
ಭಾರತದ ಅಂತರರಾಷ್ಟ್ರೀಯ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಬರೋಡಾ ಮಹಿಳೆಯರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಪ್ರೀಮಿಯಂ ಉಳಿತಾಯ ಖಾತೆಯಾದ bob Women Sapphire Savings Account ಅನ್ನು ಪ್ರಾರಂಭಿಸಿರುವುದಾಗಿ ಘೋಷಿಸಿದೆ. ಈ ಖಾತೆಯೊಂದಿಗೆ ಹಲವು ಆರೋಗ್ಯ ಮತ್ತು ವೆಲ್‌ನೆಸ್ ಪ್ರಯೋಜನಗಳು ಲಭ್ಯವಿದ್ದು, 10 ಲಕ್ಷ ರು. ಕ್ಯಾನ್ಸರ್ ಕೇರ್ ಕವರೇಜ್ ಯೋಜನೆ, ಆರು ಕುಟುಂಬ ಸದಸ್ಯರಿಗೆ ಉಚಿತ ಆನ್‌ಲೈನ್ ವೈದ್ಯರ ಸಲಹೆ ಹಾಗೂ ಔಷಧ ಮತ್ತು ಪಥಾಲಜಿ ಪರೀಕ್ಷೆಗಳ ಮೇಲೆ ರಿಯಾಯಿತಿಗಳನ್ನು ಒದಗಿಸುತ್ತದೆ.
ಈ ಖಾತೆ ಅತ್ಯುತ್ತಮ ಬ್ಯಾಂಕಿಂಗ್ ಮತ್ತು ಲೈಫ್‌ಸ್ಟೈಲ್ ಸೌಲಭ್ಯಗಳನ್ನೂ ಒದಗಿಸುತ್ತದೆ. ಇದರಲ್ಲಿ ಬಿಒಬಿ ಭೂಮಿ ರುಪೇ ಸೆಲೆಕ್ಟ್ ಡೆಬಿಟ್ ಕಾರ್ಡ್ (bob Bhoomi RuPay select Debit Card) ದೊರೆಯುತ್ತದೆ. ಇದರ ಮೂಲಕ ದೇಶೀಯ ವಿಮಾನ ನಿಲ್ದಾಣ ಲೌಂಜ್ ಪ್ರವೇಶ, ಉಚಿತ ಜಿಮ್ ಸದಸ್ಯತ್ವ, ಆರೋಗ್ಯ ತಪಾಸಣೆ, ಸ್ಪಾ/ಸಲೂನ್ ಸೊಲ್ಯೂಷನ್ ಮತ್ತು OTT ಸಬ್‌ಸ್ಕ್ರಿಪ್ಶನ್ ಸೇರಿದಂತೆ ಹಲವು ಪ್ರೀಮಿಯಂ ಸೌಲಭ್ಯಗಳು ಲಭ್ಯವಾಗುತ್ತವೆ. ಜೊತೆಗೆ ಖಾತೆದಾರರಿಗೆ ಮಹಿಳೆಯರಿಗಾಗಿ ವಿನ್ಯಾಸಗೊಳಿಸಲಾದ ಪ್ರೀಮಿಯಂ ಕ್ರೆಡಿಟ್ ಕಾರ್ಡ್ ಆಗಿರುವ BOBCARD Tiara Credit Card ಮೇಲೆ ಮೊದಲ ವರ್ಷದ ಶುಲ್ಕದಲ್ಲಿ ಶೇ.50ರ ವಿನಾಯಿತಿ (ರಿವಾರ್ಡ್ ಪಾಯಿಂಟ್‌ಗಳ ರೂಪದಲ್ಲಿ) ದೊರೆಯುತ್ತದೆ.
ಇದರ ಜೊತೆಗೆ bob Women Sapphire Savings Account ಖಾತೆದಾರರು ಲಾಕರ್ ಶುಲ್ಕದಲ್ಲಿ ರಿಯಾಯಿತಿ, ಗೃಹ ಸಾಲ ಪ್ರೊಸೆಸಿಂಗ್ ಶುಲ್ಕದಲ್ಲಿ ಶೇ. 50ರ ವಿನಾಯಿತಿ ಸೇರಿದಂತೆ ಇನ್ನೂ ಹಲವಾರು ಬ್ಯಾಂಕಿಂಗ್ ಸೌಲಭ್ಯಗಳನ್ನು ಪಡೆಯಲಿದ್ದಾರೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಡಾ.ದೇಬದತ್ತ ಚಂದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬ್ಯಾಂಕ್ ಆಫ್ ಬರೋಡಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ದೇಬದತ್ತ ಚಂದ್ ಮಾತನಾಡಿ, ಹೊಸ ಸೇವಿಂಗ್ಸ್ ಖಾತೆಯು ಅರ್ಥಪೂರ್ಣ, ಮಹಿಳಾ ಕೇಂದ್ರಿತ ಹಣಕಾಸು ಪರಿಹಾರಗಳನ್ನು ಸೃಷ್ಟಿಸುವ ಬ್ಯಾಂಕಿನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಮಹಿಳೆಯರ ವಿಕಸನಗೊಳ್ಳುತ್ತಿರುವ ಆಕಾಂಕ್ಷೆಗಳನ್ನು ಪರಿಹರಿಸುವುದು ನಮ್ಮ ಗುರಿಯಾಗಿದೆ, ಅದೇ ಸಮಯದಲ್ಲಿ ಬೆಳೆಯುತ್ತಿರುವ ಹೆಚ್ಚಿನ ಮೌಲ್ಯದ ಮಹಿಳಾ ಠೇವಣಿ ವಿಭಾಗದೊಂದಿಗೆ ನಮ್ಮ ಸಂಬಂಧವನ್ನು ಬಲಪಡಿಸುವುದು ಎಂದು ಅವರು ಹೇಳಿದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.