ಹತೆ ಹೊಂದಿದ್ದಾರೆ. ಈ ಮೂಲಕ ಸಾಲವನ್ನು ಅತ್ಯಂತ ಕಡಿಮೆ ದರದಲ್ಲಿ ಪಡೆಯಲು ಈ ಖಾತೆ ನೆರವು ನೀಡುತ್ತದೆ.

6.ರಿಟೇಲ್ ಸಾಲಗಳ ಮೇಲೆ ಪ್ರೊಸೆಸಿಂಗ್ ಶುಲ್ಕ ವಿನಾಯ್ತಿ: ರಿಟೇಲ್ ಸಾಲಗಳ ಮೇಲೆ ಮಹಿಳಾ ಖಾತೆದಾರರು ಯಾವುದೇ ಪ್ರೊಸೆಸಿಂಗ್ ಶುಲ್ಕ ಪಾವತಿಸಬೇಕಾಗಿಲ್ಲ. ಇದರಿಂದ ಸಾಲ ಪಡೆಯುವಾಗ ಮಹಿಳೆಯರ ಮೇಲಿನ ಆರ್ಥಿಕ ಹೊರೆಯನ್ನು ಇದು ತಗ್ಗಿಸುತ್ತದೆ.

7.ಉಚಿತವಾಗಿ ಕ್ರೆಡಿಟ್ ಕಾರ್ಡ್ ಹಂಚಿಕೆ: ನಾರಿ ಶಕ್ತಿ ಉಳಿತಾಯ ಖಾತೆದಾರರಿಗೆ ಉಚಿತವಾಗಿ ಕ್ರೆಡಿಟ್ ಕಾರ್ಡ್ ನೀಡಲಾಗುವುದು. ಇದರಿಂದ ಮಹಿಳೆಯರಿಗೆ ಹಣಕಾಸಿನ ವಿಚಾರದಲ್ಲಿ ಇನ್ನಷ್ಟು ಶಕ್ತಿ ದೊರತಂತಾಗುತ್ತದೆ.

8.ಪಿಒಎಸ್ ಮೇಲೆ ಅಧಿಕ ಬಳಕೆ ಮಿತಿ: ಪಾಯಿಂಟ್ ಆಫ್ ಸೇಲ್  (POS) ವಹಿವಾಟಿನ ಮೇಲೆ ಖಾತೆದಾರರು 5ಲಕ್ಷ ರೂ. ತನಕ ಅಧಿಕ ಬಳಕೆ ಮಿತಿಯ ಪ್ರಯೋಜನ ಪಡೆಯಬಹುದು.

ಕ್ರೆಡಿಟ್ ಕಾರ್ಡ್‌ನಿಂದ ಸುಲಭವಾಗಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡೋದು ಹೇಗೆ ನೋಡಿ..

9.ಸಬಲೀಕರಣಕ್ಕೆ ಹಣಕಾಸಿನ ಸಾಧನ: ನಾರಿಶಕ್ತಿ ಉಳಿತಾಯ ಖಾತೆ ಕೇವಲ ಸಾಮಾನ್ಯ ಉಳಿತಾಯ ಖಾತೆಯಲ್ಲ. ಇದು ಸ್ವತಂತ್ರ ಆದಾಯದ ಮೂಲ ಹೊಂದಿರುವ ಮಹಿಳೆಯರ ಸಬಲೀಕರಣಕ್ಕಾಗಿ ವಿನ್ಯಾಸಗೊಳಿಸಿರುವ ಆರ್ಥಿಕ ಸಾಧನವೂ ಹೌದು. ಇದು ಅವರಿಗೆ ತಮ್ಮ ಕಾಲ ಮೇಲೆ ತಾವು ನಿಲ್ಲಲು ಹಾಗೂ ಅಧಿಕ ಮಟ್ಟದ ಹಣಕಾಸಿನ ಸ್ವಾತಂತ್ರ್ಯವನ್ನು ಅನುಭವಿಸಲು ಅವಕಾಶ ಕಲ್ಪಿಸುತ್ತದೆ.

10. ಸಾಮಾಜಿಕ ಕಾಳಜಿಗೆ ಬೆಂಬಲ: ಬಡ ಮಹಿಳೆ ಹಾಗೂ ಹೆಣ್ಣುಮಗುವಿಗೆ ನೆರವು ನೀಡುವ ಉದ್ದೇಶವನ್ನು ಈ ಯೋಜನೆ ಹೊಂದಿದ್ದು, ಪ್ರತಿ ಹೊಸ ನಾರಿಶಕ್ತಿ ಖಾತೆ ತೆರೆದಾಗ 10ರೂ. ಅನ್ನು ಸಿಎಸ್ ಆರ್ ನಿಧಿಗೆ ನೀಡಲಾಗುತ್ತದೆ. ಈ ನಿಧಿಯನ್ನು ಬಡ ಮಹಿಳೆಯರ ಸಾಮಾಜಿಕ, ಆರ್ಥಿಕಾಭಿವೃದ್ಧಿಗೆ ಬಳಸಲಾಗುತ್ತದೆ. 

click me!