ವಾರಕ್ಕೆ 70 ಗಂಟೆ ಕೆಲಸ ಎಂದ ನಾರಾಯಣ ಮೂರ್ತಿ, ಭರ್ತಿ 10 ಕೋಟಿ ಸ್ಯಾಲರಿಯಿದ್ರೂ ಇನ್ಫೋಸಿಸ್ ತೊರೆದ ಮುಖ್ಯ ಅಧಿಕಾರಿ!

By Vinutha Perla  |  First Published Dec 12, 2023, 11:33 AM IST

ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಯುವಕರಿಗೆ ವಾರದ 70 ಗಂಟೆಗಳ ಕೆಲಸ ಮಾಡುವ ಸಲಹೆಯಿಂದಾಗಿ ಅಂತರ್ಜಾಲದಲ್ಲಿ ಟ್ರೆಂಡಿಂಗ್ ಆಗಿದ್ದಾರೆ. ಆದರೆ ಈ ಬೃಹತ್ ಕಂಪೆನಿಯಲ್ಲಿ ಕೆಲಸ ಮಾಡ್ತಿರೋ ಮುಖ್ಯ ಅಧಿಕಾರಿ ನಿಲಂಜನ್ ರಾಯ್, ಈ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. 


ಭಾರತದ ಎರಡನೇ ಅತಿ ದೊಡ್ಡ ಐಟಿ ಕಂಪೆನಿಯಲ್ಲಿ ಒಂದಾದ ಇನ್ಫೋಸಿಸ್‌ನಿಂದ ಇತ್ತೀಚಿಗೆ ಉನ್ನತ ಮಟ್ಟದ ಅಧಿಕಾರಿಗಳು ನಿರ್ಗಮಿಸುತ್ತಿದ್ದಾರೆ. ಬರೋಬ್ಬರಿ 617700 ಕೋಟಿ ರೂ. ಬೃಹತ್ ಕಂಪೆನಿಯಲ್ಲಿ ನಿಲಂಜನ್ ರಾಯ್,  ಮುಖ್ಯ ಹಣಕಾಸು ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದು, ಈ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.  1981ರಲ್ಲಿ ಟೆಕ್ ಬಿಲಿಯನೇರ್‌ಗಳಾದ ಎನ್‌ಆರ್ ನಾರಾಯಣ ಮೂರ್ತಿ ಮತ್ತು ನಂದನ್ ನಿಲೇಕಣಿ ಅವರು ಇನ್ಫೋಸಿಸ್‌ನ್ನು ಆರಂಭಿಸಿದರು.

ಇತ್ತೀಚಿನ ದಿನಗಳಲ್ಲಿ ಮಾಜಿ ಅಧ್ಯಕ್ಷರಾದ ರವಿಕುಮಾರ್ ಎಸ್ ಮತ್ತು ಮೋಹಿತ್ ಜೋಶಿ ಅವರು ಕಂಪೆನಿಗೆ ರಾಜೀನಾಮೆ ನೀಡಿದ್ದಾರೆ. ಈಗ ದೊಡ್ಡ ಹುದ್ದೆಯಲ್ಲಿರುವ ನಿಲಂಜನ್ ರಾಯ್ ಕೂಡಾ ಸಂಸ್ಥೆಯನ್ನು ತೊರೆಯಲು ಸನ್ನದ್ಧರಾಗಿದ್ದು, ವರದಿಯ ಪ್ರಕಾರ ಅವರ ನಂತರ ಜಯೇಶ್ ಸಂಘರಾಜ್ಕ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

Tap to resize

Latest Videos

ವಾರಕ್ಕೆ 70 ಗಂಟೆ ಕೆಲಸಕ್ಕೆ ಬೆಂಬಲ; ಪ್ರಧಾನಿ ಕೂಡ ದಿನಕ್ಕೆ 16 ಗಂಟೆ ಕೆಲಸ ಮಾಡ್ತಾರೆ ಎಂದ ಸಜ್ಜನ್‌ ಜಿಂದಾಲ್‌!

ಅಧಿಕಾರ ವಹಿಸಿಕೊಳ್ಳಲಿರುವ ಜಯೇಶ್ ಸಂಘರಾಜ್ಕ 
ನಿಲಂಜನ್‌ ರಾಯ್, ಭಾರ್ತಿ ಏರ್‌ಟೆಲ್‌ನಿಂದ ಇನ್ಫೋಸಿಸ್‌ಗೆ ಸೇರಿಕೊಂಡರು. ಮಾರ್ಚ್ 2019ರಿಂದ ಸಿಎಫ್‌ಒ ಪಾತ್ರವನ್ನು ನಿರ್ವಹಿಸಿದ್ದಾರೆ. ಉನ್ನತ ಮಟ್ಟದ ನಿರ್ಗಮನದ ಹಿಂದಿನ ಕಾರಣವನ್ನು (Reason) ತಿಳಿಸಿಕೊಟ್ಟಿದ್ದಾರೆ. ಇನ್ಫೋಸಿಸ್‌ನ ಹೇಳಿಕೆಯ ಪ್ರಕಾರ ರಾಯ್, ತಮ್ಮ ವೈಯಕ್ತಿಕ ಆಕಾಂಕ್ಷೆಗಳನ್ನು ಟೆಕ್ ದೈತ್ಯದಿಂದ ಹೊರಗೆ ಮುಂದುವರಿಸಲು ನಿರ್ಧರಿಸಿದ್ದಾರೆ. . 2015ರಿಂದ ಇನ್ಫೋಸಿಸ್ ಗ್ರೂಪ್‌ನ ಉಪ ಸಿಎಫ್‌ಒ ಪಾತ್ರವನ್ನು ಹೊಂದಿರುವ ಅವರ ಬದಲು ಸಂಘರಾಜ್ಕಾ ಅವರು ಏಪ್ರಿಲ್ 1, 2024ರಿಂದ ಈ ಹುದ್ದೆಗೆ ನೇಮಕ (Appoint)ವಾಗಲಿದ್ದಾರೆ.

ವರ್ಷಗಳಲ್ಲಿ ಉನ್ನತ ಮಟ್ಟದಲ್ಲಿ ಹಲವು ನಾಯಕತ್ವ ಬದಲಾವಣೆಗಳನ್ನು ಕಂಡಿರುವ ಇನ್ಫೋಸಿಸ್, ಪ್ರಸ್ತುತ ಐಐಟಿ ಹಳೆಯ ವಿದ್ಯಾರ್ಥಿ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಲೀಲ್ ಪರೇಖ್ ಅವರು ನಿರ್ಣಾಯಕ ಹಣಕಾಸು ಅಧಿಕಾರಿಯ ಹುದ್ದೆಯಲ್ಲಿದ್ದರು. ರಾಯ್ ಅವರು ಚಾರ್ಟರ್ಡ್ ಅಕೌಂಟೆಂಟ್ ಮತ್ತು ದೆಹಲಿ ವಿಶ್ವವಿದ್ಯಾಲಯದ (ಡಿಯು) ಹಳೆಯ ವಿದ್ಯಾರ್ಥಿ. ವಾಣಿಜ್ಯ ಪದವೀಧರರಾಗಿರುವ ಇವರು ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಇನ್ಫೋಸಿಸ್‌ನ ಹಣದ ಭಾಗವನ್ನು ಸಮರ್ಥವಾಗಿ ನಿರ್ವಹಿಸಿದ್ದರು.

ಮುಕೇಶ್ ಅಂಬಾನಿ ನಂಬಿಕಸ್ಥ, ಇನ್ಫೋಸಿಸ್ ನಾರಾಯಣ ಮೂರ್ತಿ ಬಲಗೈನಂತಿದ್ದ ಕರಾವಳಿ ಮೂಲದ ವ್ಯಕ್ತಿ!

ಇನ್ಫೋಸಿಸ್‌ನಲ್ಲಿ ನಿಲಂಜನ್ ರಾಯ್ ಸಂಭಾವನೆ 10.61 ಕೋಟಿ ರೂ.
ಇನ್ಫೋಸಿಸ್ ವಾರ್ಷಿಕ ಸಂಯೋಜಿತ ವರದಿ 2022-23 ರ ಪ್ರಕಾರ, ವರ್ಷಕ್ಕೆ ನಿಲಂಜನ್ ರಾಯ್ ಅವರ ಸಂಭಾವನೆಯು 10.61 ಕೋಟಿ ರೂ. ಆಗಿದೆ. ಇನ್ಫೋಸಿಸ್‌ಗೆ ಮೊದಲು, ನಿಲಂಜನ್ ರಾಯ್ ಅವರು ಬಿಲಿಯನೇರ್ ಸುನಿಲ್ ಭಾರ್ತಿ ಮಿತ್ತಲ್ ಅವರ ದೂರಸಂಪರ್ಕ ದೈತ್ಯ ಭಾರ್ತಿ ಏರ್‌ಟೆಲ್ ಲಿಮಿಟೆಡ್‌ನ ಜಾಗತಿಕ ಸಿಎಫ್‌ಒ ಆಗಿದ್ದರು. ಅವರು ಯುಎಸ್, ಯುರೋಪ್ ಮತ್ತು ಭಾರತದಾದ್ಯಂತ ಎಫ್‌ಎಂಸಿಜಿ ದೈತ್ಯ ಯುನಿಲಿವರ್‌ಗೆ ನಾಯಕತ್ವದ ಪಾತ್ರಗಳಲ್ಲಿ ನಿರ್ಣಾಯಹ ಹುದ್ದೆಯನ್ನು ನಿಭಾಯಿಸಿದ್ದಾರೆ.

ಒಟ್ನಲ್ಲಿ ಕಾಕತಾಳೀಯವಾಗಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಯುವಕರಿಗೆ ವಾರದ 70 ಗಂಟೆಗಳ ಕೆಲಸ ಮಾಡುವ ಸಲಹೆಯ ನಂತರ ಈ ಬೃಹತ್ ಕಂಪೆನಿಯಲ್ಲಿ ಕೆಲಸ ಮಾಡ್ತಿರೋ ಹಲವು ಅಧಿಕಾರಿಗಳು ಸಾಲು ಸಾಲಾಗಿ ರಾಜೀನಾಮೆ ನೀಡುತ್ತಿದ್ದಾರೆ.

click me!