
ನವದೆಹಲಿ (ಅ.29): ಬ್ಯಾಂಕ್ ಆಫ್ ಬರೋಡಾ ದೀಪಾವಳಿ ಹಬ್ಬದ ಪ್ರಯಕ್ತ ಗ್ರಾಹಕರಿಗೆ ಹೊಸ ಕೊಡುಗೆಯೊಂದನ್ನು ನೀಡಿದೆ. ಅದೇ ಜೀವಮಾನ ಶೂನ್ಯ ಬ್ಯಾಲೆನ್ಸ್ ಉಳಿತಾಯ ಖಾತೆ. 'ಬಿಒಬಿ ಜೊತೆಗೆ ಹಬ್ಬದ ಖುಷಿ' ಎಂಬ ಆಂದೋಲನದ ಭಾಗವಾಗಿ ಬ್ಯಾಂಕ್ ಆಫ್ ಬರೋಡಾ ಜೀವಮಾನ ಶೂನ್ಯ ಬ್ಯಾಲೆನ್ಸ್ ಸೌಲಭ್ಯದ ಬಿಒಬಿ ಲೈಟ್ ಉಳಿತಾಯ ಖಾತೆ' ಪ್ರಾರಂಭಿಸಿದೆ. ಯಾವುದೇ ಬ್ಯಾಲೆನ್ಸ್ ಅಗತ್ಯವಿಲ್ಲದೆ ಗ್ರಾಹಕರು ಈ ಖಾತೆ ಮೂಲಕ ಎಲ್ಲ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಬಹುದು. ಜೀವಮಾನ ಶೂನ್ಯ ಬ್ಯಾಲೆನ್ಸ್ ಖಾತೆ ತೆರೆಯುವ ಗ್ರಾಹಕರು ಉಚಿತ ರುಪೇ ಪ್ಲಾಟಿನಂ ಡೆಬಿಟ್ ಕಾರ್ಡ್ ಕೂಡ ಪಡೆಯಬಹುದು. ಇದನ್ನು ಪಡೆಯಲು ನೀವು ಖಾತೆಯಲ್ಲಿ ನಿರ್ದಿಷ್ಟ ತ್ರೈಮಾಸಿಕ ಸರಾಸರಿ ಬ್ಯಾಲೆನ್ಸ್ (ಕ್ಯುಎಬಿ) ನಿರ್ವಹಣೆ ಮಾಡಬೇಕು. ಇನ್ನು ಅರ್ಹ ಖಾತೆದಾರರು ಜೀವಮಾನ ಉಚಿತ ಕ್ರೆಡಿಟ್ ಕಾರ್ಡ್ ಕೂಡ ಪಡೆಯಬಹುದು. ಹಾಗಾದ್ರೆ ಈ ಖಾತೆಯ ವಿಶೇಷತೆಗಳೇನು? ಯಾರು ಈ ಖಾತೆ ತೆರೆಯಬಹುದು? ಇಲ್ಲಿದೆ ಮಾಹಿತಿ.
ಬಿಒಬಿ ಲೈಟ್ ಉಳಿತಾಯ ಖಾತೆ ವಿಶೇಷತೆಗಳು:
1.ಜೀವಮಾನ ಶೂನ್ಯ ಬ್ಯಾಲೆನ್ಸ್ ಉಳಿತಾಯ ಖಾತೆ.
2.10 ವರ್ಷ ಮೇಲ್ಪಟ್ಟ ಯಾವುದೇ ಭಾರತೀಯ ನಾಗರಿಕ ಈ ಖಾತೆ ತೆರೆಯಬಹುದು.
3. ಜೀವನಪರ್ಯಂತ ಉಚಿತ ರುಪೇ ಪ್ಲಾಟಿನಂ ಡೆಬಿಟ್ ಕಾರ್ಡ್ ಪಡೆಯಬಹುದು. ಆದರೆ, ಇದನ್ನು ಪಡೆಯಲು ನಿರ್ದಿಷ್ಟ ತ್ರೈಮಾಸಿಕ ಸರಾಸರಿ ಬ್ಯಾಲೆನ್ಸ್ (ಕ್ಯುಎಬಿ) ಇರೋದು ಅಗತ್ಯ.
*ಮೆಟ್ರೋ/ನಗರ ಶಾಖೆಗೆ: 3,000ರೂ.
*ಅರೆ-ನಗರ ಶಾಖೆಗೆ: 2,000ರೂ.
*ಗ್ರಾಮೀಣ ಶಾಖೆಗೆ : 1,000ರೂ.
4.ಬ್ಯಾಂಕ್ ಆಪ್ ಬರೋಡಾದ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳ ಮೇಲೆ ಆಕರ್ಷಕ ಡಿಸ್ಕೌಂಟ್ಸ್ ಕೂಡ ಸಿಗಲಿದೆ.
ಭಾರತದ ಅತಿದೊಡ್ಡ ವಾಣಿಜ್ಯ ಬ್ಯಾಂಕ್ ಬ್ರ್ಯಾಂಡ್ ರಾಯಭಾರಿಯಾದ ಭಾರತದ ಮಾಜಿ ಕೂಲ್ ಕ್ಯಾಪ್ಟನ್!
ಹಬ್ಬದ ಆಫರ್ ಗಳು
ಹಬ್ಬದ ಸಮಯದಲ್ಲಿ ಬಿಒಬಿ ಲೈಟ್ ಉಳಿತಾಯ ಖಾತೆಗಳು ವಿವಿಧ ಆಫರ್ ಗಳನ್ನು ಹೊಂದಿರುತ್ತವೆ. ಎಲೆಕ್ಟ್ರಾನಿಕ್ಸ್ , ಗೃಹೋಪಕರಣಗಳು, ಪ್ರವಾಸ, ಆಹಾರ, ಫ್ಯಾಷನ್, ಮನೋರಂಜನೆ, ಜೀವನಶೈಲಿ, ದಿನಸಿ ಹಾಗೂ ಆರೋಗ್ಯ ಕಾಳಜಿ ಉತ್ಪನ್ನಗಳ ಜೊತೆಗೆ ಬ್ಯಾಂಕ್ ಸಹಭಾಗಿತ್ವ ಹೊಂದಿದೆ. ಬ್ಯಾಂಕ್ ಆಫ್ ಬರೋಡಾ ಕಾರ್ಡ್ ದಾರರು ರಿಲಯನ್ಸ್ ಡಿಜಿಟಲ್, ಕ್ರೋಮಾ, ಮೇಕ್ ಮೈ ಟ್ರಿಪ್, ಅಮೆಜಾನ್, ಬುಕ್ ಮೈ ಶೋ, ಮೈಂತ್ರಾ, ಸ್ವಿಗ್ಗಿ, ಝೊಮ್ಯಾಟೋ ಹಾಗೂ ಇನ್ನೂ ಅನೇಕ ಬ್ರ್ಯಾಂಡ್ ಗಳಿಂದ ವಿಶೇಷ ಆಫರ್ ಹಾಗೂ ಡಿಸ್ಕೌಂಟ್ಸ್ ಹೊಂದಿವೆ. ಈ ಹಬ್ಬದ ಆಂದೋಲನ 2023ರ ಡಿಸೆಂಬರ್ 31ರ ತನಕ ನಡೆಯಲಿದೆ.
ಅಗತ್ಯವಿರುವ ಕೆವೈಸಿ ದಾಖಲೆಗಳು
*ಚಾಲನಾ ಪರವಾನಗಿ ಜೊತೆಗೆ ಫೋಟೋ
*ಪಾಸ್ ಫೋರ್ಟ್
*ಮತದಾರರ ಚೀಟಿ
*ಎನ್ ಆರ್ ಇಜಿಎ ಉದ್ಯೋಗ ಚೀಟಿ
*ಮುನ್ಸಿಪಲ್ ಅಥವಾ ಆಸ್ತಿ ತೆರಿಗೆ ರಸೀದಿ
*ಯುಟಿಲಿಟಿ ಬಿಲ್
*ಫಲಾನುಭವಿ ಹೆಸರು ಹಾಗೂ ವಿಳಾಸ ಹೊಂದಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪಟ್ಟಿಯಿಂದ ಕಾಗದ.
ಆರ್ ಬಿಐ ಇ-ರುಪಿ ಬಳಸೋ ಗ್ರಾಹಕರಿಗೆ ಬ್ಯಾಂಕುಗಳಿಂದ ಬಹುಮಾನ!
ವಿದ್ಯಾರ್ಥಿಗಳಿಗೆ ಈ ದಾಖಲೆ ಅಗತ್ಯ:
*ಕಾಲೇಜು ಅಥವಾ ಸಂಸ್ಥೆ ಐಡಿ
*ಕಾಲೇಜು ಅಥವಾ ಸಂಸ್ಥೆಯಿಂದ ದಾಖಲಾತಿ ಪತ್ರ
*ಕಾಲೇಜು ಅಥವಾ ಸಂಸ್ಥೆಯಿಂದ ಪಡೆದ ಪತ್ರ
ವಿದೇಶಿಗರಿಗೆ ಈ ದಾಖಲೆ ಅಗತ್ಯ
*ಪಾಸ್ ಪೋರ್ಟ್
*ಅರ್ಹ ಭಾರತೀಯ ವೀಸಾ
*ವಿದೇಶಿ ಚಾಲನಾ ಪರವಾನಗಿ ಸೇರಿದಂತೆ ವಿದೇಶದಲ್ಲಿನ ಪ್ರಸಕ್ತ ವಿಳಾಸದ ದಾಖಲೆ
ವಿದೇಶಿ ವಿದ್ಯಾರ್ಥಿಗಳಿಗೆ ಈ ದಾಖಲೆ ಅಗತ್ಯ: *ಪಾಸ್ ಪೋರ್ಟ್ *ವಿದೇಶದಲ್ಲಿನ ವಿಳಾಸ ದೃಢೀಕರಿಸುವ ಪತ್ರ *ಅರ್ಹ ಭಾರತೀಯ ವೀಸಾ *ಪ್ಯಾನ್ ಕಾರ್ಡ್ *ಫಾರ್ಮ್ 60
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.